ತಮ್ಮ ಮಗಳ ಹೆಸರನ್ನು ಪ್ರಕಟಿಸಿದ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ದಂಪತಿಗಳು. ಈಗ ಮೂರು ವರ್ಷದ ಹಿಂದೆ ಅಷ್ಟೇ ವಿವಾಹ ಆಗಿದ್ದ ಸ್ಟಾರ್ ದಂಪತಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಇಬ್ಬರಿಗೂ ಇತ್ತೀಚೆಗೆ ಅಷ್ಟೇ ಪೋಷಕರ ಸ್ಥಾನಕ್ಕೆ ಪ್ರಮೋಷನ್ ಸಿಕ್ಕಿದೆ ಅಂದರೆ ತಪ್ಪಾಗಲಾರದು. ಇವರಿಬ್ಬರ ಮುದ್ದು ಕಂದನಿಗೆ ಹೆಸರನ್ನು ಇಟ್ಟಿದ್ದು ಆ ಹೆಸರನ್ನು ಬಹಿರಂಗ ಪಡಿಸಿದೆ ಈ ಜೋಡಿ. ಅಭಿಮಾನಿಗಳು ತಮ್ಮ ನೆಚ್ಚಿನ ಕ್ರಿಕೆಟರ್ ಹಾಗೂ ಸ್ಟಾರ್ ನಟಿ ತಮ್ಮ ಮಗುವಿಗೆ ಏನು ಹೆಸರನ್ನು ಇಟ್ಟಿರಬಹುದು? ಎಂದು ತಿಳಿಯುವ ಕುತೂಹಲದಲ್ಲಿ ಇದ್ದಾರೆ. ಈ ಲೇಖನದಲ್ಲಿ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಇಬ್ಬರ ಮಗಳ ಹೆಸರನ್ನು ತಿಳಿಸಲಾಗಿದೆ ನೋಡಿ.

ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮ ಪೋಷಕರಾದ ನಂತರ ಮೊದಲ ಸಲ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ತಮ್ಮ ಮಗಳೊಂದಿಗೆ ಕ್ಲಿನಿಕ್ಗೆ ಬಂದಿದ್ದ ವಿರುಷ್ಕಾ ದಂಪತಿ ಛಾಯಾಗ್ರಾಹಕರ ಕ್ಯಾಮೆರಾ ಕಣ್ಣಗೆ ಕಾಣಿಸಿಕೊಂಡಿದ್ದರು. ವಿರಾಟ್​ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ತಮ್ಮ ಮನೆಗೆ ಪುಟ್ಟ ಅತಿಥಿ ಬಂದ ವಿಷಯವನ್ನು ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದರು ಸೋಮವಾರ ತ‌ಮ್ಮ ಮಗಳಿಗೆ ‘ವಮಿಕಾ‘ ಎಂದು ನಾಮಕರಣ ಮಾಡಿರುವುದಾಗಿ ಹೇಳಿದ್ದಾರೆ.‌ ಮಗಳಿಗೆ ವಮಿಕಾ ಎಂದು ಹೆಸರಿಟ್ಟಿರುವ ವಿಷಯವನ್ನು ಅನುಷ್ಕಾ ಶರ್ಮಾ ತಮ್ಮ ಇನ್‌ಸ್ಟಾಗ್ರಾಂ ಖಾತೆ ಮೂಲಕ ಹಂಚಿಕೊಂಡಿದ್ದಾರೆ. ವಮಿಕಾ ನಮ್ಮ ಕುಟುಂಬಕ್ಕೆ ಖುಷಿ ತಂದಿದ್ದಾಳೆ ಎಂದು ಹೇಳಿಕೊಂಡಿದ್ದಾರೆ.

ನಾವು ಪರಸ್ಪರ ಒಬ್ಬರನ್ನೊಬ್ಬರು ಗೌರವಿಸುತ್ತಾ, ನಂಬಿಕೆ ವಿಶ್ವಾಸ ಪ್ರೀತಿಯೊಂದಿಗೆ ಜೀವಿಸುತ್ತಿದ್ದೇವೆ. ಈ ಪುಟ್ಟ ವಮಿಕಾ ಅದನ್ನು ಮತ್ತಷ್ಟು ಎತ್ತರಿಸಿದ್ದಾಳೆ. ಅವಳನ್ನು ನೋಡುತ್ತಾ ಕ್ಷಣಕಾಲ ಭಾವೋದ್ವೇಗದಿಂದ ಕಣ್ಣಂಚಲ್ಲಿ ನೀರಾಡಿದೆ. ಒಮ್ಮೊಮ್ಮೆ ನಗೆ ತರಿಸುತ್ತದೆ. ಮನದಲ್ಲಿ ಆನಂದ ಮೂಡುತ್ತದೆ. ಇವೆಲ್ಲ ನಿಮಿಷದಲ್ಲಿ ಅನುಭವಿಸಿದ ಭಾವನೆಗಳು ಎಂದು ಅನುಷ್ಕಾ ಶರ್ಮಾ ಹೇಳಿದ್ದಾರೆ. ಮಗುವನ್ನು ಕೈಯಲ್ಲಿ ಹಿಡಿದುಕೊಂಡು, ಕೊಹ್ಲಿ ಪಕ್ಕದಲ್ಲಿ ನಿಂತಿರುವ ಫೋಟೊವೊಂದನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದಾರೆ. ಮಗುವಾದ ನಂತರ ಇದೇ ಮೊದಲ ಸಲ ಸಾರ್ವಜನಿಕವಾಗಿ ವಿರಾಟ್​ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಕಾಣಿಸಿಕೊಂಡಿದ್ದಾರೆ.

ಮಗಳ ಜೊತೆ ಕ್ಲಿನಿಕ್ ಗೆ ಬಂದ ಅನುಷ್ಕಾ ಶರ್ಮಾ ಹಾಗೂ ಕೊಹ್ಲಿ ದಂಪತಿಗಳು ಮಾಧ್ಯದವರಿಗೆ ಹಾಗೂ ಛಾಯಾಗ್ರಾಹಕರಿಗೆ ಒತ್ತಾಯವಾಗಿ ತಮ್ಮ ಮಗಳ ಫೋಟೋ ತೆಗೆಯಬಾರದು ಎಂದು ಬಹಳ ಮುದ್ದಾಗಿ ವಿನಂತಿ ಮಾಡಿಕೊಂಡಿದ್ದಾರೆ. ಮಗಳು ಹುಟ್ಟಿದಾಗಿನಿಂದ ನಿದ್ರೆ ಎನ್ನುವುದು ಅಸ್ಪಷ್ಟವಾಗಿದೆ ಆದರೆ ನಮ್ಮ ಹೃದಯ ತುಂಬಿ ಬಂದಿದೆ. ಅಭಿಮಾನಿಗಳ ಶುಭಾಶಯ ಪ್ರಾರ್ಥನೆಗಳು ನಮ್ಮೆಲ್ಲರಿಗೂ ಶಕ್ತಿ ತುಂಬಿವೆ. ನಿಮಗೆ ಧನ್ಯವಾದಗಳು ಎಂದು ಹೇಳಿದ್ದಾರೆ. ಕಳೆದ ವರ್ಷದ ಆಗಸ್ಟ್‌ ತಿಂಗಳಲ್ಲಿ ಈ ದಂಪತಿ ತಮ್ಮ ಮನೆಗೆ ಹೊಸ ಸದಸ್ಯರ ಬರಲಿದ್ದಾರೆ ಎಂದು ತಿಳಿಸಿದ್ದರು. ಈ ವರ್ಷದ ಜನವರಿ 11ರಂದು ಮಗಳು ಹುಟ್ಟಿರುವುದಾಗಿ ತಾರಾ ದಂಪತಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿದ್ದರು. ಈ ದಂಪತಿ 2017ರ ಡಿಸೆಂಬರ್ 11 ರಂದು ಇಟಲಿಯಲ್ಲಿ ಮದುವೆಯಾಗಿದ್ದರು.

Leave a Reply

Your email address will not be published. Required fields are marked *