Doctor Manoj Durairaj Social Service: ಇಂದಿನ ಕಾಲಗಳಲ್ಲಿ ವೈದ್ಯ ವೃತ್ತಿ ಅನ್ನೋದು ದೊಡ್ಡ ಬಿಸಿನೆಸ್ ಆಗಿದೆ ಎಲ್ಲದಕ್ಕೂ ಹಣವೇ ಮೊದಲು ಯಾವುದು ಕೂಡ ಉಚಿತವಿಲ್ಲ ಅನ್ನೋ ರೀತಿಯ ವಾತಾವರಣ ನಿರ್ಮಾಣವಾಗಿದೆ ಸ್ಯಾಕರೈ ಆಸ್ಪತ್ರೆಗಳಲ್ಲಿ ಕೂಡ ಉಚಿತವಿದ್ದರೂ ಅಲ್ಲಿನ ವಾತಾವರಣ ಹೇಗಿರುತ್ತೆ ಅನ್ನೋದು ಜನ ಸಾಮಾನ್ಯರಿಗೆ ಹೀಗಾಗಲೇ ಗೊತ್ತಿರುತ್ತದೆ. ವಿಷ್ಯಕ್ಕೆ ಬರೋಣ ಸ್ವಾರ್ಥವೇ ತುಂಬಿರುವಂತ ಈ ಪ್ರಪಂಚದಲ್ಲಿ ಇಂತಹ ಒಂದೊಳ್ಳೆ ಸಮಾಜ ಸೇವೆ ಹಾಗು ಬಡವರಿಗಾಗಿ ಉಚಿತ ಅರೋಗ್ಯ ಸೇವೆ ಮಾಡುತ್ತಿದ್ದಾರೆ ಅನ್ನೋದನ್ನ ನೋಡುವುದಾದರೆ ನಿಜಕ್ಕೂ ಗ್ರೇಟ್ ಅನಿಸುತ್ತದೆ.

ಹಣವಿಲ್ಲದೆ ಹೆಣವನ್ನು ಕೂಡ ಹೊರಗಡೆ ಬಿಡದೆ ಇರುವಂತ ವೈದ್ಯರುಗಳ ಮಧ್ಯೆ ಇಂತಹ ವೈದ್ಯರು ಇರುವುದು ನಿಜಕ್ಕೂ ಹೆಮ್ಮೆಯ ವಿಷಯ. ಹೌದು ಹೆಸರು ಮನೋಜ್ ದುರೈ ರಾಜ್ ಎಂಬುದಾಗಿ ಈಗಾಗಲೇ ಇವರು 350 ಕ್ಕೂ ಶಸ್ತ್ರ ಚಿಕಿತ್ಸೆಗಳನ್ನು ಮಾಡಿ ರೋಗಿಗಳಿಗೆ ಮರುಜೀವ ಕೊಟ್ಟಂತ ವೈದರು ಇವರು. ಬಡವರಿಗಾಗಿ ಇವರ ಸೇವೆ ಮೀಸಲಾಗಿದೆ ಅಂದರೆ ತಪ್ಪಾಗಲಾರದು ಅಷ್ಟೇ ಅಲ್ದೆಅದೆಷ್ಟೋ ಬಡ ರೋಗಿಗಳು ಇವರನ್ನು ಆಧುನಿಕ ದೇವರು ಎಂಬುದಾಗಿ ಅಂದುಕೊಳ್ಳುತ್ತಾರೆ, ಇದಕ್ಕೆಕಾರಣ ಇವರು ಬಡ ರೋಗಿಗಳಿಗೆ ಮಾಡುವಂತ ಸಹಾಯ.

ಡಾಕ್ಟರ್ ಮನೋಜ್ ದುರೈ ರಾಜ್ ಅವರ ತಂದೆ ಸ್ಥಾಪಿಸಿದ ಫೌಂಡೇಶನ್ ನಲ್ಲಿ ಸೇವೆ ಸಲ್ಲಿಸುತ್ತಿದ್ದು, ಅವರ ತಂದೆ 22 ವರ್ಷಗಳ ಮುಂಚೆ ಮರಿಯನ್ ಕಾರ್ಡಿಯಾಕ್ ಸೆಂಟರ್ ಮತ್ತು ಸಂಶೋಧನಾ ಫೌಂಡೇಶನ್ ಎಂಬ ಸಂಸ್ಥೆಯನ್ನು ಸ್ಥಾಪನೆ ಮಾಡಿದ್ದರು. ಡಾ.ಮನೋಜ್ ಈ ಫೌಂಡೇಶನ್ ಗೆ 2005 ರಲ್ಲಿ ಬಂದು ಸೇರಿಕೊಂಡಿದ್ದರು. ಅಂದಿನಿಂದ ವೈದ್ಯರುತ್ತಿಯಲ್ಲಿ ತನ್ನದೆಯಾದ ಹೆಸರನ್ನು ಉಳಿಸಿಕೊಂಡಿದ್ದಾರೆ. ಅದೆಷ್ಟೋ ರೋಗಿಗಳ ಪಾಲಿಗೆ ಈ ವೈದ್ಯರು ದೇವರಾಗಿದ್ದರೆ ಹೌದು ಹೃದಯಕ್ಕೆ ಸಂಬಂದಿಸಿದ ಶಸ್ತ್ರ ಚಿಕಿತ್ಸೆ ಇದ್ರೆ ಈ ವೈದ್ಯರು ಬಡವರಿಗೆ ಉಚಿತವಾಗಿ ಸೇವೆ ಸಲ್ಲಿಸುತ್ತಾರೆ, ಕಾರಣ ಬಡವರ ಹತ್ತಿರ ಹಣ ಇರೋದಿಲ್ಲ ಅವರ ಕಷ್ಟ ನೋಡಲಾರದೆ. ಬಡ ರೋಗಿಗಳನ್ನು ಇಂದಿಗೂ ಸಹ ವಾಪಸ್ ಕಳ್ಸಿರೋ ಉದಾಹರಣೆ ಇಲ್ಲ ಅನ್ನುತ್ತಾರೆ ಕೆಲ ರೋಗಿಗಳು.

ಚಿಕಿತ್ಸೆಗಾಗಿ ದಾನಿಗಳ ಸಹಾಯವನ್ನು ಪಡೆದುಕೊಳ್ಳುತ್ತಾರೆ ಹಾಗು ಸರ್ಕಾರದ ಹಲವು ಯೋಜನೆಗಳ ಮೂಲಕ ಶಸ್ತ್ರ ಚಿಕಿತ್ಸೆಯ ವೆಚ್ಚವನ್ನು ಭರಿಸುತ್ತಾರೆ, ಈ ಆಸ್ಪತ್ರೆ ಅಥವಾ ರಿಸರ್ಚ್ ಸೆಂಟರ್ ಇರೋದಾದ್ರೂ ಎಲ್ಲಿ ಅನ್ನೋದನ್ನ ನೋಡುವುದಾದರೆ ಇದು ಮಹಾರಾಷ್ಟ್ರದ ಪುಣೆಯಲ್ಲಿದೆ ಇಲ್ಲಿ ಹೃದಯ ಶಸ್ತ್ರ ಚಿಕಿತ್ಸೆಯನ್ನು ಉಚಿತವಾಗಿ ಮಾಡುವ ಆಸ್ಪತ್ರೆ ಅಂತಲೇ ಫೇಮಸ್ ಆಗಿದೆ. ಅದೇನೇ ಇರಲಿ ಇವರ ಈ ಸೇವೆಗೆ ನಿಜಕ್ಕೂ ಬಿಗ್ ಸಲ್ಯೂಟ್.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!