ಸೇಬುಹಣ್ಣಿನ ಜೊತೆಗೆ ಬೀಜಗಳನ್ನು ಸಹ ತಿಂದ್ರೆ ಏನಾಗುತ್ತೆ ಗೊತ್ತೇ?

0 0

ಪ್ರತಿನಿತ್ಯ ಸೇವಿಸುವ ಆಹಾರ ಪದಾರ್ಥಗಳು ನಮ್ಮ ದೇಹಕ್ಕೆ ಹೆಚ್ಚಿನ ಪ್ರೋಟೀನ್, ವಿಟಮಿನ್, ಪೋಷಕಾಂಶಗಳನ್ನು ಒದಗಿಸುತ್ತವೆ. ಅದರಲ್ಲೂ ನಾವು ತಿನ್ನುವ ಹಣ್ಣು ಹಂಪಲುಗಳ ನಮ್ಮ ದೇಹಕ್ಕೆ ಶಕ್ತಿಯನ್ನು ನೀಡುತ್ತವೆ ಅಷ್ಟೆ ಅಲ್ಲದೆನಮ್ಮ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು ಹಣ್ಣು-ಹಂಪಲುಗಳು ನಮ್ಮ ದೇಹಕ್ಕೆ ಎಷ್ಟು ಅಗತ್ಯವಾಗಿರುತ್ತವೆ. ಕೆಲವೊಮ್ಮೆ ನಾವು ವಿವಿಧ ರೀತಿಯ ಹಣ್ಣುಗಳನ್ನು ತಿನ್ನಲು ಬಯಸುತ್ತೇವೆ. ಅವುಗಳಲ್ಲಿ ಒಂದು ಸೇಬು. ಸೇಬು ಹಣ್ಣು ಯಾರಿಗೆ ತಾನೆ ಇಷ್ಟ ಆಗಲ್ಲ ಹೇಳಿ… ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ತುಂಬಾ ಇಷ್ಟ ಪಡುವ ಹಣ್ಣು ಆಪಲ್. ಹೀಗೊಂದು ಸಂಶೋಧನೆ ಪ್ರಕಾರ ತಿಳಿದು ಬಂದಿರುವುದೇನೆಂದರೆ ಪ್ರತಿದಿನ ಒಂದು ಸೇಬುಹಣ್ಣನ್ನು ತಿನ್ನುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಸೇಬು ಹಣ್ಣು ತಿನ್ನುವಾಗ ಒಂದು ಅಂಶವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಆಗುತ್ತದೆ. ಅದೇನೆಂದರೆ ಸೇಬು ಹಣ್ಣಿನ ಬೀಜಗಳನ್ನು ತಿನ್ನುವುದರಿಂದ ನಮ್ಮ ದೇಹದ ಮೇಲೆ ಕೆಲವು ದುಷ್ಪರಿಣಾಮಗಳನ್ನು ಬೀರುತ್ತದೆ ಎಂದು ಕೆಲವು ರಿಸರ್ಚ್ ಮೂಲಗಳು ಹೇಳುತ್ತವೆ. ಹಾಗಾಗಿ ಈ ಲೇಖನದ ಮೂಲಕ ಹಣ್ಣಿನ ಬೀಜಗಳನ್ನು ತಿನ್ನುವುದರಿಂದ ನಮ್ಮ ದೇಹದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಕುರಿತು ತಿಳಿದುಕೊಳ್ಳೋಣ.

ಹಣ್ಣುಗಳ ಬೀಜಗಳಿಗೆ ಪೋಷಕಾಂಶಗಳು ಇರುತ್ತೆ ಅನ್ನೋದು ಎಲ್ಲರಿಗೂ ಗೊತ್ತೇ ಇದೆ ಆದರೆ ಕೆಲವು ಹಣ್ಣುಗಳ ಬೀಜಗಳನ್ನು ತಿನ್ನುವುದರಿಂದ ನಮ್ಮ ದೇಹ ಅನಾರೋಗ್ಯದ ಪಾಲಾಗಬಹುದು ಎಂದು ಕೆಲವು ರಿಸರ್ಚ್ಗಳು ಹೇಳುತ್ತದೆ. ಯಾಕೆಂದರೆ ಕೆಲವು ಹಣ್ಣಿನ ಬೀಜಗಳು ನಮಗೆ ಉಪಯೋಗಕ್ಕೆ ಬರುವುದಿಲ್ಲ ಅದರಲ್ಲಿ ಒಂದು ಅಂದರೆ ಸೇಬು ಹಣ್ಣಿನ ಬೀಜ. ಸೇಬು ಹಣ್ಣಿನ ಬೀಜಗಳನ್ನು ಯಾವುದೇ ಕಾರಣಕ್ಕೂ ಮರೆತು ಕೂಡ ತಿನ್ನಬಾರದು. ಒಂದು ವೇಳೆ ಹಸಿವು ನಾನು ತಿನ್ನುವಾಗ ನಮಗೆ ಸಿಕ್ಕಿಹಾಕಿಕೊಂಡರೆ ಗಾಬರಿ ಪಡೆದ ತಕ್ಷಣವೇ ಅದನ್ನು ಉಗಿಯಬೇಕು. ಸೇಬು ಹಣ್ಣಿನ ಬೀಜಗಳನ್ನು ಒಂದು ಎರಡು ಬೀಜಗಳನ್ನು ತಿನ್ನುವುದರಿಂದ ನಮ್ಮ ಆರೋಗ್ಯಕ್ಕೆ ಏನೂ ಆಗುವುದಿಲ್ಲ ಆದರೆ 5 ಗ್ರಾಂ ಗಿಂತಲೂ ಹೆಚ್ಚು ಸೇಬು ಬೀಜಗಳನ್ನು ತಿನ್ನೋದರಿಂದ ನಮ್ಮ ದೇಹಕ್ಕೆ ಅನಾರೋಗ್ಯ ಸಮಸ್ಯೆಗಳು ಬರುತ್ತವೆ ಎನ್ನುವುದನ್ನು ಕೆಲವು ರಿಸರ್ಚ್ಗಳು ಹೇಳುತ್ತವೆ.

ಯಾಕೆಂದರೆ ಈ ಹಣ್ಣಿನಲ್ಲಿ ಅಮೇಡಲಿನ್ ಎಂಬ ಪದಾರ್ಥ ಇರುವುದರಿಂದ ಇದು ದೇಹಕ್ಕೆ ಒಳ್ಳೆಯದಲ್ಲ. ಈ ಬೀಜಗಳನ್ನು ನಾವು ಸೇವಿಸುವುದರಿಂದ ನಮಗೆ ಕೆಲವು ಉಸಿರಾಟದ ತೊಂದರೆಗಳು ಉಂಟಾಗುತ್ತದೆ ಎಂದು ಕೆಲವು ರಿಸರ್ಚ್ ಗಳಲ್ಲಿ ತಿಳಿದುಬರುತ್ತದೆ. ಅಷ್ಟೇ ಅಲ್ಲದೆ ತಲೆನೋವು, ವಾಂತಿ ಇತ್ಯಾದಿ ಲಕ್ಷಣಗಳೂ ಸಹ ಕಂಡು ಬರುತ್ತವೆ ಎಂದು ಹೇಳಲಾಗುತ್ತದೆ. ಮಕ್ಕಳು ಈ ಬೀಜವನ್ನು ಸೇವಿಸಲೇ ಬಾರದು ಮಕ್ಕಳಿಗೆ ಸೇವೆ ಹಣ್ಣುಗಳನ್ನು ಕೊಡುವಾಗ ಈ ಬೀಜಗಳನ್ನು ಮೊದಲೇ ತೆಗೆದುಕೊಡಬೇಕು. ರುಚಿಯಾಗಿದೆ ಎಂದು ಸೇಬು ಹಣ್ಣುಗಳನ್ನು ಹಾಗೆ ತಿನ್ನುತ್ತಾ ಹೋದರೆ ನಾವು ನಮ್ಮ ದೇಹದ ಆರೋಗ್ಯವನ್ನು ಅಪಾಯಕ್ಕೆ ಒಡ್ಡಿಕೊಳ್ಳುವುದು ಖಂಡಿತ. ಹಾಗಾಗಿ ಸೇಬು ಹಣ್ಣುಗಳನ್ನು ತಿನ್ನುವಾಗ ಬೀಜವನ್ನು ತೆಗೆಯುವುದನ್ನು ಮಾತ್ರ ಮರೆಯಬಾರದು. ಚಿಕ್ಕ ಮಕ್ಕಳಿಗೂ ಸಹ ಕೊಡುವಾಗ ಸೂಕ್ಷ್ಮವಾಗಿ ಗಮನಿಸಿ ನೀಡುವುದು ತುಂಬಾ ಸೂಕ್ತ.

Leave A Reply

Your email address will not be published.