ಯಶಸ್ಸಿನ ಗುಟ್ಟು ತಿಳಿಸಿದ ಸುಧಾಮೂರ್ತಿ

0 1

ಎಲ್ಲರಿಗೂ ಕಿವಿ ಮಾತು ಹೇಳುತ್ತಾ, ನಗಿಸುತ್ತಾ, ಸಹಾಯ ಮಾಡುತ್ತಾ ಇರುವ ಅಮ್ಮ ಇವರು. ಕೋಟಿ ಕೋಟಿಗೆ ಒಡತಿಯಾದರೂ ಸಾಮಾನ್ಯ ಜನರಂತೆ ಇರುವ ದೊಡ್ಡ ಮನಸ್ಸುಳ್ಳ ಸದ್ಗುಣಂತೆ ನಮ್ಮ ಸುಧಾಮೂರ್ತಿ ಅಮ್ಮ. ನಮಗೆಲ್ಲ ಒಂದು ಮಾದರಿ ಎಂದಾಗ ನೆನಪಾಗೊದೆ ಸುಧಾಮೂರ್ತಿ. ಅವರ ಕೆಲವೊಂದು ಹಿತವಚನಗಳು ಮಾಡುತ್ತೆವೆ. ಸುಧಾಮೂರ್ತಿ ಅವರು ಮುಖ್ಯಮಂತ್ರಿ ಕುಮಾರಸ್ವಾಮಿ, ವೈದ್ಯಕೀಯ ಶಿಕ್ಷಣ ಸಚಿವ ತುಕಾರಾಂ, ಆರೋಗ್ಯ ಇಲಾಖೆ ಮುಖ್ಯಸ್ಥರಾದ ಶಿವಾನಂದ ಪಾಟೀಲ, ಡಾಕ್ಟರ್. ಮಂಜುನಾಥ ಅವರ ಸಮ್ಮುಖದಲ್ಲಿ ಮಾತನಾಡಿದ್ದರು. ಸುಧಾಮೂರ್ತಿ ಅವರು ಆಡದೆ ಮಾಡಿದವನು ರೂಢಿಯೊಳಗುತ್ತಮನು ಎಂಬ ತತ್ವವನ್ನು ಅನುಸರಿಸುವವರು. ಹೆಚ್ಚು ಮತನಾಡದೆ ನಮ್ಮ ಕಲಸ ಮಾತನಾಡುವಂತೆ ಮಾಡಬೇಕೆಂಬ ತತ್ವ ನಂಬಿದವರು. ಇವರ ತಂದೆ ಸರಕಾರಿ ವೈದ್ಯರಾಗಿದ್ದರು ಆ ಕಾರಣಗಳಿಂದ ಸರಕಾರಿ ಆಸ್ಪತ್ರೆಗಳ ಮೇಲೆ ಗೌರವ ಬಹಳವಾಗಿದೆ. ಸುಧಾಮೂರ್ತಿ ಅವರ ತಂದೆಯ ಕಾಲದಲ್ಲಿ ವೈದ್ಯರ ಮೇಲೆ ರೋಗಿಗಳಿಗೆ ಅತೀವ ನಂಬಿಕೆ ಇತ್ತು. ಆದ್ದರಿಂದ ಸುಧಾಮೂರ್ತಿ ಅವರ ತಂದೆ ನೀರನ್ನು ಕೊಟ್ಟರು ಔಷಧವೆಂದು ಭಾವಿಸಿ ಗುಣಹೊಂದಿದವರು ಬಹಳಷ್ಟು ಜನರು ಇದ್ದರು. ಔಷಧೀಯಂ ಜಾನ್ನವಿತೋಯಂ ವೈದ್ಯೋ ನಾರಾಯಣೊ ಹರಿಃ ಎಂಬ ಮಾತು ಇದನ್ನು ಸೂಚಿಸುತ್ತದೆ. ವೈದ್ಯ ಹಾಗೂ ರೋಗಿಯ ಮದ್ಯದಲ್ಲಿ ಒಂದು ವಿಶಿಷ್ಠವಾದ ಸಂಬಂಧ ಇರುತ್ತದೆ. ರೋಗಿಗೆ ವೈದ್ಯರ ಮೇಲೆ ನಂಬಿಕೆ, ವೈದ್ಯರಿಗೆ ರೋಗಿಯ ಬಗೆಗೆ ಕಾಳಜಿ ಇದ್ದಲ್ಲಿ ನೀರು ಕೊಟ್ಟರು ಗುಣವಾಗುವ ಸಾದ್ಯತೆ ಇರುತ್ತದೆ ಎನ್ನುತ್ತಾರೆ.

ಸುಧಾಮೂರ್ತಿ ಅವರ ಪ್ರಕಾರ ಆರೋಗ್ಯ ಸಮಸ್ಯೆಗೆ ಅಂತರ್ಜಾಲದ ಮೊರೆ ಹೋಗುವುದು ಒಳ್ಳೆಯದಲ್ಲ. ವೈದ್ಯರು ನಿಮಗೆನು ಆಗಿಲ್ಲ ಹುಶಾರಾಗುತ್ತಿರಿ ಎಂಬ ಒಂದು ಮಾತಿಗೆ ರೋಗಿಯ ಸಮಸ್ಯೆ ಶೇಕಡಾ ಐವತ್ತರಷ್ಟು ಕಡಿಮೆಯಾಗಿಬಿಡುತ್ತದೆ. ನಾವು ವೈದ್ಯರಲ್ಲಿ ನಂಬಿಕೆ ಇಡಬೇಕು ಎಂದು ಹೇಳುತ್ತಾರೆ. ಸುಧಾಮೂರ್ತಿ ಅವರು ಮುಖ್ಯಮಂತ್ರಿ ಕುಮಾರಸ್ವಾಮಿಗೆ ಧನ್ಯವಾದ ಹೇಳುವ ಅವರು ನಂತರದಲ್ಲಿ ಹೇಳುತ್ತಾರೆ ಕಾರವಾರ ಜಿಲ್ಲೆಯ ಮೇಧಿನಿ ಎಂಬ ಗ್ರಾಮದ ಜನರು ಎಂಟು ಕಿ.ಮೀ. ನಡೆದು ಬರುತ್ತಾರೆ ದಾರಿ ಸರಿಯಾಗಿ ಇಲ್ಲದೆ. ಲಕ್ಷ್ಮೀಶನ ತಾಯಿ ಲಕ್ಷ್ಮೀಶನಿಗೆ ಅಧಿಕಾರ ಇರುವಾಗ, ಹಣ ಬಂದಾಗ , ಕೆರೆ ಕಟ್ಟಿಸು ದೇವಾಲಯ ಕಟ್ಟಿಸು ಎಂದೆಲ್ಲ ಹೇಳುತ್ತಾಳಂತೆ. ಸುಧಾಮೂರ್ತಿ ಅವರ ಅಜ್ಜ ಹೇಳಿದ್ದರಂತೆ ಲಕ್ಷ್ಮೀಶನ ವಚನ ಪಾಲಿಸು ಮಗಳೆ ಎಂದು. ಅದಕ್ಕಾಗಿಯೇ ಸುಧಾಮೂರ್ತಿ ಆ ವಚನಗಳಲ್ಲಿ ಇರುವ ಎಲ್ಲಾ ಕೆಲಸಗಳನ್ನು ಮಾಡಿದ್ದಾರೆ‌. ಅದರಲ್ಲಿ ಉಳಿದಿರುವುದು ದಾರಿ ಮಾಡುವುದು ಒಂದೆ ಅದನ್ನು ಮಾಡಲು ಅವಕಾಶ ನೀಡಿ ಪತ್ರವ್ಯವಹಾರ ಮುಗಿಸಿ ಕೊಡಿ ಎಂದು ಕುಮಾರಸ್ವಾಮಿ ಅವರಲ್ಲಿ ಕೇಳುತ್ತಾರೆ.

ಇಲ್ಲಿಯವರೆಗೂ ಮಾಡಿರುವು ಒಬ್ಬಳೆ ಅಲ್ಲ ನಮ್ಮ ಆಫೀಸ್ ನಲ್ಲಿ ಏಳು ಜನರು ಕೆಲಸ ಮಾಡುತ್ತೆವೆ. ವರ್ಷಕ್ಕೆ ನಾಲ್ಕು ನೂರು ಕೋಟೆಗಳನ್ನು ಖರ್ಚು ಮಾಡುತ್ತೆವೆ ಎನ್ನುತ್ತಾರೆ ಸುಧಾಮೂರ್ತಿ. ಅವರೆಲ್ಲರ ಸಹಾಕಾರದಿಂದಲೆ ಎಲ್ಲ ಕೆಲಸಗಳು ಸುಸೂತ್ರವಾಗಿ ನಡೆಯುವಂತೆ ಆಗಿದೆ. ಯಾವ ಬಂಧು ಬಳಗದ ಆದೇಶಗಳಿಂದಲೂ ಕೆಲಸಕ್ಕೆ ನೇಮಕ ಮಾಡಿಕೊಳ್ಳಲು ಸಾದ್ಯವಿಲ್ಲ ನಮ್ಮಲ್ಲಿ ಎಂದು ಹೇಳುತ್ತಾರೆ. ಇವರೆಲ್ಲರಿಗೂ ಧನ್ಯವಾದ ಹೇಳಿದ ಸುಧಾಮೂರ್ತಿ ತಮ್ಮ ಕಾರಿನ ಚಾಲಕರಿಗೂ ಧನ್ಯವಾದ ಅರ್ಪಿಸುತ್ತಾರೆ. ಗಂಟೆಗಳ ಲೆಕ್ಕದಲ್ಲಿ ಪ್ರಯಾಣ ಮಾಡಿದರೂ ಬೇಸರಿಸದೆ ಸರಿಯಾಗಿ ಗಮ್ಯ ತಲುಪಿಸುತ್ತಾರೆ. ಅದರೊಂದಿಗೆ ಬಾಡಿಗಾರ್ಡ್ ಗಳಿಗೂ ಧನ್ಯವಾದ ಅರ್ಪಿಸುತ್ತಾರೆ. ನಂತರ ಎಲ್ಲದಕ್ಕೂ ಮಿಗಿಲಾಗಿ ನಾರಾಯಣ ಮೂರ್ತಿಯಂತಹ ಪತಿ ಇರುವುದು ಪುಣ್ಯ ಎನ್ನುತ್ತಾರೆ. ಯಾಕೆಂದರೆ ಕೆಲಸ ಮುಗಿಸಿ ನಾರಾಯಣ ಮೂರ್ತಿಯವರು ಮನೆಗೆ ಬಂದಾಗ ಸುಧಾಮೂರ್ತಿ ಅವರು ಮನೆಯಲ್ಲಿ ಇದ್ದ ಉದಾಹರಣೆಗಳು ಕಡಿಮೆ, ಯಾವುದೋ ಗ್ರಾಮದಲ್ಲಿ ಇಲ್ಲವೇ ಯಾವುದಾದರೂ ಬಿಕ್ಷುಕರ ಜೋತೆ ಮಾತನಾಡುತ್ತಾ ಇರುತ್ತಾರಂತೆ. ಒಂದು ದಿನವೂ ಮನೆ ನೋಡಿಕೊಳ್ಳುತ್ತಿಲ್ಲ ಎಂಬ ಆಕ್ಷೇಪ ನಾರಾಯಣ ಮೂರ್ತಿ ಅವರಿಂದ ಬಂದಿಲ್ಲ ಎನ್ನುತ್ತಾರೆ. ಪ್ರತಿಯೊಬ್ಬ ಹೆಂಡತಿಯ ಗೆಲುವಿನ ಎದುರು ಅರ್ಥೈಸಿಕೊಳ್ಳುವ ಗಂಡ ಇರುತ್ತಾನೆ ಎನ್ನುತ್ತಾರೆ. ಇನ್ಫೋಸಿಸ್ ಸಂಸ್ಥೆಯ ಕಟ್ಟುವುದರಿಂದ ಹಿಡಿದು ಎಲ್ಲ ಕೆಲಸಗಳಲ್ಲಿಯೂ ಅವರು ನನ್ನೊಂದಿಗೆ ಕೆಲಸ ಮಾಡುತ್ತಾರೆ. ಉತ್ಸಾಹದಿಂದ ಭಾಗವಹಿಸುತ್ತಾರೆ ಎನ್ನುತ್ತಾರೆ. ಮತ್ತೊಬ್ಬರು ಎಂದರೆ ಡಾಕ್ಟರ್. ಸುನಂದಾ ಕುಲಕರ್ಣಿ ಮೆಡಿಕಲ್ ಗೆ ಸಂಭಂಧಿಸಿದ ಎಲ್ಲಾ ಸಲಹೆಗಳು ಅವರಿಂದ ಸಿಗುತ್ತದೆ ಎಂದು ನೆನಪಿಸಿಕೊಂಡರು.

Leave A Reply

Your email address will not be published.