ಪು’ಕ್ಕಟೆ ಜಾಗ ಸಿಗುತ್ತೆ ಎಂದು ಓಡೋಡಿ ಬಂದ ಸಾವಿರಾರು ಜನ

0 0

ಪುಕ್ಕಟೆ ಜಾಗ ಸಿಗುತ್ತದೆ ಎಂದು ಓಡೋಡಿ ಬಂದ ಸಾವಿರಾರು ಜನರು ಹೇ ಇದಿಷ್ಟು ಜಾಗ ನನ್ನದು ಈ ಜಾಗ ನನಗೆ ಸೇರಿದ್ದು ನಾನು ಮೊದಲು ಬಂದಿದ್ದು ಹಾಗಾಗಿ ನನಗೆ ಸೇರಬೇಕು ಎಂಬ ಸದ್ದು ಗದ್ದಲ ಮಾಡುತ್ತಾ ಸಲಾಕಿ ಗುದ್ದಲಿ ತಂದು ಸಿಕ್ಕಷ್ಟು ಜಾಗಕ್ಕೆ ಗೂಟ ನೆಟ್ಟು ಬೇಳಿ ಹಾಕಿಕೊಳ್ಳುತ್ತಿದ್ದರು. ಈ ಒಂದು ಗ್ರಾಮದಲ್ಲಿ 150 ಎಕರೆ ಜಾಗವನ್ನು ಉಚಿತವಾಗಿ ನೀಡಲಾಗುತ್ತದೆ ಎಂಬ ಸುದ್ದಿ ಕೇಳಿದ ಜನರು ಬೇಲಿ ಹಾಕಲು ಓಡೋಡಿ ಬಂದ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಇದರ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಭಾನುವಾರ ಪುಕ್ಕಟೆ ಜಾಗ ಸಿಗುತ್ತದೆ ಎಂಬ ವದಂತಿ ಕೇಳಿ ನಂಬಿ ಓಡೋಡಿ ಬಂದಿದ್ದ ಸಾವಿರಾರು ಜನರು ಬೇಸ್ತು ಬಿದ್ದು ವಾಪಸ್ ಆದ ಘಟನೆ ಚನ್ನಗಿರಿ ತಾಲೂಕಿನ ಚಿಕ್ಕುಲಿಕೆರೆ ಸರ್ವೆ ನಂಬರ್ ತೊಂಭತ್ತೊಂದು ಹಾಗೂ ಲಕ್ಷ್ಮೀಸಾಗರ ಸರ್ವೆ ನಂಬರ್ ಹದಿನೈದರಲ್ಲಿ ನಡೆದಿದೆ. ಇಲ್ಲಿ ಒಟ್ಟೂ ನೂರಾ ಐವತ್ತು ಎಕರೆ ಜಮೀನು ಖಾಲಿ ಇದ್ದಿದ್ದು ಇದನ್ನು ಅರಣ್ಯ ನಿರ್ಮಾಣಕ್ಕಾಗಿ ಈ ಭೂಮಿಯನ್ನು ಕಾಯ್ದಿರಿಸಲಾಗಿತ್ತು. ಹಾಗೆ ಇಲ್ಲಿ ಯಾರು ಬೇಕಾದರೂ ಮನೇ ಅಥವಾ ಶೆಡ್‌ ಗಳನ್ನು ನಿರ್ಮಿಸಿಕೊಳ್ಳಲು ಸರ್ಕಾರ ಅವಕಾಶ ನೀಡಿದೆ ಎಂಬ ವದಂತಿ ಕಾಡ್ಗಿಚ್ಚಿನಂತೆ ಹಬ್ಬಿದ್ದು , ತಾ ಮುಂದು ನಾ ಮುಂದು ಎನ್ನುವಂತೆ ಜನಸಾಗರವೇ ಅಲ್ಲಿ ಹರಿದಿತ್ತು. ನೂರಾ ಐವತ್ತು ಎಕರೆ ಜಮೀನು ಫ್ರೀಯಾಗಿ ಇದೆ ಅಲ್ಲಿ ಯಾರೂ ಬೇಕಿದ್ದರೂ .ಅನೆ ಕಟ್ಟಿಕೊಳ್ಳಬಹುದು ಎಂದು ಚನ್ನಗಿರಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಮತ್ತು ಪುರಸಭೆಯ ಸದಸ್ಯರು ಹೇಳಿದ್ದಾರೆ ಎಂದು ಯಾರೋ ಕಿಡಿಗೇಡಿಗಳು ವದಂತಿ ಹಬ್ಬಿಸಿದ್ದರು. ಪುರಸಭೆಯಿಂದ ನಿರ್ಮಾಣಗೊಂಡಿರುವ ಕಸ ತ್ಯಾಜ್ಯ ವಿಲೇವಾರಿ ಘಟಕದ ಸಮೀಪದಲ್ಲಿ ಅರಣ್ಯ ಇಲಾಖೆಗೆ ಸಂಬಂಧಿಸಿದ ಸುಮಾರು150 ಎಕರೆ ಸರ್ಕಾರಿ ಜಾಗವಿದೆ. ಈ ಜಾಗದಲ್ಲಿ ಶೆಡ್ ಗಳನ್ನು ನಿರ್ಮಿಸಿಕೊಳ್ಳಲು ಸರ್ಕಾರ ಅವಕಾಶ ನೀಡಿದೆ ಎಂಬ ವದಂತಿ ಹರಡಿತ್ತು.

ಈ ಸುಳ್ಳು ಸುದ್ಧಿಯನ್ನು ನಂಬಿದ ಜನರು ಇದೆ ಖಾಲಿ ಜಾಗದಲ್ಲಿ ಮನೆ ಕಟ್ಟಲು ಮುಂದಾಗಿದ್ದರು. ಸಾವಿರಾರು ಜನರು ಗುಂಪು ಗುಂಪಾಗಿ ಸ್ಥಳಕ್ಕೆ ಆಗಮಿಸಿ ಶೆಡ್ ಗಳನ್ನು ನಿರ್ಮಿಸಲು ಮುಂದಾದರು. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆ ಸಿಬ್ಬಂದಿ, ಅರಣ್ಯ ಇಲಾಖೆ ಮತ್ತು ಗೋಮಾಳಕ್ಕೆ ಮೀಸಲಿಟ್ಟಿರುವ ಪ್ರದೇಶವಾಗಿದೆ. ಇಲ್ಲಿ ಮನೆಗಳನ್ನು ನಿರ್ಮಾಣ ಮಾಡಿಕೊಳ್ಳುವಂತಿಲ್ಲ ಎಂದು ಜನರಿಗೆ ಮನವರಿಕೆ ಮಾಡಿಕೊಟ್ಟರು. ಪುಕ್ಕಟೆಯಾಗಿ ತಮಗೆ ಜಾಗ ಸಿಗಲಿದೆ ಎಂದು ಬಂದ ಜನತೆ ಒಟ್ಟಿನಲ್ಲಿ ಕೊನೆಗೆ ಗೋಣಗಾಡಿಕೊಂದು ನಿರಾಷೆಯಲ್ಲಿ ಹಿಂದಿರುಗಿದ್ದಾರೆ. ಸರ್ಕಾರದಿಂದ ಉಚಿತವಾಗಿ ಜಾಗ ಸಿಗುತ್ತದೆ ಎಂಬ ವದಂತಿ ಹರಡಿದ್ದರಿಂದ ಚನ್ನಗಿರಿ ಹಾಗೂ ಸುತ್ತಮುತ್ತಲಿನ ಸಾರ್ವಜನಿಕರು ಇಷ್ಟು ಜಾಗ ನನ್ನದು ಎಂದು ಗುದ್ದಲಿ ತಂದು ಮರದ ಗೂಟಗಳನ್ನು ನೆಟ್ಟು, ಅದಕ್ಕೆ ಹಳೆಯ ಸೀರೆಗಳನ್ನು ಸುತ್ತಲೂ ಕಟ್ಟಿಕೊಂಡು ಇಷ್ಟು ಜಾಗ ನನ್ನದು ಎಂದು ಗುರುತು ಮಾಡಿದ್ದರು.

ಮತ್ತೊಂದು ಕಡೆ ಮನೆ ನಿರ್ಮಾಣ ಮಾಡಿಕೊಳ್ಳಲು ಜಾಗ ಸಿಗುತ್ತದೆ ಎಂದು ಮನೆಯಿಲ್ಲದ ಜನರು ತಮ್ಮ ಕೆಲಸ ಕಾರ್ಯ ಬಿಟ್ಟು ಕುಟುಂಬ ಸಮೇತರಾಗಿ ಬಂದಿದ್ದರು. ಸ್ಥಳದಲ್ಲಿದ್ದ ಅಧಿಕಾರಿಗಳನ್ನು ಕಂಡು ಅಲ್ಲಿಂದ ಕಾಲ್ಕಿತ್ತರು. ಪುರಸಭೆ ಸದಸ್ಯನಿಂದ ಈ ರೀತಿಯಾಗಿ ವದಂತಿ ಹಬ್ಬಿದೆ. ಕಸ ವಿಲೇವಾರಿ ಘಟಕದ ಸುತ್ತಮುತ್ತ ಸರ್ಕಾರಿ ಜಾಗವಿದೆ. ಅಲ್ಲಿ ಮನೆಗಳನ್ನು ನಿರ್ಮಿಸಿಕೊಳ್ಳಿ ಯಾರೂ ಏನೂ ಮಾಡುವುದಿಲ್ಲ ಎಂದು ಪುರಸಭೆ ಸದಸ್ಯನೊಬ್ಬ ವದಂತಿ ಹಬ್ಬಿಸಿದ್ದಾನೆ . ಆದರೆ, ಆತ ಯಾರೆಂಬುದು ಇದುವರೆಗೂ ತಿಳಿದುಬಂದಿಲ್ಲ ಎಂದು ಅಧಿಕಾರಿಗಳು ಹೇಳಿದರು. ಜನರು ಯಾರೋ ಹೇಳಿದ ವದಂತಿ ನಂಬಿ ಅರಣ್ಯ ಇಲಾಖೆ ಜಾಗದಲ್ಲಿ ಮನೆಗಳನ್ನು ನಿರ್ಮಿಸಿಕೊಳ್ಳಲು ಮುಂದಾಗಿದ್ದರು. ಜನರಿಗೆ ಮನವರಿಕೆ ಮಾಡಿ ಕಳುಹಿಸಲಾಗಿದೆ ಎಂದು ಮಾವಿಕಟ್ಟೆ ವಲಯ ಅರಣ್ಯಧಿಕಾರಿ ಮಾವಿನಹೊಳೆಯಪ್ಪ ಹೇಳಿದರು.

Leave A Reply

Your email address will not be published.