ಭಾರತೀಯ ಸೇನೆ ಮೇಲಿನ ಅಭಿಮಾನಕ್ಕೆ ಮಗಳಿಗೆ ಸೈನ್ಯ ಎಂದು ಹೆಸರಿಟ್ಟ ಮಂಗಳೂರು ದಂಪತಿ

0 1

ಮಂಗಳೂರಿನ ದಂಪತಿ ಒಬ್ಬರು ತಮ್ಮ ಮಗುವಿಗೆ ಸೈನ್ಯ ಎಂದು ಹೆಸರನ್ನು ಇಟ್ಟಿದ್ದು ಈ ಮಗುವಿನ ಹೆಸರು ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಹರಿದಾಡುತ್ತಿದೆ. ಯಾರು ಆ ದಂಪತಿಗಳು ? ಯಾವ ಕಾರಣಕ್ಕೆ ತಮ್ಮ ಮಗುವಿಗೆ ಸೈನ್ಯ ಎನ್ನುವ ಹೆಸರನ್ನು ಇಟ್ಟಿದ್ದಾರೆ ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಮನೆಯಲ್ಲಿ ಒಂದು ಮಗು ಹುಟ್ಟುತ್ತದೆ ಅಥವಾ ಮಗು ಹುಟ್ಟಿದೆ ಎಂದರೆ ತಂದೆ ತಾಯಿಗಳಿಗೆ ಆಗಲೀ ಅವರ ಕುಟುಂಬಕ್ಕೆ ಆಗಲೀ ಸಂತೋಷದ ವಿಷಯ ಅದು. ಹಾಗೆಯೇ ಅದರ ಜೊತೆಗೆ ಆ ಮಗುವಿಗೆ ಹೆಸರನ್ನು ಇಡೋದು!? ಅದಂತೂ ಈಗಿನ ಜನಕ್ಕೆ ಬಹಳ ಕಷ್ಟದ ಕೆಲಸವೇ ಸರಿ. ಹೆಸರು ಚೆನ್ನಾಗಿ ಇರಬೇಕು ಕರೆಯಲೂ ಸುಲಭವಾಗಿ ಹಾಗೂ ಫ್ಯಾಶನೆಬಲ್ ಆಗಿಯೂ ಇರಬೇಕು ಅಂತಹ ಹೆಸರನ್ನು ಹುಡುಕುತ್ತಾರೆ. ಆದರೆ ಮಂಗಳೂರಿನ ದಂಪತಿಯೊಬ್ಬರು ತಮ್ಮ ಮಗುವಿಗೆ ಯಾವುದೇ ಹೆಸರನ್ನು ಹುಡುಕುವ ಗೋಜಿಗೆ ಹೋಗದೇ ತಮ್ಮ ಹೆಣ್ಣು ಮಗುವಿಗೆ ‘ ಸೈನ್ಯ’ ಎಂದು ನಾಮಕರಣ ಮಾಡಿದ್ದಾರೆ. ಏನಿದು ಸೈನ್ಯ ಎನ್ನುವ ಹೆಸರು ಅಂತಾ ಆಶ್ಚರ್ಯ ಪಡ್ತೀರ? ಇಲ್ಲಿದೆ ಅದರ ಹಿಂದಿನ ಕಥೆ.

ಆಗುಂಬೆ ಬಳಿಯ ಗುಡ್ಡೇಕೇರಿ ಗ್ರಾಮದ ಸೈನಿಕ ಪ್ರಶಾಂತ್ ಜಿ ಎಸ್ ಹಾಗೂ ಅವರ ಪತ್ನಿ ಆಶಾ ಎಂಬವರು ತಮ್ಮ ಮಗುವಿಗೆ ಸೈನ್ಯ ಎನ್ನುವ ಹೆಸರನ್ನು ಇಟ್ಟ ದಂಪತಿಗಳು. ಪ್ರಶಾಂತ್ ಜಿ ಎಸ್ ಅವರು ತಮ್ಮ ಹತ್ತೊಂಬತ್ತನೇ ವಯಸ್ಸಿನಲ್ಲಿ ಆರ್ಮಿಗೆ ಸೇರಿಸಿಕೊಳ್ಳುತ್ತಾರೆ ಹಾಗೂ ಈಗ ಪ್ರಸ್ತುತ ಜಮ್ಮುವಿನಲ್ಲಿ ಕಾರ್ಯ ನಿರ್ವಹಿಸುತ್ತಾ ಇದ್ದಾರೆ. ಪ್ರಶಾಂತ್ ಜಿ ಎಸ್ ಅವರ ಪತ್ನಿ ಆಶಾ ಅವರು ಹೇಳುವಂತೆ ನಮಗೆ ಭಾರತೀಯ ಸೇನೆಯೆ ಎಲ್ಲವೂ ಆಗಿದೆ ಭಾರತೀಯ ಸೈನ್ಯ ಹಾಗೂ ಸೈನಿಕರ ಮೇಲೆ ಅಪಾರ ಗೌರವ ಇದೆ. ಹಾಗಾಗಿ ಇವರು ಮೊದಲೇ ನಿರ್ಧರಿಸಿದಂತೆ ಇವರಿಗೆ ಗಂಡು ಮಗು ಆದರೆ ಆ ಮಗುವಿಗೆ ಸೈನಿಕ ಎಂದೂ ಹಾಗೂ ಹೆಣ್ಣು ಮಗು ಆದರೆ ಸೈನ್ಯ ಎಂದೂ ಹೆಸರು ಇಡಬೇಕು ಎಂದುಕೊಂಡಿದ್ದರು. ಅದರ ಹಾಗೆಯೇ ತಮಗೆ ಹುಟ್ಟಿದ ಹೆಣ್ಣು ಮಗುವಿಗೆ ಸೈನ್ಯ ಎಂದು ನಾಮಕರಣ ಮಾಡಿದ್ದಾರೆ. ಹಾಗೆಯೇ ತಮ್ಮ ಮಗಳ ಹೆಸರನ್ನು ಸೈನ್ಯ ಎಂದು ಇಟ್ಟಿರುವ ಕಾರಣಕ್ಕೆ ಅವಳಲ್ಲಿ ಕೂಡಾ ದೇಶಭಕ್ತಿ ಬೆಳೆಯಲಿ ಮುಂದೆ ಅವಳೂ ಕೂಡಾ ನಮ್ಮ ದೇಶಕ್ಕೆ ಸೇವೆ ಮಾಡಲಿ ಸೈನ್ಯ ತಮಗೆ ದೇವರು ಕೊಟ್ಟ ಕೊಡುಗೆ ಎಂದು ಹೇಳುತ್ತಾರೆ.

ಸೈನ್ಯ ಎಂದು ಹೆಸರನ್ನು ಇಟ್ಟುಕೊಂಡ ಈ ಮಗು ಜನಿಸಿದ್ದು ಮೆ ೧೦ ರಂದು ದೆಹಲಿಯ ಆರ್ಮಿ ಆಸ್ಪತ್ರೆಯಲ್ಲಿ. ನಂತರ ಆಶಾ ಅವರ ತವರು ಮನೆಗೆ ಕರೆತಂದು ಅಲ್ಲಿಯೇ ಸರಳವಾಗಿ ಜೂನ್ ೨೬ ರಂದು ಸೈನ್ಯ ಎಂದು ನಾಮಕರಣವನ್ನು ಮಾಡುತ್ತಾರೆ. ನಾಮಕರಣ ಆಗಿ ಕೆಲವೇ ದಿನಗಳಲ್ಲಿ ಅಂದರೆ ಜುಲೈ ಒಂದಕ್ಕೆ ಪ್ರಶಾಂತ್ ಅವರು ಮತ್ತೆ ತಮ್ಮ ಕೆಲಸಕ್ಕೆ ಹಾಜರಾಗುತ್ತಾರೆ. ಕೆಲಸಕ್ಕೆ ಹಾಜರಾದ ಪ್ರಶಾಂತ್ ಅವರು ತಮ್ಮ ಕುಟುಂಬದ ಜೊತೆಗೆ ಮೂರು ನಾಲ್ಕು ದಿನಕ್ಕೆ ಒಮ್ಮೆ ಮಾತ್ರ ಮಾತನಾಡುತ್ತಾರೆ. ಆಶಾ ಅವರ ಸ್ನೇಹಿತರು ಒಬ್ಬರು ಆಶಾ ದಂಪತಿಗಳು ಅವರ ಮಗುವಿಗೆ ಸೈನ್ಯ ಎಂದು ನಾಮಕರಣ ಮಾಡಿರುವುದನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಅತ್ಯಂತ ಕಡಿಮೆ ಸಮಯದಲ್ಲಿ ಈ ಪೋಸ್ಟ್ ಅನ್ನು ಅತೀ ಹೆಚ್ಚು ಜನರು ನೋಡಿದ್ದು , ಸೈನ್ಯ ಎಂಬ ಹೆಸರು ಹಾಗೂ ಆ ಮಗು ಕೂಡಾ ಸಾಕಷ್ಟು ವೈರಲ್ ಆಗಿದ್ದು ಬಹಳ ಫೇಮಸ್ ಆಗುತ್ತಿದೆ.

ಏನೇ ಆಗಲಿ, ಇಂದಿನ ಕಾಲದಲ್ಲಿ ರಾಜಕಾರಣಿಗಳು. ಚಿತ್ರ ನಟರು ತಮ್ಮ ಮಕ್ಕಳು ರಾಜಕಾರಣಿಯೇ ಆಗಲೀ , ಚಿತ್ರ ನಟ ನಟಿಯರು ಆಗಲೀ ಎಂದು ಬಯಸುವವರ ನಡುವೆ ತಮ್ಮ ಮಗು ಬೆಳೆದು ದೊಡ್ಡವಳಾದ ಮೇಲೆ ತಂದೆಯ ಹಾಗೆಯೇ ಭಾರತೀಯ ಸೇನೆಗೆ ಸೇರಿ ದೇಶ ಸೇವೆ ಮಾಡಲಿ ಎಂದು ಬಯಸಿ ಮಗುವಿಗೆ ಸೈನ್ಯ ಎಂದು ಹೆಸರಿಟ್ಟ ಪ್ರಶಾಂತ್ ಹಾಗೂ ಆಶಾ ದಂಪತಿಗಳ ದೇಶ ಭಕ್ತಿಯನ್ನು ಮೆಚ್ಚಲೇಬೇಕು.

Leave A Reply

Your email address will not be published.