ದಿಢೀರ್ ಅಂತ ಆರಂಭವಾದ ಕೋರೋನ ಕಾಟದಿಂದಾಗಿ ಈ ವರ್ಷ ಮುಂದುವರೆದು ಮುಂದುವರೆದು ಬಂದ ಐಪಿಎಲ್ ಕೊನೆಗೂ ಈಗ ಆರಂಭಗೊಂಡಿದೆ. ಇದೇ ಸೆಪ್ಟೆಂಬರ್ ಹತ್ತೊಂಬತ್ತರಿಂದ ಆರಂಭಗೊಂಡ ಈ ವರ್ಷದ ಐಪಿಎಲ್ ಮೊದಲನೇ ಆಟ ದುಬೈನಲ್ಲಿ ನಡೆಯುತ್ತಿದ್ದು, ಇದ್ದಾಗಲೇ ಇದರ ಸಲುವಾಗಿ ಎಲ್ಲಾ ತಂಡದ ಆಟಗಾರರೂ ಕೂಡಾ ದುಬೈಗೆ ತೆರಳಿದ್ದಾರೆ ಹಾಗೂ ಐಷಾರಾಮಿ ಹೋಟೆಲಿನಲ್ಲಿ ವಾಸ್ತವ ಹೂಡಿದ್ದಾರೆ. ಕರ್ನಾಟಕ ತಂಡವಾಗೀ ಗುರುತಿಸಿಕೊಂಡಿರುವ RCB ತಂಡದ ಆಟಗಾರರೂ ಕೂಡಾ ದುಬೈನ ಐಷಾರಾಮಿ ಹೋಟೆಲ್ ಆದ ವೆಲ್ಟಾರ್ ಹೋಟೆಲ್ ನಲ್ಲಿ ವಾಸ್ತವ ಹೂಡಿದ್ದು, ಇವರಿಗಾಗಿಯೆ ಎಂದೇ ಹೋಟೆಲಿನ ಒಂದು ಬ್ಲಾಕ್ ಸಂಪೂರ್ಣವಾಗಿ ಬುಕ್ ಮಾಡಲಾಗಿದೆ. ಒಟ್ಟಾರೆಯಾಗಿ ೧೫೫ ರುಮ್ಗಳನ್ನು RCB ತಂಡಕ್ಕಾಗಿ ಎಂದೇ ಬುಕ್ ಮಾಡಲಾಗಿದೆ. ಇನ್ನು ಇವುಗಳ ನಡುವೆ ಈ ವರ್ಷದ RCB ತಂಡದಲ್ಲಿ ಯಾವೆಲ್ಲ ಆಟಗಾರರು ಇದ್ದಾರೆ ಅಂತ ನೋಡುವುದಾರೆ… ಮೊದಲಿಗೆ ಬ್ಯಾಟ್ಸ್ಮನ್ ವಿಭಾಗದಲ್ಲಿ ಯಾವೆಲ್ಲ ಆಟಗಾರರೂ ಇದ್ದಾರೆ ಅಂತಾ ನೋಡೋಣ.

ಈ ವರ್ಷದ ಐಪಿಎಲ್ 2020 ರ RCB ವಿಭಾಗದಲ್ಲಿ ಬ್ಯಾಟ್ಸ್ಮನ್ ವಿಭಾಗದಲ್ಲಿ ಸ್ಥಾನ ಪಡೆದ ಆಟಗಾರರು ಯಾರು ಇರಬಹುದು ಎಂದು ತಿಳಿಯುವ ಕುತೂಹಲ ಎಲ್ಲರಿಗೂ ಇದ್ದೆ ಇರುತ್ತದೆ. ಹಾಗಾಗಿ ಯಾವೆಲ್ಲ ಆಟಗಾರರು ಇದ್ದಾರೆ ಎನ್ನುವುದನ್ನು ತಿಳಿದುಕೊಳ್ಳೋಣ. ವಿರಾಟ್ ಕೋಹ್ಲಿ, ದೇವದತ್ತ ಪಡಿಕಲ್, AB ಡೇವಿಲರ್ಸ್ , ಗುರುಕಿರ್ತ ಸಿಂಗ್ಮನ್ , ಆರನ್ ಪಿಂಚ್ , ಪವನ್ ದೇಶಪಾಂಡೆ ಇವರೆಲ್ಲ ಬ್ಯಾಟ್ಸ್ಮನ್ ವಿಭಾಗದಲ್ಲಿ ಸ್ಥಾನ ಪಡೆದ ಆಟಗಾರರು ಆಗಿದ್ದಾರೆ. ಇನ್ನು ಇವರ ಹಾಗೆಯೇ ವಿಕೆಟ್ ಕೀಪರ್ ವಿಭಾಗದಲ್ಲಿ ಸ್ಥಾನ ಪಡೆದ ಆಟಗಾರರು ಯಾರು ಅಂತ ನೋಡುವುದಾದರೆ , ಪಾರ್ಥಿವ್ ಪಟೇಲ್ ಹಾಗೂ ಜೋಶ್ ಪಿಲಿಪ್ . ಆಲ್ರೌಂಡರ್ ವಿಭಾಗದಲ್ಲಿ ಕ್ರಿಸ್ ಮೂರೇಸ್, ಮೋಯನ್ ಆಲಿ, ವಾಷಿಂಗ್ಟನ್ ಸುಂದರ್, ಶಿವಂ ದುಪೇ ಇವರೆಲ್ಲ ಆಲ್ರೌಂಡರ್ ವಿಭಾಗದಲ್ಲಿ ಆಯ್ಕೆ ಆಗಿರುವ ಆಟಗಾರರಾಗಿದ್ದಾರೆ. ಇನ್ನು ಬೌಲಿಂಗ್ ವಿಭಾಗದಲ್ಲಿ RCB ತಂಡದಲ್ಲಿ ಸ್ಥಾನ ಪಡೆದ ಆಟಗಾರರು ಯಾರು ಅಂತ ನೋಡುವುದಾದರೆ, ಯಜುವೆಂದ್ರ ಚಹಲ್, ಪವನ್ ಮೇಗಿ, ಶಭಾಜ್ ಅಹಮದ್, ಮೊಹಮ್ಮದ್ ಸಿರಾಜ್, ನೌದಿಪ್ ಸೈನಿ, ಉಮೇಶ್ ಯಾದವ್, ಆಡಮ್ ಜಂಪಾ, ಡೆಲ್ ಸ್ಟೆನ್ ಹಾಗೂ ಶ್ರೀಲಂಕಾದ ಆಟಗಾರ ಇಸ್ರು ಉದಾನ ಇವರೆಲ್ಲ RCB ತಂಡದ ಬೌಲಿಂಗ್ ವಿಭಾಗದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

ಆದರೆ ಇಲ್ಲಿ ಒಂದು ಬೇಜಾರಿನ ಸಂಗತಿ ಎಂದರೆ ಕರ್ನಾಟಕದ RCB ತಂಡದಲ್ಲೀ ಕರ್ನಾಟಕದ ಬರೀ ಇಬ್ಬರೂ ಆಟಗಾರರು ಮಾತ್ರ ಇದ್ದಾರೆ . ಕರ್ನಾಟಕದ ಆಟಗಾರರಾದ ಪವನ್ ದೇಶಪಾಂಡೆ ಮತ್ತು ದೇವದತ್ತ ಪಡಿಕಲ್ ಈ ಇಬ್ಬರೇ ಆಟಗಾರರು ಮಾತ್ರ RCB ತಂಡದಲ್ಲಿ ಇದ್ದು, ತಮ್ಮ ಪ್ರದರ್ಶನ ತೋರಿಸಲಿದ್ದಾರೆ. ಏನ್ ಆದರೂ ಕೊನೆಗೆ ಈ ಬಾರಿ ಆದರೂ RCB ಗೆಲ್ಲುವುದೇ ಎನ್ನುವ ಕುತೂಹಲ ಎಲ್ಲರಲ್ಲಿಯೂ ಇದ್ದೆ ಇದೆ.

Leave a Reply

Your email address will not be published. Required fields are marked *