ಗೂಗಲ್ ಕಂಪನಿ ನಿಜಕ್ಕೂ ಎಷ್ಟು ದೊಡ್ಡದು ಗೊತ್ತೇ?

0 2

ಈಗಿನ ಕಾಲದಲ್ಲಿ ಈ ಒಂದು ಕಂಪನಿಯ ಬಗ್ಗೆ ಪುಟ್ಟ ಮಕ್ಕಳಿಂದ ಹಿಡಿದು ಮುದುಕರವರೆಗೂ ತಿಳಿದೇ ಇದೆ. ಮಾಡರ್ನ್ ಇಂಟರ್ನೆಟ್ ಅನ್ನು ಇವರೇ ರೂಪಿಸಿದ್ದಾರೆ ಎಂದರೆ ತಪ್ಪಾಗಲಾರದು. ಇವರ ವೆಬ್ಸೈಟ್ ಗೆ ಪ್ರತೀ ಸೆಕೇಂಡ್ ಗೆ 40 ಸಾವಿರ ಜನ ಭೇಟಿ ನೀಡುತ್ತಾರೆ ಅಂದರೆ ನಿಜಕ್ಕೂ ಅಚ್ಚರಿಯ ಸಂಗತಿ. ಇಷ್ಟೊಂದು ಫೇಮಸ್ ಆಗಿರುವ ಕಂಪನಿಯ ಬಗ್ಗೆ ಎಲ್ಲರಿಗೂ ತಿಳಿದೇ ಇದೆ ಅದು ಗೂಗಲ್ ಕಂಪನಿ ಅಂತ. ಗೂಗಲ್ ಕಂಪನಿಯ ಎಷ್ಟು ದೊಡ್ಡದು? ಇದರ ಹುಟ್ಟು, ಬೆಳವಣಿಗೆ ಹೇಗೆ ಆಯಿತು ಇದರ ಅಡಿಯಲ್ಲಿ ಇನ್ನು ಎಷ್ಟು ಕಂಪನಿಗಳು ಇವೆ ಅನ್ನೋದರ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ.

ಗೂಗಲ್ ಕಂಪನಿ ಸ್ಥಾಪನೆ ಆದ ವರ್ಷ 1995. ಈ ಕಂಪನಿಯನ್ನು ಲ್ಯಾರೀಬ್ರೆಚ್ ಮತ್ತು ಸರ್ಗೆಬ್ರಿನ್ ಎಂಬವರು ಸ್ಥಾಪಿಸಿದರು. ಇವರಿಬ್ಬರು ಸೇರಿ ಬ್ಯಾಕ್ಕ್ರಬ್ ಎಂಬ ಸಣ್ಣ ಸರ್ಚ್ ಇಂಜಿನ್ ಅನ್ನು ಕಂಡು ಹಿಡಿಯುತ್ತಾರೆ. ಆ ಕಾಲದಲ್ಲಿ ಸಾಕಷ್ಟು ಸರ್ಚ್ ಇಂಜಿನ್ ಗಳು ಇದ್ದರೂ ಸಹ ಅವುಗಳಲ್ಲಿ ಸಾಕಷ್ಟು ಮಾಹಿತಿಗಳ ಕೊರತೆ ಉಂಟಾಗುತ್ತಿತ್ತು. ಯಾಕಂದರೆ ಯಾವುದೇ ಒಂದು ವಿಷಯದ ಕುರಿತಾಗಿ ಸರ್ಚ್ ಮಾಡಿದಾಗ ಅವುಗಳು ಸಬಂಧವೆ ಇಲ್ಲದ ಉತ್ತರಗಳನ್ನು ನೀಡುತ್ತಿದ್ದವು. ಆಗ ಈ ಬ್ಯಾಕ್ಕ್ರಬ್ ಎಂಬ ಸರ್ಚ್ ಇಂಜಿನ್ ತುಂಬಾ ನಿಖರ ಉತ್ತರಗಳನ್ನು ನೀಡುತ್ತಿದ್ದು ಇದರಿಂದ ಬ್ಯಾಕ್ಕ್ರಬ್ ಯಶಸ್ಸನ್ನು ಕಾಣತ್ತೆ. ಈ ಕಂಪನಿಯನ್ನು ಮೊದಲು ಆರಂಭಿಸಿದ್ದು ಒಂದು ಸಣ್ಣ ಗ್ಯಾರೇಜ್ ನಲ್ಲಿ. ಮೊದಲಿದ್ದ ಬ್ಯಾಕ್ಕ್ರಬ್ ಎಂಬ ಹೆಸರನ್ನು 1997 ರಲ್ಲಿ ಗೂಗಲ್ ಎಂದು ಹೆಸರು ಬದಲಿಸಿ ಅಲ್ಲಿಂದ ಇಲ್ಲಿಯವರೆಗೂ ಮತ್ತೆಂದೂ ತಿರುಗಿ ನೋಡಲೇ ಇಲ್ಲ ಒಂದು ಇತಿಹಾಸವನ್ನೇ ನಿರ್ಮಿಸಿದರು.

ನಮಗೆ ಯಾವುದೇ ಒಂದು ವಿಷಯದ ಕುರಿತು ತಿಳಿಯದೆ ಇದ್ದಾಗ ನಾವು ಗೂಗಲ್ ಸಲಹೆ ಪಡೆಯುತ್ತೇವೆ. ಇನ್ನೊಬ್ಬರಿಗೆ ಇಮೈಲ್ ಮಾಡಬೇಕು ಅಂದಾಗ ಜಿಮೇಲ್, ವಿಡಿಯೋಗಳನ್ನ ನೋಡೋಕೆ ಯೂಟ್ಯೂಬ್ ಬಳಸುತ್ತೇವೆ. ಇನ್ನು ನಮ್ಮ ಮೊಬೈಲ್ ನಲ್ಲಿರುವ ಸಾಫ್ಟ್ವೇರ್ ಅಂಡ್ರಾಯ್ಡ್ ಕೂಡಾ ಗೂಗಲ್ ಅವರದ್ದೇ. ಇನ್ನು ಯಾವ ಯಾವ ಕಂಪನಿಗಳು ಗೂಗಲ್ ಅಡಿಯಲ್ಲಿ ಇದೆ ಅಂತ ನೋಡುವುದಾದರೆ ಇದುವರೆಗೂ 240ಕ್ಕೂ ಹೆಚ್ಚಿನ ಕಂಪನಿಗಳನ್ನು ಕೊಂಡುಕೊಂಡಿದ್ದಾರೆ. ಇದರಲ್ಲಿ ಕೆಲವು ಮುಖ್ಯವಾದ ಕಂಪನಿಗಳು ಎಂದರೆ ಅಂಡ್ರಾಯಿಡ್ ಅನ್ನು 2005 ರಲ್ಲಿ 50 ಮಿಲಿಯನ್ ಡಾಲರ್ ಕೊಟ್ಟು ಕೊಂಡುಕೊಳ್ಳಲಾಗಿದೆ. ಈಗ ಅಂಡ್ರಾಯಿಡ್ ಇಲ್ಲದ ಮೊಬೈಲ್ ಇಲ್ಲವೇ ಇಲ್ಲ ಅಷ್ಟು ಫೇಮಸ್ ಆಗಿದೆ. ಇನ್ನು ಯೂಟ್ಯೂಬ್ ಅನ್ನು 2006 ರಲ್ಲಿ 1.65 ಬಿಲಿಯನ್ ಡಾಲರ್ ಗೆ ಕೊಂಡುಕೊಳ್ಳಲಾಗಿದೆ. ಇಷ್ಟೇ ಅಲ್ಲದೇ ಗೂಗಲ್ ಕಂಪನಿ ಆರ್ಕುಟ್, ಮೋಟೊರೋಲ ಇನ್ನು ಅನೇಕ ಕಂಪನಿಗಳನ್ನು ಕೊಂಡುಕೊಂಡಿದೆ. ಇನ್ನು ಗೂಗಲ್ ನಲ್ಲಿ AI ಟೆಕ್ನಾಲಜಿ ಕೂಡಾ ಇದೆ. ಇದರ ಸ್ಪೆಷಲ್ ಏನು ಅಂದರೆ ಯಾವುದೇ ಮನುಷ್ಯನ ಸಹಾಯ ಇಲ್ಲದೇ ಒಂದು ಪೇಜ್ ನಲ್ಲಿ ಏನೆಲ್ಲ ಅಂಶಗಳು ಇದೆ ಅನ್ನೋದನ್ನ ಇದು ತಿಳಿದುಕೊಳ್ಳುತ್ತೇ.

ಇನ್ನು ಗೂಗಲ್ ಸರ್ಚ್ ಬಗ್ಗೆ ನೋಡಿದರೆ ಪ್ರಪಂಚದಲ್ಲಿ ದಿನಕ್ಕೆ 5.6 ಬಿಲಿಯನ್ ಅಷ್ಟು ಸರ್ಚ್ ಮಾಡುತ್ತಾರೆ. ಅಂದರೆ ಪ್ರತೀ ನಿಮಿಷಕ್ಕೆ 3.8 ಮಿಲಿಯನ್ ಸರ್ಚ್ ಗಳು ಆಗುತ್ತವೆ. ಪ್ರತೀ ವರ್ಷಕ್ಕೆ ಏನಿಲ್ಲ ಅಂದರು 2 ಟ್ರೀಲಿಯನ್ ಸರ್ಚ್ ಗಳನ್ನು ಜನ ಗೂಗಲ್ ನಲ್ಲಿ ಮಾಡುತ್ತಾರೆ. ಇವುಗಳನ್ನು ನೋಡಿಕೊಳ್ಳಲು ಎಂದೇ ವಿಶ್ವದಾದ್ಯಂತ 9 ಲಕ್ಷಕ್ಕೂ ಹೆಚ್ಚು ಸರ್ವರ್ ಗಳನ್ನು ಹೈಟೆಕ್ ಫೆಸಲಿಟಿಯಲ್ಲಿ ಇಟ್ಟುಕೊಳ್ಳಲಾಗಿದೆ. ಇದೆ ವರ್ಷ 10 ಬಿಲಿಯನ್ ಡಾಲರ್ ಹೂಡಿಕೆ ಮಾಡಿ ಇವರ ಡಾಟ ಸೆಂಟರ್ ಗಳನ್ನು ಹೆಚ್ಚು ಮಾಡಲು ಹೊರಟಿದ್ದಾರೆ. ಮತ್ತಿವರು ಮೊಬೈಲ್ ಕ್ಷೇತ್ರಕ್ಕೆ ಕೂಡಾ ಕಾಲಿಟ್ಟಿದ್ದಾರೆ. ಇವರ ಮೊಬೈಲ್ ಗಳು ಆಪಲ್ ಕಂಪನಿಯ ಮೊಬೈಲ್ ಗಳಿಗೆ ಕಾಂಪಿಟೇಶನ್ ಕೊಡುತ್ತಿವೆ. ಇತ್ತೀಚೆಗೆ ಸುಮ್ಮನಾಗದೆ ಬ್ಯಾಂಕಿಂಗ್ ಕ್ಷೇತ್ರಕ್ಕೂ ಕಾಲಿಟ್ಟಿದ್ದಾರೆ. ಅದುವೇ ತುಂಬಾ ಫೇಮಸ್ ಆಗಿರುವ ಗೂಗಲ್ ಪೇ. ದಿನದ 24 ಗಂಟೆನು ಒಬ್ಬ ಮನುಷ್ಯ ಎಲ್ಲಿ ಹೋದರೂ ಎಲ್ಲಿ ಬಂದರು ಏನೇ ಕೆಲಸ ಮಾಡಿದರು ಅದು ಗೂಗಲ್ ವಸ್ತುಗಳಿಂದ ಮಾಡಬೇಕು ಎನ್ನುವುದು ಇವರ ಉದ್ದೇಶ. ಇಷ್ಟೆಲ್ಲ ಆದಾಯ ಮಾಡುವ ಗೂಗಲ್ ಕಂಪನಿಯ 1 ವರ್ಷದ ಆದಾಯ 12.7 ಬಿಲಿಯನ್ ಡಾಲರ್.

ಗೂಗಲ್ ಕಂಪನಿಯಲ್ಲಿ ಕೆಲಸ ಮಾಡುವವರಿಗೆ , ಅಂದರೆ ಇವರ ಬಳಿ 1 ಲಕ್ಷ ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. ಪ್ರತೀ ವರ್ಷ ಈ ಕಂಪನಿಯಲ್ಲಿ ಕೆಲಸ ಮಾಡಲು 2 ದಶಲಕ್ಷಕ್ಕೂ ಹೆಚ್ಚು ಜನ ಅಪ್ಲಿಕೇಶನ್ ಹಾಕುತ್ತಾರೆ. ಗೂಗಲ್ ತನ್ನ ಉದ್ಯೋಗಿಗಳಿಗೆ ಯಾವ ಕಂಪೆನಿಯೂ ನೀಡದ ಸವಲತ್ತುಗಳನ್ನು ನೀಡಿದೆ. ಉಚಿತವಾಗಿ ಊಟದ ವ್ಯವಸ್ಥೆ , ಕುಕ್ಕಿಂಗ್ ಕ್ಲಾಸ್, ಜಿಮ್ , ಮೆಟಾರ್ನಿತಿ ರಜೆಗಳನ್ನು ನೀಡಲಾಗುತ್ತೆ. 80 % ಕೆಲಸ ಹಾಗೂ 20% ಆಟ ಇವರ ಥೀಮ್ ಆಗಿದೆ. ಇವೆಲ್ಲಕ್ಕಿಂತ ದೊಡ್ಡ ಸೌಲಭ್ಯ ಅಂದರೆ ಒಂದುವೇಳೆ ಗೂಗಲ್ ಕಂಪನಿಯ ಉದ್ಯೋಗಿ ಮರಣ ಹೊಂದಿದರೆ ಆತನ ಹೆಂಡತಿಗೆ 10 ವರ್ಷಗಳ ಕಾಲ ಅರ್ಧ ಸಂಬಳವನ್ನು ನೀಡಲಾಗುತ್ತದೆ. ಇಷ್ಟೊಂದು ಫೇಮಸ್ ಆಗಿರುವ ಗೂಗಲ್ ಕಂಪನಿಯ CEO ಯಾರು ಅಂತ ನೋಡಿದರೆ ಅವರು ನಮ್ಮ ದೇಶದ ಸುಂದರ ಪಿಚೈ. ಇಂತಹ ದೊಡ್ಡ ಕಂಪನಿಯನ್ನು ಮುನ್ನಡೆಸುವ ದೊಡ್ಡ ಜವಾಬ್ಧಾರಿ ನಮ್ಮ ದೇಶದವರ ಮೇಲೆ ಇದೆ ಅನ್ನುವುದು ನಮಗೆ ಹೆಮ್ಮೆಯ ವಿಷಯ.

ಇವರು 2015 ರಲ್ಲಿ ಗೂಗಲ್ ನ CEO ಆಗುತ್ತಾರೆ. ಇವರು ವರ್ಷಕ್ಕೆ 600 ಕೋಟಿ ಸಂಬಳ ಪಡೆಯುತ್ತಾರೆ. ಬಹುಶಃ ಈ ಜಗತ್ತಿನಲ್ಲಿ ಯಾರಿಗೂ ಇಷ್ಟು ದೊಡ್ಡ ಮೊತ್ತದ ಸಂಬಳ ಸಿಗುವುದು ಅನುಮಾನವೇ. ಇಷ್ಟೆಲ್ಲ ನೋಡಿದ ಮೇಲೆ ನಮಗೆ ಅನಿಸುವುದು ಗೂಗಲ್ ಕಂಪನಿಯನ್ನು ಮೀರಿಸಲು ಯಾರಿಂದಲೂ ಸಾಧ್ಯವಿಲ್ಲ ಎನ್ನುವುದು. ಒಂದೇ ಒಂದು ದಿನ ಗೂಗಲ್ ಕಂಪನಿ ತನ್ನ ಕಾರ್ಯ ನಿರ್ವಹಿಸಿದರೇ ಜನರು ಹುಚ್ಚರಾಗುತ್ತಾರೆ ಆರ್ಥಿಕತೆ ನಿಲ್ಲುತ್ತದೆ. ಯಾಹೂ ಕಂಪನಿಯ ಪ್ರಸ್ತುತ ಸಿಇಒ ಮೆರಿಸ್ಸಾ ಮೇಯರ್ 1999 ರಲ್ಲಿ ಗೂಗಲ್ ನ ಮೊದಲ ಮಹಿಳಾ ಉದ್ಯೋಗಿ ಆಗಿದ್ದರು. ಫೈರ್ಫಾಕ್ಸ್ ವೆಬ್ ಬ್ರೌಸರ್ ನ ಪ್ರಮುಖರು ಈಗ ಗೂಗಲ್ ಕ್ರೋಮ್ ಗಾಗಿ ಕೆಲಸ ಮಾಡುತ್ತಾ ಇದ್ದಾರೆ. ಗೂಗಲ್ ಬಗ್ಗೆ ಹೇಳುತ್ತಾ ಹೋದರೆ ಇನ್ನೂ ಸಾಕಷ್ಟು ವಿಷಯಗಳು ಇವೆ.

Leave A Reply

Your email address will not be published.