ನಮಗೆ ಪ್ರಕೃತಿಯಲ್ಲಿರುವ ಹಲವು ಗಿಡಗಳು ಹೆಚ್ಚು ಆರೋಗ್ಯಕಾರಿ, ಅವುಗಳೆಲ್ಲವೂ ನಮ್ಮ ಆರೋಗ್ಯವನ್ನ ಕಾಪಿಡುತ್ತವೆ, ಅಂತಹ ಹಲವು ಗಿಡಗಲ್ಲಿ ಈ ಕರಿಬೇವಿನ ಗಿಡವು ಸಹ ಒಂದು. ಇದರಲ್ಲಿ ಹೆಚ್ಚು ಔಷದಿಯ ಗುಣಗಳಿವೆ, ಈ ಗಿಡವನ್ನು ನಮ್ಮ ಸುತ್ತಮುತ್ತಲು ಬೆಳೆಸುವುದರಿಂದ ಇದು ನಮ್ಮ ಸುತ್ತಮುತ್ತಲಿನಲ್ಲಿರುವ ವಿಷಗಾಳಿಯನ್ನ ತೆಗೆದು ಹಾಕಿ ಆರೋಗ್ಯಕರವಾದ ಗಾಳಿಯನ್ನ ನೀಡುತ್ತದೆ. ಇದನ್ನ ನಾವು ಪ್ರತಿದಿನ ಆಹಾರದಲ್ಲಿ ಸೇವಿಸುವುದರಿಂದ ನಮ್ಮ ಅರೋಗ್ಯ ಉತ್ತಮವಾಗಿರುತ್ತದೆ, ನಮ್ಮ ದೇಹಕ್ಕೆ ಕಬ್ಬಿನಂಶವನ್ನ ಒದಗಿಸುವುದರ ಜೊತೆಗೆ ನಮ್ಮ ಕೂದಲಿನ ಆರೈಕೆಗೂ ಕರಿಬೇವು ಸಹಾಯಕವಾಗಿದೆ.

ಈ ಕರಿಬೇವನ್ನ ಬಳಸಿ ಕರಿಬೇವಿನ ಟೀ ಮಾಡಿಕೊಂಡು ಕುಡಿಯುವುದರಿಂದ ಹಲವು ಆರೋಗ್ಯಕಾರಿ ಲಾಭಗಳನ್ನ ಪಡೆಯಬಹುದು. ಇದರಲ್ಲಿ ಕ್ಯಾಲ್ಸಿಯಂ, ಐರನ್, ಪಾಸ್ಪರಸ್, ವಿಟಮನ್ ಗಳು ಹೆಚ್ಚಾಗಿವೆ ಇದು ನಮ್ಮ ದೇಹಕ್ಕೆ ತುಂಬಾ ಸಹಾಯಕಾರಿ. ಇತ್ತೀಚಿನ ದಿನಗಳಲ್ಲಿ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವವರ ಸಂಖ್ಯೆ ಹೆಚ್ಚಾಗಿದೆ, ಅಂತವರಿಗೆ ಕಣ್ಣಿನ ನರಗಳ ತೊಂದರೆ ಬರುತ್ತದೆ, ಕಣ್ಣಿಗೆ ಆಯಾಸವಾಗಿತ್ತೇ ಅಂತವರು ಈ ಕರಿಬೇವಿನ ಟೀ ಕುಡಿಯುವುದು ಉತ್ತಮ. ಅಜೀರ್ಣದಂತಹ ಸಮಸ್ಯೆಗಳು ಕಡಿಮೆಯಾಗುತ್ತವೆ, ನಾವು ತಿಂದ ಆಹಾರ ಸುಲಭವಾಗಿ ಜೀರ್ಣವಾಗಲು ಇದು ಸಹಾಯ ಮಾಡುತ್ತದೆ. ಮಾನಸಿಕ ಒತ್ತಡವನ್ನ ನಿವಾರಿಸುತ್ತದೆ. ಬನ್ನಿ ಹಾಗಾದರೆ ಕರಿಬೇವಿನ ಚಹಾವನ್ನು ಮಾಡುವ ವಿದಾನವನ್ನ ನೋಡೋಣ.

ಮೊದಲಿಗೆ ಒಂದು ಲೋಟ ನೀರನ್ನ ಒಂದು ಪಾತ್ರೆಗೆ ಹಾಕಿ ಅದಕ್ಕೆ 10 ರಿಂದ 12 ಕರಿಬೇವಿನ ಎಲೆಗಳನ್ನ ಹಾಕಿ ನಂತರ ಚಿಟಿಕೆಯಷ್ಟು ಅರಿಶಿನದ ಪುಡಿಯನ್ನ ಹಾಕಿ ಚನ್ನಾಗಿ ಕುದಿಸಿ, ಅದು ಕುದಿ ಬಂದ ಬಳಿಕ ಇದನ್ನು ಒಂದು ಲೊಟಗೇ ಹಾಕಿ ಅದಕ್ಕೆ ಒಂದು ಚಮಚ ನಿಂಬೆರಸ ಹಾಕಿ ಚನ್ನಾಗಿ ಕಲಸಿ ನಂತರ ಅರ್ಧ ಚಮಚ ಜೇನುತುಪ್ಪವನ್ನ ಬೆರೆಸಿರಿ ಜೇನುತುಪ್ಪ ನಿಮಗೆ ಬೇಕಾದರೆ ಹಾಕಿ ಇಲ್ಲವಾದರೆ ಬೇಡ, ಹೀಗೆ ಚನ್ನಾಗಿ ಕಲಸಿ ಕುಡಿಯಿರಿ ಇದನ್ನ ಕುಡಿಯುವುದರಿಂದ ಅರೋಗ್ಯ ಚನ್ನಾಗಿರುತ್ತದೆ. ಪ್ರತಿದಿನ ಕಾಫಿ ಅಥವಾ ಟೀ ಬದಲಿಗೆ ನಾವು ಈ ಕರಿಬೇವಿನ ಟೀ ಯನ್ನ ಕುಡಿಯುವುದರಿಂದ ದೇಹಕ್ಕೆ ಉತ್ತಮ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದಾಗಿದೆ.

Leave a Reply

Your email address will not be published. Required fields are marked *

error: Content is protected !!