ನಿಮ್ಮ ಕೋಪವನ್ನು ನಿಯಂತ್ರಣ ಮಾಡುವ ಸುಲಭ ವಿಧಾನಗಳಿವು

0 1

ಪ್ರಿಯ ಸ್ನೇಹಿತರೇ ಕೋಪವು ದೇವರು ಕೊಟ್ಟಿರುವ ಒಂದು ಭಾವವಾಗಿದೆ ಅದು ನಾವು ಜೀವಿಸುತ್ತಿರುವ ಸಮಾಜದಲ್ಲಿ ಒಂದು ಪ್ರಾಮುಖ್ಯವಾದ ಉದ್ದೇಶವನ್ನು ನಿರ್ವಹಿಸುತ್ತದೆ, ಕೋಪವು ಸಮಾಜದಲ್ಲಿನ ಅನ್ಯಾಯ ಮತ್ತು ಕೆಟ್ಟವುಗಳ ವಿರುದ್ಧ ಹೋರಾಡುವ ಮನಶ್ಯಾಸ್ತ್ರದ ಒಂದು ಪರಿಣಾಮಕಾರಿಯಾದ ಸಾಧನವಾಗಿದೆ ಆರೋಗ್ಯಕರ ಎಲ್ಲೆಯೊಳಗಿರುವ ಕೋಪವು ಸಮಾಜದ ಯೋಗಕ್ಷೇಮಕ್ಕೆ ಒಳಿತಾಗಿರುತ್ತದೆ ಹಾಗಿದ್ದರೂ ಎಲ್ಲಾ ಸಾಧನಗಳಂತೆ ಇದನ್ನೂ ಕೂಡ ವಿವೇಕ ಮತ್ತು ತಾಳ್ಮೆಯಿಂದ ಉಪಯೋಗಿಸಬೇಕಾಗುತ್ತದೆ ಹತೋಟಿಯಲ್ಲಿಲ್ಲದ ಕೋಪವು ಅನೇಕ ವೇಳೆ ಹಾನಿಕಾರಕ ಮತ್ತು ಅಪಾಯಕಾರಿ ಪರಿಣಾಮಗಳನ್ನು ನಡೆಸಬಹುದಾಗಿದೆ.

ಕೋಪ ಮಾಡಬೇಕಾದರೂ ಪಾಪ ಮಾಡಬೇಡಿರಿ ಸೂರ್ಯನು ಮುಳುಗುವುದಕ್ಕಿಂತ ಮುಂಚೆ ನಿಮ್ಮ ಕೋಪ ತೀರಲಿ ಎಂಬುದು ಕೋಪದ ಕುರಿತಾಗಿ ಸತ್ಯ ವೇದ ಗ್ರಂಥವು ಹೇಳುವ ಮಾತು. ನಿಮ್ಮ ಕೋಪವು ಆರೋಗ್ಯಕರವಾದ ಎಲ್ಲೆಯೊಳಗಿದೆಯೇ ಎಂಬುದನ್ನು ತಪ್ಪದೇ ಖಚಿತಪಡಿಸಿಕೊಳ್ಳಿರಿ ಇಲ್ಲದಿದ್ದಲ್ಲಿ ನೀವು ಅಪಾಯಕಾರಿ ಹಂತದಲ್ಲಿದ್ದೀರಿ ಹತೋಟಿಯಲ್ಲಿಲ್ಲದ ಕೋಪವು ನಿಮ್ಮ ದೇಹದಲ್ಲಿನ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ ನಿಮ್ಮ ಹೃದಯ ಸಂಬಂದಿ ಕಾಯಿಲೆಯನ್ನು ಉಲ್ಬಣಗೊಳಿಸುತ್ತದೆ ಹಾಗೂ ನಿಮ್ಮ ಹೊಟ್ಟೆಯಲ್ಲಿ ಹುಣ್ಣುಗಳನ್ನು ಉಂಟುಮಾಡುತ್ತದೆ ಮತ್ತು ನಿಮ್ಮಲ್ಲಿ ನಿದ್ರಾಹೀನತೆ ಮತ್ತು ಮನೋರೋಗದ ಸಮಸ್ಯೆಗಳ ಪರಿಣಾಮದಿಂದ ಒತ್ತಡ ಹೆಚ್ಚಿಸುತ್ತದೆ.

ಅನಾರೋಗ್ಯದ ಹೊರತಾಗಿ ಕೋಪವು ನಿಮ್ಮ ಜೀವಿತದಲ್ಲಿ ಇತರ ಸಮಸ್ಯೆಗಳನ್ನು ಕೂಡ ಉಂಟುಮಾಡಬಹುದು ಅಂದರೆ ನಿಮ್ಮ ಸಂಬಂಧಗಳಲ್ಲಿನ ಸಮಸ್ಯೆಗಳನ್ನು ಹೆಚ್ಚುಮಾಡಬಹುದು ಹಾಗೂ ನೀವು ಕೆಲಸ ಸ್ನೇಹಿತರು ಮತ್ತು ವರಮಾನವನ್ನು ಕಳೆದುಕೊಳ್ಳಲೂಬಹುದು ಮತ್ತು ನಿಮ್ಮ ಕುಟುಂಬ ಜೀವಿತದಲ್ಲಿ ಘರ್ಷಣೆ ಉಂಟುಮಾಡಬಹುದು ಅಷ್ಟೇ ಅಲ್ಲದೆ ನೀವು ದೈಹಿಕ ಆಘಾತ ಮತ್ತು ನಿಂದನೆಗೊಳಗಾಗಬಹುದು.

ನೀವು ನಿಮ್ಮ ಮನಸ್ಸಿಗಿಂತಲೂ ವೇಗವಾಗಿ ಮಾತನಾಡುವ ಹವ್ಯಾಸ ಹೊಂದಿದ್ದೀರಾದರೆ, ಕೋಪಗೊಂಡಗ ನಿಮಗೆ ಮೇಲುಸಿರು ಸೆಳೆಯುವಂತೆ ಚೀರುವಂತೆ ಹುಚ್ಚು ಕೂಗಾಟ ಮಾಡುವಂತೆ ಮತ್ತು ಉಸಿರುಕಟ್ಟುವಂತೆ ಭಾಸವಾಗುತ್ತಿದೆಯಾದರೆ ಮತ್ತು ಚುಚ್ಚುಮಾತು ಅಥವಾ ಸೇಡಿನ ಸಂಚು ಅಥವಾ ನಿಂದನೆಯ ಮಾತುಗಳನ್ನು ಉಪಯೋಗಿಸುವುದರ ಮೂಲಕ ನೀವು ಇತರರಿಗೆ ನೋವುಂಟುಮಾಡುತ್ತಿದ್ದೀರಾದರೆ ಹಾಗೂ ಬೆಲೆಬಾಳುವ ವಸ್ತುಗಳನ್ನು ಎಸೆಯುವ ಮತ್ತು ಹಾಳುಮಾಡುವ ಹವ್ಯಾಸದಲ್ಲಿ ಅಥವಾ ಸ್ವತಃ ನಾಶಪಡಿಸಿಕೊಳ್ಳುವ ಮಾರ್ಗದಲ್ಲಿ ನೀವಿದ್ದೀರಾದರೆ ನಿಮ್ಮ ಕೋಪವು ನಿಮ್ಮನ್ನು ಅಪಾಯಕಾರಿ ಹಂತಡೆದೆಗೆ ಕೊಂಡೊಯ್ಯುತ್ತಿದೆ ಅಲ್ಲದೆ ನೀವು ಗಂಡಾಂತರದಲ್ಲಿದ್ದೀರಿ ಎಂದರ್ಥ .

ಈಗ ನಿಮ್ಮ ಕೋಪವನ್ನು ನಿಯಂತ್ರಣಕ್ಕೆ ತರುವುದಕ್ಕಾಗಿ ನಿಮ್ಮ ಕೋಪವನ್ನು ಪ್ರಚೋದಿಸುವ ಅಂಶಗಳು ಯಾವುವು ಎಂಬುದನ್ನು ನೀವು ತಿಳಿದುಕೊಳ್ಳಬೇಕಾದ ಅವಶ್ಯಕತೆ ಇದೆ, ನಿಮ್ಮ ಆವೇಶಪರ ಪ್ರಕೋಪದ ಕೆಲವು ಪ್ರಮುಖ ಕಾರಣಗಳು ಹೀಗಿವೆ, ನಿಮ್ಮ ಸಂಬಂದಗಳಲ್ಲಿ ಭಿನಾಭಿಪ್ರಾಯವಿರುವುದು ಮತ್ತು ನೀವು ನೋವು ಬಾಧೆಯನ್ನು ಅನುಭವಿಸಿದಾಗ ಅಥವಾ ಏನನ್ನಾದರೂ ಕಳೆದುಕೊಂಡಾಗ ಅಥವಾ ಅಪಾರ್ಥ ಮಾಡಿಕೊಂಡ ಅನುಭವವಾದಾಗ ನೀವು ಕೋಪಗೊಳ್ಳಲು ಇವು ಕಾರಣವಾಗಿರುತ್ತವೆ. ನೀವು ಒತ್ತಡಕ್ಕೆ ಒಳಗಾಗಿ ಆಶಾಭಂಗಪಡಬೇಕಾಗಬಹುದು ಹಾಗೂ ಬಹಳ ದೀರ್ಘ ಸಮಯದ ವರೆಗೆ ನಿಮ್ಮ ವೇಧನೆಗಳನ್ನು ಒಳಗೆ ಅಡಗಿಸಿಟ್ಟುಕೊಳ್ಳುವುದು ಮತ್ತು ನೀವು ಪಕ್ಷಪಾತ ಮನೋಭಾವ ಅನ್ಯಾಯವನ್ನು ನೋಡಿದಾಗ ಕೆರಳುವುದು .

ನಿಮ್ಮ ಕೋಪದಿಂದ ಹೊರಬರಲು ಪ್ರಾಯೋಗಿಕ ಸಲಹೆಗಳು: ಮೊದಲನೆಯದಾಗಿ ನನ್ನ ಕೋಪವು ಸಮರ್ಥನೆಗೆ ಯೋಗ್ಯವಾದದ್ದೋ ಎಂದು ನಿಮ್ಮನು ನೀವೇ ಕೇಳಿಕೊಳ್ಳಲು ಸಮಯವನ್ನು ಮೀಸಲಿಡಿ. ಎರಡನೆಯದಾಗಿ ನೀವು ಕೋಪಗೊಂಡಿದ್ದಾಗ ನೀವು ಹೇಗೆ ವರ್ತಿಸಬೇಕೆಂಬುದರ ಕುರಿತು ನೀವೇ ಜವಾಬ್ದಾರಿಯುತರಾಗಿರುತ್ತೀರೆಂದು ಮೊದಲು ತಿಳಿದುಕೊಳ್ಳಿ. ಮೂರನೆಯದಾಗಿ ನಿಮ್ಮ ಹತೋಟಿಯನ್ನು ಮೀರಿ ಕೆಲವು ಸನ್ನಿವೇಶಗಳು ಸಂಭವಿಸಿದರೆ ಅದನ್ನು ಸ್ವೀಕರಿಸಿ ಮತ್ತು ಹಾಗೆಯೇ ಬಿಟ್ಟುಬಿಡಿ. ಇನ್ನು ನಾಲ್ಕನೆಯದಾಗಿ ನಿಮ್ಮನ್ನೂ ಮತ್ತು ಇತರರನ್ನೂ ಪ್ರೀತಿಸಲು ಹಾಗೂ ಕ್ಷಮಿಸಲು ಕಲಿಯಿರಿ.

ಹೊಸಾವರ್ಷದಿಂದಲಾದರೂ ನಿಮ್ಮನ್ನು ನಾಶಪಡಿಸುವ ನಿಮ್ಮಲ್ಲಿ ಕೀಳರಿಮೆ ಉಂಟು ಮಾಡುವ ಈ ಕೆಟ್ಟ ಕೋಪವನ್ನು ಬಿಟ್ಟು ನಿಮ್ಮ ಸಂಬಂಧಗಳನ್ನು ಗಟ್ಟಿಗೊಳಿಸಿಕೊಳ್ಳಿ ಹಾಗೂ ನಿಮ್ಮ ಮುಂದಿನ ಕಾರ್ಯಗಳ ಬಗ್ಗೆ ಗಮನಕೊಡಿರಿ ಎಲ್ಲರನ್ನೂ ಪ್ರೀತಿಸಿ ದ್ವೇಷದಿಂದ ಏನನ್ನೂ ಗೆಲ್ಲಲು ಸಾಧ್ಯವಿಲ್ಲ ಆದರೆ ಪ್ರೀತಿಯಿಂದ ಇಡೀ ಲೋಕವನ್ನೇ ಗೆಲ್ಲಬಹುದೆಂಬುದು ನಮ್ಮ ಆಶಯವಷ್ಟೆ.

Leave A Reply

Your email address will not be published.