ಬಿಸಿಲಿನಿಂದ ಕಪ್ಪಾಗಿದ್ದರೆ ಈ ಪ್ಯಾಕ್ ಬಳಸಿ ಸರಳ ಹಾಗೂ ಸುಲಭ

0 1

ಮನುಷ್ಯನ ದೇಹದ ಅಂಗಾಂಗಗಳಲ್ಲಿ ಕಣ್ಣು, ಮೂಗು, ಕೂದಲು, ಹಲ್ಲುಗಳು ಮತ್ತು ಆಕರ್ಷಣೀಯ ಮೈಕಟ್ಟು ನೋಡುಗರನ್ನು ಸೆಳೆಯುತ್ತದೆ. ಹಾಗೆಯೇ ಅದರಲ್ಲಿ ಮುಖ ಕೂಡ ಒಂದು. ಮುಖ ಸುಂದರವಾಗಿ ಇರಬೇಕು ಎಂದರೆ ಯಾವುದೇ ರೀತಿಯ ಕಲೆಗಳು ಇರಬಾರದು. ಹಾಗೆಯೇ ಬಿಸಿಲಿಗೆ ಹೋದಾಗ ಮುಖ ಕಪ್ಪಾಗುತ್ತದೆ. ಬಿಸಿಲಿನಲ್ಲಿ ಆದ ಕಪ್ಪನ್ನು ಹೋಗಲಾಡಿಸುವ ಕುರಿತು ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಸಕ್ಕರೆ ಎಲ್ಲರ ಮನೆಯಲ್ಲೂ ಕೂಡ ಇರುತ್ತದೆ. ಮೊದಲನೆಯದಾಗಿ ಸಕ್ಕರೆಯನ್ನು ತೆಗೆದುಕೊಳ್ಳಬೇಕು. ಅದಕ್ಕೆ ನಿಂಬೆಹಣ್ಣಿನ ರಸವನ್ನು ಸ್ವಲ್ಪ ಹಾಕಬೇಕು. ಇದಕ್ಕೆ ಆಲೀವ್ ಎಣ್ಣೆಯನ್ನು ಹಾಕಬೇಕು. ಅದು ಇಲ್ಲವೆಂದರೆ ಕೊಬ್ಬರಿ ಎಣ್ಣೆಯನ್ನು ಸಹ ಹಾಕಬಹುದು. ಇವೆಲ್ಲವನ್ನೂ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಬೇಕು. ಇದನ್ನು ಮಾಡುವುದರಿಂದ ಮುಖದ ಚರ್ಮ ಮೃದುವಾಗುತ್ತದೆ. ಹಾಗೆಯೇ ಮುಖಕ್ಕೆ ಒಂದು ಕಾಂತಿ ಸಿಗುತ್ತದೆ.

ಈ ಮಿಶ್ರಣವನ್ನು ಮುಖಕ್ಕೆ ಮಸಾಜ್ ಮಾಡುವ ರೀತಿಯಲ್ಲಿ ಹಚ್ಚಬೇಕು. ಹಾಗೆಯೇ ದೇಹದ ಯಾವುದೇ ಭಾಗ ಬಿಸಿಲಿಗೆ ಕಪ್ಪಾಗಿದ್ದರೆ ಈ ವಿಧಾನವನ್ನು ಪ್ರಯೋಗ ಮಾಡಬಹುದು. ಈ ಮಸಾಜ್ ನ್ನು 2 ನಿಮಿಷಗಳವರೆಗೆ ಮಾಡಿ 5 ನಿಮಿಷಗಳ ನಂತರ ಮುಖವನ್ನು ತೊಳೆಯಬೇಕು. ನಂತರದಲ್ಲಿ ಟೊಮೆಟೊವನ್ನು ಚೆನ್ನಾಗಿ ಮಿಕ್ಸಿ ಮಾಡಿಟ್ಟುಕೊಳ್ಳಬೇಕು. ಹಾಗೆಯೇ ಮೊಸರನ್ನು ತೆಗೆದುಕೊಳ್ಳಬೇಕು. ಇದನ್ನು ಟೊಮೆಟೊ ಪೇಸ್ಟ್ ಗೆ ಹಾಕಬೇಕು. ಅದಕ್ಕೆ ಒಂದು ಚಮಚ ನಿಂಬೆರಸವನ್ನು ಹಾಕಬೇಕು.

ಇದನ್ನು ಮುಖಕ್ಕೆ ಹಚ್ಚಬೇಕು. ಇದನ್ನು ಸುಮಾರು 30ನಿಮಿಷಗಳ ಕಾಲ ಹಾಗೆಯೇ ಬಿಡಬೇಕು. ಇದು ಒಣಗಿದ ನಂತರ ಅರ್ಧ ಗಂಟೆಯ ನಂತರದಲ್ಲಿ ಉಗುರು ಬೆಚ್ಚಗಿನ ನೀರಿನಲ್ಲಿ ಮುಖವನ್ನು ತೊಳೆಯಬೇಕು. ಹೀಗೆ ಮಾಡುವುದರಿಂದ ಬಿಸಿಲಿನಲ್ಲಿ ಕಪ್ಪಾದ ಮುಖ ಮೊದಲಿಗೆ ಇರುವ ಬಣ್ಣಕ್ಕೆ ಬರುತ್ತದೆ. ಇನ್ನು ಬಹಳ ಬಿಸಿಲು ಶುರುವಾಗುತ್ತದೆ. ಹೆಚ್ಚಾಗಿ ಬಿಸಿಲಿಗೆ ಹೋಗುವಾಗ ಛತ್ರಿಯನ್ನು ಹಿಡಿದುಕೊಂಡು ಹೋಗುವುದು ಒಳ್ಳೆಯದು. ಹಾಗೆಯೇ ಮುಖಕ್ಕೆ ಏನಾದರೂ ಕಟ್ಟಿಕೊಳ್ಳಬೇಕು. ಇಲ್ಲವಾದಲ್ಲಿ ಮುಖ ಕಪ್ಪಾಗುತ್ತದೆ.

Leave A Reply

Your email address will not be published.