ಕೊರೋನ ಬಂದಾಗಿನಿಂದ ಯಾವುದೇ ಜ್ವರ ಬಂದರೂ ಕೊರೋನ ಎಂಬ ಭಯ ಶುರುವಾಗಿದೆ. ಟೈಫರ್ಡ್ ಜ್ವರ ಸಾಮಾನ್ಯವಾಗಿ ಕಂಡುಬರುತ್ತದೆ. ಈ ಜ್ವರಕ್ಕೆ ಮನೆಯಲ್ಲೇ ಸುಲಭವಾಗಿ ಮನೆಯಲ್ಲೇ ಸಿಗುವ ಸಾಮಗ್ರಿಗಳನ್ನು ಬಳಸಿ ಮನೆ ಮದ್ದನ್ನು ತಯಾರಿಸಿ ತೆಗೆದುಕೊಂಡಾಗ ಜ್ವರ ವಾಸಿಯಾಗುತ್ತದೆ. ಇದಕ್ಕೆ ಯಾವುದೇ ರೀತಿಯ ಖರ್ಚು ಮಾಡಬೇಕಾಗಿಲ್ಲ ಹಾಗೂ ಈ ಔಷಧಿಯನ್ನು ಸೇವಿಸುವುದರಿಂದ ಯಾವುದೇ ಅಡ್ಡ ಪರಿಣಾಮ ಆಗುವುದಿಲ್ಲ. ಹಾಗಾದರೆ ಮನೆ ಮದ್ದನ್ನು ಹೇಗೆ ಮಾಡುವುದು ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಟೈಫರ್ಡ್ ಜ್ವರ ಸಾಮಾನ್ಯವಾಗಿ ಬರುತ್ತದೆ. ಈ ಜ್ವರದಿಂದ ಅಲ್ಸರ್, ಸ್ಕಿನ್ ರ್ಯಾಶಸ್, ಹೊಟ್ಟೆ ನೋವು, ನಾಲಿಗೆಯ ಮೇಲೆ ಬಿಳಿ ಮಚ್ಚೆ, ಲಿವರ್ ಡ್ಯಾಮೇಜ್ ಆಗುತ್ತದೆ, ಹೆಚ್ಚಿನ ಪ್ರಮಾಣದಲ್ಲಿ ಜ್ವರ, ತಲೆನೋವು, ಆಯಾಸ, ಮಲಬದ್ಧತೆ, ಕೆಮ್ಮು ಬರುತ್ತದೆ. ವೈದ್ಯರ ಬಳಿ ಹೋದರು ಅವರ ಔಷಧಿಯ ಜೊತೆಗೆ ಮನೆಯಲ್ಲಿ ಮೂರು ರೀತಿಯ ಮನೆ ಮದ್ದನ್ನು ಮಾಡಿ ಕುಡಿಯುವುದರಿಂದ ಬೇಗ ಟೈಫರ್ಡ್ ವಾಸಿಯಾಗುತ್ತದೆ.

ಮೊದಲನೆಯದು ಲವಂಗದ ನೀರು ಇದನ್ನು ಮಾಡಲು ಬೇಕಾಗುವ ಸಾಮಗ್ರಿಗಳು ಲವಂಗ, ನೀರು. ಮೊದಲು ಎರಡು ಲೀಟರ್ ಶುದ್ಧವಾದ ನೀರಿಗೆ 4-5 ಲವಂಗ ಹಾಕಿ 10-15 ನಿಮಿಷ ಕುದಿಸಬೇಕು ನಂತರ ಈ ನೀರನ್ನು ತಣ್ಣಗಾಗಿಸಿ ಆಗಾಗ ಕುಡಿಯುತ್ತಿರಬೇಕು. ಲವಂಗದ ನೀರನ್ನು ಕುಡಿಯುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಇದರಿಂದ ಟೈಫರ್ಡ್ ನಿಯಂತ್ರಣಕ್ಕೆ ಬರುತ್ತದೆ.

ಎರಡನೆಯ ಮನೆ ಮದ್ದು ಮಾಡಲು ಬೇಕಾಗುವ ಸಾಮಗ್ರಿಗಳು ತುಳಸಿ, ಕಾಳುಮೆಣಸಿನ ಪುಡಿ. ಎರಡು ಸ್ಪೂನ್ ತುಳಸಿ ರಸಕ್ಕೆ ಒಂದು ಚಿಟಿಕೆ ಕಾಳು ಮೆಣಸಿನ ಪುಡಿಯನ್ನು ಸೇರಿಸಿ ಊಟದ ನಂತರ ಸೇವಿಸಬೇಕು. ಬೆಳಗ್ಗೆ ಮತ್ತು ರಾತ್ರಿ ಹೊಟ್ಟೆ ತುಂಬಿದ ನಂತರ ತೆಗೆದುಕೊಳ್ಳಬೇಕು. ಮೂರು ಹೊತ್ತು ತಿನ್ನಬಹುದು ಕನಿಷ್ಠ ಎರಡು ಹೊತ್ತಾದರೂ ತಿನ್ನಬೇಕು ಹೀಗೆ 15 ದಿನ ಮಾಡಬೇಕು. ಇದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿ ಟೈಫರ್ಡ್ ಕಡಿಮೆಯಾಗುತ್ತದೆ.

ಮೂರನೆಯ ಮನೆ ಮದ್ದನ್ನು ಮಾಡಲು ಬೇಕಾಗುವ ಸಾಮಗ್ರಿಗಳು ಮಜ್ಜಿಗೆ, ಕೊತ್ತಂಬರಿ ಸೊಪ್ಪು. 200 ml ಮಜ್ಜಿಗೆಗೆ 15ml ಕೊತ್ತಂಬರಿ ಸೊಪ್ಪಿನ ಜ್ಯೂಸ್ ಮಾಡಿಕೊಂಡು ಸೇರಿಸಿ ಮಿಕ್ಸ್ ಮಾಡಿ ಊಟ ಆದ ನಂತರ ಕುಡಿಯಬೇಕು ದಿನಕ್ಕೆ ಎರಡು ಸಲ ಕುಡಿಯಬೇಕು. ಹೀಗೆ 15 ದಿನ ಮಾಡಬೇಕು. ಈ ಮೂರು ಮನೆ ಮದ್ದನ್ನು ತಪ್ಪದೇ ಮಾಡಿದಾಗ ಟೈಫರ್ಡ್ ಜ್ವರ ನಿವಾರಣೆಯಾಗುತ್ತದೆ.

ಈ ಮನೆ ಮದ್ದನ್ನು ಮಾಡಲು ಮನೆಯಲ್ಲಿ ದಿನನಿತ್ಯ ಅಡುಗೆಗೆ ಬಳಸುವ ಸಾಮಾಗ್ರಿಗಳನ್ನು ಬಳಸಲಾಗುತ್ತದೆ, ಇದರಲ್ಲಿ ಕೆಮಿಕಲ್ ಬಳಸುವುದಿಲ್ಲ ಹಾಗೂ ಇದಕ್ಕೆ ಯಾವುದೇ ಖರ್ಚು ಇರುವುದಿಲ್ಲ. ಈ ಮಾಹಿತಿ ಆರೋಗ್ಯ ವೃದ್ಧಿಗೆ ಉಪಯುಕ್ತವಾಗಿದೆ ಆದ್ದರಿಂದ ಈ ಮಾಹಿತಿಯನ್ನು ತಪ್ಪದೇ ಎಲ್ಲರಿಗೂ ತಿಳಿಸಿ.

Leave a Reply

Your email address will not be published. Required fields are marked *