ಮೂಲಂಗಿ ತಿನ್ನುತ್ತಿದ್ರೆ ಇದರಲ್ಲಿರುವ ಲಾಭವನ್ನೊಮ್ಮೆ ತಿಳಿಯಿರಿ

0 4

ಸಸ್ಯಹಾರಿಗಳ ಬಹು ಬಳಕೆ ತರಕಾರಿಗಳಲ್ಲಿ ಮೂಲಂಗಿ ಯು ಕೂಡ ಒಂದು. ಮೂಲಂಗಿ ರುಚಿಯಷ್ಟೇ ನೀಡುವುದಲ್ಲದೆ ಅದರಲ್ಲಿ ರೋಗ ನಿರೋಧಕ ಶಕ್ತಿ ಕೂಡ ಹೆಚ್ಚಾಗಿ ಇದೆ‌. ಸಾಂಬಾರಿಗೆ ಮಾತ್ರ ಒಂದಲ್ಲದೇ ಇನ್ನು ಹತ್ತು ಹಲವಾರು ಬಗ್ಗೆ ಬಗೆಯಲ್ಲಿ ಮೂಲಂಗಿಯನ್ನು ಸೇವಿಸಲಾಗುತ್ತದೆ. ಮೂಲಂಗಿ ಎಲ್ಲಿ ವಿಟಮಿನ್ ಎ ವಿಟಮಿನ್ ಸಿ ಅಂಶ ಹೇರಳವಾಗಿರುತ್ತದೆ. ಅಲ್ಲದೇ ಸಾರಜನಕ, ಪಿಷ್ಟ, ಮೇದಸ್ಸು, ನಾರಿನ ಅಂಶ, ರಂಜಕ, ಸೋಡಿಯಂ, ಪೊಟ್ಯಾಶಿಯಂ, ಆಕ್ಸನಿಕ್ ಆಮ್ಲ, ಖನಿಜಾಂಶ, ಎ ಮತ್ತು ಸಿ ಜೀವಸತ್ವ, ಸುಣ್ಣ, ಕಬ್ಬಿಣ, ಡಯಾಮಿನ್ ನಂತಹ ಅಂಶಗಳು ಸಹ ಇದರಲ್ಲಿವೆ. ಮೂಲಂಗಿ ತಾಜಾ ತರಕಾರಿಯಾಗಿರುವುದರಿಂದ ಇದನ್ನು ಹಸಿಯಾಗಿ ಸಹ ನಾವು ತಿನ್ನಬಹುದು. ನಾವು ಈ ಲೇಖನದಲ್ಲಿ ಮೂಲಂಗಿಯನ್ನು ತಾಜಾವಾಗಿ ಹಸಿಯಾಗಿ ತಿನ್ನುವುದರಿಂದ ನಮ್ಮ ದೇಹಕ್ಕೆ ಸಿಗುವ ಆರೋಗ್ಯಕರ ಲಾಭಗಳ ಕುರಿತು ತಿಳಿದುಕೊಳ್ಳೋಣ.

ಮೂಲಂಗಿ ಭಯಾನಕ ರೋಗ ಕ್ಯಾನ್ಸರ್ ಗಳಂತಹ ರೋಗಗಳ ವಿರುದ್ಧ ನಮ್ಮ ದೇಹ ಹೋರಾಡುವ ಶಕ್ತಿಯನ್ನು ನೀಡುತ್ತದೆ. ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಡಲು ಮೂಲಂಗಿ ತುಂಬಾ ಸಹಕರಿಸುತ್ತದೆ. ಮೂತ್ರಕೋಶ ಮತ್ತು ಮೂತ್ರಪಿಂಡವನ್ನು ಶುದ್ಧೀಕರಿಸಲು ಸಹಾಯಮಾಡುತ್ತದೆ. ಮೂಲಂಗಿ ಸೇವನೆ ಮಾಡುವುದರಿಂದ ಮುದುರಿ ಮೂತ್ರ ಮತ್ತು ಮೂತ್ರ ಸಂಬಂಧಿ ಕಾಯಿಲೆಗಳು ದೂರವಾಗುತ್ತವೆ. ಕೆಂಪು ಮೂಲಂಗಿ ಸೇವನೆ ಮಾಡುವುದರಿಂದ ನಮ್ಮ ಮೂಳೆಗಳು ಗಟ್ಟಿಯಾಗುತ್ತವೆ ಹಾಗೆ ಮೂಲಂಗಿ ನಮ್ಮ ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ. ಮೆದುಳಿನ ನರಮಂಡಲವನ್ನು ಬಲಪಡಿಸಲು ಇದು ಸಹಾಯಮಾಡುತ್ತದೆ. ಕಾಮಾಲೆ ರೋಗ ಇರುವವರು ಮೂಲಂಗಿ ಸೇವನೆ ಮಾಡುವುದು ತುಂಬಾ ಒಳ್ಳೆಯದು ಇದು ರೋಗವನ್ನು ಬೇಗನೆ ಗುಣ ಮಾಡಿ ಕೆಂಪು ರಕ್ತಕಣಗಳನ್ನು ಹೆಚ್ಚಿಸುತ್ತದೆ. ನಿತ್ಯವೂ ಮೂಲಂಗಿ ಸೇವಿಸುವುದರಿಂದ ಹೃದಯಾಘಾತವಾಗುವ ಸಂಭವ ಕಡಿಮೆ ಇರುತ್ತದೆ ಆದ್ದರಿಂದ ಹೃದಯ ರೋಗಗಳು ಮೂಲಂಗಿಯನ್ನು ಸೇವಿಸುವುದು ಒಳ್ಳೆಯದು. ರಕ್ತದಲ್ಲಿರುವ ಸಕ್ಕರೆ ಮಟ್ಟವನ್ನು ತಗ್ಗಿಸುವ ಮೂಲಕ ಮಧುಮೇಹಿಗಳಿಗೆ ಇದು ತುಂಬಾ ಉಪಯುಕ್ತವಾದ ತರಕಾರಿಯಾಗಿದೆ.

ಮೂಲಂಗಿ ಸೇವನೆಯಿಂದ ದಂತ ಸಮಸ್ಯೆ ನಿವಾರಣೆಯಾಗುತ್ತದೆ ಹಲ್ಲುಗಳು ಗಟ್ಟಿಯಾಗುತ್ತದೆ. ಹಳದಿ ಹಳೆನ ಸಮಸ್ಯೆ ಕೂಡ ನಿವಾರಣೆಯಾಗುತ್ತದೆ ಮೂಲಂಗಿಗೆ ಸ್ವಲ್ಪ ನಿಂಬೆರಸ ಸೇರಿಸಿ ಹಲ್ಲುಜ್ಜುವುದರಿಂದ ಹಲ್ಲು ಬೆಳ್ಳಗೆ ಆಗುತ್ತದೆ. ಮೂಲಂಗಿ ಸೇವನೆಯಿಂದ ಕೂದಲು ಉದುರುವುದು ನಿಲ್ಲುತ್ತದೆ. ದೇಹದಲ್ಲಿ ರಕ್ತದ ಕೊರತೆ ಇದ್ದರೆ ಮೂಲಂಗಿ ರಸ ಹಾಗೂ ದಾಳಿಂಬೆ ರಸವನ್ನು ಮಿಶ್ರಣ ಮಾಡಿ ಕುಡಿದರೆ ರಕ್ತದ ಉತ್ಪತ್ತಿಯಾಗಿರುತ್ತದೆ ನಿವಾರಣೆಯಾಗುತ್ತದೆ. ಕೆಂಪು ರಕ್ತಕಣಗಳು ವೃದ್ಧಿಯಾಗುತ್ತದೆ. ಮೂಲಂಗಿ ರಸಕ್ಕೆ ಉಪ್ಪು ಬೆರೆಸಿ ಸೇವಿಸುವುದರಿಂದ ಬಾಯಿಯ ದುರ್ವಾಸನೆ ಹೋಗುತ್ತದೆ. ಮೂಲಂಗಿ ರಸಕ್ಕೆ ಉಪ್ಪು ಮತ್ತು ನಿಂಬೆ ರಸ ಬೆರೆಸಿ ಕುಡಿಯುವುದರಿಂದ ದೇಹದಲ್ಲಿರುವ ಬೊಜ್ಜನ್ನು ಕರಗಿಸಿಕೊಳ್ಳಬಹುದು.

ಮೂಲಂಗಿ ಶರೀರಕ್ಕೆ ಒಂದೇ ಅಲ್ಲದೆ ಮೊಡವೆ ನಿವಾರಣೆಗೆ ಸಹಾಯ ಸಹಕರಿಸುತ್ತದೆ. ಹೊಟ್ಟೆ ನೋವಿಗೆ ಮೂಲಂಗಿ ರಾಮಬಾಣ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಹಾಗೂ ಮಲಬದ್ಧತೆಯನ್ನೂ ಸಹ ನಿವಾರಣೆ ಮಾಡುತ್ತದೆ. ಮೂಲಂಗಿ ನಾವು ಇಷ್ಟೊಂದು ಲಾಭಗಳನ್ನು ಪಡೆಯಬೇಕು ಎಂದರೆ ಅದನ್ನು ಬೇಯಿಸದೇ ಹಸಿಯಾಗಿ ಹಾಗೆಯೇ ತಿನ್ನಬೇಕು. ಹಸಿ ಮೂಲಂಗಿಯನ್ನು ತಿನ್ನುವುದರಿಂದ ಇಷ್ಟೊಂದು ಲಾಭಗಳು ನಮ್ಮ ದೇಹಕ್ಕೆ ದೊರೆಯುತ್ತದೆ. ಇದರ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಿ.

Leave A Reply

Your email address will not be published.