ಅಕ್ಟೋಬರ್ 2020ರಲ್ಲಿ ಮೀನ ರಾಶಿಯ ಭವಿಷ್ಯ ಹೇಗಿರುತ್ತದೆ, ಅವರಿಗೆ ಆಗುವ ಶುಭ ವಿಚಾರಗಳು ಯಾವುವು, ಎಚ್ಚರಿಕೆಯಿಂದ ಇರಬೇಕಾದ ವಿಷಯಗಳು ಯಾವುದು ಎಂಬುದನ್ನು ಈ ಲೇಖನದ ಮೂಲಕ ತಿಳಿಯೋಣ.

ಈ ತಿಂಗಳಿನಲ್ಲಿ ಲಾಭ ಸ್ಥಾನದಲ್ಲಿ ಶನಿ ಇದ್ದು ಲಾಭ ಬರುತ್ತದೆ. ಕೆಲವು ಅನಿರೀಕ್ಷಿತ ಅನುಕೂಲಗಳಾಗುತ್ತದೆ. ಅನುಭವಿಗಳ ಮಾರ್ಗದರ್ಶನವನ್ನು ಪಡೆದುಕೊಳ್ಳಿ ಸಹಾಯವಾಗುತ್ತದೆ. ವ್ಯಯ ಸ್ಥಾನದಲ್ಲಿಯೂ ಶನಿ ಇರುವುದರಿಂದ ಹಣ ಖರ್ಚಾಗುತ್ತದೆ. ಆದ್ದರಿಂದ ಶನಿ ದೇವರನ್ನು ಆರಾಧಿಸಿ. ಕರ್ಮ ಸ್ಥಾನದಲ್ಲಿ ಗುರು ಇರುವುದರಿಂದ ಉದ್ಯೋಗ ವಿಷಯದಲ್ಲಿ ಒಳ್ಳೆಯದಾಗುತ್ತದೆ. ಈ ತಿಂಗಳಿನಲ್ಲಿ ತೀರ್ಥ ಕ್ಷೇತ್ರಗಳ ದರ್ಶನ ಯೋಗವಿದೆ. ಗುರು ಅಷ್ಟೋತ್ತರ ಪಠಿಸಿದರೆ ಒಳ್ಳೆಯದಾಗುತ್ತದೆ. ದತ್ತಾತ್ರೇಯ, ರಾಘವೇಂದ್ರ ಸ್ವಾಮಿ ದೇವಸ್ಥಾನಗಳಿಗೆ ಹೋಗುವುದು ಉತ್ತಮ. ಈ ತಿಂಗಳಿನಲ್ಲಿ ಹಣ ಬರುತ್ತದೆ, ಸಹೋದರರಿಗೆ ಖರ್ಚು ಮಾಡಬೇಕಾಗಬಹುದು. ಹಿರಿಯರಿಂದ, ಬಂಧುಗಳಿಂದ ಅನುಕೂಲವಾಗುತ್ತದೆ. ಈ ತಿಂಗಳಿನಲ್ಲಿ ಭೂಮಿ ವಿಚಾರದಲ್ಲಿ ಒಳ್ಳೆಯದಾಗುತ್ತದೆ. ಈ ರಾಶಿಯವರು ಕೆಲವು ಜವಾಬ್ದಾರಿಗಳನ್ನು ಈ ತಿಂಗಳಿನಲ್ಲಿ ಪ್ರಯತ್ನಿಸಿದರೆ ಜವಾಬ್ಧಾರಿ ಮುಗಿಸಬಹುದು. ಈ ರಾಶಿಯವರು ನವಗ್ರಹ ಆರಾಧನೆ, ನವಗ್ರಹ ಸ್ತೋತ್ರ ಪಠಿಸುವುದರಿಂದ ಒಳ್ಳೆಯದಾಗುತ್ತದೆ, ನವಧಾನ್ಯಗಳನ್ನು ದಾನ ಮಾಡಿ. ಮೀನ ರಾಶಿಯಲ್ಲಿ ಕುಜ ಇರುವುದರಿಂದ ಸಿಟ್ಟು, ಹಠ ಜಾಸ್ತಿ ಬರುತ್ತದೆ. ಬರುವ ಅನುಕೂಲವು ಸಿಟ್ಟಿನಿಂದ ತಪ್ಪಿಹೋಗಬಹುದು ಆದ್ದರಿಂದ ತಾಳ್ಮೆಯಿಂದಿರಿ. ಸ್ನೇಹಿತರೊಂದಿಗೆ ಎಚ್ಚರಿಕೆಯಿಂದ ಮಾತನಾಡಿ. ಬಾಳಸಂಗಾತಿಯೊಂದಿಗೆ ಎಚ್ಚರಿಕೆಯಿಂದ ಮಾತನಾಡಿ ಮತ್ತು ಅವರ ಆರೋಗ್ಯ ಹಾಳಾಗದಂತೆ ನೋಡಿಕೊಳ್ಳಿ. ಈ ರಾಶಿಯವರು ಸಂಗೀತಗಾರರು ಕಲಾವಿದರಾಗಿದ್ದರೆ ನಿಮ್ಮ ಕೆಲಸ ಹಾಳಾಗದಂತೆ ನೋಡಿಕೊಳ್ಳಿ. ಈ ರಾಶಿಯ ಸ್ತ್ರೀಯರು ಕ್ರೀಮಗಳನ್ನು ಹಚ್ಚಿ ಮುಖ ಹಾಳು ಮಾಡಿಕೊಳ್ಳುವ ಸಂಭವವಿರುತ್ತದೆ ಆದ್ದರಿಂದ ಎಚ್ಚರದಿಂದಿರಿ.

ಈ ತಿಂಗಳಿನಲ್ಲಿ ದೂರ ಪ್ರಯಾಣದಲ್ಲಿ ಹಣ ಕಳೆದುಕೊಳ್ಳುವ ಸಾಧ್ಯತೆಗಳಿವೆ. ಬಿಳಿ ವಸ್ತ್ರದಲ್ಲಿ ಅವರೆ ಬೇಳೆಯನ್ನು ಶುಕ್ರವಾರ ದಾನಮಾಡುವುದರಿಂದ ಒಳ್ಳೆಯದಾಗುತ್ತದೆ. ದುರ್ಗಾಸ್ತೋತ್ರ, ಲಕ್ಷ್ಮಿಸ್ತೋತ್ರವನ್ನು ಪಠಿಸುವುದು ಒಳ್ಳೆಯದು. ಈ ರಾಶಿಯವರು ಅಕ್ಟೋಬರ್ ತಿಂಗಳಿನಲ್ಲಿ ಆರೋಗ್ಯ ವಿಷಯವಾಗಿ ಎಚ್ಚರದಿಂದಿರಬೇಕು ಹೃದಯ ಸಂಬಂಧಿ ಕಾಯಿಲೆ ಮೊದಲೇ ಇದ್ದರೆ ಅವರು ಎಚ್ಚರದಿಂದಿರಬೇಕು. ಈ ರಾಶಿಯವರು ಸರ್ಕಾರ ಅಥವಾ ಸರ್ಕಾರಿ ಅಧಿಕಾರಿಗಳನ್ನು ಎದುರು ಹಾಕಿಕೊಳ್ಳಬಾರದು. ಇವರಿಗೆ ಈ ತಿಂಗಳಿನಲ್ಲಿ ಚಂಚಲ ಸ್ವಭಾವ ಆಗುವ ಸಂಭವವಿದೆ. ಈ ತಿಂಗಳಿನಲ್ಲಿ ಯಾವುದೇ ಪ್ರಯಾಣ ಮಾಡಬೇಕಾದರೆ ನಿಮ್ಮ ಒಳಮನಸ್ಸು ಬೇಡವೆಂದು ಹೇಳಿದರೆ ಪ್ರಯಾಣವನ್ನು ಮಾಡಬೇಡಿ. ಈ ತಿಂಗಳಿನಲ್ಲಿ ತಂದೆ-ತಾಯಿಯ ಶಾಪಕ್ಕೆ ಗುರಿಯಾಗಬಹುದು, ತಂದೆ ತಾಯಿಗೆ ಬೇಜಾರ ಆಗದಂತೆ ನೋಡಿಕೊಳ್ಳಿ. ತಂದೆ ತಾಯಿ ಇಲ್ಲದವರು ಅವರ ಕಾರ್ಯವನ್ನು ಸರಿಯಾಗಿ ಮಾಡಿ.

Leave a Reply

Your email address will not be published. Required fields are marked *