ಪಾಪ ಮಾಡಿದ್ರು ದುರ್ಯೋಧನನಿಗೆ ಸ್ವರ್ಗ ಹೇಗೆ ಪ್ರಾಪ್ತಿಯಾಯಿತು ನೋಡಿ

0 38

ಹಿಂದೂ ಸಂಪ್ರದಾಯದಲ್ಲಿ ಒಳ್ಳೆಯ ಕೆಲಸ ಮಾಡಿದವರಿಗೆ ಸ್ವರ್ಗ ಮತ್ತು ಕೆಟ್ಟ ಕೆಲಸ ಮಾಡಿದವರಿಗೆ ನರಕ ಎಂಬ ನಂಬಿಕೆ ಇದೆ.ಇದರಿಂದಾಗಿ ಎಲ್ಲರೂ ಕೂಡ ಒಳ್ಳೆಯ ಕೆಲಸ ಮಾಡಿ ಉತ್ತಮ ಕೆಲಸದಿಂದ ಸ್ವರ್ಗ ಸಿಗುತ್ತದೆ ಎಂದು ನಂಬಿದ್ದಾರೆ.ಹಾಗೆಯೇ ಪಾಪ ಮಾಡಿದರೆ ನರಕಯಾತನೆ ಆಗುತ್ತದೆ ಎಂದು ಕೂಡ ನಂಬಿದ್ದಾರೆ.ಆದರೆ ಮಹಾಭಾರತದ ಪ್ರಕಾರ ಅಲ್ಲಿಯ ಕೆಲವು ಘಟನೆಗಳನ್ನು ಅವಲೋಕಿಸಿದಾಗ ಅನುಮಾನ ಶುರುವಾಗುತ್ತದೆ. ನಾವು ಇಲ್ಲಿ ದುರ್ಯೋಧನನಿಗೆ ಸ್ವರ್ಗ ಪ್ರಾಪ್ತಿಯಾದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಮಹಾಭಾರತದ ಖಳನಾಯಕ ಎಂದೇ ಪ್ರಸಿದ್ಧಿ ಪಡೆದ ವ್ಯಕ್ತಿ ದುರ್ಯೋಧನ.ಇವನಿಗೆ ಸ್ವರ್ಗ ಪ್ರಾಪ್ತಿಯಾಗಿದೆ ಎಂದು ಹೇಳುತ್ತಾರೆ.ಇದನ್ನು  ಕೇಳಿದರೆ ಸಾಕು ಎಲ್ಲರಿಗೂ ಆಶ್ಚರ್ಯವಾಗುತ್ತದೆ.ಏಕೆಂದರೆ ದುರ್ಯೋಧನ ಪಾಪಗಳನ್ನೇ ಮಾಡಿದ ವ್ಯಕ್ತಿ. ಕುರುಕ್ಷೇತ್ರ ಕದನದಲ್ಲಿ  ಅಧರ್ಮದ ವಿರುದ್ಧ ಹೋರಾಟದಲ್ಲಿ ದುರ್ಯೋಧನ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದರೂ ಕೂಡ ಆತನಿಗೆ ಸ್ವರ್ಗ ಲಭಿಸುತ್ತದೆ.ಇದಕ್ಕೆ ಕಾರಣ ಅವನಲ್ಲಿದ್ದ ಅದ್ಭುತ ಗುಣಗಳು ಎಂದು ನಂಬಲಾಗಿದೆ.

ದುರ್ಯೋಧನ ತುಂಬಿದ ಸಭೆಯಲ್ಲಿ ತಂದೆ ಮತ್ತು ತಾಯಿಗಳ ಕಣ್ಣಿನ ಎದುರೇ ದ್ರೌಪದಿ ಮತ್ತು ಪಾಂಡು ಕುಮಾರರನ್ನು ಅವಮಾನ ಮಾಡಿದ್ದ. ಜೂಜಾಟ ಆಡಿ ಮೋಸ ಮಾಡಿ ಪಾಂಡವರನ್ನು ವನವಾಸ ಮತ್ತು ಅಜ್ಞಾತವಾಸಕ್ಕೆ ಗುರಿ ಮಾಡಿದ್ದ.ಆದರೂ ದುರ್ಯೋಧನ ಹೇಗೆ ಸ್ವರ್ಗಕ್ಕೆ ಹೋದ ಎನ್ನುವುದು ಆಶ್ಚರ್ಯಕರ ಸಂಗತಿ.ಈತನು ಎಷ್ಟೇ ಅಧರ್ಮಿಯಾಗಿ ನಡೆದುಕೊಂಡರೂ ಕೂಡ ಯಾವುದೇ ಪಾಪವನ್ನು ಮಾಡಲಿಲ್ಲ. ಹಲವಾರು ಕೆಲಸಗಳನ್ನು ತನ್ನ ಮಾವ ಶಕುನಿ ಮಾಡಿಸುತ್ತಾರೆ.

ತುಂಬಿದ ಸಭೆಯಲ್ಲಿ ದ್ರೌಪದಿಯ ವಸ್ತ್ರಾಪಹರಣ ಆಗುತ್ತದೆ.ತನ್ನ ಸೋದರ ದುಷ್ಯಾಸನ ನಿಂದ ಮಾಡಿಸುತ್ತಾನೆ.ಆದರೆ ಯಾವುದೇ ಕೆಲಸದಲ್ಲೂ ದುರ್ಯೋಧನ ನೇರವಾಗಿ ತಾನೇ ಭಾಗಿಯಾಗಿಲ್ಲ.ತನ್ನ ಕರ್ತವ್ಯದಲ್ಲಿ ಮತ್ತು ನಿಷ್ಠೆಯಲ್ಲಿ ಸರಿಯಾಗಿದ್ದ. ಮಹಾಭಾರತದ ಯುದ್ಧದ ನಂತರ ಪಾಂಡವರು ಸತ್ತು ಸ್ವರ್ಗಕ್ಕೆ ಹೋದಾಗ ಅಲ್ಲಿ ದುರ್ಯೋಧನ ಇರುವುದನ್ನು ನೋಡುತ್ತಾರೆ.ಆಗ ಭೀಮ ಯುಧಿಷ್ಠಿರನಿಗೆ ಪ್ರಶ್ನಿಸುತ್ತಾನೆ. “ದುರ್ಯೋಧನ ಅಷ್ಟೆಲ್ಲಾ ಪಾಪ ಮಾಡಿದರೂ ಹೇಗೆ ಸ್ವರ್ಗಕ್ಕೆ ಬಂದ ” ಎಂದು.

ಆಗ ಯಮಾಧರ್ಮರಾಯ ಹೇಳುತ್ತಾನೆ “ದುರ್ಯೋಧನ ಒಳ್ಳೆಯ ರಾಜ.ಸ್ನೇಹಕ್ಕೆ ಬೆಲೆ ಕೊಡುತ್ತಿದ್ದನು.ಶಕುನಿಯನ್ನು ತನ್ನ ಕೈ ಗೊಂಬೆಯಾಗಿರಿಸಿ ಪಾಂಡವರ ವಿರುದ್ಧ ಆಡುತ್ತಾನೆ.ಕುರು ಸಾಮ್ರಾಜ್ಯ ನಾಶಪಡಿಸಬೇಕೆಂದು ಬಂದ ಶಕುನಿಯಿಂದ ದುರ್ಯೋಧನ ಕೆಟ್ಟವನೂ ಮತ್ತು ಖಳನಾಯಕನೂ ಆಗುತ್ತಾನೆ.ಇದೇ ಕಾರಣಕ್ಕೆ ಹಲವಾರು ಕೆಟ್ಟ ಕಾರ್ಯಗಳನ್ನು ಅವನು ಮಾಡುತ್ತಾನೆ.ಆದರೆ ದುರ್ಯೋಧನನಿಗೆ ಸ್ವಇಚ್ಛೆಯಿಂದ  ಯಾವುದೇ ಕೆಟ್ಟ ಕೆಲಸಗಳನ್ನು ಮಾಡಲು ಇಷ್ಟವಿರಲಿಲ್ಲ.ದೇವರ ನಿಯಮದ ಪ್ರಕಾರ ಯಾವ ವ್ಯಕ್ತಿ ಕರ್ತವ್ಯ ನಿಷ್ಠನೋ ಅವನಿಗೆ ಸ್ವರ್ಗ ಎಂಬ ಮಾತಿದೆ.ಕರ್ಣನನ್ನು ಸೂತಪುತ್ರ ಎಂದು ಎಲ್ಲರೂ ಅವಮಾನ ಮಾಡಿದರೂ ಸಹ ದುರ್ಯೋಧನ ತನ್ನ ಸ್ನೇಹಿತನ ಕೈ ಬಿಡುವುದಿಲ್ಲ”ಎಂದು.

ಅವನನ್ನು ಅಂಗ ದೇಶದ ರಾಜನನ್ನಾಗಿ ಮಾಡುತ್ತಾನೆ.ಮುಂದೆ ಇವರಿಬ್ಬರೂ ಪ್ರಾಣ ಸ್ನೇಹಿತರಾಗುತ್ತಾರೆ.ಇವನ ಪ್ರಶ್ನೆಗಳು ವ್ಯವಸ್ಥಿತ ದೋಷವನ್ನು ಎತ್ತಿ ತೋರಿಸುತ್ತಿದ್ದವು.ದ್ರೋಣಾಚಾರ್ಯರು ಉತ್ತರ ನೀಡಲಾಗದೆ ಭೀಷ್ಮರ ಬಳಿ ದೂರು ನೀಡುತ್ತಿದ್ದರು.ಇವನು ಭೀಮನಷ್ಟೇ ಶಕ್ತಿಶಾಲಿ ಆಗಿದ್ದನು.ಆದರೆ ಕೃಷ್ಣನ ಸಹಾಯದಿಂದ ಭೀಮ ಗದಾಯುದ್ಧದಲ್ಲಿ ಗೆಲ್ಲುತ್ತಾನೆ.ಈತ ಬಡವರನ್ನು, ಕೆಳವರ್ಗದವರನ್ನು ಅತ್ಯಂತ ಚೆನ್ನಾಗಿ ನೋಡಿಕೊಳ್ಳುತ್ತಿದ್ದ.ಈ ಒಂದು ಕಾರಣಕ್ಕೆ ಭೀಷ್ಮನಿಗೆ ಕೂಡ ಒಳಗಿಂದ ಒಳಗೆ ಪ್ರೀತಿ ಕೂಡ ಇತ್ತು.ಈ ಎಲ್ಲಾ ಗುಣಗಳು ಹೊಂದಿರುವುದರಿಂದ ಸ್ವಲ್ಪ ಸಮಯದ ಕಾಲ ಸ್ವರ್ಗ ಪ್ರಾಪ್ತಿಯಾಯಿತು ಎಂದು ಪುರಾಣಗಳು ಹೇಳುತ್ತವೆ.

ನಾವು ಪ್ರಕಟ ಮಾಡುವ ಯಾವುದೇ ಲೇಖನದಲ್ಲಿನ ಮಾಹಿತಿ ನಮ್ಮ ಸ್ವಂತದ್ದಾಗಿರುವುದಿಲ್ಲ. ಸಂಗ್ರಹಿತ ಮಾಹಿತಿಯನ್ನು ನಿಮ್ಮ ಮುಂದೆ ಇಡುತ್ತೇವೆ‌. ಇವುಗಳಿಂದ ಮೂಡುವ ಯಾವುದೇ ರೀತಿಯ ಭಿನ್ನಾಭಿಪ್ರಾಯ, ಗೊಂದಲಗಳಿಗೆ ನಾವು ಹೊಣೆಗಾರರಾಗಿರುವುದಿಲ್ಲ

Leave A Reply

Your email address will not be published.