ನಮ್ಮ ಶರೀರದಲ್ಲಿ ಶೇಕಡ 70ರಷ್ಟು ನೀರು ಇದೆ ಎಲ್ಲರಿಗೂ ಚೆನ್ನಾಗಿ ಗೊತ್ತಿರುವ ಹಾಗೆ ನಮ್ಮ ಶರೀರದಲ್ಲಿ ನೀರು ತುಂಬಾ ಅವಶ್ಯಕವಾಗಿರುತ್ತದೆ. ಆದರೆ ನೀರು ಕುಡಿಯುವ ವಿಷಯದಲ್ಲಿ ತುಂಬಾ ಜನರು ಹಲವು ತಪ್ಪುಗಳನ್ನು ಮಾಡುತ್ತಾರೆ. ಅಂದರೆ ನಾವು ಕುಡಿಯುವ ನೀರನ್ನು ಹೇಗೆ ತೆಗೆದುಕೊಂಡರೆ ನಮ್ಮ ದೇಹಕ್ಕೆ ಆರೋಗ್ಯ ದೊರೆಯುತ್ತದೆ ಎಂಬುದನ್ನು ಈ ಲೇಖನದ ಮೂಲಕ ವಿವರವಾಗಿ ತಿಳಿದುಕೊಳ್ಳೋಣ.

ಪ್ರತಿದಿನ ನಮ್ಮ ಶರೀರಕ್ಕೆ ಬೇಕಾದಷ್ಟು ನೀರನ್ನು ತೆಗೆದು ಕೊಳ್ಳುವುದು ತುಂಬಾ ಮುಖ್ಯವಾಗಿರುತ್ತದೆ. ಮುಖ್ಯವಾಗಿ ಸರಿಯಾದ ಅಳತೆಯಲ್ಲಿ ನೀರನ್ನು ಕುಡಿಯುವುದರಿಂದ ಸುಮಾರು 80 ಪರ್ಸೆಂಟ್ ಅಷ್ಟು ಕಾಯಿಲೆಗಳನ್ನೂ ದೂರ ಇಡಬಹುದು ಎಂದು ವೈದ್ಯರು ಸಹ ಹೇಳುತ್ತಾರೆ. ಆದರೆ ತುಂಬಾ ಚಂದ್ರ ಅವರ ಶರೀರಕ್ಕೆ ಬೇಕಾದಷ್ಟು ನೀರನ್ನು ತೆಗೆದುಕೊಳ್ಳುವುದಿಲ್ಲ. ನಮ್ಮ ಶರೀರದಲ್ಲಿ ನೀರಿನ ಅಂಶ ಕಡಿಮೆಯಾದರೆ ಮೆದುಳಿಗೆ ಸೇರುವ ನೀರಿನ ಅಂಶ ಸಹ ಕಡಿಮೆಯಾಗುತ್ತದೆ. ಇದರಿಂದ ತಲೆ ನೋವು ಬರುತ್ತೆ ಹಾಗೂ ಮರೆವು ಬರುವ ಸಾಧ್ಯತೆ ಕೂಡ ಹೆಚ್ಚು ಇರುತ್ತದೆ‌. ಮುಖ್ಯವಾಗಿ ಕೆಲವು ಜನರು ಬಾಯಿಯ ದುರ್ವಾಸನೆಯಿಂದ ಬಾದೆ ಪಡುತ್ತಿರುತ್ತಾರೆ ಅದಕ್ಕೂ ಕೂಡ ಡಿಹೈಡ್ರೇಶನ್ ಮುಖ್ಯ ಕಾರಣ. ಯಾಕೆಂದರೆ ಲಾಲಾ ಜಲದಲ್ಲಿ ಆಂಟಿಬ್ಯಾಕ್ಟರಿಯಲ್ ಗುಣಗಳು ತುಂಬಾ ಹೆಚ್ಚಾಗಿರುತ್ತದೆ. ಇದರಿಂದ ಬಾಯಿ ಒಣಗಿ ಹೋಗಿ ಬಾಯಿಯ ದುರ್ವಾಸನೆ ಬರುತ್ತೆ. ಇದರಿಂದಾಗಿ ಮಲಬದ್ಧತೆ ಸಮಸ್ಯೆ ಕೂಡ ಬರುತ್ತದೆ.

ತುಂಬಾ ಜನ ಪ್ರತಿದಿನ ನಾವು ನೀರನ್ನು ಎಷ್ಟು ಲೀಟರ್ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು ಎಂದು ಕೇಳುತ್ತಿರುತ್ತಾರೆ. ಪ್ರತಿದಿನ ಐದರಿಂದ ಆರು ಲೀಟರ್ ಅಷ್ಟು ನೀವು ನೀರನ್ನ ಕುಡಿಯಬೇಕು. ಆದರೆ ಬಹಳಷ್ಟು ಜನ ಹೇಳಿದ ರೀತಿಯಲ್ಲಿ ನೀರನ್ನು ಕುಡಿಯುತ್ತಿರುತ್ತಾರೆ ಆದರೆ ಕೆಲವರು ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಇದಕ್ಕೆ ಇನ್ನೊಂದು ಕಾರಣ ಏನೆಂದರೆ ನಿಂತುಕೊಂಡು ನೀರು ಕುಡಿಯುವುದು. ನೀರನ್ನು ಕುಡಿಯುವ ಯಾವಾಗಲೂ ನಿಂತುಕೊಂಡು ಕುಡಿಯಬಾರದು ಕುಳಿತುಕೊಂಡೆ ನೀರನ್ನು ಕುಡಿಯಬೇಕು. ನಿಂತು ನೀರು ಕುಡಿಯುವುದರಿಂದ ಅಜೀರ್ಣದ ಸಮಸ್ಯೆ ಉಂಟಾಗಬಹುದು ಹಾಗೇ ನರಮಂಡಲದಲ್ಲಿ ಒತ್ತಡ ಹೆಚ್ಚುತ್ತದೆ. ಆಯುರ್ವೇದದ ಪ್ರಕಾರ ನಿಂತುಕೊಂಡು ನೀರು ಕುಡಿಯುವಾಗ ನಮ್ಮ ನರಗಳು ಒತ್ತಡಕ್ಕೆ ಒಳಗಾಗುತ್ತವೆ ಇದರಿಂದಾಗಿ ಸಂಧಿವಾತದ ಸಮಸ್ಯೆ ಬರುವ ಸಾಧ್ಯತೆ ಇರುತ್ತದೆ. ಸಂಧಿವಾತ ಇರುವವರಿಗೆ ಈ ಸಮಸ್ಯೆ ಮತ್ತಷ್ಟು ಹೆಚ್ಚಾಗುತ್ತದೆ. ನಿಂತುಕೊಂಡ ನೀರುಕುಡಿದು ಹೃದಯ ಮತ್ತು ಶ್ವಾಸಕೋಶಕ್ಕೂ ಒಳ್ಳೆಯದಲ್ಲ. ಹಾಗೆ ಅನ್ನನಾಳದ ಮೂಲಕ ನೀರು ವೇಗವಾಗಿ ಸಾಗುವುದರಿಂದ ಅನ್ನನಾಳಕ್ಕೆ ಹಾನಿಯುಂಟಾಗುತ್ತದೆ. ನೀರು ಒಮ್ಮೇಲೆ ದೇಹ ಸೇರಿದರೆ ಕಿಡ್ನಿಗೆ ಕೆಲಸದ ಒತ್ತಡ ಉಂಟಾಗಿ ನೀರನ್ನು ಸೋಸಲು ಸಾಧ್ಯವಾಗುವುದಿಲ್ಲ. ಇದರಿಂದ ಕಿಡ್ನಿಗೆ ಹಾನಿ ಉಂಟಾಗಬಹುದು. ನಿಂತುಕೊಂಡು ನೀರು ಕುಡಿಯುವುದರಿಂದ ರಭಸವಾಗಿ ಗಂಟಲಿನಲ್ಲಿ ಇಳಿಯುವ ನೀರು ಅನ್ನನಾಳ ಹಾಗೂ ಹೊಟ್ಟೆಯು ಕೂಡುವ ಸ್ಥಳದಲ್ಲಿ ಹೆಚ್ಚಿನ ಒತ್ತಡವನ್ನು ಉಂಟು ಮಾಡುತ್ತದೆ. ಇದರಿಂದ ಸ್ನಾಯುಗಳ ಮೇಲೆ ಒತ್ತಡ ಉಂಟಾಗಿ ಹೊಟ್ಟೆ ನೋವು ಬರುವುದು. ಹಾಗಾಗಿ ಕುಂತು ನೀರು ಕುಡಿಯುವುದರಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಬಹಳಷ್ಟು ಜನರು ಬೆಳಗ್ಗೆ ಎದ್ದ ತಕ್ಷಣ ಟೀ ಅಥವಾ ಕಾಫಿ ಕುಡಿಯುವ ಅಭ್ಯಾಸವನ್ನು ಇಟ್ಟುಕೊಂಡಿರುತ್ತಾರೆ. ಅದು ನಮ್ಮ ಶರೀರಕ್ಕೆ ಅಷ್ಟೊಂದು ಒಳ್ಳೆಯದಲ್ಲ ಅದರ ಬದಲಾಗಿ ಪ್ರತಿದಿನ ಬೆಳಿಗ್ಗೆ ಒಂದು ಗ್ಲಾಸ್ ಬಿಸಿ ನೀರನ್ನು ಕುಡಿಯುವುದರಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಕುದಿಸಿದ ನೀರನ್ನು ಕುಡಿಯದೇ ಅದನ್ನು ಸ್ವಲ್ಪ ಜನಿಸಿದರು ಬೆಚ್ಚಗಿನ ನೀರನ್ನು ಕುಡಿಯಬಹುದು ನೀರನ್ನು ಕುಡಿಯುವುದರಿಂದ ದೇಹದ ತೂಕವನ್ನು ಇಳಿಸಿಕೊಳ್ಳಲು ಸಹಾಯವಾಗುತ್ತದೆ. ಹಾಗಾಗಿ ಪ್ರತಿದಿನ ಉಗುರು ಬೆಚ್ಚಗಿನ ನೀರನ್ನು ಕುಡಿಯುವುದನ್ನು ಪ್ರಾರಂಭಿಸಿ ಕೊಂಡು ಅದರ ಜೊತೆಗೆ ಕುಳಿತು ನೀರು ಕುಡಿಯುವುದನ್ನು ಅಭ್ಯಾಸ ಮಾಡಿಕೊಂಡು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!