ಕ್ಯಾಲ್ಶಿಯಂ ಹೆಚ್ಚಾಗಿ ಇರುವ ಪದಾರ್ಥಗಳು ಯಾವುದು ಮತ್ತೆ ಕ್ಯಾಲ್ಶಿಯಂ ಇಂದ ನಮ್ಮ ದೇಹಕ್ಕೆ ಏನೆಲ್ಲ ಪ್ರಯೋಜನಗಳು ಇರಬಹುದು ಅನ್ನೋದರ ಬಗ್ಗೆ ಈ ಲೇಖನದಲ್ಲಿ ವಿವರಿಸಲಾಗಿದೆ.

ಮೊದಲಿಗೆ ಕ್ಯಾಲ್ಶಿಯಂ ಅಂದ್ರೆ ಏನು ಅನ್ನೋದನ್ನ ನೋಡೋಣ. ಕ್ಯಾಲ್ಶಿಯಂ ಒಂದು ಖನಿಜಾoಶ ಆಗಿದೆ. ಒಂದು ರೀತಿಯ ಮಿನರಲ್ ಅಂತ ಹೇಳಬಹುದು ಇದು ನಮ್ಮ ದೇಹದ ಮೂಳೇಗಳಲ್ಲಿ ಮತ್ತು ಹಲ್ಲಿನಲ್ಲಿ ಹೆಚ್ಚಾಗಿರತ್ತೆ. ಹಲ್ಲಿನ ಆರೋಗ್ಯ ಮತ್ತು ಮೂಳೆಗಳನ್ನು ಆರೋಗ್ಯಕರವಾಗಿ ನೋಡಿಕೊಳ್ಳುವುದರಲ್ಲಿ ಕ್ಯಾಲ್ಶಿಯಂ ನ ಪಾತ್ರ ತುಂಬಾ ಮುಖ್ಯವಾದದ್ದು. ನಮ್ಮ ದೇಹದಲ್ಲಿ ಇರುವಂತಹ ಮೂಲೆಗಳಲ್ಲಿ ಸುಮಾರು 99% ಭಾಗ ಕ್ಯಾಲ್ಶಿಯಂ ಪ್ರಮಾಣ ಇದೆ. ನಮ್ಮ ದೇಹಕ್ಕೆ ಕ್ಯಾಲ್ಶಿಯಂ ನ ಅವಶ್ಯಕತೆ ಇರುವುದೇ ನಮ್ಮ ದೇಹದ ಮೂಳೆ ಮತ್ತು ಹಲ್ಲುಗಳನ್ನು ಕಾಪಾಡಲು ಹಾಗೂ ನರಕೋಶಗಳ ಆರೋಗ್ಯ ಕಾಪಾಡಲು. ಇಷ್ಟೇ ಅಲ್ಲದೇ ಕ್ಯಾಲ್ಶಿಯಂ ನಮಗೆ ರಕ್ತ ಹೆಪ್ಪುಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮಾನವನ ದೇಹಕ್ಕೆ ದಿನಕ್ಕೆ 1000 ಮಿಲಿ ಗ್ರಾಂ ಅಷ್ಟು ಕ್ಯಾಲ್ಶಿಯಂ ಅಗತ್ಯ ಇರತ್ತೆ. ಅದರಲ್ಲು 50 ವರ್ಷ ಮೇಲ್ಪಟ್ಟ ಮಹಿಳೆಯರಿಗೆ 1200 ಗ್ರಾಮ್ ಕ್ಯಾಲ್ಶಿಯಂ ಅಗತ್ಯ ಇರತ್ತೆ. ಒಂದು ವೇಳೆ ನಾವು ನಮ್ಮ ದೇಹಕ್ಕೆ ಸರಿಯಾದ ಕ್ಯಾಲ್ಶಿಯಂ ಅನ್ನು ಪೂರೈಕೆ ಮಾಡುತ್ತಾ ಇಲ್ಲ ಅಥವಾ ಅಂತಹ ಆಹಾರವನ್ನು ಸೇವಿಸುತ್ತಾ ಇಲ್ಲ ಎಂದಾದರೆ, ದೇಹ ಈಗಾಗಲೇ ನಮ್ಮ ಮೂಳೆಗಳಲ್ಲಿ ಇರುವ ಕ್ಯಾಲ್ಶಿಯಂ ಅನ್ನ ತಗೊಳೋಕೆ ಶುರು ಮಾಡತ್ತೆ. ಇದರಿಂದ ಮೂಳೆ ಸವೆತ ಶುರು ಆಗತ್ತೆ. ಇದನ್ನ ಆಸ್ಟಿಯೋ ಪೋರಸಿಸ್ ಖಾಯಿಲೆ ಅಂತ ಹೇಳ್ತಾರೆ. ಈ ಖಾಯಿಕೆ ಬರೋದೆ ನಮ್ಮ ದೇಹ ಅಥವಾ ಮೂಳೆಗಳಲ್ಲಿ ಕ್ಯಾಲ್ಶಿಯಂ ಕೊರತೆ ಇದ್ದಾಗ.

ನಮ್ಮ ದೇಹದಲ್ಲಿ ಕ್ಯಾಲ್ಶಿಯಂ ಪ್ರಮಾಣ ಕಡಿಮೆ ಆಗುತ್ತಾ ಬಂದರೆ ಏನೆಲ್ಲ ಆಗಬಹುದು ಅನ್ನೋದನ್ನ ನೋಡೋಣ.. ಕ್ಯಾಲ್ಶಿಯಂ ಪ್ರಮಾಣ ಕಡಿಮೆ ಇದ್ದರೆ ನಮ್ಮ ಉಗುರು ತುಂಬಾ ತೆಳು ಇರತ್ತೆ ಇದರಿಂದ ಉಗುರು ಬೇಗ ಮುರಿದುಹೋಗತ್ತೆ. ಡಿಪ್ರೆಷನ್ ಅಥವಾ ಖಿನ್ನತೆ ಅಂತಹ ಖಾಯಿಲೆಗಳು ಕಾಣಿಸಿಕೊಳ್ಳತ್ತೆ. ಕ್ಯಾಲ್ಶಿಯಂ ಕೊರತೆ ಇದ್ರೆ ಇದು ನಮ್ಮನ್ನ ಬೇಜಾರು ಆಗುವ ಪರಿಸ್ಥಿತಿ ಗೆ ತಲುಪಿಸತ್ತೆ ಹಾಗಾಗಿ ನಮ್ಮ ನರಮಂಡಲಕ್ಕೂ ಕೂಡಾ ಕ್ಯಾಲ್ಶಿಯಂ ಬೇಕೇ ಬೇಕು. ಗೊಂದಲ ಮತ್ತು ಮರೆವು ಇವೂ ಕೂಡಾ ಕ್ಯಾಲ್ಶಿಯಂ ನ ಕೊರತೆಯಿಂದ ಉಂಟಾಗತ್ತೆ. ನಮ್ಮ ದೇಹದಲ್ಲಿ ಕ್ಯಾಲ್ಶಿಯಂ ನ ಪ್ರಮಾಣ ಕಡಿಮೆ ಆದಂತೆ ನಮ್ಮ ದೇಹದ ಶಕ್ತಿಯೂ ಸಹ ಕುಂದುತ್ತದೆ. ಮುಳೆಗಳಲ್ಲಿ ಶಕ್ತಿ ಇರಲ್ಲ. ಈ ಎಲ್ಲ ಲಕ್ಷಣಗಳೂ ನಮಗೆ ನಮ್ಮ ದೇಹದಲ್ಲಿ ಕ್ಯಾಲ್ಶಿಯಂ ಪ್ರಮಾಣ ಕಡಿಮೆ ಇರುವುದನ್ನ ತೋರಿಸತ್ತೇ.

ದಿನಕ್ಕೆ ನಾವು 1000 ಮಿಲಿ ಗ್ರಾಮ್ ಅಷ್ಟು ಕ್ಯಾಲ್ಶಿಯಂ ಅನ್ನು ಸೇವನೆ ಮಾಡಬೇಕಾಗತ್ತೆ ಹಾಗಾಗಿ ಅಧಿಕ ಕ್ಯಾಲ್ಶಿಯಂ ಇರುವ ಆಹಾರವನ್ನ ಸೇವಿಸಬೇಕು. ಅಂದರೆ ನಮ್ಮ ದೇಹಕ್ಕೆ ಒಂದು ದಿನಕ್ಕೆ ಒಂದು ಗ್ರಾಂ ಅಷ್ಟು ಕ್ಯಾಲ್ಶಿಯಂ ಅಗತ್ಯ ಇರತ್ತೆ. ಹಾಗಾದ್ರೆ ಕ್ಯಾಲ್ಶಿಯಂ ಹೆಚ್ಚು ಇರುವ ಆಹಾರ ಪದಾರ್ಥಗಳನ್ನು ಯಾವುದು ಅನ್ನೋದನ್ನ ನೋಡೋಣ. ಹಾಲು, ಮೊಸರು, ಚೀಸ್, ಪನ್ನೀರ್ ಇವುಗಳಲ್ಲಿ ನಾನು ಅಧಿಕ ಕ್ಯಾಲ್ಶಿಯಂ ಪಡೆದುಕೊಳ್ಳಬಹುದು. ಹಣ್ಣುಗಳಲ್ಲಿ ಕಿತ್ತಳೆ ಹಣ್ಣಿನ ರಸದಲ್ಲಿ ಜಾಸ್ತಿ ಕ್ಯಾಲ್ಶಿಯಂ ಇರತ್ತೆ. ಕಿವಿ ಫ್ರೂಟ್ಸ್, ಖರ್ಜೂರ , ಮಲಬೇರಿ ಹಣ್ಣು ಹಾಗೂ ಡ್ರೈ ಫ್ರೂಟ್ಸ್ ಗಳಲ್ಲಿ ಸಹ ಅಧಿಮ ಕ್ಯಾಲ್ಶಿಯಂ ಅನ್ನು ಪಡೆದುಕೊಳ್ಳಬಹುದು. ಇನ್ನು ಬೇಳೆ ಕಾಲುಗಳಲ್ಲಿ ಸೋಯಾಬೀನ್, ಎಳ್ಳು, ಓಟ್ಸ್ ಇವುಗಳಲ್ಲಿ ಅಧಿಕ ಕ್ಯಾಲ್ಶಿಯಂ ಇರತ್ತೆ. ಇನ್ನು ಸೊಪ್ಪು ತರಕಾರಿಗಳಲ್ಲಿ ಪಾಲಕ್ ಸೊಪ್ಪು, ಬೆಂಡೆಕಾಯಿ, ಬೀನ್ಸ್, ಬೆಳ್ಳುಳ್ಳಿ ಇವುಗಳಲ್ಲಿಯೂ ಸಹ ಕ್ಯಾಲ್ಶಿಯಂ ಅಧಿಕವಾಗಿ ಇರತ್ತೆ.

ಇನ್ನು ಮಾಸಾಹಾರಗಳಲ್ಲಿ ಯಾವ ಯಾವ ಪದಾರ್ಥಗಳಲ್ಲಿ ಕ್ಯಾಲ್ಶಿಯಂ ಅಧಿಕವಾಗಿ ಇರತ್ತೆ ಅನ್ನೋದನ್ನ ನೋಡೋಣ. ಮೀನು ಮತ್ತು ಮೊಟ್ಟೆಯಲ್ಲಿ ಅದರಲ್ಲೂ ಸಾಲ್ಮೊನ ಎಂಬ ಮೀನಿನಲ್ಲಿ ಅಧಿಕ ಕ್ಯಾಲ್ಶಿಯಂ ಇರತ್ತೆ.

ಬೀಜಗಳಲ್ಲಿ ನೋಡುವುದಾದರೆ ಸೂರ್ಯ ಕಾಂತಿ ಬೀಜ ಹಾಗೂ ಕುಂಬಳ ಕಾಯಿ ಬೀಜಗಳಲ್ಲಿ ಅಧಿಕ ಪ್ರಮಾಣದಲ್ಲಿ ಕ್ಯಾಲ್ಶಿಯಂ ಇರತ್ತೆ. ಕ್ಯಾಲ್ಶಿಯಂ ಕೊರತೆ ಇದ್ದವರು ನಿಮ್ಮ ಆಹಾರಗಳಲ್ಲಿ ಈ ಎಲ್ಲಾ ಅಧಿಕ ಕ್ಯಾಲ್ಶಿಯಂ ಇರುವ ಆಹಾರಗಳನ್ನು ಬಳಸಿಕೊಳ್ಳಿ.

ಇನ್ನೊಂದು ಮುಖ್ಯವಾದ ಅಂಶ ಏನಪ್ಪಾ ಅಂದ್ರೆ. ಜಾಸ್ತಿ ಕ್ಯಾಲ್ಶಿಯಂ ಇದ್ರೂ ಕೂಡಾ ಅದರಿಂದಲೂ ಅಡ್ಡ ಪರಿಣಾಮಗಳು ಉಂಟಾಗತ್ತೆ. ಇದರಿಂದ ನಮ್ಮ ಕಿಡ್ನಿಯಲ್ಲಿ ಕಲ್ಲು ಆಗುವ ಸಾಧ್ಯತೆ ಇರುತ್ತದೆ. ಯಾರ ದೇಹದಲ್ಲಿ ಕ್ಯಾಲ್ಶಿಯಂ ಹೆಚ್ಚು ಇರತ್ತೋ ಅವರಿಗೆ ತುಂಬಾ ಬಾಯಾರಿಕೆ ಆಗುತ್ತಾ ಇರುತ್ತದೆ. ಹೆಚ್ಚಾಗಿ ಯೂರಿನ್ ಪಾಸ್ ಮಾಡುತ್ತ ಇರುತ್ತಾರೆ ಇವರಲ್ಲಿ ಹೊಟ್ಟೆ ನೋವು ಜಾಸ್ತಿ ಕಂಡುಬರತ್ತೆ. ಜೊತೆಗೆ ಜೀರ್ಣ ಶಕ್ತಿಯ ಸಮಸ್ಯೆ ಕೂಡ ಇರತ್ತೆ. ನಾವು ಕ್ಯಾಲ್ಶಿಯಂ ತಿನ್ನೋದು ನಮ್ಮ ಮೂಳೆಗಳಿಗೆ ಶಕ್ತಿ ಬರಲಿ ಅಂತ ಆದ್ರೆ ಅದೇ ಜಾಸ್ತಿ ಆದರೆ ನಮ್ಮ ಮೂಳೆಗಳು ಕ್ರಮೇಣವಾಗಿ ಶಕ್ತಿ ಕಳೆದುಕೊಳ್ಳುತ್ತವೆ. ಮಾಂಸ ಖಂಡಗಳಲ್ಲಿ ನಿಶ್ಯಕ್ತಿ ಉಂಟಾಗತ್ತೆ. ಆಯಾಸ ಆಗತ್ತೆ. ಇದರಿಂದ ಮಲಬದ್ಧತೆ ಸಮಸ್ಯೆ, ಅಧಿಕ ರಕ್ತದ ಒತ್ತಡ ಸಹ ಅಧಿಕ ಕ್ಯಾಲ್ಶಿಯಂ ಸೇವನೆಯಿಂದ ಉಂಟಾಗತ್ತೆ. ಹಾಗಾಗಿ ಜಾಸ್ತಿ ಕ್ಯಾಲ್ಶಿಯಂ ಇರಿವ ಆಹಾರಗಳನ್ನು ಸೇವಿಸಲೂ ಬಾರದು ದಿನಕ್ಕೆ ನಮಗೆ ಅಗತ್ಯ ಇರೋದು 1000 ಅಥವಾ 1200 ಮಿಲಿ ಗ್ರಾಮ್ ಕ್ಯಾಲ್ಶಿಯಂ ಆಗಿರತ್ತೆ. ಹಾಗಾಗಿ ಅಷ್ಟು ಮಾತ್ರ ನಮ್ಮ ದೇಹಕ್ಕೆ ಕ್ಯಾಲ್ಶಿಯಂ ಸಿಗುವಂತಹ ಆಹಾರಗಳನ್ನು ಮಾತ್ರ ಸೇವಿಸಬೇಕು.

ಆಹಾರ ವಿಜ್ಞಾನದ ಪ್ರಕಾರ ನಮ್ಮ ದೇಹದಲ್ಲಿ ಕ್ಯಾಲ್ಶಿಯಂ ಪ್ರಮಾಣ ಹೆಚ್ಚು ಆದರೆ ಅದು ನಮ್ಮ ದೇಹದಲ್ಲಿ ಜಿಂಕ್ ಮತ್ತು ಐರನ್ ಅಂತಹ ಮಿನರಲ್ಸ್ ಗಕನ್ನ ಹೀರಿಕೊಳ್ಳಲು ಬಿಡುವುದಿಲ್ಲ. ಜಿಂಕ್ ಮತ್ತು ಐರನ್ ನಮ್ಮ ದೇಹದಲ್ಲಿ ರಕ್ತ ಉಂಟಾಗಲು ಅಗತ್ಯ ಇರುವ ಅಂಶಗಳು. ಅಗತ್ಯಕ್ಕಿಂತ ಅಧಿಕ ಕ್ಯಾಲ್ಶಿಯಂ ಇದ್ದರೆ ಈ ಎರಡು ಖನಿಜ ಅಂಶಗಳನ್ನು ನಾಶ ಮಾಡತ್ತೇ ಇಲ್ಲ ಜೀರ್ಣ ಆಗೋಕೆ ಬಿಡಲ್ಲ. ಹಾಗಾಗಿ ಅಗತ್ಯಕ್ಕಿಂತ ಹೆಚ್ಚು ಕ್ಯಾಲ್ಶಿಯಂ ಸೇವನೆಯೂ ಬೇಡ ಎಷ್ಟು ಬೇಕೋ ಅಷ್ಟೇ ಸೇವಿಸಬೇಕು. ಅತಿ ಆದರೆ ಅಮೃತವೂ ವಿಷ ಅನ್ನೋ ಮಾತು ನಿಜ.

Leave a Reply

Your email address will not be published. Required fields are marked *

error: Content is protected !!