ಬೆರಳಿನ ತುದಿಯಲ್ಲಿ ನಂಜು ಉಂಟಾಗಿ ಕೀವು ತುಂಬಿಕೊಂಡು ಗಾಯವಾಗುವುದು, ಒಡೆತವಾಗುವುದು, ಹಾಗೂ ಉಗುರಿನ ಬಳಿ ಸಹಿಸಲಾಗದ ನೋವು ಉಂಟಾಗುವುದು ಇದು ಉಗುರು ಸುತ್ತಿನ ಪ್ರಮುಖ ಲಕ್ಷಣವಾಗಿದ್ದು, ಉಗುರು ಸುತ್ತು ಸಮಸ್ಯೆಯೂ ಉಗುರಿನ ಅಂದವನ್ನು ಕೆಡಾಸುವುದು ಮಾತ್ರವಲ್ಲದೇ, ಸಹಿಸಲಾಗದ ನೋವು ಹಾಗೂ ಸೆಳೆತದಿಂದ ಯಾವುದೇ ತೆರನಾದ ಕೆಲಸವನ್ನು ಮಾಡಲು ಸಾಧ್ಯವಾಗುವುದಿಲ್ಲ. ಈ ಉಗುರು ಸುತ್ತಿನ ಸಮಸ್ಯೆಯೂ ನಿಮ್ಮನ್ನು ಬಾಧಿಸುತ್ತಿದ್ದರೆ ಇಲ್ಲಿದೆ ಮನೆಮದ್ದು.

ಉಗುರು ಸುತ್ತಿಗೆ ಪುಡಿ ಮಾಡಿದ ಏಲಕ್ಕಿ, ಅರಿಶಿನ ಪುಡಿ, ಕಾಳು ಮೆಣಸಿನ ಹುಡಿ, ನಿಂಬೆ ಹಣ್ಣು, ನಿಂಬೆ ಹಣ್ಣಿನಲ್ಲಿ ಒಂದು ಸಣ್ಣ ರಂಧ್ರ ಮಾಡಿ, ಪುಡಿ ಮಾಡಿದ ಇವು ಮೂರು ಮಿಶ್ರಣವನ್ನು ನಿಂಬೆ ಹಣ್ಣಿನಲ್ಲಿ ಮಾಡಿದ ರಂಧ್ರಕ್ಕೆ ಹಾಕಿಕೊಳ್ಳಿ. ಈ ನಿಂಬೆ ಹಣ್ಣನ್ನು ಉಗುರು ಸುತ್ತಿನ ಬೆರಳಿಗೆ ಹಾಕಿ, ಹೀಗೆ ಮಾಡುವುದರಿಂದ ಎರಡು ಮೂರು ದಿನಗಳಲ್ಲಿ ಉಗುರು ಸುತ್ತು ಕಡಿಮೆಯಾಗುತ್ತದೆ. ಅಥಾವ ಒಂದು ಚಮಚ ತೆಂಗಿನ ಎಣ್ಣೆ, ಒಂದು ಚಮಚ ಅರಿಶಿನ ಪುಡಿ, ಈ  ಎರಡರ ಮಿಶ್ರಣವನ್ನು ಬಿಸಿ ಮಾಡಿ ಉಗುರು ಸುತ್ತಾದ ಬೆರಳಿಗೆ ಲೇಪಿಸಿದರೆ ಕಡಿಮೆಯಾಗುತ್ತದೆ.
                 
ಪುಡಿ ಮಾಡಿದ ಕಪ್ಪು ಎಳ್ಳು, ಪುಡಿ ಮಾಡಿದ ಕಲ್ಲು ಉಪ್ಪು, ಸೈಂಧವ ಲವಣ, ಅರಿಶಿನ, ಈ ಮೂರನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ರಂಧ್ರ ಮಾಡಿದ ನಿಂಬೆ ಹಣ್ಣಿನ ಒಳಗೆ ಸಣ್ಣಗೆ ರಂಧ್ರ ಮಾಡಿ, ರಂಧ್ರದೊಳಗೆ ಈ ಮಿಶ್ರಣವನ್ನು ಹಾಕಿ. ಉಗುರು ಸುತ್ತಾದ ಕಾಲಿನ ಅಥವಾ ಕೈಯ ಬೆರಳಿಗೆ ಟೋಪಿಯಂತೆ ಹಾಕಿಕೊಳ್ಳಿ. ಈ ರೀತಿಯಾಗಿ ಮಾಡಿದರೆ ಉಗುರು ಸುತ್ತಿನ ಸಮಸ್ಯೆಯೂ ಕಡಿಮೆಯಾಗುತ್ತದೆ.

ಉಗುರು ಸುತ್ತು ಆಗಿರುವಲ್ಲಿಗೆ ಮೆಣಸಿನಕಾಳುಗಳನ್ನು ಎಮ್ಮೆಯ ಹಾಲಿನಲ್ಲಿ ಅರೆದು ಉಗುರಿಗೆ ಹಚ್ಚಿ ಬಟ್ಟೆಯಿಂದ ಕಟ್ಟುವುದರಿಂದ ನಿಧಾನವಾಗಿ ಉಗುರು ಸುತ್ತು ನಿವಾರಣೆ ಆಗುತ್ತದೆ. ಅಥಾವ ಕೈ ಬೆರಳ್ಗೆ ಉಗುರು ಸುತ್ತು ಆಗಿದ್ದರೆ ಬೆಳ್ಳುಳ್ಳಿ, ಕಾಳು ಮೆಣಸು, ಮದರಂಗಿ ಸೊಪ್ಪು, ನಿಂಬೆ ರಸ ಇವುಗಳನ್ನು ಸೇರಿಸಿ ಗಟ್ಟಿಯಾಗಿ ಅರೆದು ಉಗುರಿಗೆ ಹಚ್ಚಿ ಕಟ್ಟುವುದರಿಂದ ಉಗುರು ಸುತ್ತು ಕಡಿಮೆಯಾಗುತ್ತದೆ. ಅಥವಾ ಎಕ್ಕದ ಎಳೆಯ ಹಾಲನ್ನು ಉಗುರು ಸುತ್ತಿಗೆ ಹಚ್ಚುತ್ತಿದ್ದರೆ ಈ ಸಮಸ್ಯೆಯೂ ಕಡಿಮೆಯಾಗುತ್ತದೆ.

Leave a Reply

Your email address will not be published. Required fields are marked *