ಚಿತ್ರರಂಗದಲ್ಲಿ ನಟ ನಟಿಯರು ಬಳಸುವ ಬಟ್ಟೆಯನ್ನು ಶೂಟಿಂಗ್ ಮುಗಿದ ಮೇಲೆ ಏನ್ ಮಾಡ್ತಾರೆ ನೋಡಿ

0 0

ಚಿತ್ರರಂಗ ಈಗ ಒಂದು ಉದ್ಯಮವಾಗಿ ಮಾರ್ಪಟ್ಟಿದೆ. ಇದರಲ್ಲಿ ಸಾಮಾನ್ಯ ಜನರಿಗೆ ಕಾಡುವ ಪ್ರಶ್ನೆ ಎಂದರೆ, ಸಿನಿಮಾಗಳಲ್ಲಿ ಹೀರೋಗಳು ಮತ್ತು ಹೀರೋಯಿನ್ ಗಳು ಧರಿಸುವ ಬಟ್ಟೆಯನ್ನು ಸಿನಿಮಾ ಶೂಟಿಂಗ್ ಮುಗಿದ ನಂತರ ಏನು ಮಾಡುತ್ತಾರೆ ಎನ್ನುವುದು ಅದರ ಕುರಿತಾಗಿ ಇಲ್ಲಿದೆ ಮಾಹಿತಿ.

ಒಂದು ಸಿನಿಮಾ ಮಾಡಿ ಮುಗಿಸುವಷ್ಟರಲ್ಲಿ ಒಬ್ಬ ನಟ, ನಟಿ ಧರಿಸುವಂತಹ ಬಟ್ಟೆಗೆ ಸುಮಾರು 15 ರಿಂದ 30 ಲಕ್ಷ ಖರ್ಚು ಬೀಳುತ್ತದೆ. ಅವರು ಧರಿಸುವ ಬಟ್ಟೆಗಳೆಲ್ಲ ಉತ್ತಮ ಗುಣಮಟ್ಟದ ಬಟ್ಟೆಗಳೇ ಆಗಿರುತ್ತವೆ. ಸ್ಟಾರ್ ಹೀರೋ ಹೀರೋಯಿನ್ ಗಳಿಗೆ ಆದರೆ ಒಬ್ಬರ ಬಟ್ಟೆಗೆ ಏನಿಲ್ಲ ಅಂದರೂ 20 ಲಕ್ಷದವರೆಗೂ ಖರ್ಚಾಗತ್ತೆ. ಹಾಗಾದ್ರೆ ಸಿನಿಮ ಶೂಟಿಂಗ್ ಮುಗಿದ ಮೇಲೆ ಇಷ್ಟೊಂದು ದುಬಾರಿ ಬಟ್ಟೆಗಳನ್ನು ನಿರ್ಮಾಪಕರು ಏನು ಮಾಡಬಹುದು? ಎನ್ನುವುದು ಎಲ್ಲರಿಗೂ ಕಾಡುವ ಪ್ರಶ್ನೆ. ಕೆಲವು ನಿರ್ಮಾಪಕರು ಈ ಬಟ್ಟೆಗಳನ್ನು ಗೋಡೊನ್ ನಲ್ಲಿ ಇಡುತ್ತಾರೆ ಇನ್ನು ಕೆಲವು ನಿರ್ಮಾಪಕರು ಮಾರಾಟ ಮಾಡುತ್ತಾರೆ. ಕೆಲವೊಮ್ಮೆ 10 ಲಕ್ಷದ ಬಟ್ಟೆ ಒಂದು ಲಕ್ಷಕ್ಕೆ ಮಾರಾಟ ಆಗುತ್ತೆ. ಕೆಲವರು ಈ ಬಟ್ಟೆಗಳನ್ನು ಖರೀದಿ ಮಾಡಿ ಸಹ ನಟ, ನಟಿಯರಿಗೆ ಹಾಗೂ ಕೆಲವು ಕಾರ್ಯಕ್ರಮಗಳಿಗೆ ಬಾಡಿಗೆಗೆ ಕೊಡುತ್ತಾರೆ.

ಸಿನಿಮಾದಲ್ಲಿ ಬಳಕೆ ಮಾಡಿದ ಬಟ್ಟೆಗಳನ್ನು ಮಾರಾಟ ಮಾಡಲು ಎಂದೇ ಮುಂಬೈ ನಲ್ಲಿ ಒಂದು ದೊಡ್ಡ ಮಾರ್ಕೆಟ್ ಇದೆ. ಹಲವು ನಿರ್ಮಾಪಕರು ಅಲ್ಲಿಗೆ ಹೋಗಿ ತಮ್ಮ ಸಿನಿಮಾಗಳಲ್ಲಿ ಬಳಕೆ ಮಾಡಿದ ಬಟ್ಟೆಗಳನ್ನು ಮಾರಾಟ ಮಾಡುತ್ತಾರೆ. ಮತ್ತೆ ಮತ್ತೆ ಸಿನಿಮಾ ಮಾಡುವ ನಿರ್ಮಾಪಕರು ಮಾತ್ರ ಈ ಬಟ್ಟೆಗಳನ್ನು ಗೋಡೊನ್ ನಲ್ಲಿ ಇಟ್ಟು ಕ್ಯಾರೆಕ್ಟರ್ ಆರ್ಟಿಸ್ಟ್ ಗೆ ಈ ಬಟ್ಟೆಗಳನ್ನು ಬಳಕೆ ಮಾಡುತ್ತಾರೆ. ಕೆಲವೊಮ್ಮೆ ಶೂಟಿಂಗ್ ವೇಳೆ ನಟ ನಟಿಯರಿಗೆ ಇಷ್ಟವಾದ ಬಟ್ಟೆ ಮತ್ತು ಶೂ ಗಳನ್ನು ಅವರೇ ಮನೆಗೆ ತೆಗೆದುಕೊಂಡು ಹೋಗುತ್ತಾರೆ. ಹೀಗೆ ಎಲ್ಲಾ ಸ್ಟಾರ್ಸ್ ಕೂಡಾ ಮಾಡಲ್ಲ. ಇದು ಸಿನಿಮಾ ಬಟ್ಟೆಗಳ ವಿಚಾರ ಆಗಿದ್ರೆ ಇನ್ನು ಪ್ರತೀ ದಿನ ಬರುವ ಸೀರಿಯಲ್ ಗಳಲ್ಲಿ ಹೇಗೆ ಅನ್ನೋದನ್ನ ನೋಡೋಣ.

ಸೀರಿಯಲ್ ಗಳಲ್ಲಿ ನಟ ನಟಿಯರು ಅವರಿಗೆ ಅವರೇ ಬಟ್ಟೆಗಳನ್ನು ಖರೀದಿಸಿಕೊಂಡು ಬರಬೇಕು. ನಿರ್ಮಾಪಕರು ಬಟ್ಟೆಗಳನ್ನು ಖರೀದಿ ಮಾಡುವುದಿಲ್ಲ. ನಾಳೆ ಯಾವ ರೀತಿಯಲ್ಲಿ ಬಟ್ಟೆಯನ್ನು ಧರಿಸಬೇಕು ಎಂದು ನಿರ್ದೇಶಕರು ಹೇಳುತ್ತಾರೆ ಅದರ ಪ್ರಕಾರ ನಟ ನಟಿಯರು ತಮ್ಮ ತಮ್ಮ ಕ್ಯಾರೆಕ್ಟರ್ ಗೆ ಸಂಬಂಧಿಸಿ ತಾವೇ ಬಟ್ಟೆ ತಂದುಕೊಳ್ಳುತ್ತಾರೆ. ಹಾಗಾಗಿ ಸೀರಿಯಲ್ ಗಳಲ್ಲಿ ಬಟ್ಟೆಗಳ ವ್ಯವಹಾರ ಅಷ್ಟೊಂದಾಗಿ ಇರುವುದಿಲ್ಲ.

Leave A Reply

Your email address will not be published.