Garuda Purana: ನಮ್ಮ ಸನಾತನ ಹಿಂದೂ ಧರ್ಮದ ಪ್ರಕಾರ ಮರಣದ ನಂತರ ಏನಾಗುತ್ತದೆ ಎಂಬುದನ್ನು ಗರುಡ ಪುರಾಣ ಗ್ರಂಥದಲ್ಲಿ ದಾಖಲಿಸಲಾಗಿದೆ. ವಿಷ್ಣು ಹಾಗೂ ಗರುಡನ ನಡುವೆ ನಡೆದಿರುವಂತಹ ಸಂವಹನವನ್ನು ಗ್ರಂಥದ ರೂಪದಲ್ಲಿ ಬರೆಯಲಾಗಿದೆ ಎಂಬುದಾಗಿ ಪುರಾತನ ಶಾಸ್ತ್ರಗಳು ತಿಳಿಸುತ್ತವೆ.

ಮರಣದ ನಂತರ ಏನಾಗುತ್ತದೆ ಶಿಕ್ಷೆ ಸೇರಿದಂತೆ ಇನ್ನಿತರ ಮರಣ ಸಂಬಂಧಿತ ಸಂಪೂರ್ಣ ವಿಚಾರಗಳನ್ನು ಗರುಡ ಪುರಾಣದಲ್ಲಿ ದಾಖಲಿಸಲಾಗಿದೆ. ಮರಣ ಸಂಬಂಧಿತ ಏನೇ ವಿಚಾರಗಳಿದ್ದರೂ ಅಥವಾ ಅನುಮಾನಗಳಿದ್ದರೂ ಗರುಡ ಪುರಾಣವನ್ನೇ ನೋಡಿ ಅಧ್ಯಯನ ಮಾಡಿ ಎಲ್ಲ ವಿಚಾರಗಳನ್ನು ಕಲಿತುಕೊಳ್ಳಬೇಕಾಗಿರುತ್ತದೆ.

ಗರುಡ ಪುರಾಣದಲ್ಲಿ ಉಲ್ಲೇಖಿಸಿರುವಂತೆ ಜನರು ತಮ್ಮ ಕೆಟ್ಟ ಹಾಗೂ ಒಳ್ಳೆಯ ಕೆಲಸಗಳ ಫಲಗಳನ್ನು ಕೆಲವೊಮ್ಮೆ ಭೂಮಿಯಲ್ಲಿ ಅನುಭವಿಸಬೇಕಾಗುತ್ತದೆ. ಇನ್ನು ಕೆಲವೊಮ್ಮೆ ಮರಣದ ನಂತರ ಭೂಲೋಕದಿಂದ ಆಚೆಗೂ ಕೂಡ ಆತ್ಮಗಳು ಇದರ ಫಲವನ್ನು ಅನುಭವಿಸಬೇಕಾಗುತ್ತದೆ. ಇನ್ನು ಗರುಡ ಪುರಾಣ ದಲ್ಲಿ ಮರಣ ಹೊಂದುವುದಕ್ಕೆ ಕೊನೆಯ ಕ್ಷಣದಲ್ಲಿ ಇರಬೇಕಾದರೆ ಆ ಮರಣ ಹೊಂದುವ ವ್ಯಕ್ತಿಗೆ ಕೆಲವೊಂದು ಸೂಚನೆಗಳು ಕೂಡ ಕಣ್ಮುಂದೆ ಬರುತ್ತದೆ ಎಂಬುದಾಗಿ ಹೇಳಲಾಗಿದ್ದು ಅದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

ಗರುಡ ಪುರಾಣದ ಪ್ರಕಾರ ಹೇಳಿರುವಂತೆ ಮರಣ ಸಮೀಪಿಸಿದಾಗ ಆತ ತನ್ನ ಮೂಗನ್ನು ನೋಡುವುದನ್ನು ನಿಲ್ಲಿಸಿ ಬಿಡುತ್ತಾನೆ. ಆತ ಅದೆಷ್ಟೇ ಪ್ರಯತ್ನಿಸಿದರು ಕೂಡ ತನ್ನ ಮೂಗನ್ನು ನೋಡಲು ಸಾಧ್ಯವಿಲ್ಲ. ಕೊನೆಯಲ್ಲಿ ಆತನ ನೆರಳು ಕೂಡ ಆತನನ್ನು ಬಿಟ್ಟು ಹೋಗುತ್ತದೆ. ಮರಣ ಹೊಂದುವ ವ್ಯಕ್ತಿ ಕೊನೆಗೆ ತನ್ನ ಬಿಂಬವನ್ನು ನೀರಿನಲ್ಲಿ ಅಥವಾ ಎಣ್ಣೆಯಲ್ಲಿ ನೋಡಲು ಸಾಧ್ಯವಾಗುವುದಿಲ್ಲ.

ಕನಸಿನಲ್ಲಿ ಕೂಡ ವಿಚಿತ್ರವಾದ ವಿಚಾರಗಳನ್ನು ಕಾಣಲು ಪ್ರಾರಂಭಿಸುತ್ತಾನೆ. ಹಾರಿದ ದೀಪವನ್ನು ಕೂಡ ಪದೇ ಪದೇ ನೋಡಲು ಆ ವ್ಯಕ್ತಿ ಪ್ರಾರಂಭಿಸಿದರೆ ಇವುಗಳೆ ಆತನ ಮರಣದ ಸಮೀಪಿಸಿರುವ ಸೂಚನೆಗಳು ಎಂಬುದಾಗಿ ಗರುಡ ಪುರಾಣದಲ್ಲಿ ಹೇಳಲಾಗಿದೆ.

New Year ಹೊಸ ವರ್ಷದ ಆರಂಭದಿಂದಲೇ ಈ 4 ರಾಶಿಯವರಿಗೆ ಗಜಕೇಸರಿಯೋಗ ಮುಟ್ಟಿದೆಲ್ಲಾ ಚಿನ್ನವಾಗುವ ಸಮಯ

ಆ ವ್ಯಕ್ತಿಯ ಮರಣದ ಮೊದಲು ಕೈಯಲ್ಲಿರುವ ರೇಖೆಗಳು ಮಂಜಾಗಲು ಪ್ರಾರಂಭಿಸುತ್ತದೆ. ಮರಣಕ್ಕಿಂತ ಮೊದಲು ಆ ವ್ಯಕ್ತಿಯ ಮನಸ್ಸಿನಲ್ಲಿ ಚಿತ್ರ ವಿಚಿತ್ರವಾದ ಆಲೋಚನೆಗಳು ಮೂಡಲು ಪ್ರಾರಂಭವಾಗುತ್ತದೆ. ಆತನ ಸುತ್ತಮುತ್ತ ಕೆಲವೊಂದು ನಕಾರಾತ್ಮಕ ಶಕ್ತಿಗಳು ಓಡಾಟ ನಡೆಸುತ್ತವೆ ಎಂಬ ವಿಚಾರಗಳು ಕೂಡ ಮೂಡಿಬರುತ್ತವೆ. ಗರುಡ ಪುರಾಣದ ಪ್ರಕಾರ ಆತನ ಪೂರ್ವಜರು ನಮ್ಮವರು ನಮ್ಮ ಜೊತೆಗೆ ಬರುತ್ತಿದ್ದಾರೆ ಎಂಬ ಸಂತೋಷದಿಂದ ಆತನ ಜೊತೆಗೆ ಓಡಾಟ ನಡೆಸುತ್ತಾರೆ ಎಂಬ ಉಲ್ಲೇಖವನ್ನು ನಡೆಸಲಾಗಿದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!