ಇಂದಿನ ದಿನಗಳಲ್ಲಿ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಬಹಳಷ್ಟು ಜನರು ವಿವಿಧ ಪರಿಹಾರ ಮರಗಗಳನ್ನು ಹುಡುಕಿಕೊಂಡಿದ್ದಾರೆ, ಆದ್ರೆ ಕೆಲವರಿಗೆ ಅದು ಪರಿಣಾಮಕಾರಿಯಾದ್ರೆ ಇನ್ನು ಕೆಲವರಿಗೆ ಅದು ಸರಿ ಹೊಂದದೆ ಇರಬಹುದು, ಆದ್ರೆ ಒಮ್ಮೆ ಪ್ರಯತ್ನಿಸುವುದರಲ್ಲಿ ಯಾವುದೇ ತೊಂದರೆಯಿಲ್ಲ. ಇಂದಿನ ದಿನಗಳಲ್ಲಿ ದೇಹದ ತೂಕ ಹೆಚ್ಚಾಗು ಸಮಸ್ಯೆ ಜಾಸ್ತಿನೇ ಇದೆ ಇದಕ್ಕೆ ಕಾರಣ ಎಲ್ಲರು ಕೂಡ ದೈಹಿಕವಾಗಿ ಕೆಲಸ ಮಾಡದೇ ಇದ್ರೂ ಮಾನಸಿಕವಾಗಿ ಕೆಲಸ ಮಾಡುವವರ ಸಂಖ್ಯೆ ಹೆಚ್ಚಾಗಿದೆ ಅಂದರೆ ದೇಹಕ್ಕೆ ಹೆಚ್ಚು ಶ್ರಮವಿಲ್ಲದೆ ಕುಳಿತ ಜಾಗದಲ್ಲೇ ಹೆಚ್ಚಿನ ಸಮಯ ಕೆಲಸ ಮಾಡೋದು ಇದರಿಂದ ದೇಹದಲ್ಲಿ ಹೆಚ್ಚಾಗಿ ಬೊಜ್ಜು ಬೆಳೆಯುತ್ತದೆ.

ದೇಹದ ತೂಕವನ್ನು ಕಡಿಮೆ ಮಾಡುವ ಜೊತೆಗೆ ದೇಹಕ್ಕೆ ಉತ್ತಮ ಆರೋಗ್ಯವನ್ನು ವೃದ್ಧಿಸುವಂತ ಒಂದಿಷ್ಟು ಮನೆಮದ್ದುಗಳಲ್ಲಿ ಉಪಯೋಗಕಾರಿ ಆಗಿರುವಂತ ಮನೆಮದ್ದನ್ನು ಈ ಮೂಲಕ ತಿಳಿಯೋಣ. ಅಡುಗೆಗೆ ಬಳಸುವಂತ ಓಮ್ ಕಾಳು ದೇಹದ ತೂಕವನ್ನು ಕಡಿಮೆ ಮಾಡಬಲ್ಲ ಗುಣಗಳನ್ನು ಹೊಂದಿದೆ ಆಗಾಗಿ ಇದನ್ನು ಹೇಗೆ ಯಾವಾಗ ಬಳಸಬೇಕು ಇದು ಹೇಗೆ ಉಪಯೋಗಕಾರಿ ಅನ್ನೋದನ್ನ ತಿಳಿಯೋಣ.

ಒಂದಿಷ್ಟು ಓಮ್ ಕಾಳನ್ನು ಒಂದು ಗ್ಲಾಸ್ ನೀರಿನಲ್ಲಿ ನೆನಸಿಟ್ಟು ಬೆಳಗ್ಗೆ ಕಾಳಿನೊಂದಿಗೆ ನೀರನ್ನೂ ಕುದಿಸಿ, ಅದನ್ನು ಸೋಸಿ ನೀರನ್ನು ಬೆಳಗ್ಗೆ ಖಾಲಿ ಹೊಟ್ಟೆಗೆ ಸೇವನೆ ಮಾಡಬೇಕು. ಇದನ್ನು ಸೇವನೆ ಮಾಡಿದ ನಂತರ ಒಂದು ಅರ್ಧ ಗಂಟೆಯವರೆಗೆ ಯಾವುದೇ ಆಹಾರವನ್ನು ಸೇವನೆ ಮಾಡಬಾರದು. ಈ ವಿಧಾನ ಹೀಗಾಗಲೇ ಕೆಲವರಿಗೆ ಪರಿಣಾಮಕಾರಿಯಾಗಿ ಕೆಲಸ ಮಾಡಿದೆ. ಕೆಲವರಿಗೆ ಇದು ಏನು ಪರಿಣಾಮಕಾರಿಯಾಗದೆ ಇದ್ರೆ ಬಿಟ್ಟು ಬಿಡಿ ಬೇರೆ ಮನೆಮದ್ದನ್ನು ಪ್ರಯತ್ನಿಸಿ. ಒಂದುವೇಳೆ ನಿಮಗೆ ಇದು ಉಪಯೋಗಕಾರಿ ಅನಿಸಿದರೆ ಮುಂದುವರೆಸಿ ನಿಮ್ಮ ಆತ್ಮೀಯರಿಗೂ ಹಂಚಿಕೊಳ್ಳಿ

Leave a Reply

Your email address will not be published. Required fields are marked *