ಊಟದಲ್ಲಿ ಮದ್ದು, ಕೈ ಮಸಕು ಹಾಕಿದ್ದರೆ ಕಂಡು ಹಿಡಿದು ತೆಗೆಯೋದು ಹೇಗೆ? ಈ ಮಾಹಿತಿ ನಿಮಗೆ ಗೊತ್ತಿರಲಿ

0 103

ನಮ್ಮ ಶತ್ರುಗಳು ನಮ್ಮ ಊಟದಲ್ಲಿ ನಮಗೆ ಗೊತ್ತಿರದ ರೀತಿಯಲ್ಲಿ ಮದ್ದು ಅಥವಾ ಕೈಮಸಕು ಹಾಕುವುದು ಎಲ್ಲರಿಗೂ ತಿಳಿದಿದೆ. ಈ ರೀತಿ ಊಟದಲ್ಲಿ ಮದ್ದು ಹಾಕುವುದರಿಂದ ಕ್ರಮೇಣ ವ್ಯಕ್ತಿಗೆ ಊಟ ಸೇರುವುದಿಲ್ಲ ಮದ್ದು ಎಷ್ಟು ಕೆಟ್ಟದ್ದು ಎಂದರೆ ಇದರಿಂದ ಆ ವ್ಯಕ್ತಿಯ ಸಾವು ಕೂಡ ಸಂಭವಿಸಬಹುದು ಹಾಗಾಗಿ ನಾವಿಂದು ನಿಮಗೆ ಊಟದಲ್ಲಿ ಮದ್ದನ್ನು ಹೇಗೆ ಬೇರೆಸುತ್ತಾರೆ ನಿಮ್ಮ ಶತ್ರುಗಳಿಂದ ಹೇಗೆ ಹುಷಾರಾಗಿರಬೇಕು ಒಂದು ವೇಳೆ ನಿಮ್ಮ ಊಟದಲ್ಲಿ ಮದ್ದು ಬೆರೆತರೆ ಯಾವ ದೇಹದಲ್ಲಿ ಯಾವ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ದೇಹದಲ್ಲಿ ಹೋಗಿರುವ ಮದ್ದನ್ನು ಸರಳವಾಗಿ ಮನೆಯಲ್ಲಿ ತೆಗೆಯುವುದು ಹೇಗೆ ಇನ್ನೂ ಕುತೂಹಲಕಾರಿ ರಹಸ್ಯ ಮಾಹಿತಿಯನ್ನು ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ.

ಯಾರಿಗಾದರೂ ತಿಂದ ಊಟ ದಕ್ಕದೇ ವಾಂತಿ ಆಗುತ್ತಿದ್ದರೆ ನಿಷಕ್ತರಾಗುವುದು ತೂಕ ಕಡಿಮೆಯಾಗಿ ದೇಹ ನಿತ್ರಾಣ ವಾಗುವುದು ಹಾಸಿಗೆ ಬಿಟ್ಟು ಏಳುವುದಕ್ಕೆ ಸಾಧ್ಯವಾಗದೇ ಒದ್ದಾಡುತ್ತಿದ್ದರೆ ಅಂತವರಿಗೆ ಮದ್ದಿನ ಪ್ರಯೋಗ ಆಗಿದೆ ಎಂದು ನಮ್ಮ ಹಿರಿಯರು ಹೇಳಿದ್ದನ್ನು ನೀವು ಕೇಳಿರಬಹುದು ಹಳ್ಳಿಗಳಲ್ಲಿ ಇದು ಸರ್ವೇಸಾಮಾನ್ಯ. ಕೆಲವರು ಇದನ್ನು ಸುಳ್ಳು ಬ್ರಮೆ ಮನಸ್ಸಿನ ಕಾಯಿಲೆ ಎಂದು ಹೇಳುತ್ತಾರೆ ಇನ್ನು ಕೆಲವರು ಇದನ್ನು ನಿಜ ಎಂದು ನಂಬುತ್ತಾರೆ. ಇದೆಲ್ಲ ಅವರವರ ನಂಬಿಕೆ ಹಾಗೂ ಅನುಭವಕ್ಕೆ ಬಿಟ್ಟಿದ್ದು. ಮದ್ದು ಹಾಕುವುದು ಎಂದರೆ ಅದು ಒಂದು ರೀತಿಯ ನಿಧಾನವಾಗಿ ಪರಿಣಾಮ ಬೀರುವ ವಿಷದಂತೆ. ಊಟ ತಿಂಡಿ ಅಥವಾ ಪಾನೀಯದಲ್ಲಿ ಒಂದೆರಡು ಹನಿ ಸೇರಿಸಿ ನಿಮಗೆ ನಿಮ್ಮ ಆತ್ಮೀಯರು ನಂಬಿಕಸ್ಥರು ನಿಮ್ಮ ಹಿತೈಶಿಗಳು ಎನಿಸಿಕೊಂಡವರೆ ಇದನ್ನು ನೀಡುವುದು ವಿಪರ್ಯಾಸ.

ಮದ್ದು ಹಾಕುವುದು ಇದು ಸಂಪ್ರದಾಯದ ಹೆಸರು ಮದ್ದು ಹಾಕುವುದು ಅಂದಿನ ಕಾಲಕ್ಕೆ ಕೆಲವು ಕುಟುಂಬಗಳಿಗೆ ಮಾತ್ರ ಸೀಮಿತವಾಗಿತ್ತು ಅವರು ಇದನ್ನು ಆಂಗ್ಲರಿಗೆ ದರೋಡೆಕೋರರಿಗೆ ಇಂಥವರಿಗೆ ನೀಡುತ್ತಿದ್ದರು. ಮದ್ದು ಹಾಕುವ ಸಂಪ್ರದಾಯ ಈಗಲೂ ಕೂಡ ಮುಂದುವರೆದುಕೊಂಡು ಬಂದಿದೆ ಈ ಮದ್ದನ್ನು ಗರವಿಷ ಎಂದು ಕರೆಯುತ್ತಾರೆ. ಇದನ್ನ ಹಾಕುವುದಕ್ಕೆ ಕೆಲವು ವಿಧಾನಗಳಿವೆ ಆ ಪ್ರಕಾರವಾಗಿ ಪ್ರಯೋಗಿಸಿದರೆ ಮಾತ್ರ ಮದ್ದು ಕೆಲಸ ಮಾಡುತ್ತದೆ ಎಂಬುದು ಕೆಲವರ ವಾದ.

ಹಾಗಾದರೆ ಈ ಮದ್ದನ್ನು ಮೊದಲು ಹೇಗೆ ತಯಾರಿಸುತ್ತಿದ್ದರು ಎಂದರೆ ಹಲ್ಲಿ ಹರಣೆ ಊಸರವಳ್ಳಿ ಓತಿಕ್ಯಾತ ಉಡ ಅವುಗಳನ್ನು ಕೊಂದು ನೇತು ಹಾಕಿ ಅವು ಕೊಳೆತು ಅವುಗಳ ದೇಹದಿಂದ ಬರುವ ರಸವನ್ನು ಕೆಲವು ಮೂಲಿಕೆ ಬೇರು ನಾರಿನ ಪುಡಿ ಸೇರಿಸಿ ಹೆಂಗಸಿನ ಋತುಸ್ರಾವದೊಂದಿಗೆ ಬೆರೆಸಿ ಸಣ್ಣ ಗುಳಿಗೆಯ ರೂಪದಲ್ಲಿ ತಯಾರಿಸುತ್ತಾರೆ ಅದನ್ನು ತಿನ್ನುವ ಆಹಾರದಲ್ಲಿ ಹಾಕುತ್ತಾರೆ. ಹೀಗೆ ತಯಾರಿಸಿಕೊಂಡ ಮದ್ದನ್ನು ಒಂದು ಸಿಸಿನ ಬಾಟಲಿಯಲ್ಲಿ ಹಾಕಿರುತ್ತಾರೆ ನಂತರ ಅದನ್ನು ತಮ್ಮ ಹೆಬ್ಬೆರಳಿನ ಉಗುರಿನ ಒಳಗೆ ಸೇರಿಸಿಕೊಳ್ಳುತ್ತಾರೆ ಅದನ್ನ ತಮ್ಮ ಶತ್ರು ಸೇವಿಸುವ ಆಹಾರ ಪದಾರ್ಥಗಳಲ್ಲಿ ಒಂದು ಬಾರಿ ತಮ್ಮ ಬೆರಳನ್ನ ಮುಳುಗಿಸುತ್ತಾರೆ. ನಂತರ ಸ್ವಾಭಾವಿಕವಾಗಿ ಆ ವಿಷ ಪದಾರ್ಥಗಳಲ್ಲಿ ಸೇರಿಕೊಳ್ಳುತ್ತದೆ.

ವ್ಯಕ್ತಿ ಅದನ್ನು ಸೇವಿಸಿದ ನಂತರ ಅದು ತಕ್ಷಣವೇ ತನ್ನ ಕಾರ್ಯವನ್ನು ಆರಂಭಿಸುವುದಿಲ್ಲ ದೇಹವನ್ನು ಸೇರಿದ ಬಹಳ ದಿನಗಳ ನಂತರ ತನ್ನ ದುಷ್ಪರಿಣಾಮವನ್ನು ಪ್ರಾರಂಭಿಸುತ್ತದೆ ಹಿರಿಯರ ಅನುಭವದ ಪ್ರಕಾರ ಸುಮಾರು ಮೂರು ತಿಂಗಳ ನಂತರ ಸಣ್ಣದಾಗಿ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ ನಂತರ ಅದು ಜೋರಾಗಿ ಹೊಟ್ಟೆಯಲ್ಲಿ ಹುಣ್ಣು ಬೆಳೆದು ಅದು ದೊಡ್ಡದಾಗಿ ವ್ಯಕ್ತಿ ಹೊಟ್ಟೆನೋವಿನಿಂದ ಸಾವನ್ನಪ್ಪುತ್ತಾನೆ. ಇದು ಜನರ ಮೇಲೆ ಆದಂತಹ ಆಗುತ್ತಿರುವ ಆಗುವಂತಹ ಕೆಟ್ಟ ಪರಿಣಾಮ. ಮದ್ದು ಹಾಕುವುದರ ಹಿಂದಿನ ಕಾರಣ ಮತ್ಸರ ದ್ವೇಷ ಹೊಟ್ಟೆಕಿಚ್ಚು ಇನ್ನೊಬ್ಬರ ಸಂತೋಷವನ್ನು ಸಹಿಸದ ವಿಕೃತ ಮನಸ್ಥಿತಿ ಮತ್ತೊಬ್ಬರು ಪೂರ್ತಿ ಹಾಳಾಗಿಹೋಗಲಿ ಎನ್ನುವ ದುಷ್ಟ ಮನಸ್ಥಿತಿ. ನಕಾರಾತ್ಮಕ ಭಾವನೆಗಳು ತಾರಕಕ್ಕೆ ಹೋಗಿ ತಡೆಯಲಾಗದ ಮನುಷ್ಯ ಬೆನ್ನಿಗೆ ಚೂರಿ ಹಾಕುವಂತೆ ಮದ್ದನ್ನು ಹಾಕುತ್ತಾರೆ. ಮದ್ದು ತನ್ನ ಕೆಲಸವನ್ನ ಪ್ರಾರಂಭಿಸಿದ ನಂತರ ಆ ವ್ಯಕ್ತಿಗೆ ಉಂಡ ಒಂದು ಅಗಳು ಅನ್ನ ಕೂಡಿದ ನೀರು ಹೊಟ್ಟೆಯಲ್ಲಿ ಉಳಿಯುವುದಿಲ್ಲ ಮದ್ದು ಹಾಕಿಸಿಕೊಂಡ ವ್ಯಕ್ತಿ ವಾಂತಿ ಮಾಡಿ ಮಾಡಿ ಸುಸ್ತಾಗುತ್ತಾರೆ.

ಮದ್ದು ಹಾಕಿಸಿಕೊಂಡವರಿಗೆ ಕಾಲಾನಂತರದಲ್ಲಿ ಕಾಣಿಸಿಕೊಳ್ಳುವ ಕಾಯಿಲೆಗಳು ಯಾವುವು ಎಂದರೆ ರಕ್ತಹೀನತೆ ಬೇಗನೆ ದೇಹದ ತೂಕ ಕಡಿಮೆಯಾಗುವುದು ಅಜೀರ್ಣ ಹಸಿವಿನ ತೊಂದರೆ ಹೊಟ್ಟೆಯುಬ್ಬರ ಪದೇ ಪದೇ ಬೆದಿ ವಾಂತಿ ಮತ್ತೆ ಮತ್ತೆ ಕಾಣಿಸಿಕೊಳ್ಳುವ ಅವರ ಅಸಹಜ ವಿಲಕ್ಷಣ ಸುಸ್ತು ಮುಂತಾದ ಲಕ್ಷಣಗಳು ಕಂಡುಬಂದರೆ ಅನುಭವಿ ಆಯುರ್ವೇದ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆಯನ್ನು ಪಡೆಯುವುದು ಉತ್ತಮ. ಕೈ ವಿಷವನ್ನು ಸಾಧಾರಣವಾಗಿ ವಿಧವೆಯರು ಅಥವಾ ಇದನ್ನು ಕಲಿತಿರುವ ಕೆಲವು ಮಾಂತ್ರಿಕರು ಹಾಕುತ್ತಾರೆ ಎಂಬ ನಂಬಿಕೆ ಇದೆ.

ವಿಧವೆಯರ ಜೀವನದಲ್ಲಿ ಅವರಿಗಾದ ನಿರಾಶೆಯ ಪ್ರತಿಫಲವಾಗಿ ಅಥವಾ ಬೇರೆಯವರು ಏಳಿಗೆಯನ್ನು ಸಹಿಸದೆ ಇನ್ನೊಬ್ಬರನ್ನು ಹಾಳು ಮಾಡುವುದಕ್ಕಾಗಿ ಹಣ ತೆಗೆದುಕೊಂಡು ಕೆಲಸ ಮಾಡುವುದಕ್ಕಾಗಿ ಜನರಿರುತ್ತಾರೆ. ಸಾಮಾನ್ಯವಾಗಿ ಮದ್ದನ್ನು ಅಮವಾಸ್ಯೆ ಅಥವಾ ಹುಣ್ಣಿಮೆಯ ದಿನ ಹಾಕುತ್ತಾರೆ ಅದಕ್ಕಾಗಿ ಹಿರಿಯರು ಅಮವಾಸ್ಯೆ ಅಥವಾ ಹುಣ್ಣಿಮೆಯ ದಿನ ಜಾಸ್ತಿಹೊತ್ತು ಹೊರಗಡೆ ಇರಬಾರದು ಎಂದು ಹೇಳುತ್ತಾರೆ.

ಮದ್ದು ಹಾಕುವುದು ಎಂಬ ವಿಷವಿಕ್ಕುವ ವಿಚಿತ್ರ ಪದ್ಧತಿ ಸಾವಿರದ ಒಂಬೈನೂರ ತೊಂಬತ್ತರವರೆಗೂ ಸುದ್ದಿಯಲ್ಲಿತ್ತು ಆದರೆ ಈಗ ಇದು ಅಷ್ಟು ಸುದ್ದಿಯಲ್ಲಿಲ್ಲ. ಮದ್ದು ಹಾಕಿರುವುದನ್ನು ತೆಗೆಯುವುದಕ್ಕೂ ಕೂಡ ಕೆಲವೊಂದು ಕುಟುಂಬದವರು ಇದ್ದಾರೆ ಅವರ ಮನೆಗೆ ನಿರ್ದಿಷ್ಟ ದಿನದಂದು ತೆಂಗಿನಕಾಯಿ ಹಾಗೂ ಅಗತ್ಯ ವಸ್ತುಗಳನ್ನು ತೆಗೆದುಕೊಂಡು ಮದ್ದು ಹಾಕಿಸಿಕೊಂಡ ವ್ಯಥೆ ಪಡುತ್ತಿರುವ ವ್ಯಕ್ತಿಯನ್ನು ಕರೆದುಕೊಂಡು ಹೋಗಬೇಕು. ಮುದ್ದು ತೆಗೆಯುವವರು ಯಾವುದೋ ಮರದ ಎಲೆಗಳಿಂದ ತೊಗಟೆಗಳಿಂದ ಏನೋ ಒಂದು ಪುಡಿಮಾಡಿ ಇಟ್ಟುಕೊಂಡಿರುತ್ತಾರೆ ಅದನ್ನು ನೀರಿನಲ್ಲಿ ಕರಡಿ ಪಾನೀಯವನ್ನು ತಯಾರಿಸುತ್ತಾರೆ ಅದು ಸಿಕ್ಕಾಪಟ್ಟೆ ಕಹಿ ಇರುತ್ತದೆ ಅದನ್ನು ಕುಡಿಯುವುದಕ್ಕೆ ಸಾಧ್ಯವೇ ಇಲ್ಲದಂತಹ ಪೇಯ ಆದರೆ ಅದನ್ನ ಒಂದು ಸಾರಿ ಕುಡಿದರೆ ಹೊಟ್ಟೆ ಒಳಗಿರುವ ಮದ್ದು ಹೊರ ಬಿದ್ದು ಹೋಗುತ್ತದೆ.

ಮದ್ದು ಹಾಕಿರುವುದನ್ನು ತಿಳಿದುಕೊಳ್ಳುವುದು ಹೇಗೆ ಎಂದರೆ ಮನೆಯ ಇತರೆ ಸದಸ್ಯರಿಂದ ನುಗ್ಗೆ ಸೊಪ್ಪಿನ ರಸವನ್ನು ತರಿಸಿಕೊಳ್ಳಬೇಕು ನಂತರ ಅದನ್ನು ಎಡಗೈಗೆ ಹಚ್ಚಿಕೊಳ್ಳಬೇಕು ಅದು ನೊರೆ ಬರುವುದು ಅಥವಾ ಬಣ್ಣ ಬದಲಾದರೆ ಮದ್ದು ಹಾಕಿದ್ದಾರೆ ಎಂದು ಅರ್ಥ ನೀರಾಗಿ ಕೈಮೇಲೆ ಇದ್ದರೆ ಮದ್ದು ಹಾಕಿಲ್ಲ ಎಂದು ಅರ್ಥ. ಹಾಕಿರುವ ಮದ್ದನ್ನು ಒಂದು ವರ್ಷದವರೆಗೆ ತೆಗೆಯದಿದ್ದರೆ ಅದು ಪ್ರಾಣಕ್ಕೆ ಅಪಾಯವನ್ನು ತರುತ್ತದೆ ಎಂಬ ನಂಬಿಕೆಯಿದೆ. ಇದಿಷ್ಟು ಮದ್ದು ಹಾಕುವುದರ ಕುರಿತಾದ ಮಾಹಿತಿಯಾಗಿದೆ ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರೊಂದಿಗೆ ನಿಮ್ಮ ಸ್ನೇಹಿತರು ಹಾಗೂ ಪರಿಚಿತರಿಗು ಈ ಮಾಹಿತಿಯನ್ನು ತಿಳಿಸಿರಿ.

Leave A Reply

Your email address will not be published.