ಪ್ರತಿದಿನ 2 ಬಾಳೆಹಣ್ಣು ತಿಂದ್ರೆ ಒಂದು ವಾರದ ನಂತರ ಏನಾಗುತ್ತೆ ಗೊತ್ತಾ

0 3

ಹಣ್ಣುಗಳಲ್ಲಿ ಬಾಳೆಹಣ್ಣು ಬಹಳ ಶ್ರೇಷ್ಠ ತಿನ್ನುವುದಕ್ಕೂ ಕಷ್ಟವಾಗುವುದಿಲ್ಲ ಏಕೆಂದರೆ ಸಿಪ್ಪೆಯನ್ನು ಸುಲಿಯಬಹುದು ನೇರವಾಗಿ ಬಾಯಿಲ್ಲಿ ಹಾಕಿಕೊಳ್ಳಬಹುದು. ಬಾಳೆಹಣ್ಣು ಪ್ರತಿದಿನ ತಿನ್ನುವುದರಿಂದ ಆರೋಗ್ಯಕ್ಕೂ ಕೂಡ ತುಂಬಾ ಒಳ್ಳೆಯದು. ಬಾಳೆಹಣ್ಣು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ ಎಂದು ಬಹಳ ಹಿಂದಿನಿಂದಲೂ ಹೇಳಿಕೊಂಡು ಬಂದಿದ್ದಾರೆ. ಮುಖ್ಯವಾಗಿ ಪ್ರತಿದಿನ ಎರಡು ಬಾಳೆಹಣ್ಣನ್ನು ತಿನ್ನುವುದರಿಂದ ಯಾವೆಲ್ಲ ಪ್ರಯೋಜನಗಳು ಉಂಟಾಗುತ್ತವೆ ಎಂಬುದು ಬಗ್ಗೆ ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ.

ಬಾಳೆಹಣ್ಣು ತಿನ್ನುವುದಕ್ಕೆ ತುಂಬಾ ರುಚಿಕರವಾಗಿದ್ದು ಇದರಿಂದ ದೇಹಕ್ಕೆ ಬಹಳಷ್ಟು ಪೌಷ್ಠಿಕಾಂಶಗಳು ದೊರೆಯುತ್ತವೆ ಬಾಳೆಹಣ್ಣಿನಲ್ಲಿ ನೂರಾ ಹತ್ತು ಕ್ಯಾಲೋರಿ ಐದು ಗ್ರಾಂ ಕೊಬ್ಬು ಇಪ್ಪತ್ತೇಳು ಗ್ರಾಂ ಕಾರ್ಬೋಹೈಡ್ರೆಡ್ ಹದಿನಾಲ್ಕು ಗ್ರಾಮ ಸಕ್ಕರೆ ಶೇಕಡ ಇಪ್ಪತ್ತೈದರಷ್ಟು ವಿಟಮಿನ್ಸ್ ಒಂದು ಗ್ರಾಂ ಪ್ರೊಟೀನ್ ಶೇಕಡ ಹನ್ನೆರಡರಷ್ಟು ನಾರಿನಂಶ ಇರುತ್ತದೆ ದಿನಕ್ಕೆರಡು ಬಾಳೆಹಣ್ಣನ್ನು ತಿಂದರೆ ರಕ್ತದ ಒತ್ತಡ ಕಡಿಮೆಯಾಗುತ್ತದೆ. ಜೀರ್ಣಕ್ರಿಯೆಯನ್ನು ಸರಿಪಡಿಸಿಕೊಳ್ಳುವುದಕ್ಕೆ ಬಾಳೆ ಹಣ್ಣು ತುಂಬಾ ಸಹಾಯಕಾರಿಯಾಗಿದೆ. ಅಜೀರ್ಣ ಅಥವಾ ಎದೆಯುರಿ ಸಮಸ್ಯೆಯಿಂದ ಬಳಲುತ್ತಿದ್ದಾರೆ ಆಗ ನೀವು ಬಾಳೆಹಣ್ಣನ್ನು ಸೇವಿಸಬೇಕು. ಬೇದಿಯ ಬಳಿಕ ಬಾಳೆಹಣ್ಣನ್ನು ಸೇವಿಸುವುದರಿಂದ ಇದು ದೇಹದಲ್ಲಿ ನಾಶವಾಗಿರುವ ಖನಿಜಾಂಶಗಳನ್ನು ಮರಳಿ ನಿರ್ಮಿಸುತ್ತದೆ.

ದಿನಕ್ಕೆರಡು ಸಣ್ಣದಾದ ಬಾಳೆಹಣ್ಣನ್ನು ಸೇವಿಸುವುದರಿಂದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು ಇದರಲ್ಲಿ ಇರುವಂತಹ ನಾರಿನಂಶವು ದೀರ್ಘಕಾಲದವರೆಗೆ ಹೊಟ್ಟೆ ತುಂಬಿರುವಂತೆ ಮಾಡುತ್ತದೆ. ರಕ್ತಹೀನತೆ ಸಮಸ್ಯೆಯನ್ನು ಎದುರಿಸುತ್ತಿರುವವರು ಬಾಳೆಹಣ್ಣನ್ನು ಸೇವಿಸಬೇಕು ರಕ್ತದಲ್ಲಿ ಕಬ್ಬಿಣಾಂಶ ಕೊರತೆ ಇರುವುದನ್ನು ಸರಿ ಮಾಡುತ್ತದೆ ಮತ್ತು ಕೆಂಪುರಕ್ತಕಣಗಳ ಉತ್ಪತ್ತಿಯನ್ನು ಮಾಡುವುದಕ್ಕೆ ಇದು ಸಹಾಯಕವಾಗಿದೆ. ಬಾಳೆ ಹಣ್ಣಿನಲ್ಲಿ ವಿಟಮಿನ್ ಸಮೃದ್ಧವಾಗಿದ್ದು ಇದು ಹಿಮೋಗ್ಲೋಬಿನ್ ಇನ್ಸುಲಿನ್ ಮತ್ತು ಅಮಿನೋ ಆಮ್ಲದ ಉತ್ಪತ್ತಿಗೆ ನೆರವಾಗುತ್ತದೆ

ಪ್ರತಿದಿನ ಬಾಳೆಹಣ್ಣನ್ನು ಸೇವಿಸುವುದರಿಂದ ಮನಸ್ಥಿತಿ ಸುಧಾರಿಸುತ್ತದೆ. ಬಾಳೆಹಣ್ಣು ಒತ್ತಡದ ಮಟ್ಟವನ್ನು ಕಡಿಮೆ ಮಾಡುವುದು ಮತ್ತು ಮನಸ್ಥಿತಿಯನ್ನು ಸುಧಾರಿಸುತ್ತದೆ ಏಕೆಂದರೆ ಇದರಲ್ಲಿರುವ ಟ್ರಿಪ್ಟೋ ಫ್ಯಾನ್ ಎನ್ನುವ ಅಂಶ ದೇಹದಲ್ಲಿ ಸಂತಸದ ಹಾರ್ಮೋನುಗಳನ್ನು ಉತ್ಪತ್ತಿ ಮಾಡುತ್ತದೆ. ಇದು ನಿದ್ರೆ ಗುಣಮಟ್ಟವನ್ನು ಕೂಡ ಸುಧಾರಿಸುತ್ತದೆ. ದೇಹಕ್ಕೆ ಶಕ್ತಿಯನ್ನು ಕೂಡ ನೀಡುತ್ತದೆ ನಿಮಗೆ ಕೆಲಸ ಮಾಡುವುದಕ್ಕೆ ಉದಾಸೀನವಾಗುತ್ತಿದ್ದರೆ ಪ್ರತಿದಿನ ನೀವು ಉಪಹಾರದಲ್ಲಿ ಎರಡು ಬಾಳೆಹಣ್ಣನ್ನು ಸೇವಿಸುವುದರಿಂದ ನಿಮಗೆ ಶಕ್ತಿ ದೊರೆಯುತ್ತದೆ. ಕೆಲವೊಮ್ಮೆ ಕೀಟಗಳು ಕಚ್ಚಿ ತದ್ದು ತುರಿಕೆ ಉಂಟಾದಾಗ ಈ ಜಾಗದಲ್ಲಿ ಬಾಳೆಹಣ್ಣನ್ನು ಸವರುವುದರಿಂದ ಕೆಲವೇ ನಿಮಿಷಗಳಲ್ಲಿ ಅದು ಕಡಿಮೆಯಾಗುತ್ತದೆ.

ಟೈಪ್ ಟು ವಿಧದ ಮಧುಮೇಹವನ್ನು ಇದು ನಿಯಂತ್ರಿಸುತ್ತದೆ. ನರಮಂಡಲದ ಸುವ್ಯವಸ್ಥೆಯನ್ನು ಕಾಪಾಡುವುದಕ್ಕೆ ಇದು ನೆರವಾಗುತ್ತದೆ. ಇದರಲ್ಲಿರುವ ವಿಟಮಿನ್ ಬಿ ಸಿಕ್ಸ್ ರಕ್ತದಲ್ಲಿ ಬಿಳಿ ರಕ್ತ ಕಣಗಳನ್ನು ಹೆಚ್ಚು ಮಾಡುವುದಕ್ಕೆ ನೆರವಾಗುತ್ತದೆ ಜೊತೆಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದಕ್ಕೆ ಕಾರಣವಾಗುತ್ತದೆ. ಉತ್ತಮ ಪ್ರಮಾಣದಲ್ಲಿರುವ ಕಬ್ಬಿಣಾಂಶ ರಕ್ತಹೀನತೆಯಿಂದ ಬಳಲುತ್ತಿರುವವರಿಗೆ ಪೋಷಣೆ ನೀಡುತ್ತದೆ. ಈ ರೀತಿಯಾಗಿ ನೀವು ಪ್ರತಿದಿನ ಎರಡು ಬಾಳೆಹಣ್ಣುಗಳನ್ನ ತಿನ್ನುವುದರಿಂದ ನಿಮ್ಮ ಆರೋಗ್ಯವನ್ನು ಉತ್ತಮವಾಗಿರಿಸಿ ಕೊಳ್ಳಬಹುದು. ಈ ಆ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರ ಜೊತೆಗೆ ನಿಮ್ಮ ಪರಿಚಿತರು ಹಾಗೂ ಸ್ನೇಹಿತರಿಗೂ ತಿಳಿಸಿರಿ.

Leave A Reply

Your email address will not be published.