ಸದ್ಯದ ಪರಿಸ್ಥಿತಿಯಲ್ಲಿ ಹಣ್ಣುಗಳನ್ನು ಮನೆಗೆ ತರುವಾಗ ಈ ವಿಚಾರ ನಿಮಗೆ ಗೊತ್ತಿರಲಿ

0 2

ಸದ್ಯಕ್ಕೆ ದೇಶದಲ್ಲಿ ಕೊರೋನಾ ಆರ್ಭಟ ಹೆಚ್ಚಾಗಿದೆ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದೆ, ಈ ನಿಟ್ಟಿನಲ್ಲಿ ಆರೋಗ್ಯದ ಕಾಳಜಿಯನ್ನು ಪ್ರತಿಯೊಬ್ಬರೂ ಕೂಡ ವಹಿಸಬೇಕು ಇನ್ನು, ಮಾರುಕಟ್ಟೆಯಿಂದ ತರುವಂತ ಹಣ್ಣು ತರಕಾರಿಗಳ ಬಗ್ಗೆ ಹೆಚ್ಚಿನ ಎಚ್ಚರವಹಿಸಬೇಕು ಯಾಕೆಂದರೆ ಈ ಕೊರೋನಾ ರೋಗ ಇವುಗಳ ಮೂಲಕ ಕೂಡ ಪ್ರವೇಶಿಸಬಹುದು ಆದ್ದರಿಂದ ಮಾರುಕಟ್ಟೆಯಿಂದ ಹಣ್ಣುಗಳನ್ನು ಖರೀದಿಸಿ ತಂದಾಗ ಈ ವಿಚಾರಗಳ ಬಗ್ಗೆ ನಿಮಗೆ ತಿಳಿದಿರುವುದು ಹೆಚ್ಚು ಮುಖ್ಯವಾಗಿದೆ.

ಹೌದು ಅಷ್ಟಕ್ಕೂ ಆ ವಿಚಾರವೇನು ಅನ್ನೋದನ್ನ ನೋಡುವುದಾದರೆ, ಹಣ್ಣುಗಳನ್ನು ಮಾರುಕಟ್ಟೆಯಿಂದ ಖರೀದಿಸಿ ತಂಡಕೂಡಲೇ ಸೇವನೆ ಮಾಡದೇ ಹಣ್ಣುಗಳನ್ನು ತೊಳೆಯಲು ಲಘು ಬಿಸಿ ನೀರನ್ನು ಬಳಸುವುದು ಉತ್ತಮ. ಹಣ್ಣುಗಳನ್ನು ಚೆನ್ನಾಗಿ ತೊಳೆದು ತಿನ್ನುವುದರಿಂದ ಅವುಗಳಲ್ಲಿನ ಸೂಕ್ಷ್ಮಜೀವಿಗಳು ಸುಲಭವಾಗಿ ಸಾಯುತ್ತವೆ.

ದೇಹಕ್ಕೆ ರೋಗ ನಿರೋಧಕ ಶಕ್ತಿಯನ್ನು ಪಡೆಯಲು ಹಣ್ಣು ತರಕಾರಿ ಪೌಷ್ಟಿಕಾಂಶ ಭರಿತವಾದ ಆಹಾರಗಳನ್ನು ಸೇವನೆ ಮಾಡುವುದರಿಂದ ಉತ್ತಮ ಆರೋಗ್ಯವನ್ನು ಪಡೆಯಬಹುದಾಗಿದೆ, ಇನ್ನು ಈ ಲಾಕ್ ಡೌನ್ ಸಮಯದಲ್ಲಿ ಬಹಳಷ್ಟು ಜನ ಹಣ್ಣು ತರಕಾರಿಗಳನ್ನು ಮಾರುಕಟ್ಟೆಯಿಂದ ತರುತ್ತಿದ್ದಾರೆ ಅಂತಹ ಸಂದರ್ಭದಲ್ಲಿ ಈ ಎಚ್ಚರವನ್ನುವಹಿಸಬೇಕು.

ಹಣ್ಣುಗಳನ್ನು ಖರೀದಿಸುವ ಮುನ್ನ ಹಣ್ಣುಗಳ ಅಂಗಡಿ ಅಥವಾ ತಳ್ಳು ಗಡಿಯಿಂದ ಕನಿಷ್ಠ ೬ ಅಡಿ ಅಂತವರವನ್ನು ಹೊಂದಿರಬೇಕು ಅಷ್ಟೇ ಅಲ್ಲದೆ ಬೇರೆಯವರೊಂದಿಗೆ ಕೂಡ ಸಾಮಾಜಿಕ ಅಂತವರನ್ನು ಕಾಪಾಡಿಕೊಳ್ಳಿ, ಇನ್ನು ನೀವು ಮಾರ್ಕೆಟಿಗೆ ಹೋಗುವಾಗ ಹಣ್ಣು ತರಕಾರಿಗಳನ್ನು ತುಂಬಿಕೊಂಡು ಬರುವಂತ ಚೀಲವನ್ನು ಯಾವಾಗಲು ಸ್ವಚ್ಛ ಗೊಳಿಸಿ, ತೊಳೆಯಿರಿ.

ಇನ್ನು ಕೊನೆಯದಾಗಿ ಹೇಳುವುದಾದರೆ ಹಣ್ಣುಗಳನ್ನು ಬಳಷ್ಟು ಜನ ತಳ್ಳೋ ಗಾಡಿಯಲ್ಲಿ ಖರೀದಿಸುತ್ತಾರೆ, ಆದ್ರೆ ಇವುಗಳ ಬಗ್ಗೆ ಹೆಚ್ಚಿನ ಎಚ್ಚರವಹಿಸಿ ಯಾಕೆಂದರೆ ಆ ಗಾಡಿಗಳು ಎಲ್ಲಿಂದ ಬರುತ್ತವೆ ಎಂಬ ಬಗ್ಗೆ ನಮಗೆ ಯಾವುದೇ ಕಲ್ಪನೆ ಇರುವುದಿಲ್ಲ, ಆದ್ದರಿಂದ ಹಣ್ಣುಗಳನ್ನು ಖರೀದಿಸಿದ ನಂತರ ಉಪ್ಪು ಹಾಕಿದ ಲಘು ಬಿಸಿ ನೀರಿನಲ್ಲಿ ಒಂದು ಅಥವಾ ಎರಡು ಗಂಟೆಗಳ ಕಾಲ ನೆನೆಸಿಡಬೇಕು. ಆ ಬಳಿಕ ಬಳಸುವುದು ಉತ್ತಮ ಅನ್ನುತ್ತಾರೆ ಅರೋಗ್ಯ ತಜ್ಞರು. ಈ ಉಪಯುಕ್ತ ವಿಚಾರ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ ಹಾಗೂ ಈ ಕೆಳಗಿನ ವಿಡಿಯೋ ನೋಡಿ.

Leave A Reply

Your email address will not be published.