ಆರೋಗ್ಯವಾಗಿ ದಪ್ಪ ಆಗಲು ಬಯಸುವವರಿಗೆ ಅತ್ಯತ್ತಮ ಸಲಹೆ

0 142

ಪ್ರತಿಯೊಬ್ಬ ವ್ಯಕ್ತಿಯೂ ಆಕರ್ಷಣೀಯ ಪರ್ಸನಾಲಿಟಿ ಹೊಂದಿರಬೇಕು ಎಂದು ಬಯಸುತ್ತಾರೆ. ಕೆಲವರು ತೆಳ್ಳ ಇರುತ್ತಾರೆ. ದಪ್ಪ ಆಗಬೇಕೆಂದು ಬಯಸುತ್ತಾರೆ. ಆದರೆ ಕೆಲವರು ದಪ್ಪ ಇರುತ್ತಾರೆ. ತೆಳ್ಳ ಆಗಬೇಕೆಂದು ಬಯಸುತ್ತಾರೆ.ನಾವು ಇಲ್ಲಿ ತೆಳ್ಳಗಾಗಿರುವವರು 7 ದಿನಗಳಲ್ಲಿ ತೂಕ ಹೆಚ್ಚಿಸುವ ಬಗ್ಗೆ ತಿಳಿಯೋಣ.

ತೂಕ ಹೆಚ್ಚಿಸಲು ಜನರು ಎಷ್ಟು ಕಷ್ಟಪಡುತ್ತಾರೋ ಹಾಗೆಯೇ ತೂಕ ಕಡಿಮೆ ಮಾಡಲು ಸಹ ಅಷ್ಟೇ ಕಷ್ಟಪಡುತ್ತಾರೆ. ತೂಕ ಹೆಚ್ಚಿಸುವ ಬಯಕೆ ಇರುವವರು ಹೆಚ್ಚಾಗಿ ಕ್ಯಾಲೋರಿ ಇರುವ ಆಹಾರ ಪದಾರ್ಥಗಳನ್ನು ಸೇವಿಸಬೇಕು. ಒಂದೇ ರೀತಿಯ ಪ್ರಮಾಣದಲ್ಲಿ ಆಹಾರ ಸೇವಿಸುವುದರಿಂದ ದಪ್ಪ ಆಗಲು ಸಾಧ್ಯ ಇಲ್ಲ. ದಿನದಿಂದ ದಿನಕ್ಕೆ ಒಂದೊಂದೇ ಪ್ರಮಾಣದಲ್ಲಿ ಆಹಾರ ಪದಾರ್ಥಗಳನ್ನು ಹೆಚ್ಚು ತಿನ್ನುತ್ತಾ ಹೋಗಬೇಕು.

ಕೆಲವರು ತಮ್ಮ ತೂಕ ಹೆಚ್ಚಿಸಲು ಜಂಕ್ ಫುಡ್ ಮತ್ತು ಎಣ್ಣೆಯ ಪದಾರ್ಥಗಳನ್ನು ಸೇವಿಸುತ್ತಾರೆ.ಆದರೆ ಇದು ಒಳ್ಳೆಯದಲ್ಲ. ಇದರಿಂದ ಹೊಟ್ಟೆಯ ಭಾಗದಲ್ಲಿ ಕೊಬ್ಬು ಸೇರಿಕೊಳ್ಳುತ್ತದೆ. ಆದರೆ ತೂಕ ಹೆಚ್ಚಾಗುವುದಿಲ್ಲ.ದಪ್ಪಗಾಗಲು ಸಾಧ್ಯವಿಲ್ಲ. ದಪ್ಪ ಆಗಬೇಕೆಂದಿದ್ದರೆ ಆರೋಗ್ಯಕರವಾಗಿ ದಪ್ಪಗಾಗಬೇಕು.

ಈ ಕೆಳಗಿನ ಸಲಹೆಗಳನ್ನು ಅನುಸರಿಸುವುದರಿಂದ ಆರೋಗ್ಯವಾಗಿ ದಪ್ಪ ಆಗಬಹುದು. ಒಂದು ಲೋಟ ಹಾಲಿಗೆ ಒಂದು ಚಮಚ ಅಶ್ವಗಂಧದ ಪುಡಿಯನ್ನು ಒಂದು ಚಮಚ ತುಪ್ಪದೊಂದಿಗೆ ಅಥವಾ ಜೇನುತುಪ್ಪದ ಜೊತೆ ಬೆರೆಸಿ ಬೆಳಿಗ್ಗೆ ಒಮ್ಮೆ ಹಾಗೂ ರಾತ್ರಿ ಮಲಗುವ ಮುನ್ನ ಕುಡಿಯಬೇಕು.

5 ರಿಂದ 6 ಉತ್ತುತ್ತೆಗಳನ್ನು 4 ರಿಂದ 5 ತಾಸು ಹಾಲಿನಲ್ಲಿ ನೆನೆಸಿಟ್ಟು ರಾತ್ರಿ ಮಲಗುವ ಮುನ್ನ ಕುದಿಸಿ ಆ ಹಾಲನ್ನು ಕುಡಿಯಬೇಕು.ದಿನಕ್ಕೆ ಎರಡು ಬಾರಿ ಮಾಡಿದರೆ ಒಳ್ಳೆಯ ಫಲಿತಾಂಶ ಕಾಣಬಹುದು.

ಒಣದ್ರಾಕ್ಷಿ ಕೂಡ ಶರೀರದ ತೂಕ ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ.ಒಂದು ಹಿಡಿ ಒಣದ್ರಾಕ್ಷಿಯನ್ನು ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ನೆನೆದ ದ್ರಾಕ್ಷಿಯನ್ನು ಸೇವಿಸಬೇಕು.ಒಂದೇ ಬಾರಿ ಅಷ್ಟು ದ್ರಾಕ್ಷಿ ಸೇವಿಸಲು ಸಾಧ್ಯವಿಲ್ಲದಿದ್ದಲ್ಲಿ ಸಾಯಂಕಾಲ ಕೂಡ ಸೇವಿಸಬಹುದು.

ಬಾಳೆಹಣ್ಣಿನಲ್ಲಿ ಪೋಷಕಾಂಶಗಳು,ಕ್ಯಾಲೋರಿಗಳು ಅಧಿಕವಾಗಿ ಇರುತ್ತದೆ.ದಿನಾಲೂ 2 ರಿಂದ 3 ಬಾಳೆಹಣ್ಣನ್ನು ಮಿಲ್ಕ್ ಶೇಕ್ ನಂತೆ ಮಾಡಿ ಜೇನುತುಪ್ಪ ಬೆರೆಸಿ ಸೇವಿಸಬೇಕು.ಇದರಿಂದ ಶರೀರವನ್ನು ಬಹುಬೇಗ ಆರೋಗ್ಯಕರವಾಗಿ ದಪ್ಪ ಮಾಡಿಕೊಳ್ಳಲು ಸಾಧ್ಯ.

2 ರಿಂದ 3 ಕೋಳಿ ಮೊಟ್ಟೆಯನ್ನು ದಿನವೂ ಸೇವನೆ ಮಾಡುವುದರಿಂದ ಶರೀರದ ತೂಕ ಹೆಚ್ಚಿಸಬಹುದು.

ಊಟದ ಮೊದಲು ನೀರು ಕುಡಿಯಬಾರದು. ಹೀಗೆ ಮಾಡಿದರೆ ಹಸಿವು ಸ್ವಲ್ಪ ಮಟ್ಟಿಗೆ ಕಡಿಮೆ ಆಗುತ್ತದೆ.ಇದರಿಂದ ಕಡಿಮೆ ಪ್ರಮಾಣದಲ್ಲಿ ಆಹಾರ ಸೇವನೆ ಆಗುತ್ತದೆ.ತಿನ್ನುವ ಬಟ್ಟಲಿನ ಗಾತ್ರ ದೊಡ್ಡ ಇರಬೇಕು.ಇದರಿಂದ ತಿಳಿಯದೆ ಜಾಸ್ತಿ ಊಟ ಹೋಗುತ್ತದೆ.

ಅತಿಯಾದ ಪೋಷಕಾಂಶಗಳು ಇರುವ ಸೋಯಾಬೀನ್, ಬೇಳೆಕಾಳುಗಳು, ಮೊಟ್ಟೆ ಇವುಗಳನ್ನು ಸೇವಿಸಬೇಕು. ಪ್ರತಿನಿತ್ಯ 30ನಿಮಿಷಗಳ ಕಾಲ ವ್ಯಾಯಾಮ ಮಾಡಬೇಕು.ಸರಿಯಾದ ಸಮಯಕ್ಕೆ ಊಟವನ್ನು ಸೇವಿಸುವ ಅಭ್ಯಾಸ ಮಾಡಬೇಕು.ಈ ಸಲಹೆಗಳಿಂದ ನಿಮ್ಮ ಆರೋಗ್ಯವನ್ನು ಹೆಚ್ಚಿಸಿಕೊಳ್ಳಿ.

Leave A Reply

Your email address will not be published.