Free bus: ಶಕ್ತಿ ಯೋಜನೆಯ ಫ್ರೀ ಬಸ್ ಎಫೆಕ್ಟ್ ಬಸ್ಸಿನಲ್ಲಿ ಲಂಗ ಚಡ್ಡಿ ಒಣಹಾಕಿದ ಪ್ರಯಾಣಿಕರು, ಬೆಚ್ಚಿಬಿದ್ದ ಕಂಡಕ್ಟರ್

0 979

Free Bus Viral Video in Karnataka ಇದೀಗ ರಾಜ್ಯದಲ್ಲಿ ಕಾಂಗ್ರೆಸ್ ಗ್ಯಾರೆಂಟಿಯದ್ದೇ ಮಾತು, ಪ್ರತಿದಿನ ಒಂದಲ್ಲ ಒಂದು ಸುದ್ದಿಯಾಗುತ್ತಲೇ ಇದೆ, ಅದರಲ್ಲೂ ಮಹಿಳೆಯರದ್ದೇ ಹೆಚ್ಚು, ಹೌದು ರಾಜ್ಯದಲ್ಲಿ ಶಕ್ತಿ ಯೋಜನೆಯಡಿ ರಾಜ್ಯದ ಮಹಿಳೆಯರಿಗೆ ಉಚಿತ ಪ್ರಯಾಣ ವ್ಯವಸ್ಥೆ ಮಾಡಲಾಗಿದೆ. ಹಾಗಾಗಿ ಮಹಿಳೆಯರು ಶ್ರೀ ಕ್ಷೇತ್ರಗಳಿಗೆ ದೇವಸ್ಥಾನಗಳಿಗೆ ಹೆಚ್ಚಾಗಿ ಹೋಗುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಮಹಿಳೆಯರು ಉಚಿತ ಪ್ರಯಾಣ ಮಾಡುವ ಸಂದರ್ಭದಲ್ಲಿ, ಗಲಾಟೆ ಮಾಡಿಕೊಂಡಿದ್ದ ಜಡೆ ಜಗಳದ ವಿಡಿಯೋ ವೈರಲ್ ಆಗಿತ್ತು, ಅಷ್ಟೇ ಅಲ್ಲ ನಾನಾ ತರಹದ ಅವತಾರಗಳನ್ನು ಕೂಡ ಸಾಮಾಜಿಕ ಜಾಲತಾಣದಲ್ಲಿ ನೋಡಿದ ಉದಾಹರಣೆಗಳಿವೆ.

Free Bus Viral Video in Karnataka

ಅಷ್ಟೇ ಅಲ್ಲ ಇದೀಗ ಮಹಿಳೆಯರು ಕುಕ್ಕೆ ಸುಬ್ರಮಣ್ಯ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಸೇರಿದಂತೆ ನಾನಾ ದೇವಸ್ಥಾನಗಳಿಗೆ ಅತಿ ಹೆಚ್ಚು ಪ್ರಯಾಣ ಬೆಳೆಸುತ್ತಿದ್ದಾರೆ, ಇದರಿಂದ ದೇವಸ್ಥಾನಗಳಿಗೂ ಹಾಗೂ KSRTC ಯಲ್ಲಿ ಆದಾಯ ಕೂಡ ಹೆಚ್ಚಾಗುತ್ತಿದೆ ಎಂಬುದಾಗಿ ಮೂಲಗಳು ತಿಳಿಸಿವೆ, ಇದೀಗ ಮುಖ್ಯವಾಗಿ ವಿಚಾರಕ್ಕೆ ಬರೋಣ.

ಸರ್ಕಾರೀ ಬಸ್ ನಲ್ಲಿ ಮಹಿಳಾ ಪ್ರಯಾಣಿಕರೊಬ್ಬರು ಚಡ್ಡಿ ಹಾಗೂ ಲಂಗವನ್ನು ಬಸ್ಸಿನ ಕಿಟಕಿಯಲ್ಲಿ ಒಣಹಾಕಿರುವ ಸಂಗತಿ ನಡೆದದ್ದು, ಕುಕ್ಕೆ ಸುಬ್ರಹ್ಮಣ್ಯ (Kukke Subramanya) ಹಾಗೂ ಕಾರವಾರ (Karavara) ನಡುವೆ ಸಂಚರಿಸುತ್ತಿದ್ದ ಬಸ್‌ ನಲ್ಲಿ. ಹೌದು ಇದರಿಂದ ಪ್ರಯಾಣಿಕರಿಗೆ ಕಿರಿ ಕಿರಿ ಅನಿಸಿದ್ದು, ಇದನ್ನೂ ವಿಡಿಯೋ ಮಾಡಿ ಮಾಡಿ ಹರಿಬಿಟ್ಟಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್ ಆಗಿದೆ. ಕೆಲವರು ನಾನಾ ತರಹದ ಕಾಮೆಂಟ್ ಮಾಡಿದ್ದಾರೆ. ಇನ್ನು ಈ ಕಣ್ಣುಗಳಲ್ಲಿ ಏನೂ ಏನು ನೋಡಬೇಕೋ ಅನ್ನೋದು ಕೆಲವರ ಮಾತಾಗಿದೆ.

Leave A Reply

Your email address will not be published.