ಕಾರ್ಮಿಕ ಕಾರ್ಡ್ ಗೆ ಹೇಗೆ ಅರ್ಜಿ ಸಲ್ಲಿಸಬೇಕು? ಅರ್ಜಿ ಸಲ್ಲಿಕೆ ಏನೆಲ್ಲಾ ಡಾಕ್ಯುಮೆಂಟ್ಸ್ ಬೇಕು? ಇದರಿಂದ ಆಗುವ ಪ್ರಯೋಜನಗಳು ಹಾಗೂ ಸಿಗುವ ಸೌಲಭ್ಯಗಳು ಏನೂ? ಅಥವಾ ಈಗಾಗಲೇ ಕಾರ್ಮಿಕರ ಕಾರ್ಡ್ ಹೊಂದಿದ್ದೂ ಅದನ್ನ ಕಳೆದುಕೊಂಡಿದ್ದಾರೆ ಮತ್ತೆ ಹಿಂತಿರುಗಿ ಪಡೆಯುವುದು ಹೇಗೆ ಅನ್ನೋದರ ಬಗ್ಗೆ ಮಾಹಿತಿ ಇಲ್ಲಿದೆ.

ಮೊದಲಿಗೆ ಕಾರ್ಮಿಕ ಕಾರ್ಡ್ ನಿಂದ ಸಿಗುವ ಸೌಲಭ್ಯಗಳ ಬಗ್ಗೆ ತಿಳಿದುಕೊಳ್ಳೋಣ. ಕಾರ್ಮಿಕ ಕಾರ್ಡ್ ಪಡೆದುಕೊಂದಂತಹ ಫಲಾನುಭವಿಗಳಿಗೆ ಪ್ರತೀ ತಿಂಗಳೂ ಪಿಂಚಣಿ ರೂಪದಲ್ಲಿ ಒಂದು ಸಾವಿರ ರೂಪಾಯಿ ಧನ ಸಹಾಯ ಸಿಗುತ್ತದೆ. ಕಾರ್ಮಿಕ ಗೃಹ ಯೋಜನೆಯ ಅಡಿಯಲ್ಲಿ ಕಾರ್ಮಿಕರು ಮನೆಯನ್ನು ನಿರ್ಮಿಸಿಕೊಳ್ಳಲು ಎರಡು ಲಕ್ಷದವರೆಗೆ ಮುಂಗಡ ಸಾಲವನ್ನು ಪಡೆಯಬಹುದು. ಹೆರಿಗೆ ಸಮಯದಲ್ಲಿ ಹೆಣ್ಣು ಮಗು ಜನಿಸಿದರೆ ೩೦ ಸಾವಿರ ರೂಪಾಯಿ ಹಾಗೂ ಗಂಡು ಮಗು ಜನಿಸಿದರೆ ೨೦ ಸಾವಿರ ರೂಪಾಯಿಗಳ ವರೆಗೆ ಧನ ಸಹಾಯ ಸಿಗುತ್ತದೆ. ಕಾರ್ಮಿಕರು ಕಾರ್ಯ ನಿರ್ವಹಿಸುತ್ತಾ ಇರುವಾಗ ಮರಣ ಹೊಂದಿದರೇ, ೫ ಲಕ್ಷ ರೂಪಾಯಿಗಳ ವರೆಗೆ ಉಚಿತವಾಗಿ ನೀಡಲಾಗುವುದು. ಮತ್ತು ಕೆಲಸ ನಿರ್ವಹಿಸುವ ವೇಳೆ ಶಾಶ್ವತವಾಗಿ ಅಂಗವಿಕಲರು ಆದಲ್ಲಿ ಎರಡು ಲಕ್ಷದವರೆಗೆ ಸಹಾಯ ಧನವನ್ನು ನೀಡಲಾಗುತ್ತದೆ. ಅಥವಾ ಭಾಗಶಃ ಶಾಶ್ವತ ದುರ್ಬಲತೆಗೆ ಒಂದು ಲಕ್ಷ ಧನ ಸಹಾಯವನ್ನೂ ನೀಡಲಾಗುವುದು. ಕಾರ್ಮಿಕರ ಮದುವೆ ಅಥವಾ ಅವರ ಮಕ್ಕಳ ಮದುವೆಗೆ ೫೦ ಸಾವಿರ ರೂಪಾಯಿ ನಗದನ್ನು ನೀಡಲಾಗುವುದು. ಕಾರ್ಮಿಕ ಕಾರ್ಡ್ ಹೊಂದಿದ್ದರೆ KSRTC ಮತ್ತು BMTC ಬಸ್ಸು ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಇರತ್ತೆ. ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ವಿದ್ಯಾರ್ಥಿ ವೇತನವನ್ನು ನೀಡಲಾಗುವುದು. ಅಂದರೆ, ಒಂದನೇ ತರಗತಿಯಿಂದ ಹಿಡಿದು, ಸ್ನಾತಕೋತ್ತರ ಪದವಿಯವರೆಗೂ ವಿಧ್ಯಾಭ್ಯಾಸ ಮಾಡುವ ವಿಧ್ಯಾರ್ಥಿಗಳಿಗೆ ೨ ಸಾವಿರದಿಂದ ೨೦ ಸಾವಿರದವರೆಗೆ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ.

ಪ್ರತಿಭಾವಂತ ಮಕ್ಕಳಿಗಾಗಿ ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇಕಡಾ ೭೫ ಅಂಕ ಪಡೆದವರಿಗೆ ೫ ಸಾವಿರ ರೂಪಾಯಿ ಅಷ್ಟು ಧನ ಸಹಾಯ ನೀಡಲಾಗುತ್ತದೆ. ಇನ್ನೂ ದ್ವೀತಿಯ ಪಿಯುಸಿ ವಿದ್ಯಾರ್ಥಿಗಳಿಗೆ ಶೇಕಡಾ ೭೫ ರಷ್ಟು ಅಂಕ ಪಡೆದವರಿಗೆ ೭ ಸಾವಿರ ರೂಪಾಯಿಗಳ ವರೆಗೆ ಸಹಾಯ ಧನವನ್ನು ನೀಡಲಾಗುತ್ತದೆ. ಪದವಿ ಕೋರ್ಸ್ ಮಾಡುವ ವಿದ್ಯಾರ್ಥಿಗಳಿಗೆ ಶೇಕಡಾ ೭೫ ರಷ್ಟು ಅಂಕ ಪಡೆದರೆ ಅವರಿಗೆ ೧೦ ಸಾವಿರ ರೂಪಾಯಿಗಳ ವರೆಗೂ ಧನ ಸಹಾಯ ಮಾಡಲಾಗುತ್ತದೆ. ಸ್ನಾತಕೋತ್ತರ ಪದವಿ ಮಾಡುವ ವಿದ್ಯಾರ್ಥಿಗಳಿಗೆ ಶೇಕಡಾ ೭೫ ರಷ್ಟು ಅಂಕ ಪಡೆದವರಿಗೆ ರೂಪಾಯಿ ೧೫ ಸಾವಿರದ ವರೆಗೂ ಸಹಾಯ ದನ ಸಿಗುತ್ತದೆ . ಹೀಗೆ ಈ ಎಲ್ಲಾ ಸೌಲಭ್ಯಗಳು ಸಹ ಕಾರ್ಮಿಕರ ಕಾರ್ಡ್ ಹೊಂದಿದವರಿಗೆ ಹಾಗೂ ಅವರ ಕುಟುಂಬದ ಸದಸ್ಯರಿಗೆ ದೊರೆಯುತ್ತದೆ.

ಕಾರ್ಮಿಕರ ಕಾರ್ಡ್ ಅನ್ನು ಪಡೆಯಲ್ಲು ಅರ್ಜಿ ಸಲ್ಲಿಸಬೇಕು ಅಂದರೆ, ನಿಮ್ಮ ಜಿಲ್ಲೆ ಅಥವಾ ತಾಲೂಕಿನಲ್ಲಿ ಇರುವಂತಹ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಕಚೇರಿಗೆ ಖುದ್ದಾಗಿ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಅಥವಾ ನಿಮ್ಮ ಹತ್ತಿರದ ಸಾಮಾನ್ಯ ಸೇವಾ ಕೇಂದ್ರ ಅಂದರೆ CSC ಕೇಂದ್ರದಲ್ಲಿ ಭೇಟಿ ನೀಡಿ ಸರಿಯಾದ ದಾಖಲಾತಿಗಳನ್ನು ಸಲ್ಲಿಸಿ ಅರ್ಜಿ ಸಲ್ಲಿಸಬಹುದು.

ಹಾಗಿದ್ರೆ ಅರ್ಜಿ ಸಲ್ಲಿಕೆ ಏನೆಲ್ಲಾ ದಾಖಲೆಗಳು ಬೇಕಾಗಬಹುದು? ನೋಡೋಣ ಬನ್ನಿ .
ಚಾಲ್ತಿಯಲ್ಲಿ ಇರುವ ನಿಮ್ಮ ಮೊಬೈಲ್ ನಂಬರ್ ಗೆ ಲಿಂಕ್ ಆಗಿರುವ ಆಧಾರ ಕಾರ್ಡ್, ರೇಶನ್ ಕಾರ್ಡ್, ವೋಟರ್ ಐಡಿ, ಬ್ಯಾಂಕ್ ಪಾಸ್ ಬುಕ್, ಇತ್ತೀಚಿನ ನಿಮ್ಮ ( ಅರ್ಜಿ ಸಲ್ಲಿಸುವವರ) ಒಂದು ಫೋಟೋ ಹಾಗೂ ಗುತ್ತಿಗೆ ದಾರರು ಅಥವಾ ಗಾರೆ ಕೆಲಸ ಮಾಡುವ ಮೆಸ್ತ್ರಿಗಳಿಂದ ಪಡೆದ ಅರ್ಜಿ ನಮೂನೆಯನ್ನು ಸಲ್ಲಿಸಬೇಕು.ಇಷ್ಟು ದಾಖಲಾತಿಗಳು ಇದ್ದರೆ ಸುಲಭವಾಗಿ ಅರ್ಜಿಯನ್ನು ಸಲ್ಲಿಸಬೇಕು.

ಇನ್ನೊಂದು ತುಂಬಾ ಮುಖ್ಯವಾದ ಅಂಶವೆಂದರೆ ಕಾರ್ಮಿಕರು ಈಗಾಗಲೇ ಕಾರ್ಮಿಕ ಕಾರ್ಡ್ ಅನ್ನು ಹೊಂದಿದ್ದರೆ ಆದರೆ ಅವರ ಗುರುತಿನ ಚೀಟಿಯನ್ನು ಕಳೆದುಕೊಂಡಿದ್ದರೆ ನಕಲು ಗುರುತಿನ ಚೀಟಿಯನ್ನೂ ಪಡೆಯಲು ಅರ್ಜಿ ಸಲ್ಲಿಸಲು ೫F ಫಾರಂ ಅನ್ನು ತುಂಬಿ ಅಗತ್ಯ ದಾಖಲಾತಿಗಳನ್ನು ನೀಡಿ ಜೊತೆಗೆ ೫೦ ರೂಪಾಯಿ ಪಾವತಿಸಿ ನೋಂದಣಾಧಿಕಾರಿ ಗಳ ಕಚೇರಿಗೆ ಅರ್ಜಿ ಸಲ್ಲಿಸಿ ಪುನಃ ನಕಲು ಕಾರ್ಡ್ ಅನ್ನು ಪಡೆಯಬಹುದು. ಕಾರ್ಮಿಕ ಕಾರ್ಡ್ ಮಾಡಿಸಿಕೊಂಡು ಆದಷ್ಟು ಉಪಯೋಗ ಪಡೆದುಕೊಳ್ಳಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!