Farmer Loan waiver: ಸಾಲ ಮನ್ನಾದ ನಿರೀಕ್ಷೆಯಲ್ಲಿದ್ದ ರೈತರಿಗೆ ರಾಜ್ಯ ಸರ್ಕಾರದಿಂದ ಸಿಹಿಸುದ್ದಿ

0 90

Farmer Loan waiver: ಕರ್ನಾಟಕದಲ್ಲಿನ ಅನೇಕ ರೈತರು ತಮ್ಮ ಕೃಷಿ ಬೆಳೆಗಳಿಗೆ ಸರ್ಕಾರ ಒದಗಿಸುವ ಶೂನ್ಯ ಬಡ್ಡಿದರಗಳ ಸಾಲದ ಮೇಲೆ ಅವಲಂಬಿತವಾಗಿರುತ್ತಾರೆ. ಹೊಸ ಸಾಲವನ್ನ ಪಡೆಯುವ ಇಚ್ಛೆಯನ್ನು ಹೊಂದಿದ್ದ ರೈತರಿಗೆ ಇದೀಗ ಸಿಹಿ ಸುದ್ದಿ ಕೇಳಿ ಬರುತ್ತಿದ್ದು ರೈತರಿಗೆ ನೀಡುತ್ತಿದ್ದ (Farmer Loan waiver) ಶೂನ್ಯ ಬಡ್ಡಿ ದರಗಳ ಸಾಲದ ಮೊತ್ತವನ್ನು ಇದೀಗ ಐದು ಲಕ್ಷ ರೂಪಾಯಿಗಳಿಗೆ ಹೆಚ್ಚಳ ಮಾಡಲಾಗುತ್ತದೆ ಎಂದು ಸಹಕಾರ ಸಚಿವ ಕೆ ಎಸ್ ರಾಜಣ್ಣ ತಿಳಿಸಿದ್ದಾರೆ.

ಅಷ್ಟೇ ಅಲ್ಲದೆ 3% ಬಡ್ಡಿ ದರದಲ್ಲಿ ನೀಡಲಾಗುತ್ತಿದ್ದ ಮಧ್ಯಮಾವಧಿಯ ಸಾಲದ ಮೊತ್ತವನ್ನು ಸಹ 10 ಲಕ್ಷ ರೂಪಾಯಿಗಳಿಂದ 20 ಲಕ್ಷ ರೂಪಾಯಿಗಳಿಗೆ ಹೆಚ್ಚಳ ಮಾಡಲು ಭರವಸೆಯನ್ನು ನೀಡುತ್ತೇವೆ ಎಂದು ತಿಳಿಸಿದ್ದಾರೆ ರೈತರಿಗೆ ಇದರಿಂದ ಅನುಕೂಲವಾಗಲಿದ್ದು ಬರುವ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿಯೇ ಈ ಯೋಜನೆಗಳನ್ನ ಜಾರಿಗೊಳಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಸರ್ಕಾರವು ಕಳೆದ ವರ್ಷ ರೈತರಿಗೆ 12,000 ಕೋಟಿ ರೂಪಾಯಿ ಸಾಲ ನೀಡುವ ಗುರಿಯನ್ನು ಹೊಂದಿತ್ತು ಆದರೆ ಅಂದಾಜು ಸುಮಾರು 20 ಸಾವಿರ ಕೋಟಿ ರೂಪಾಯಿ ಸಾಲವನ್ನ ಈಗಾಗಲೇ ವಿತರಣೆ ಮಾಡಲಾಗಿದೆ ಗುರಿಯನ್ನು ಮೀರಿ ಸರ್ಕಾರ ರೈತರಿಗೆ ಸಾಲವನ್ನ ನೀಡುವಲ್ಲಿ ಮುಂದಾಗುತ್ತಿದೆ ಅದೇ ರೀತಿ ಈ ವರ್ಷವೂ ಸಹ ರೈತರಿಗೆ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ಸಾಲವನ್ನ ವಿತರಿಸಲಾಗುತ್ತದೆ ಎಂದು ಸಚಿವ ಕೆ ಎನ್ ರಾಜಣ್ಣ ಅವರು ಸುದ್ದಿಗಾರರೊಂದಿಗೆ ಮಾತನಾಡಿ ಈ ಮೂಲಕ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಶೂನ್ಯ ಬಡ್ಡಿದರ ಸಾಲವನ್ನು 3 ಲಕ್ಷ ಗಳಿಂದ 5 ಲಕ್ಷ ರೂ ಗಳಿಗೆ ಹೆಚ್ಚು ಮಾಡುವುದಾಗಿ ಭರವಸೆಯನ್ನು ನೀಡಿದ್ದಾರೆ. ಇದನ್ನೂ ಓದಿ Kannada News: ಹೊಸ ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಜಿ ಕರೆಯಲಾಗಿದೆ ಆಸಕ್ತರು ಕೂಡಲೇ ಅರ್ಜಿಹಾಕಿ

Leave A Reply

Your email address will not be published.