ಅಂಜೂರದ ಹಣ್ಣು ಮೆಲಸಿ ಕುಟುಂಬಕ್ಕೆ ಸೇರಿದ ಒಂದು ಮರ. ಅಂಜೂರದ ಹಣ್ಣಿನಲ್ಲಿ ಕಬ್ಬಿಣ, ತಾಮ್ರ, ವಿಟಮಿನ್ ಏ, ವಿಟಮಿನ್ ಬಿ, ವಿಟಮಿನ್ ಸಿ, ವಿಟಮಿನ್ ಡಿ ಅಂಶಗಳು ಹೇರಳವಾಗಿ ಇರುತ್ತದೆ. ಅಂಜೂರದ ಹಣ್ಣಿನಲ್ಲಿ ನಮಗೆ ಅಗತ್ಯ ಇರುವಂತಹ ಅನೇಕ ಪೋಷಕಾಂಶಗಳು ಹೇರಳವಾಗಿ ಇರುತ್ತವೆ. ಪ್ರತೀ ದಿನ ಎರಡು ಅಂಜೂರದ ಹಣ್ಣನ್ನು ತಿನ್ನುವುದರಿಂದ ನಾವು ಅನೇಕ ಸಮಸ್ಯೆಗಳಿಂದ ದೂರ ಇರಬಹುದು. ಮುಖ್ಯವಾಗಿ ಮಕ್ಕಳು ಇಲ್ಲದವರು ಹಾಗೂ ಮಕ್ಕಳನ್ನು ಪಡೆಯಬೇಕು ಎಂದುಕೊಂಡವರು ಪ್ರತೀ ದಿನ ತಮ್ಮ ಆಹಾರದಲ್ಲಿ ಅಂಜೂರದ ಹಣ್ಣನ್ನು ಸೇರಿಸಿಕೊಳ್ಳಬೇಕು. ಅಂಜೂರದ ಹಣ್ಣಿನ ಕೆಲವು ಲಾಭಗಳ ಬಗ್ಗೆ ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಮಾಂಸ ಅತಿ ಬೇಗ ಬೆಯ್ಯುವ ಸಲುವಾಗಿ ಈ ಅಂಜೂರದ ಹಣ್ಣನ್ನು ಹಾಕಲಾಗುತ್ತದೆ. ಈ ಹಣ್ಣಿನಲ್ಲಿ ವಿಟಮಿನ್ ಏ, ಬಿ, ಸಿ, ಅಂಶಗಳು ಹೇರಳಾವಾಗಿ ಇವೆ. ಸಾಕಷ್ಟು ಪ್ರಮಾಣದಲ್ಲಿ ಪೋಷಕಾಂಶಗಳು ಸಹ ಈ ಹಣ್ಣಿನ ಸೇವನೆಯಿಂದ ದೊರೆಯುತ್ತದೆ. ಇದರಲ್ಲಿ ಕಬ್ಬಿಣ ಅಂಶ ಮತ್ತು ಸಕ್ಕರೆಯ ಅಂಶ ಹೆಚ್ಚಾಗಿ ಇಯುವುದರಿಂದ ಇದೊಂದು ಉತ್ತಮ ಆಹಾರ ಎನ್ನಬಹುದು. ಕಬ್ಬಿಣ ಮತ್ತು ತಾಮ್ರದ ಅಂಶ ಇತರ ಹಣ್ಣುಗಳಿಗಿಂತ ಅಂಜೂರದ ಹಣ್ಣಿನಲ್ಲಿ ಹೇರಳವಾಗಿ ಇರುತ್ತದೆ. ಸತುವಿನ ಅಂಶ ಕಡಿಮೆ ಪ್ರಮಾಣದಲ್ಲಿ ಇದ್ದು ವಿಟಮಿನ್ ಏ ಮತ್ತು ವಿಟಮಿನ್ ಸಿ ಅಂಶ ಹೆಚ್ಚಾಗಿ ಇರುತ್ತದೆ ಮತ್ತು ವಿಟಮಿನ್ ಬಿ ಮತ್ತು ವಿಟಮಿನ್ ಡಿ ಅಂಶ ಕಡಿಮೆ ಪ್ರಮಾಣದಲ್ಲಿ ಇರುತ್ತದೆ. ಇದೊಂದು ಔಷಧೀಯ ಹಣ್ಣು ಸಹ ಆಗಿದ್ದು ಅಂಜೂರದ ಹಣ್ಣನ್ನು ಸೇವಿಸುವುದರಿಂದ ಮಲಬದ್ಧತೆ ನಿವಾರಣೆ ಆಗುತ್ತದೆ.

ಹೆಚ್ಚು ಕಾಲ ಅಂಜೂರದ ಹಣ್ಣನ್ನು ಸೇವಿಸುವುದರಿಂದ ಹೆಚ್ಚು ಕಾಲ ಆಹಾರದ ಕೊರತೆಯಿಂದ ಹಾಗೂ ರಕ್ತ ಹೀನತೆಯಿಂದ ಬಳಲುವುದನ್ನು ತಪ್ಪಿಸಬಹುದು. ಇದರಲ್ಲಿ ನಾರಿನ ಅಂಶ ಹೆಚ್ಚಾಗಿ ಇರುವುದರಿಂದ ಜೀರ್ಣ ಕ್ರಿಯೆಗೆ ಉತ್ತಮ ಸಹಕಾರಿ ಆಗಿರುತ್ತದೆ. ಚಿಕ್ಕ ಮಕ್ಕಳಲ್ಲಿ ಮಲಬದ್ಧತೆ ಸಮಸ್ಯೆ ಹೆಚ್ಚಾಗಿ ಇರುತ್ತದೆ ಹಾಗಾಗಿ ದಿನಕ್ಕೆ ಎರಡು ಅಂಜೂರದ ಹಣ್ಣನ್ನು ಸೇವಿಸುವುದರಿಂದ ಚಿಕ್ಕ ಮಕ್ಕಳಲ್ಲಿ ಮಲಬದ್ಧತೆ ಸಮಸ್ಯೆಯನ್ನು ಕಡಿಮೆ ಮಾಡಬಹುದು. ಅಂಜೂರದಲ್ಲಿ ಇರುವ ಮೆಗ್ನಿಶಿಯಂ, ಮ್ಯಾಗ್ನಾಸಿಸ್
ಖನಿಜಗಳು ಸಂತಾನ ಸಫಲತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಸಾಮಾನ್ಯವಾಗಿ ಕಂಡುವರುವಂತಹ ಅಧಿಕ ರಕ್ತದೊತ್ತಡ ಸಮಸ್ಯೆಗೆ ಅಂಜೂರದ ಹಣ್ಣು ಸೂಕ್ತ ಔಷಧವಾಗಿದೆ. ಹಸಿಯಾದ ಹಣ್ಣು ಅಥವಾ ಒಣಗಿದ ಹಣ್ಣು ಯಾವುದೇ ಸೇವಿಸಿದರೂ ಸಹ ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ. ಚಿಕ್ಕ ವಯಸ್ಸಿನಿಂದಲೂ ಅಂಜೂರದ ಹಣ್ಣನ್ನು ತಿನ್ನುವುದನ್ನು ರೂಢಿಸಿಕೊಂಡರೆ ರಕ್ತಕಣಗಳು ಹೆಚ್ಚುತ್ತವೆ. ಆರೋಗ್ಯಕರವಾದ ಶಾರೀರಕ ಬೆಳವಣಿಗೆ ಆಗುತ್ತದೆ. ಮಹಿಳೆಯರು ಈ ಹಣ್ಣನ್ನು ಸೇವಿಸುವುದರಿಂದ ರಕ್ತ ಹೀನತೆಯನ್ನು ಕಡಿಮೆ ಮಾಡಿಕೊಳ್ಳಬಹುದು. ಹಾಗೂ ಅಂಜೂರದ ಹಣ್ಣನ್ನು ಸೇವಿಸಿದಷ್ಟು ಇದು ನಮ್ಮ ದೇಹದಲ್ಲಿ ಅನಾವಶ್ಯಕ ಕೊಬ್ಬು ಸಂಗ್ರಹ ಆಗಲು ಆಸ್ಪದ ನೀಡುವುದಿಲ್ಲ.

ಈ ಮೂಲಕ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಅದಕ್ಕಾಗಿ ದಿನಕ್ಕೆ ಎರಡು ಹೊತ್ತು ಈ ಹಣ್ಣನ್ನು ತಿನ್ನಬೇಕು. ಊಟಕ್ಕೆ ಮೀದಳು ಅಂಜೂರದ ಹಣ್ಣಿನ ಜ್ಯುಸ್ ಸೇವಿಸುವುದರಿಂದ ಹೊಟ್ಟೆ ತುಂಬಿದ ಅನುಭವ ಆಗುತ್ತದೆ ಹಾಗೂ ಇದರಿಂದ ಹಸಿವು ಆಗದಂತೆ ಕಡಿಮೆ ತಿನ್ನಲು ಆಗುತ್ತದೆ. ಈ ಮೂಲಕ ಅಂಜೂರದ ಹಣ್ಣು ದೇಹದ ತೂಕ ಇಳಿಸಲು ಸಹಾಯಕಾರಿ ಆಗುತ್ತದೆ.

Leave a Reply

Your email address will not be published. Required fields are marked *