Ultimate magazine theme for WordPress.

ದೇವರಾಯನ ದುರ್ಗಾದಲ್ಲಿರುವ ಪ್ರೇಕ್ಷಣೀಯ ಸ್ಥಳ ಹಾಗೂ ಲಕ್ಷ್ಮಿ ನರಸಿಂಹ ದೇವಾಲಯದ ವಿಶೇಷತೆ

0 6

ದೇವರಾಯನ ದುರ್ಗ ಇದು ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯಲ್ಲಿದೆ. ದೇವರಾಯನ ದುರ್ಗ ಜಿಲ್ಲಾ ಕೇಂದ್ರ ತುಮಕೂರಿನಿಂದ ಕೇವಲ ೧೬km ದೂರದಲ್ಲಿದೆ ಹಾಗೂ ನಮ್ಮ ರಾಜ್ಯದ ರಾಜಧಾನಿ ಬೆಂಗಳೂರಿನಿಂದ ಸುಮಾರು ೭೪km ದೂರದಲ್ಲಿದೆ. ತುಮಕೂರಿನಿಂದ ಕೇವಲ ೧೦ km ಕ್ರಮಿಸಿದರೆ ದೇವರಾಯನ ದುರ್ಗ ಕಾಡು ಗೋಚರಿಸುತ್ತದೆ. ಈ ಜಾಗ ಒಂದು ದಿನದ ಪ್ರವಾಸಕ್ಕೆ ಅತ್ಯಂತ ಯೋಗ್ಯವಾದ ಸ್ಥಳ ಎನ್ನಬಹುದು. ಹತ್ತಿರದಲ್ಲಿ ದುರ್ಗದ ಹಳ್ಳಿ ಎಂಬ ಹಳ್ಳಿಯಲ್ಲಿ ಎಂಟನೇ ಶತಮಾನದ ಶಂಕರಾಚಾರ್ಯರು ಕಟ್ಟಿಸಿರುವ ಒಂದು ಸುಂದರ ದೇವಾಲಯವಿದೆ. ಹಾಗೇ ಇಲ್ಲಿ ಸಮೀಪದಲ್ಲಿ ನಾಯಕನ ಕೆರೆ ಎಂಬ ಸುಂದರ ಕೆರೆಯೂ ಕೂಡಾ ಇದೆ. ಇಲ್ಲಿನ ಬೆಟ್ಟದ ಮೇಲೆ ಯೋಗ ನರಸಿಂಹ ಮತ್ತು ಭೋಗ ನರಸಿಂಹ ಸ್ವಾಮಿ ದೇವಾಲಯಗಳೂ ಇವೆ. ಹಳೆಯ ಕೋಟೆಗಳು ಸೂರ್ಯಾಸ್ತ ನೋಡಲು ಸುಂದರವಾದ ಜಾಗಗಳು ಕೂಡಾ ಇದೆ.

ದೇವರಾಯನ ದುರ್ಗದಲ್ಲಿ ಇರುವ ನಾಮದ ಚಿಲುಮೆ ಒಂದು ಪ್ರೇಕ್ಷಣೀಯ ಸ್ಥಳವಾಗಿದೆ. ದೇವರಾಯನ ದುರ್ಗದಲ್ಲಿ ಇರುವ ಕಾಡಿನಲ್ಲಿ ಚಿರತೆ , ಕಾಡು ಹಂದಿ, ಜಿಂಕೆ, ಮುಳ್ಳು ಹಂದಿ ಮುಂತಾದ ಪ್ರಾಣಿಗಳು ಕಂಡು ಬರುತ್ತವೆ. ಆದರೆ ಇದು ಅಭಯಾರಣ್ಯ ಅಲ್ಲವಾಗಿರುವುದರಿಂದ ಕಾಣಲು ಸಿಗುವುದು ಅಪರೂಪ. ಇತ್ತೀಚಿನ ವರದಿಯ ಪ್ರಕಾರ, ದೇವರಾಯನ ದುರ್ಗದ ಕಾಡಿನಲ್ಲಿ ಹುಲಿ ಕೂಡಾ ಪ್ರತ್ಯಕ್ಷ ಆಗುತ್ತಾ ಇದೆಯಂತೆ. ದುರ್ಗದ ಮೇಲೆ ಸರ್ಕಾರದ ಪ್ರವಾಸೀ ಬಂಗಲೆಗಳೂ ಸಹ ಇವೆ. ಇಲ್ಲಿನ ಜಿಲ್ಲೆಯ ನಿಷ್ಟಂತು ಜಾಲದ ನಿಯಂತ್ರಣ ಕೇಂದ್ರವೂ ಸಹ ಇದೆ ಬೆಟ್ಟದಲ್ಲಿ ಇದೆ. ದೇವರಾಯನ ಬೆಟ್ಟದ ತಪ್ಪಲಿನಲ್ಲಿ ನಿಂತು ನೋಡಿದರೆ, ಸುಮಾರು ೨೫km ದೂರದಲ್ಲಿ ಇರುವ ಶಿವಗಂಗೆ ಬೆಟ್ಟವೂ ಕೂಡಾ ಕಣ್ಣಿಗೆ ಕಾಣಿಸುತ್ತದೆ. ಸುತ್ತಲೂ ಹತ್ತಾರು ಕೆರೆಗಳು ಸುತ್ತಲೂ ನೀರಿನಿಂದ ತುಂಬಿರುವುದು ಸಹ ಗೋಚರಿಸುತ್ತದೆ.

ಇದೆ ದೇವರಾಯನ ದುರ್ಗದ ಬೆಟ್ಟದಲ್ಲಿ ಸುವರ್ಣ ನದಿಯ ಉಗಮ ಸ್ಥಾನ ಇದೆ. ಇಲ್ಲಿಯ ಬಂಡೆಯ ಮೇಲೆ ಜಿನುಗುವ ನೀರು ಸುಮಾರು ಒಂದು ಕಿಲೋಮೀಟರ್ ಅಷ್ಟು ದೂರ ಸುರಂಗದಲ್ಲಿ ಸಾಗಿ ನಂತರ ಪೂರ್ವಾಭಿಮುಖವಾಗಿ ಹರಿದು ಸುವರ್ಣ ನದಿ ಆಗುತ್ತದೆ. ಇಲ್ಲಿ ನಡೆಯುವ ನರಸಿಂಹ ದೇವರ ಜಾತ್ರೆಯು ಬಹಳ ವಿಶೇಷ ಆಗಿದೆ. ಪ್ರತೀ ವರ್ಷವೂ ಇಲ್ಲಿ ನಡೆಯುವ ಈ ಜಾತ್ರೆಗೆ ಸಾವಿರಾರು ಜನರು ಸೇರುತ್ತಾರೆ. ಹಿಂದೆ ಶ್ರೀ ರಾಮನು ಸೀತೆಯ ಜೊತೆಗೆ ವನವಾಸಕ್ಕೆ ಬಂದಾಗ ತಿಲಕವನ್ನು ಇಡಲು ನೀರಿಗಾಗಿ ಹುಡುಕಾಡಿದ. ಎಲ್ಲೂ ನೀರು ಸಿಗಲಿಲ್ಲ ಆದ ಕಾರಣ ಬಂಡೆಗೆ ಬಾಣವನ್ನು ಹೊಡೆದ. ಆಗ ಆ ಬಂಡೆಯಿಂದ ನೀರು ಹೊರಗೆ ಚಿಮ್ಮಿತ್ತು. ಆ ನೀರನ್ನು ರಾಮ ತಿಲಕ ಹಚ್ಚಿಕೊಳ್ಳಲು ಬಳಸಿದ್ದರಂತೆ. ಆಗಿನಿಂದ ಆ ಚಿಲುಮೆಯನ್ನು ನಾಮ ಚಿಲುಮೆ ಎಂದು ಕರೆಯುತ್ತಾರೆ. ಈ ನಾಮದ ಚಿಲುಮೆಯ ಹತ್ತಿರವೇ ವಿಶಾಲವಾದ ಜಿಂಕೆಯ ವನವೂ ಇದೆ. ಆನೆ, ಕಾಡು ಎಮ್ಮೆ, ಕಾಡು ಕೋಳಿ ಹಾಗೂ ವಿಶಿಷ್ಟ ಕಾಡು ಕೋತಿಗಳನ್ನು ನೀವು ಅಲ್ಲಿ ಕಾಣಬಹುದು.

ದುರ್ಗದಲ್ಲಿ ಕಾಣುವ ಪ್ರಾಣಿಗಳನ್ನು ನೋಡಲು ದಿನಕ್ಕೆ ಸಾವಿರಾರು ಪ್ರವಾಸಿಗರು ವನ್ಯ ಜೀವೀ ಪ್ರೇಮಿಗಳೂ ಸಹ ಭೇಟಿ ನೀಡುತ್ತಾ ಇರುತ್ತಾರೆ. ಈ ಬೆಟ್ಟದ ಎತ್ತರದಲ್ಲಿ ಭೋಗ ನರಸಿಂಹ, ಯೋಗ ನರಸಿಂಹ ಮತ್ತು ಲಕ್ಷ್ಮಿ ನರಸಿಂಹ ಎಂಬ ಮೂರು ದೇವಾಲಯಗಳೂ ಇವೆ. ಭೋಗ ನರಸಿಂಹ ದೇವಾಲಯವು ಬೆಟ್ಟದ ಬುಡದಲ್ಲಿ ಇದೆ. ಯೋಗ ನರಸಿಂಹ ದೇವಾಲಯವು ಬೆಟ್ಟದ ತುದಿಯಲ್ಲಿ ಇದೆ ಹಾಗೂ ಲಕ್ಷ್ಮಿ ನರಸಿಂಹ ದೇವಾಲಯವು ಬೆಟ್ಟದ ಮೊದಲ ಭಾಗದಲ್ಲಿ ಕಂಡು ಬರುತ್ತದೆ. ದೇವಾಲಯದ ಜೊತೆಗೆ ಮೂರು ಪವಿತ್ರ ಕೊಳಗಳೂ ಇವೆ. ಅಥವಾ ಕಲ್ಯಾಣಿಯಲ್ಲಿ ನರಸಿಂಹ ತೀರ್ಥ, ಪರಸಾರ ತೀರ್ಥ ಮತ್ತು ಪದಾ ತೀರ್ಥ ಎಂದೂ ಕರೆಯಲಾಗುತ್ತದೆ.

ಇಲ್ಲಿನ ಇನ್ನೊಂದು ಪ್ರಮುಖ ದೇವಾಲಯ ಎಂದರೆ, ಇದನ್ನ ಲಕ್ಷ್ಮಿ ನರಸಿಂಹ ಸ್ವಾಮಿ ದೇವಾಲಯಕ್ಕೂ ಹಳೆಯದು ಎನ್ನುತ್ತಾರೆ. ಈ ದೇವಾಲಯವನ್ನು ಆಂಜನೇಯ ಸ್ವಾಮಿ ಗೆ ಸಮರ್ಪಿಸಲಾಗಿದೆ. ಈ ದೇವಾಲಯವನ್ನು ಸಂಜೀವರಾಯ ಎಂದೂ ಸಹ ಕರೆಯಲಾಗುತ್ತದೆ. ಬೆಟ್ಟದ ಮೇಲೆ ಯಾತ್ರಿಕರಿಗೆ ತಂಗಲು ಯಾತ್ರೀ ನಿವಾಸವೂ ಕೂಡಾ ಇದೆ. ಜೊತೆಗೆ ಸರ್ಕಾರಿ ಅತಿಥಿ ಗೃಹಗಳೂ ಸಹ ಇದೆ. ದೇವಸ್ಥಾನಗಳು ನೆಲೆಗೊಂಡಿರುವ ಬೆಟ್ಟದ ಸುತ್ತಲೂ ಗಿರಿ ಪ್ರದಕ್ಷಿಣೆ ಕಾರ್ಯಕ್ರಮವನ್ನು ಏರ್ಪಡಿಸುವ ಮೂಲಕ ಕ್ಷೇತ್ರದ ಭಕ್ತರು ಬೆಟ್ಟಗಳನ್ನು ಎಲ್ಲಾ ಒಂದು ಸುತ್ತು ಹಾಕಿ ದೇವರಿಗೆ ತಮ್ಮ ಭಕ್ತಿಯನ್ನು ಸಮರ್ಪಿಸುವುದು ಸರ್ವೇ ಸಾಮಾನ್ಯ. ಒಂದುವೇಳೆ ತುಮಕೂರು ಅಥವಾ ಬೆಂಗಳೂರಿಗೆ ಭೇಟಿ ನೀಡಿದರೆ, ದೇವರಾಯನ ದುರ್ಗಕ್ಕೇ ಭೇಟಿ ಮರೆಯಬಾರದು.

Leave A Reply

Your email address will not be published.