ಕುಂಭ ರಾಶಿಯವರಿಗೆ ಅಕ್ಟೋಬರ್ ತಿಂಗಳು ಹೇಗಿರಲಿದೆ ನೋಡಿ

0 0

ಅಕ್ಟೋಬರ್ 2020 ರಲ್ಲಿ ಕುಂಭ ರಾಶಿಯ ಭವಿಷ್ಯ, ಅವರ ಹಣಕಾಸಿನ ವಿಚಾರ, ವಿದ್ಯಾರ್ಜನೆ ಮೊದಲಾದ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಅಕ್ಟೋಬರ್ ತಿಂಗಳಲ್ಲಿ ಕುಂಭ ರಾಶಿಗೆ ರಾಶ್ಯಾಧಿಕಾರಿ ಶನಿ ಮಹಾರಾಜ ವ್ಯಯ ಭಾವದಲ್ಲಿದ್ದು, ಶುಕ್ರನು ದೃಷ್ಟಿಸುತ್ತಿರುತ್ತಾನೆ. ಆರೋಗ್ಯ ವಿಷಯದಲ್ಲಿ ಸಂಕಷ್ಟ ಬಂದರೂ ಪಾರಾಗಲು ಅವಕಾಶವಿದೆ. ರವಿ ಮತ್ತು ಶನಿ ಮಹಾರಾಜ ಈ ತಿಂಗಳಿನಲ್ಲಿ ಅಶುಭವಾಗಿ ವರ್ತಿಸುತ್ತಾರೆ. ಶನಿ ಮಹಾರಾಜನನ್ನು ಆರಾಧಿಸುವುದು ಒಳ್ಳೆಯದು. ಈ ರಾಶಿಯ ವಯೋವೃದ್ಧರ ಕಾಲಿನಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಬಿಪಿ ಏರುಪೇರಾಗುವ ಸಂಭವವಿದೆ. ಹಣಕಾಸಿನ ಒತ್ತಡ, ಮುಗ್ಗಟ್ಟು ಸಂಭವಿಸಬಹುದು. ಮಾತನಾಡುವಾಗ ಎಚ್ಚರವಿರಲಿ ನಿಷ್ಠುರ ಆಗುವ ಸಂಭವವಿದೆ. ಸಾಂಸಾರಿಕ ಜೀವನದಲ್ಲಿ ಸಣ್ಣ ಪ್ರಮಾಣದ ಜಗಳ ಸಂಭವಿಸಬಹುದು. ಹಣ ಬರುವಂತೆ ವ್ಯಯವು ಅಷ್ಟೇ ಬರುತ್ತದೆ, ವ್ಯಯ ಭಾವದಲ್ಲಿ ಶನಿ ಇರುವುದೇ ಇದಕ್ಕೆ ಕಾರಣ, ಆದ್ದರಿಂದ ಶಂ ಶನಿಶ್ವರಾಯ ನಮಃ ಎಂದು ಬರೆಯಬೇಕು. ಒಡಹುಟ್ಟಿದವರು ಮೈತ್ರಿ, ವಿಶ್ವಾಸದಿಂದ ಇರುತ್ತಾರೆ, ಆದರೆ ಕಾನೂನು ಸಂಬಂಧಿಸಿದ ವಿವಾದವಿದ್ದರೆ ಸ್ವಲ್ಪ ಸಮಯ ಮುಂದೆ ಹಾಕುವುದು ಒಳ್ಳೆಯದು.

ಈ ರಾಶಿಯವರು ವಾಹನ ಓಡಿಸುವಾಗ ಎಚ್ಚರಿಕೆಯಿಂದ ಇರಬೇಕು. ತಾಯಿಯ ಆರೋಗ್ಯದಲ್ಲಿ ವ್ಯತ್ಯಯ ಆಗುವ ಸಂಭವವಿದೆ. ವಿದ್ಯಾರ್ಜನೆಯಲ್ಲಿ ಹೆಚ್ಚು ಶ್ರಮ ವಹಿಸಬೇಕು, ಇಲ್ಲದಿದ್ದರೆ ನಿರೀಕ್ಷಿಸಿದ ಫಲಿತಾಂಶ ಬರುವುದಿಲ್ಲ. ರಾಹು, ಕೇತು ಸ್ಥಿತರಾಗಿರುತ್ತಾರೆ ವಿದ್ಯಾರ್ಜನೆಗೆ ತೊಡಕಾಗುತ್ತದೆ. ಪ್ರಾಪರ್ಟಿ ಖರೀದಿ ಮಾಡುವವರಿದ್ದರೆ ತೊಂದರೆ ಇಲ್ಲ. ಸಂತಾನದ ನಿರೀಕ್ಷೆ ಇರುವ ಈ ರಾಶಿಯವರಿಗೆ ಉತ್ತಮ ಫಲ ದೊರೆಯುತ್ತದೆ. ಉನ್ನತ ಶಿಕ್ಷಣಕ್ಕೆ ಈ ರಾಶಿಯವರಿಗೆ ಉತ್ತಮ. ಸ್ನೇಹಿತರೊಂದಿಗೆ ವೈಷಮ್ಯ ಬರಬಹುದು ಆದ್ದರಿಂದ ಸಂಯಮದಿಂದ ನಡೆದುಕೊಳ್ಳಬೇಕು. ಧನ ಸಹಾಯ ಮಾಡಿದರೆ ನಿರೀಕ್ಷಿಸಿದ ಪ್ರಮಾಣದಲ್ಲಿ ಹಣ ಸಿಗುವುದು ಕಡಿಮೆ. ದಂತ ಸಮಸ್ಯೆ ಬಂದರೆ ಕಾಳಜಿ ವಹಿಸಬೇಕು. ಈ ರಾಶಿಯವರಿಗೆ ನವೆಂಬರ್ 20ರವರೆಗೆ ಗುರುಬಲವಿರುತ್ತದೆ ನಂತರ 2021 ಅಕ್ಟೋಬರ ತಿಂಗಳವರೆಗೆ ಕಾಯಬೇಕು ಅಲ್ಲಿಯವರೆಗೆ ಗುರುಬಲ ಇರುವುದಿಲ್ಲ. ಗಂಡ- ಹೆಂಡತಿಯಲ್ಲಿ ಆರೋಗ್ಯದ ಸಮಸ್ಯೆ ಕಂಡುಬರುತ್ತದೆ. ಈ ರಾಶಿಯವರು ಆತುರದಲ್ಲಿ ಕೆಲಸ ಮಾಡಲು ಹೋಗಿ ಚಿಕ್ಕ, ಪುಟ್ಟ ಏಟುಗಳಾಗುತ್ತದೆ. ಈ ರಾಶಿಯವರು ಮಹಾವಿಷ್ಣುವನ್ನು ಆರಾಧನೆ ಮಾಡಿದರೆ ಒಳ್ಳೆಯದಾಗುತ್ತದೆ. ಈ ರಾಶಿಯವರ ತಂದೆಯ ಆರೋಗ್ಯದಲ್ಲಿ ಏರುಪೇರು ಕಂಡುಬಂದರೆ ನಿರ್ಲಕ್ಷ ಮಾಡಬಾರದು. ಉದ್ಯೋಗದಲ್ಲಿ ನಿರಾಸಕ್ತಿ ಬರುತ್ತದೆ, ಹೊಸ ಉದ್ಯೋಗ ಮಾಡುವುದಾದರೆ ಸ್ವಲ್ಪ ಸಮಯ ಮುಂದೂಡುವುದು ಒಳ್ಳೆಯದು.

Leave A Reply

Your email address will not be published.