ದಿನಕ್ಕೊಂದು ಬಾಳೆಹಣ್ಣು ತಿಂದು ಇಂತಹ ಸಮಸ್ಯೆಗಳಿಂದ ದೂರ ಇರಿ

0 0

ಆರೋಗ್ಯದ ವಿಷಯದಲ್ಲಿ ಬಾಳೆಹಣ್ಣನ್ನು ಸೋಲಿಸಲು ಯಾವುದರಿಂದಲೂ ಸಾಧ್ಯವಿಲ್ಲ. ಬಾಳೆಹಣ್ಣು ತುಂಬಾ ರುಚಿಕರ, ಕಡಿಮೆ ಬೆಳಯಲ್ಲಿ ವರ್ಷಪೂರ್ತಿ ದೊರೆಯುವ ಹಣ್ಣು ಇದು. ಕೇವಲ ಬಾಳೆಹಣ್ಣು ಮಾತ್ರವಲ್ಲ, ಬಾಳೆಹೂವು, ಬಾಳೆದಿಂಡು, ಬಾಳೆಎಲೆ, ಬಾಳೆ ಸಿಪ್ಪೆ ಹೀಗೆ ಎಲ್ಲವೂ ಉಪಯೋಗಕರ.
ಬಾಳೆಹಣ್ಣಿನಲ್ಲಿರುವ ಮೂರು ನೈಸರ್ಗಿಕ ಸಕ್ಕರೆಗಳಾದ ಸುಕ್ರೋಸ್, ಫ್ರುಕ್ಟೋಸ್ ಮತ್ತು ಗ್ಲುಕೋಸ್ ಫೈಬರ್ ಸಮ್ಮಿಳಿತವಾಗಿದ್ದು ತ್ವರಿತವಾದ ಶಕ್ತಿಯನ್ನು ನಮಗೆ ಒದಗಿಸುತ್ತದೆ. 90 – ನಿಮಿಷದ ನಮ್ಮ ದಿನದ ಕಾರ್ಯಾಚರಣೆಗೆ 2 ಬಾಳೆಹಣ್ಣು ನಮಗೆ ಶಕ್ತಿಯನ್ನು ಒದಗಿಸುತ್ತದೆ ಎಂದು ಸಂಶೋಧನೆಗಳು
ತಿಳಿಸಿವೆ.

ಬಾಳೆಯ ಹಣ್ಣನ್ನು ಸೇಬು ಹಣ್ಣಿನೊಂದಿಗೆ ಹೋಲಿಸಿದರೆ, ಇದರಲ್ಲಿ ನಾಲ್ಕು ಪಟ್ಟು ಪ್ರೋಟೀನ್ ಇದೆ, ಎರಡು ಪಟ್ಟು ಕಾರ್ಬೋಹೈಡ್ರೇಟ್ಸ್ ಇವೆ, ಮೂರುಪಟ್ಟು ಫಾಸ್ಫರಸ್ ಇದೆ, ಐದು ಪಟ್ಟು ವಿಟಮಿನ್ ಎ ಹಾಗೂ ಕಬ್ಬಿಣಸತ್ವ ಇವೆ, ಎರಡುಪಟ್ಟು ಇತರ ವಿಟಮಿನ್ ಹಾಗೂ ಮಿನರಲ್ಸ್ ಇವೆ.

ಜಗತ್ತಿನ ಶ್ರೇಷ್ಠ ಕ್ರೀಡಾಪಟುಗಳು ಸಹ ಹಲವಾರು ಹಣ್ಣಿನ ಪೋಷಕಾಂಶ ಸತ್ವಗಳನ್ನು ಬಾಳೆಹಣ್ಣು ಹೊಂದಿದೆ ಎಂದು ನಂಬಿದ್ದಾರೆ. ಹಲವಾರು ರೋಗಗಳ ವಿರುದ್ಧ ಹೋರಾಡುವ ಪ್ರತ್ಯೌಷಧವಾಗಿ ಬಾಳೆಹಣ್ಣು ಕಾರ್ಯನಿರ್ವಹಿಸುತ್ತದೆ. ನಮ್ಮ ದೈನಂದಿನ ಆಹಾರದಲ್ಲಿ ಬಾಳೆಹಣ್ಣನ್ನು ನಾವು ಸೇವಿಸುವುದರಿಂದ ರೋಗಗಳಿಂದ ನಮಗೆ ಮುಕ್ತಿ ಸಿಕ್ಕಂತೆ.ಬಾಳೆಹಣ್ಣು ನಮ್ಮ ಚಯಾಪಚಯ ಕ್ರಿಯೆಗೆ ಸಹಕಾರಿಯಾಗಿದ್ದು ಮಲಬದ್ಧತೆ ತೊಂದರೆಯನ್ನು ನಿವಾರಿಸುತ್ತದೆ. ಒಂದು ಸೇಬು ತಿಂದು ವೈದ್ಯರನ್ನು ದೂರವಿರಿಸಿ ಎಂಬ ಮಾತಿನಂತೆ ಬಾಳೆಹಣ್ಣೂ ಕೂಡ ಸೇಬಿನಷ್ಟೇ ಅತ್ಯುತ್ತಮ ಅಂಶಗಳನ್ನು ತನ್ನೊಂದಿಗೆ ಸೇರಿಸಿಕೊಂಡಿದೆ.ಎಲ್ಲ ಹಬ್ಬಗಳಲ್ಲಿ ಆದ್ಯತೆಯನ್ನು ಪಡೆಯುವ, ಸರ್ವಋತುಗಳಲ್ಲೂ ಲಭ್ಯವಾದ ಫಲ ಎಂದರೆ ಬಾಳೆಹಣ್ಣು. ಈ ಹಣ್ಣು ಸಾಮಾನ್ಯವಾಗಿದ್ದರೂ ಅದರ ಗುಣಗಳು ಅಸಾಮಾನ್ಯವಾಗಿವೆ. ಕದಳೀ ವೃಕ್ಷದ ಎಲ್ಲ ಭಾಗಗಳೂ ಉಪಯುಕ್ತವಾಗಿವೆ. ಬಾಳೆಯ ಎಲೆ ಊಟಕ್ಕೆ ಶ್ರೇಷ್ಠವಾದರೆ ಅದರ ದಿಂಡು, ಹೂವು, ಕಾಯಿಯನ್ನು ಕೂಡ ತರಕಾರಿಯಂತೆ ಬಳಸಬಹುದಾಗಿದೆ. ಜನಸಾಮಾನ್ಯರಲ್ಲಿ ಬಾಳೆಯ ಹಣ್ಣಿನ ಬಗ್ಗೆ ಕೆಲವು ತಪ್ಪು ಕಲ್ಪನೆಗಳಿವೆ. ಕೆಲವರು ಇದರ ಸೇವನೆಯಿಮ್ದ ತೂಕ ಹೆಚ್ಚಾಗುತ್ತದೆ ಎಂದರೆ. ಕೆಲವರು ಇದರಿಂದ ಮಲಬದ್ಧತೆ ಉಂಟಾಗುತ್ತದೆ ಎನ್ನುತ್ತಾರೆ.

ಇತ್ತೀಚಿನ ಸಂಶೋಧನೆಗಳಿಂದ ಬಾಳೆಹಣ್ಣಿನ ಹೆಚ್ಚಿನ ಮಹತ್ವ ಬೆಳಕಿಗೆ ಬಂದಿದೆ. ಇದರ ಮಹತ್ವದ ಕೆಲವು ಅಂಶಗಳು ಇಂತಿವೆ:ಬಾಳೆಹಣ್ಣಿನಲ್ಲಿ ನೈಸರ್ಗಿಕ ಸಕ್ಕರೆ ಅಂಶಗಳಾದ ಸುಕ್ರೀಸ್, ಫ್ರುಕ್ಟೋಸ್, ಮತ್ತು ಗ್ಲುಕೋಸ್ ಇವೆ. ಎರಡು ಬಾಳೆಹಣ್ಣು 90 ನಿಮಿಷ ಕೆಲಸಮಾಡುವ ಶಕ್ತಿಯನ್ನು ನೀಡುತ್ತದೆ ಎಂದು ಸಂಶೋಧನೆಗಳು ತಿಳಿಸಿವೆ.

ತಲ್ಲಣ (ಡಿಪ್ರೆಶನ್) ಆದಾಗ ಬಾಳೆಹಣ್ಣು ಸೇವಿಸಿದರೆ ಒಳ್ಳೆಯದು.ರಕ್ತಹೀನತೆಯಿಂದ ಬಳಲುವವರಿಗೆ ಬಾಳೆಹಣ್ಣು ಸೇವಿಸಿದರೆ ಉತ್ತಮ. ಇದರಲ್ಲಿ ಕಬ್ಬಿಣ ಅಂಶ ಹೆಚ್ಚಾಗಿರುವುದರಿಂದ ಹಿಮೋಗ್ಲೋಬಿನ್ ಉತ್ಪಾದಿಸಲು ಸಹಕಾರಿಯಾಗಿದೆ.ಬ್ಲಡ್‍ಪ್ರೆಶರ್ ಇದ್ದವರಿಗೆ ಬಾಳೆಹಣ್ಣು ಒಳ್ಳೆಯದು. ಕಾರಣ ಇದರಲ್ಲಿ ಪೊಟ್ಯಶಿಯಮ್ ಹೆಚ್ಚಾಗಿದೆ, ಲವಣಾಂಶ ಕಡಿಮೆಯಾಗಿದೆ.ಮಿಡಲ್ ಕ್ಲಾಸ್ ನ 200 ವಿದ್ಯಾರ್ಥಿಗಳಿಗೆ ಬಾಳೆಯಹಣ್ಣನ್ನು ಬ್ರೆಕ್‍ಫಾಸ್ಟ್, ಲಂಚ್ ಹಾಗೂ ಸಂಜೆಯ ತಿಂಡಿಯೊಡನೆ ಕೊಟ್ಟಾಗ ಅವರ ಬುದ್ಧಿಶಕ್ತಿಯಲ್ಲಿ ಸುಧಾರಣೆ ಕಂಡು ಬಂತಂತೆ. ಮಲಬದ್ಧತೆಗೆ ರೇಚಕ ಮಾತ್ರೆ ಕೊಡುವ ಬದಲು ಬಾಳೆಹಣ್ಣು ಕೊಡುವುದು ಹಿತಕರವಾಗಿದೆ.

ಹ್ಯಾಂಗ್ ಓವರ್ ನಂತಹ ಉದಾಸೀನತೆಯ ಪ್ರಸಂಗಗಳಲ್ಲಿ ಬಾಳೆಹಣ್ಣಿನ ಮಿಲ್ಕ್ ಶೇಕ್ ಹೆಚ್ಚು ಉಪಯುಕ್ತ ಎಂದು ಪ್ರಯೋಗಗಳಿಂದ ತಿಳಿದಿದೆ.ಎದೆಹುಳಿ ಸುಡುವಾಗ ಬಾಳೆಹಣ್ಣು ಉಪಶಮನ ತರುತ್ತದೆ.ಸೊಳ್ಳೆ ಕಡಿದಾಗ ಬಾಳೆಹಣ್ಣಿನ ಸಿಪ್ಪೆಯ ಒಳಭಾಗದಿಂದ ತಿಕ್ಕಿದರೆ ಬಾವು ಹಾಗೂ ತುರಿಕೆ ಕಡಿಮೆಯಾಗುತ್ತದೆ.

ಎಲ್ಲಾ ಕಾಲದಲ್ಲೂ ದೊರೆಯುವ ಹಣ್ಣು ಎಂದರೆ ಬಾಳೆ ಹಣ್ಣು. ಕೈಗೆಟಕುವ ದರದಲ್ಲಿ ಸಿಗುವ ಬಾಳೆ ಹಣ್ಣು ಕಬ್ಬಿಣಂಶ, ಪ್ರೋಟೀನ್, ಪೊಟಾಷಿಯಮ್, ಲವಣ ಸೇರಿದಂತೆ ವಿವಿಧ ಬಗೆಯ ಆರೋಗ್ಯಕರ ಗುಣಗಳನ್ನು ಒಳಗೊಂಡಿರುತ್ತದೆ. ಒಂದು ಬಾಳೆಹಣ್ಣು ಸೇವಿಸುವುದರಿಂದ ತಾತ್ಕಾಲಿಕವಾಗಿ ಹಸಿವೆಯನ್ನು ತಡೆಯಬಹುದು. ಜೊತೆಗೆ ಸಾಕಷ್ಟು ಆರೋಗ್ಯ ಸಮಸ್ಯೆಗಳಿಗೆ ಔಷಧ ರೂಪದಲ್ಲಿ ಆರೈಕೆ ಮಾಡುವುದು. ಇದರಲ್ಲಿರುವ ಪೋಷಕಾಂಶ ಗುಣವು ಮಕ್ಕಳಿಂದ ಹಿಡಿದು ವೃದ್ಧರಿಗೂ ಸಹ ಅತ್ಯುತ್ತಮವಾದದ್ದು.

ಶ್ರೀ ಮಂತ್ರಾಲಯ ಗುರು ಬೃಂದಾವನ ಜ್ಯೋತಿಷ್ಯ ಮಂದಿರ, ಗುರೂಜಿ ಶ್ರೀ ಪರುಶುರಾಮ ಎಲ್ ಜ್ಯೋಷಿ ವ್ಯಾಪಾರ ಸಮಸ್ಯೆ ಮದುವೆ ಸಮಸ್ಯೆ ಸಂತಾನ ಸಮಸ್ಯೆ ಹಣಕಾಸಿನ ಸಮಸ್ಯೆ ಗಂಡ-ಹೆಂಡತಿ ಸಮಸ್ಯೆ ಅತ್ತೆ ಸೊಸೆ ಕಿರಿಕಿರಿ ಇನ್ನು ನಿಮ್ಮ ಜೀವನದಲ್ಲಿ ಯಾವುದೇ ಕಠಿಣ ಗುಪ್ತ ಸಮಸ್ಯೆಗಳಿಗೆ ಶ್ರೀ ಮಂತ್ರಾಲಯ ಗುರು ರಾಯರ ಅನುಗ್ರಹದಿಂದ ಮತ್ತು ದುರ್ಗಾ ಹೋಮ ಸುದರ್ಶನ ಹೋಮ ಮಹಾಗಣಪತಿ ಯಾಗ ಶ್ರೀ ಕರ ಮಂತ್ರ ಹೋಮ ಸುಗ್ರೀವ ಹೋಮ ಹಾಗೂ 1008 ಜಪ ತಪ ಹೋಮ ಹವನ ಗಳಿಂದ ಕೇವಲ 24 ಗಂಟೆಗಳಲ್ಲಿ ಶಾಶ್ವತವಾಗಿ ಪರಿಹಾರ ಶತಸಿದ್ಧ ಇಂದೇ ಸಂಪರ್ಕಿಸಿ 9845111287

Leave A Reply

Your email address will not be published.