ನಾವು ಆರೋಗ್ಯದಿಂದ ಇರಬೇಕು ಅಂದರೆ ನಮ್ಮ ದೇಹಕ್ಕೆ ಕೆಲವು ಆಹಾರ ಪದಾರ್ಥಗಳ ಸೇವನೆ ಅಗತ್ಯ ಆಗಿರುತ್ತದೆ ಎಂದು ಆಯುರ್ವೇದದಲ್ಲಿ ಹೇಳಲಾಗಿದೆ. ನಮ್ಮ ದೇಹಕ್ಕೆ ರೋಗ ನಿರೋಧಕ ಶಕ್ತಿ ಎಷ್ಟು ಮುಖ್ಯ ಎಂದರೆ ಪ್ರತಿದಿನ ಪ್ರತೀ ಕ್ಷಣ ತನ್ನನ್ನು ತಾನು ಯಾವುದೇ ಬಗೆಯ ಸೋಂಕುಗಳಿಂದ ಕಾಪಾಡಿಕೊಳ್ಳಲು ಬೇಕಾಗಿರುವ ಒಂದು ರೀತಿಯ ಶಕ್ತಿ ಎಂದು ಗುರುತಿಸಲಾಗುತ್ತದೆ. ಒಂದುವೇಳೆ ಇಂತಹ ಒಂದು ರಕ್ಷಾಕವಚ ನಮಗೆ ಕೈ ಕೊಟ್ಟರೆ ನಾವು ಸಾಕಷ್ಟು ಆರೋಗ್ಯದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮನುಷ್ಯ ಹುಟ್ಟಿದಾಗಿನಿಂದ ಸಾಯುವ ಕೊನೆಯ ಕ್ಷಣದವರೆಗೂ ಮನುಷ್ಯನ ರೋಗ ನಿರೋಧಕ ಶಕ್ತಿ ಕೆಲಸ ಮಾಡುತ್ತಲೇ ಇರಬೇಕು. ಆದರೆ ಒಂದು ವ್ಯತ್ಯಾಸ ಎಂದರೆ ಹುಟ್ಟಿದ ಮಕ್ಕಳಿಗೆ ಹಾಗೂ ವೃದ್ಧರಿಗೆ ಅವರ ದೇಹದಲ್ಲಿ ರೋಗ ನಿರೋಧಕ ಶಕ್ತಿಯು ಯುವಜನತೆಗೆ ಹೋಲಿಸಿದಾಗ ತುಂಬಾ ಕಡಿಮೆ ಇರುತ್ತದೆ. ಹೀಗಾಗಿ ನಾವು ಸದಾ ಆರೋಗ್ಯದಿಂದ ಇರಲು ನಾವು ನಮ್ಮ ಆಹಾರದಲ್ಲಿ ಕೆಲವೊಂದು ಪದಾರ್ಥಗಳನ್ನು ಸೇವಿಸಲೇಬೇಕು. ಈ ಲೇಖನದಲ್ಲಿ ಮನುಷ್ಯನ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಬೇಕಾಗುವಂತಹ ಕೆಲವೊಂದುಷ್ಟು ಆಹಾರ ಪದಾರ್ಥಗಳ ಬಗ್ಗೆ ತಿಳಿದುಕೊಳ್ಳೋಣ.

ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮೊದಲ ಪದಾರ್ಥ ಎಂದರೆ ಬೆಳ್ಳುಳ್ಳಿ. ಬೆಳ್ಳುಳ್ಳಿ ನಮ್ಮ ದೇಹಕ್ಕೆ ಒಳ್ಳೆಯ ಆರೋಗ್ಯವನ್ನು ನೀಡುತ್ತದೆ. ಹಿಂದಿನ ಕಾಲದಿಂದಲೂ ನಮ್ಮ ಆಯುರ್ವೇದ ಪದ್ಧತಿಯಲ್ಲಿ ಬೆಳ್ಳುಳ್ಳಿಯ ಉಪಯೋಗ ಸರಾಗವಾಗಿ ಆಗುತ್ತಲೇ ಇದೇ. ಪ್ರತೀ ದಿನ ಬೆಳ್ಳುಳ್ಳಿ ಸೇವನೆ ಅಭ್ಯಾಸ ಇರುವವರಿಗೆ ಅವರ ದೇಹದ ರಕ್ತದೊತ್ತಡ ನಿಯಂತ್ರಣದಲ್ಲಿ ಇರುತ್ತದೆ ಹಾಗೂ ಹೃದಯ ಸಂಬಂಧಿತ ಕಾಯಿಲೆಗಳೂ ಸಹ ಬರದಂತೆ ನೋಡಿಕೊಳ್ಳುತ್ತದೆ. ಇಷ್ಟೇ ಅಲ್ಲದೆ ಬೆಳ್ಳುಳ್ಳಿಯಲ್ಲಿ ಅನೇಕ ರೀತಿಯ ಆಂಟಿ ಆಕ್ಸಿಡೆಂಟ್, ಆಂಟಿ ಬ್ಯಾಕ್ಟೀರಿಯಲ್, ಆಂಟಿ ವೈರಲ್ ಗುಣಗಳು ಇರುತ್ತವೆ. ಇವು ಮನುಷ್ಯನ ದೇಹಕ್ಕೆ ಯಾವುದೇ ರೀತಿಯ ಸೋಂಕುಗಳು ಹಾಗೂ ಚರ್ಮಕ್ಕೆ ಸಂಬಂಧಿಸಿದ ರೋಗಗಳೂ ಬರದಂತೆಯೇ ಕಾಪಾಡುವ ಅಗಾಧ ಶಕ್ತಿಯನ್ನು ಬೆಳ್ಳುಳ್ಳಿ ಹೊಂದಿದೆ.

ಶುಂಠಿ ಪ್ರತಿಯೊಬ್ಬರ ಅಡುಗೆ ಮನೆಯ ಯಾವುದೇ ಒಂದು ಭಾಗದಲ್ಲಿ ಶುಂಠಿ ಇದ್ದೆ ಇರುತ್ತದೆ. ಪುರಾತನ ಕಾಲದಿಂದಲೂ ಅಸ್ಪತ್ರೆಗಳೇ ಇಲ್ಲದ ಕಾಲದಲ್ಲಿ ನಮ್ಮ ಹಿರಿಯರು ಶುಂಠಿಯಿಂದ ಹಲವಾರು ಆರೋಗ್ಯಕರ ಲಾಭಗಳನ್ನು ತಿಳಿದು ಅದರ ಪ್ರಯೋಜನ ಪಡೆದು ನಮಗೂ ಸಹ ಉಪಯೋಗವಾಗಲಿ ಎಂದು ಕೆಲವೊಂದನ್ನು ತಿಳಿಸಿಕೊಟ್ಟಿದ್ದಾರೆ. ನಾವು ಅದನ್ನು ಈಗಲೂ ಕೆಲವು ಕಡೆಗಳಲ್ಲಿ ಮುಂದುವರೆಸಿಕೊಂಡು ಬರುತ್ತಾ ಇದ್ದೇವೆ. ಅದಕ್ಕೆ ಕಾರಣ ಶುಂಠಿಯಲ್ಲಿ ಇರುವಂತಹ ಆರೋಗ್ಯಕರ ಲಾಭಗಳು. ಶುಂಠಿಯಲ್ಲಿ ಜಿಂಜಿರಾಲ್ ಎಂಬ ಸಂಯುಕ್ತ ಅಂಶ ಅಡಗಿರುತ್ತದೆ. ಮನುಷ್ಯನಿಗೆ ಸಾಮಾನ್ಯವಾಗಿ ಕಾಡುವ ಶೀತ, ಕೆಮ್ಮು, ಗಂಟಲು ನೋವು, ಉರಿ ಊತ ಇವುಗಳಿಂದ ಕಾಪಾಡಿ ಪರಿಹಾರ ನೀಡುತ್ತದೆ. ಮನುಷ್ಯನ ಹೃದಯಕ್ಕೆ ಮಾರಕ ಆಗುವಂತಹ ಕೆಟ್ಟ ಕೊಬ್ಬನ್ನು ದೇಹದಲ್ಲಿ ಬೇಗನೆ ಕಡಿಮೆ ಮಾಡಲು ಶುಂಠಿ ನೆರವಾಗುತ್ತದೆ. ಇದರಿಂದ ಮಾನವನ ದೇಹದಲ್ಲಿ ಸೋಂಕುಗಳ ನಿವಾರಣೆ ಹಾಗೂ ರೋಗ ನಿರೋಧಕ ಶಕ್ತಿಯನ್ನು ಸಹ ಹೆಚ್ಚಿಸಿಕೊಳ್ಳಲು ಶುಂಠಿ ಒಂದು ಅತ್ಯುತ್ತಮ ಆಹಾರ ಪದಾರ್ಥ ಎಂದೇ ಹೇಳಬಹುದು.

ಅರಿಶಿನ. ಅಡುಗೆಗೆ ಬಳಸುವ ಅರಿಷಿನದ ಪುಡಿ ಮನುಷ್ಯನ ದೇಹದ ಆರೋಗ್ಯವನ್ನೂ ಸಹ ಸುಧಾರಿಸುತ್ತದೆ. ಇದಕ್ಕೆ ಕಾರಣ ಅರಿಶಿನದಲ್ಲಿ ಇರುವ ಕುರ್ಕೆಮಿನ್ ಎಂಬ ಅಂಶ. ಅರಿಶಿನದಲ್ಲಿ ಮನುಷ್ಯನ ದೇಹಕ್ಕೆ ಉಂಟಾಗುವಂತಹ ಉರಿ ಊತ ಮತ್ತು ಸೋಂಕುಗಳನ್ನು ನಿವಾರಣೆ ಮಾಡುವಂತಹ ಒಂದು ಅದ್ಭುತವಾದ ಶಕ್ತಿ ಇರುತ್ತದೆ. ಬಹಳಷ್ಟು ಹಿಂದಿನ ಕಾಲದಲ್ಲಿ ನಮ್ಮ ಆಯುರ್ವೇದ ಪಂಡಿತರು ಅವರ ಆಯುರ್ವೇದ ಔಷಧಗಳ ತಯಾರಿಕೆಯಲ್ಲಿ ಅರಿಶಿನದ ಉಪಯೋಗದ ಬಗ್ಗೆ ತಿಳಿಸಿದ್ದಾರೆ. ಅರಿಶಿನದಲ್ಲಿ ಆಂಟಿ ಆಕ್ಸಿಡೆಂಟ್ ಅಂಶಗಳು ಹೆಚ್ಚಾಗಿ ಇರುತ್ತವೆ. ಹೃದಯದ ಯಾವುದೇ ಬಗೆಯ ಸಮಸ್ಯೆಗಳು , ಕ್ಯಾನ್ಸರ್ ಮತ್ತು ಅಲ್ಜ್ಯುಮರ್ ಕಾಯಿಲೆಗಳು ಇಂತಹ ಕಾಯಿಲೆಗಳನ್ನು ಸುಲಭವಾಗಿ ಪರಿಹಾರ ಮಾಡುತ್ತದೆ. ಇಂತಹ ಒಳ್ಳೆಯ ಗುಣಲಕ್ಷಣವನ್ನು ಅರಿಶಿನ ಹೊಂದಿದೆ. ಸೋಂಕುಗಳ ವಿಷಯಕ್ಕೆ ಬಂದರೆ , ಅರಿಷಿನದಲ್ಲಿ ಇರುವ ಕೆಲವು ಅಂಶಗಳು ಮನುಷ್ಯನ ದೇಹಕ್ಕೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಈ ಮೂಲಕ ಮನುಷ್ಯನಿಗೆ ಶೀತ , ಕೆಮ್ಮು , ಜ್ವರದಂತಹ ಯಾವುದೇ ಸೋಂಕುಗಳು ಬರದಂತೆಯೇ ತಡೆಯುತ್ತದೆ.

ಮನುಷ್ಯನ ದೇಹಕ್ಕೆ ರೋಗನಿರೋಧಕ ಶಕ್ತಿ ತುಂಬಾ ಮುಖ್ಯವಾಗಿರುತ್ತದೆ. ನೈಸರ್ಗಿಕವಾಗಿ ನಮ್ಮ ಮನೆಯ ಸುತ್ತ ಮುತ್ತಲಿನ ಹಾಗೂ ಅಡುಗೆ ಮನೆಯಲ್ಲಿ ಸಿಗುವಂತಹ ಪದಾರ್ಥಗಳನ್ನು ಬಳಸಿಕೊಂಡು ನಾವು ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ಯಾವುದೇ ರೀತಿಯ ಸೋಂಕು ನಮಗೆ ತಗಲದಂತೆ ನಮ್ಮನ್ನು ನಾವು ರಕ್ಷಿಸಿಕೊಳ್ಳಬಹುದು.

Leave a Reply

Your email address will not be published. Required fields are marked *