ಡ್ರೈ ಫ್ರೂಟ್ಸ್ ಸೇವಿಸುವುದರಿಂದ ಅನೇಕ ಆರೋಗ್ಯಕರ ಪ್ರಯೋಜನಗಳಿವೆ. ಡ್ರೈ ಫ್ರೂಟ್ಸ್ ವಿಧಗಳು, ಡ್ರೈ ಫ್ರೂಟ್ಸ್ ಸೇವನೆಯಿಂದ ಆಗುವ ಆರೋಗ್ಯಕರ ಪ್ರಯೋಜನಗಳು ಯಾವುವು ಹಾಗೂ ಡ್ರೈ ಫ್ರೂಟ್ಸ್ ಅತಿಯಾದ ಸೇವನೆಯಿಂದ ಏನಾಗುತ್ತದೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.
ಡ್ರೈಫ್ರೂಟ್ಸ್ ಅಂದರೆ ಒಣ ಹಣ್ಣುಗಳು. ಹಣ್ಣುಗಳಲ್ಲಿರುವ ನೀರಿನ ಅಂಶವನ್ನು ಒಣಗಿಸಿದ ನಂತರ ಡ್ರೈಫ್ರೂಟ್ಸ್ ಆಗುತ್ತದೆ. ಹಣ್ಣುಗಳನ್ನು ನೈಸರ್ಗಿಕವಾಗಿ ಸೂರ್ಯನ ಬಿಸಿಲಿಗೆ ಒಣಗಿಸಲಾಗುತ್ತದೆ ಅಥವಾ ಡ್ರೈಯರ್ ಗಳನ್ನು ಬಳಸಿ ಹಣ್ಣಿನಲ್ಲಿರುವ ನೀರಿನಂಶವನ್ನು ತೆಗೆದುಹಾಕಲಾಗುತ್ತದೆ. ಇದು ಸುಮಾರು ಕ್ರಿಸ್ತಪೂರ್ವ 4,000 ವರ್ಷಗಳ ಹಿಂದೆ ಮೆಸಪಟೋಮಿಯಾ ನಾಗರಿಕತೆಯಲ್ಲಿ ಬೆಳಕಿಗೆ ಬಂದಿತ್ತು. ಒಣಗಿದ ಹಣ್ಣುಗಳು ಆರೋಗ್ಯದ ಮೇಲೆ ಒಳ್ಳೆಯ ಪರಿಣಾಮ ಬೀರುವುದರಿಂದ ಹಾಗೂ ಹೆಚ್ಚು ದಿನ ಬಾಳಿಕೆಗೆ ಬರುವುದರಿಂದ ಪ್ರಸಿದ್ಧಿಯನ್ನು ಪಡೆದುಕೊಂಡಿದೆ.

2020-2021ರ ಅಂಕಿಅಂಶದ ಪ್ರಕಾರ ಡ್ರೈಫ್ರೂಟ್ಸ್ ಹೆಚ್ಚು ಉತ್ಪಾದಿಸುವ ದೇಶ ಅಮೇರಿಕಾ ಹಾಗೂ ಟರ್ಕಿ. ಭಾರತದಲ್ಲಿ ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಅತಿ ಹೆಚ್ಚು ಡ್ರೈಫ್ರೂಟ್ಸ್ ಉತ್ಪಾದಿಸಲಾಗುತ್ತದೆ. ಒಣಗಿದ ಹಣ್ಣುಗಳಲ್ಲಿರುವ ಔಷಧೀಯ ಗುಣಗಳಿಂದ ಇದನ್ನು ಔಷಧಿಯಾಗಿ ಬಳಸಲಾಗುತ್ತದೆ. ಇದನ್ನು ದಿನನಿತ್ಯ ತಯಾರಿಸುವ ಆಹಾರ ಪದಾರ್ಥಗಳಲ್ಲಿ ಬಳಸಲಾಗುತ್ತದೆ. ಒಣಗಿದ ಹಣ್ಣುಗಳಲ್ಲಿ ಶುಗರ್, ಕೆಟ್ಟ ಕೊಲೆಸ್ಟ್ರಾಲ್ ಹಾಗೂ ಸೋಡಿಯಂ ಅಂಶಗಳು ಇರುವುದಿಲ್ಲ. ಡ್ರೈ ಫ್ರೂಟ್ಸ್ ಗಳಲ್ಲಿ ಬಾದಾಮಿ ಪ್ರಮುಖ ಡ್ರೈ ಫ್ರೂಟ್ ಆಗಿದೆ. 80 ಪ್ರತಿಶತದಷ್ಟು ಬಾದಾಮಿಯನ್ನು ಕ್ಯಾಲಿಫೋರ್ನಿಯಾ ದೇಶ ಉತ್ಪಾದಿಸುತ್ತದೆ. ಪ್ರತಿಯೊಬ್ಬರ ಡಯಟ್ ಪ್ಲಾನ್ ನಲ್ಲಿ ಬಾದಾಮಿ ಇದ್ದೆ ಇರುತ್ತದೆ ಬಾದಾಮಿ ಸೇವಿಸುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಾಯಕವಾಗಿದೆ.

ಬಾದಾಮಿಯಲ್ಲಿ ದೇಹದ ಉರಿಯೂತವನ್ನು ಕಡಿಮೆ ಮಾಡುವ ಸಾಮರ್ಥ್ಯ ಹಾಗೂ ಆಂಟಿ ಆಕ್ಸಿಡೆಂಟ್ ಹೊಂದಿದೆ ಅಲ್ಲದೆ ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಬಾದಾಮಿ ಅಧಿಕ ಪ್ರಮಾಣದ ಕ್ಯಾಲೋರಿ ಹೊಂದಿದ್ದರೂ ದೇಹದ ತೂಕವನ್ನು ಹೆಚ್ಚಿಸುವ ಅಪಾಯವನ್ನು ಕಡಿಮೆ ಮಾಡುತ್ತದೆ. ಅಧಿಕ ರಕ್ತದೊತ್ತಡವನ್ನು ಬಾದಾಮಿ ನಿಯಂತ್ರಣ ಮಾಡುತ್ತದೆ. ಬಾದಾಮಿ ಸೇವಿಸುವುದರಿಂದ ನಮ್ಮ ದೇಹಕ್ಕೆ ಮೆಗ್ನೀಷಿಯಂ ವಿಟಮಿನ್ ಇ, ಫೈಬರ್, ಉತ್ತಮ ಪ್ರೋಟೀನ್ ಒದಗಿಸುತ್ತದೆ. ಬಾದಾಮಿಯಲ್ಲಿ ಕ್ಯಾಲ್ಷಿಯಂ ಮತ್ತು ರಂಜಕದ ಅಂಶ ಹೆಚ್ಚಾಗಿದ್ದು ಮೂಳೆಯ ಆರೋಗ್ಯವನ್ನು ಕಾಪಾಡುತ್ತದೆ.

ಬಾದಾಮಿ ನಮ್ಮ ದೇಹದ ಸಕ್ಕರೆಯ ಅಂಶವನ್ನು ಸಮತೋಲನದಲ್ಲಿಡುತ್ತದೆ ಬಾದಾಮಿ ಒಂದು ಪೌಷ್ಟಿಕ ಆಹಾರವಾಗಿದೆ. ಬಾದಾಮಿ ಸೇವಿಸುವುದರಿಂದ ಕೆಲವು ಸಮಸ್ಯೆಗಳು ಉಂಟಾಗುತ್ತದೆ ಅವುಗಳೆಂದರೆ ಬಾದಾಮಿ ಸೇವನೆಯಿಂದ ಮಲಬದ್ಧತೆ ಸಮಸ್ಯೆ ಕಾಣಿಸಿಕೊಳ್ಳಬಹುದು. ಬಾದಾಮಿ ಹೆಚ್ಚು ಸೇವಿಸುವುದರಿಂದ ಪೋಷಕಾಂಶಗಳನ್ನು ದೇಹಕ್ಕೆ ಹೀರಿಕೊಳ್ಳಲು ಆಗುವುದಿಲ್ಲ. ಕೆಲವರಿಗೆ ಬಾದಾಮಿ ಅಲರ್ಜಿ ಉಂಟುಮಾಡಬಹುದು. ಅತಿಯಾಗಿ ಬಾದಾಮಿ ಸೇವಿಸುವುದರಿಂದ ಕಿಡ್ನಿಯಲ್ಲಿ ಕಲ್ಲಾಗುವ ಸಂಭವವಿದೆ. ವಿಟಮಿನ್ ಇ ಇರುವ ಆಹಾರವನ್ನು ಸೇವಿಸುತ್ತಿದ್ದು ಅದರ ಜೊತೆಗೆ ಅತಿಯಾಗಿ ಬಾದಾಮಿ ಸೇವಿಸುತ್ತಿದ್ದರೆ ರಕ್ತ ಹೆಪ್ಪುಗಟ್ಟಲು ಸಮಸ್ಯೆಯಾಗುತ್ತದೆ. ವೈದ್ಯರ ಪ್ರಕಾರ ದಿನವೊಂದಕ್ಕೆ 10- 15 ಬಾದಾಮಿ ಸೇವಿಸಬಹುದು.

ಪಿಸ್ತಾ ಇದರಲ್ಲಿರುವ ಕೊಬ್ಬಿನ ಆಮ್ಲ ಆಂಟಿ ಎಕ್ಸಿಡೆಂಟ್ ಆಗಿದ್ದು ದೇಹದ ಉರಿಯೂತವನ್ನು ಕಡಿಮೆ ಮಾಡುತ್ತದೆ. ಪಿಸ್ತಾ ಸೇವಿಸಿದರೆ ಹೃದಯ ಸಂಬಂಧಿ ಸಮಸ್ಯೆ ಕಡಿಮೆಯಾಗುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಪಿಸ್ತಾ ಸೇವಿಸುವುದರಿಂದ ಬಹಳ ಸಮಯದವರೆಗೆ ಹೊಟ್ಟೆ ತುಂಬಿದ ಭಾವನೆ ಮೂಡಿಸುತ್ತದೆ. ಪಿಸ್ತಾ ಸೇವಿಸುವುದರಿಂದ ಆರೋಗ್ಯಕರ ದೇಹದ ತೂಕವನ್ನು ಕಾಪಾಡಿಕೊಳ್ಳಬಹುದು.

ಪಿಸ್ತಾಗಳಲ್ಲಿ ಸೋಡಿಯಂ ಅಂಶ ಬಹಳ ಕಡಿಮೆ ಇರುತ್ತದೆ ಹುರಿದ ಪಿಸ್ತಾಗಳಲ್ಲಿ ಉಪ್ಪಿನ ಅಂಶ ಜಾಸ್ತಿ ಇರುತ್ತದೆ. ಸೋಡಿಯಂ ಅಂಶ ಹೆಚ್ಚಿರುವ ಪಿಸ್ತಾ ಸೇವಿಸುವುದರಿಂದ ಹೃದಯದ ಸಮಸ್ಯೆ, ಸ್ಟ್ರೋಕ್ ಆಗುವ ಸಂಭವವಿರುತ್ತದೆ. ಕೆಲವರಿಗೆ ಪಿಸ್ತಾ ಸೇವಿಸುವುದರಿಂದ ವಾಕರಿಕೆ ಬರುವುದು ಹೊಟ್ಟೆಯುಬ್ಬರ ಸಮಸ್ಯೆಗಳು ಕಾಣಿಸುತ್ತವೆ. ಪ್ರತಿದಿನ ಒಂದು ಮುಷ್ಟಿ ಪಿಸ್ತಾ ತಿಂದರೆ ಸಾಕಾಗುತ್ತದೆ. ಪಿಸ್ತಾ ಜೊತೆಗೆ ಇನ್ನಿತರ ಡ್ರೈಫ್ರೂಟ್ಸ್ ಸೇವಿಸುವುದಾದರೆ 10-12 ಪಿಸ್ತಾ ಸೇವಿಸಬಹುದು.

ಗೋಡಂಬಿಯಲ್ಲಿ ಆಂಟಿಆಕ್ಸಿಡೆಂಟ್ ಇರುವುದರಿಂದ ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಗೋಡಂಬಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿ ಉತ್ತಮ ಕೊಲೆಸ್ಟ್ರಾಲ್ ಹೆಚ್ಚಿಸುತ್ತದೆ. ಗೋಡಂಬಿಯಲ್ಲಿ ಮೆಗ್ನೀಷಿಯಂ, ಪೊಟ್ಯಾಷಿಯಂ ಅಂಶ ಹೆಚ್ಚಾಗಿದ್ದು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಪ್ರತಿದಿನ 3-4 ಗೋಡಂಬಿ ಸೇವಿಸುವುದರಿಂದ ಟೈಪ್ 2 ಡಯಾಬಿಟೀಸ್ ಕಡಿಮೆ ಮಾಡುತ್ತದೆ. ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಗೋಡಂಬಿ ಹೆಚ್ಚಿಸುತ್ತದೆ ಅಲ್ಲದೆ ನಮ್ಮ ದೇಹದ ಮೂಳೆಯ ಆರೋಗ್ಯವನ್ನು ಹೆಚ್ಚಿಸುತ್ತದೆ.

ಗೋಡಂಬಿ ಮೆದುಳಿನ ಆರೋಗ್ಯ ಕಾಪಾಡುತ್ತದೆ ಹಾಗೂ ಆರೋಗ್ಯಕರವಾದ ತೂಕವನ್ನು ಕಾಪಾಡುತ್ತದೆ. ಕೂದಲಿನ ಆರೋಗ್ಯ ಹಾಗೂ ಕಣ್ಣಿನ ಆರೋಗ್ಯವನ್ನು ಗೋಡಂಬಿ ಕಾಪಾಡುತ್ತದೆ. ಅತಿಯಾಗಿ ಸೇವಿಸುವುದರಿಂದ ರಕ್ತದಲ್ಲಿ ಸಕ್ಕರೆಯ ಅಂಶ ಹೆಚ್ಚಾಗುವ ಸಾಧ್ಯತೆಗಳಿವೆ. ಕೆಲವರಿಗೆ ಗೋಡಂಬಿ ಸೇವಿಸುವುದರಿಂದ ತೂಕ ಹೆಚ್ಚಾಗುವುದು, ಹೊಟ್ಟೆ ಉಬ್ಬರಿಸುವುದು, ಮಲಬದ್ಧತೆ, ದೇಹದ ಕೀಲುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಅತಿಯಾಗಿ ಗೋಡಂಬಿ ಸೇವಿಸಬಾರದು ಇತರೆ ಡ್ರೈಫ್ರೂಟ್ಸ್ ಸೇವಿಸುತ್ತಿದ್ದರೆ ಗೋಡಂಬಿಯನ್ನು 4-5 ಸೇವಿಸಬಹುದು.

ಏಪ್ರಿಕಾಟ್ ನೋಡಲು ಪೀಚ್ ಹಣ್ಣಿನಂತೆ ಇರುತ್ತದೆ. ಏಪ್ರಿಕಾಟ್ ಆರೋಗ್ಯಕ್ಕೆ ಬಹಳ ಒಳ್ಳೆಯದು ಏಪ್ರಿಕಾಟ್ ನಲ್ಲಿ ನ್ಯೂಟ್ರಿಯಂಟ್ಸ್ ಹೆಚ್ಚಿದ್ದು ಕ್ಯಾಲೋರಿ ಕಡಿಮೆ ಇದೆ. ಆಂಟಿ ಆಕ್ಸಿಡೆಂಟ್ ಹೆಚ್ಚಿದ್ದು ಹೃದಯದ ಆರೋಗ್ಯವನ್ನು ಕಾಪಾಡುತ್ತದೆ ಅಲ್ಲದೆ ಡಯಾಬಿಟೀಸ್ ಸಮಸ್ಯೆ ನಿವಾರಿಸುತ್ತದೆ ಹಾಗೂ ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ. ಏಪ್ರಿಕಾಟ್ ಸೇವಿಸುವುದರಿಂದ ರಕ್ತದ ಒತ್ತಡ ನಿವಾರಣೆಯಾಗುತ್ತದೆ. ಏಪ್ರಿಕಾಟ್ ಅತಿಯಾಗಿ ಸೇವಿಸುವುದರಿಂದ ವಾಂತಿ, ಮೂರ್ಛೆ ತಪ್ಪುವುದು, ತಲೆತಿರುಗುವ ಸಮಸ್ಯೆಗಳು ಉಂಟಾಗುತ್ತದೆ. ದಿನವೊಂದಕ್ಕೆ 4 ರಿಂದ 5 ಏಪ್ರಿಕಾಟ್ ಸೇವಿಸಿದರೆ ಸಾಕಾಗುತ್ತದೆ.

ನ್ಯಾಚುರಲ್ ಶುಗರ್ ಇರುವ ಖರ್ಜೂರ ಅತ್ಯಂತ ರುಚಿಯಾಗಿರುತ್ತದೆ. ಖರ್ಜೂರ ಸೇವನೆಯಿಂದ ಮೆದುಳಿನ ಆರೋಗ್ಯ ಹೆಚ್ಚುತ್ತದೆ. ಖರ್ಜೂರ ಸೇವನೆಯಿಂದ ಸ್ವಾಭಾವಿಕ ಹೆರಿಗೆಯಾಗುತ್ತದೆ. ಖರ್ಜೂರ ಸೇವನೆಯಿಂದ ಕ್ಯಾನ್ಸರ್ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು. ಖರ್ಜೂರ ಮೂಳೆ ಆರೋಗ್ಯವನ್ನು ಕಾಪಾಡುತ್ತದೆ, ಕಿಡ್ನಿಯಲ್ಲಿ ಕಲ್ಲಾಗುವ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಚರ್ಮದ ಆರೋಗ್ಯವನ್ನು ಹಾಗೂ ಕೂದಲಿನ ಆರೋಗ್ಯವನ್ನು ಖರ್ಜೂರ ಸೇವಿಸುವುದರಿಂದ ಕಡಿಮೆಯಾಗುತ್ತದೆ. ರಾತ್ರಿ ಕುರುಡುತನ ಸಮಸ್ಯೆ ಇರುವವರು ಖರ್ಜೂರವನ್ನು ಸೇವಿಸಬೇಕು ಇದರಿಂದ ಅವರ ಸಮಸ್ಯೆ ನಿವಾರಣೆಯಾಗುತ್ತದೆ.

ಖರ್ಜೂರವನ್ನು ಹೆಚ್ಚು ಸೇವಿಸುವುದರಿಂದ ತೂಕ ಹೆಚ್ಚಾಗುತ್ತದೆ, ಹೊಟ್ಟೆನೋವು ಕಾಣಿಸಿಕೊಳ್ಳುತ್ತದೆ. ಚರ್ಮದಲ್ಲಿ ಗುಳ್ಳೆಗಳು ಕಂಡುಬರಬಹುದು. ದಿನಕ್ಕೆ ಮೂರು ನಾಲ್ಕು ಖರ್ಜೂರ ಸೇವಿಸುವುದರಿಂದ ಆರೋಗ್ಯಕ್ಕೆ ಒಳ್ಳೆಯದು. ವಾಲ್ ನಟ್ಸ್ ಇದರ ಸೇವನೆಯಿಂದ ಹೃದಯದ ಆರೋಗ್ಯ ಉತ್ತಮವಾಗಿರುತ್ತದೆ. ವಾಲ್ ನಟ್ಸ್ ಸೇವಿಸುವುದರಿಂದ ಆರೋಗ್ಯಕರ ತೂಕವನ್ನು ನೋಡಿಕೊಳ್ಳಲು ಸಹಾಯಕವಾಗುತ್ತದೆ. ವಾಲ್ನಟ್ ಸೇವನೆಯಿಂದ ಕರುಳಿನ ಆರೋಗ್ಯ ಉತ್ತಮವಾಗಿರುತ್ತದೆ. ದಿನಕ್ಕೆ 4-5 ವಾಲನಟ್ ಸೇವಿಸುವುದರಿಂದ ದೇಹಕ್ಕೆ ಆರೋಗ್ಯಕರ ಪ್ರಯೋಜನವಿದೆ.

ಒಣದ್ರಾಕ್ಷಿ ಇದು ಡ್ರೈಫ್ರೂಟ್ಸ್ ಆಗಿದ್ದು ನಮ್ಮ ದೇಶದಲ್ಲಿ ಸಿಹಿತಿಂಡಿಗಳನ್ನು ಮಾಡುವಾಗ ಬಳಸಲಾಗುತ್ತದೆ. ಒಣದ್ರಾಕ್ಷಿ ಆರೋಗ್ಯಕರ ತೂಕವನ್ನು ಹೊಂದಲು ಸಹಾಯ ಮಾಡುತ್ತದೆ. ಚಯಾಪಚಯ ಕ್ರಿಯೆ ಉತ್ತಮವಾಗಿರಲು ಸಹಾಯ ಮಾಡುತ್ತದೆ. ಒಣದ್ರಾಕ್ಷಿ ಸೇವನೆಯಿಂದ ಚರ್ಮದ ಆರೋಗ್ಯ ಹೆಚ್ಚುತ್ತದೆ. ಕಣ್ಣಿನ ಆರೋಗ್ಯ ಹೆಚ್ಚಿಸುತ್ತದೆ ಹಾಗೂ ಅನಿಮಿಯಾ ಸಮಸ್ಯೆಯನ್ನು ನಿವಾರಿಸುತ್ತದೆ. ದಿನವೊಂದಕ್ಕೆ 8-10 ಒಣದ್ರಾಕ್ಷಿ ಸೇವನೆ ಆರೋಗ್ಯಕ್ಕೆ ಬಹಳ ಉತ್ತಮ. ಇತರೆ ಹಣ್ಣುಗಳಿಗೆ ಹೋಲಿಸಿದರೆ ಡ್ರೈಫ್ರೂಟ್ಸ್ ನ ಬೆಲೆ ಹೆಚ್ಚಿದೆ ಏಕೆಂದರೆ ನಮ್ಮ ದೇಶ ಡ್ರೈಫ್ರೂಟ್ಸ್ ಉತ್ಪಾದನೆಗೆ ಯೋಗ್ಯವಾದ ವಾತಾವರಣವನ್ನು ಹೊಂದಿಲ್ಲ ಆದ್ದರಿಂದ ಬೇರೆ ದೇಶಗಳಿಂದ ಹೆಚ್ಚು ಆಮದು ಮಾಡಿಕೊಳ್ಳಬೇಕಾಗುತ್ತದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.

Leave a Reply

Your email address will not be published. Required fields are marked *