ಡಿ ಬಾಸ್ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಲು ಮಾಲಾಶ್ರೀ ಮಗಳಿಗೆ ಸಿಗುತ್ತಿರುವ ಸಂಭಾವನೆ ಎಷ್ಟು ಗೊತ್ತಾ?

0 0

ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ ಕೋಟಿ ರಾಮು ಹಾಗೂ ಕನಸಿನ ರಾಣಿ ಮಾಲಾಶ್ರೀ ಅವರ ಮಗಳಾಗಿರುವ ರಾಧನ ರಾಮ್ ಅತ್ಯಂತ ಚಿಕ್ಕ ವಯಸ್ಸಿಗೆ ಕನ್ನಡ ಚಿತ್ರರಂಗಕ್ಕೆ ನಾಯಕಿಯಾಗಿ ಕಾಲಿಡುತ್ತಿದ್ದಾರೆ. ಅವರ ತಾಯಿ ಮಾಲಾಶ್ರೀ ಅವರು ಕೂಡ ರಾಘವೇಂದ್ರ ರಾಜಕುಮಾರ್ ನಟನೆಯ ಸೂಪರ್ ಹಿಟ್ ಸಿನಿಮಾ ನಂಜುಂಡಿ ಕಲ್ಯಾಣದ ಮೂಲಕ ಕೇವಲ 15ನೇ ವಯಸ್ಸಿಗೆ ಕನ್ನಡ ಚಿತ್ರರಂಗಕ್ಕೆ ನಾಯಕ ನಟಿಯಾಗಿ ಕಾಲಿಟ್ಟಿದ್ದರು.

ಈಗ ಮಾಲಾಶ್ರೀ ಅವರ ಮಗಳಿಗೆ ಮೊದಲ ಸಿನಿಮಾದಲ್ಲಿಯೇ ನಾಯಕ ನಟಿಯಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಂತಹ ದೊಡ್ಡ ಸ್ಟಾರ್ ನಟನ ಸಿನಿಮಾದಲ್ಲಿ ನಾಯಕ ನಟಿಯಾಗಿ ಕಾಣಿಸಿಕೊಳ್ಳುವ ಸುವರ್ಣ ಅವಕಾಶ ಸಿಕ್ಕಿದೆ. ನಿಜಕ್ಕೂ ರಾಧನ ಅವರನ್ನು ಕನ್ನಡ ಚಿತ್ರರಂಗದ ಅತ್ಯಂತ ಅದೃಷ್ಟವಂತ ನಾಯಕ ನಟಿ ಎಂದರು ಕೂಡ ತಪ್ಪಾಗಲಾರದು.

ತರುಣ್ ಸುಧೀರ್ ನಿರ್ದೇಶನದಲ್ಲಿ ಚಾಲೆಂಜಿಂಗ್ ಸ್ಟಾರ್ ನಾಯಕ ನಟನಾಗಿ ಹಾಗೂ ರಾಕ್ ಲೈನ್ ವೆಂಕಟೇಶ್ ನಿರ್ಮಾಪಕರಾಗಿ ಕಾಣಿಸಿಕೊಂಡಿರುವ ಡಿ 56 ಸಿನಿಮಾದಲ್ಲಿಯೇ ರಾಧನ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿರುವುದು. ಮೊದಲ ಸಿನಿಮಾದಲ್ಲಿ ಇಷ್ಟೊಂದು ದೊಡ್ಡ ಮಟ್ಟದ ಅವಕಾಶವನ್ನು ಪಡೆಯುತ್ತಿರುವ ರಾಧನಾ ಮುಂದಿನ ದಿನಗಳಲ್ಲಿ ಸಿನಿಮಾ ಯಶಸ್ವಿ ಆದರೆ ಕನ್ನಡ ಚಿತ್ರರಂಗದ ಉದಯೋನ್ಮುಖ ಸ್ಟಾರ್ ನಟಿ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಇನ್ನು ಮೊದಲ ಸಿನಿಮಾದಲ್ಲಿಯೇ ನಟಿ ರಾಧನ ನಾಯಕಿಯಾಗಿ ಪಡೆದುಕೊಳ್ಳುತ್ತಿರುವ ಸಂಭಾವನೆ ನಿಜಕ್ಕೂ ಕೂಡ ಎಲ್ಲರನ್ನು ಆಶ್ಚರ್ಯಕ್ಕೆ ತಳ್ಳಿದೆ. ಹೌದು ಮಿತ್ರರೇ ಬರೋಬ್ಬರಿ 25 ರಿಂದ 28 ಲಕ್ಷ ಸಂಭಾವನೆಯನ್ನು ಈ ಸಿನಿಮಾಗಾಗಿ ಅವರು ಪಡೆದುಕೊಂಡಿದ್ದಾರೆ ಎಂಬುದಾಗಿ ತಿಳಿದು ಬಂದಿದ್ದು ಮೊದಲ ಸಿನಿಮಾದಲ್ಲಿಯೇ ಇಷ್ಟೊಂದು ದೊಡ್ಡ ಮಟ್ಟದ ಸಂಭಾವನೆ ಪಡೆದುಕೊಳ್ಳುತ್ತಿರುವುದು ಕನ್ನಡ ಚಿತ್ರರಂಗದಲ್ಲಿ ಇದೇ ಮೊದಲು ಎಂಬುದಾಗಿ ಹೇಳಲಾಗುತ್ತಿದೆ.

Leave A Reply

Your email address will not be published.