ಹೌದು ನಿಂಬೆಹಣ್ಣನ್ನ ನಾವು ಹೆಚ್ಚಾಗಿ ಅಡುಗೆಗೆ, ತಂಪು ಪಾನೀಯಕ್ಕೆ ಹಾಗೂ ತ್ವಚೆಯ ಆರೈಕೆಗೆ ಬಳಸುತ್ತೇವೆ. ಈ ನಿಂಬೆ ಹಣ್ಣಿನಲ್ಲಿ ಹಲವು ಬಗೆಯ ಜ್ವರಗಳನ್ನ ತಡೆಗಟ್ಟಬಹುದು, ಅಥವಾ ಜ್ವರವನ್ನ ವಾಸಿಮಾಡಬಹುದು ಎಂದರೆ ನೀವು ಖಂಡಿತ ನಂಬಲೇಬೇಕಾಗುತ್ತದೆ. ಹೌದು ನಿಂಬೆಹಣ್ಣನ್ನ ನೀವೆಲ್ಲರೂ ಅಡುಗೆಯಲ್ಲಿ ಹುಳಿಯನ್ನ ಹೆಚ್ಚಿಸಲು ಮಾತ್ರ ಬಳಸುತ್ತೀರಿ ಆದರೆ ಇದರಲ್ಲಿ ಹಲವು ಆರೋಗ್ಯಕಾರಿ ಅಂಶಗಳು ಅಡಗಿವೆ ಅವುಗಳ ಬಗ್ಗೆ ನಾವಿಂದು ನಿಮಗೆ ಒಂದಿಷ್ಟು ಮಾಹಿತಿಯನ್ನ ನೀಡುತ್ತೇವೆ ಅವುಗಳ ಬಗ್ಗೆ ತಿಳಿಯೋಣ

ಮೊದಲನೆಯದಾಗಿ ಒಂದು ಲೋಟ ಬಿಸಿ ನೀರಿಗೆ ಅರ್ಧ ನಿಂಬೆ ಹಣ್ಣಿನ ರಸವನ್ನ ಸೇರಿಸಿ ಕುಡಿಯುವುದರಿಂದ ಸಾಮಾನ್ಯವಾಗಿ ಕಂಡುಬರುವ ಜ್ವರ ದೂರವಾಗುತ್ತದೆ. ಒಂದು ನಿಂಬೆಹಣ್ಣಿನ ರಸಕ್ಕೆ ಎರಡು ಚಮಚ ಸಕ್ಕರೆಯನ್ನ ಬೆರೆಸಿ ಸ್ವಲ್ಪ ಬಿಸಿ ಮಾಡಿ ಅದನ್ನ ಒಂದು ಲೋಟ ತಣ್ಣೀರಿಗೆ ಹಾಕಿ ಕುಡಿಯುವುದರಿಂದ ಪಿತ್ತದ ಜ್ವರ ನಿವಾರಣೆಯಾಗುತ್ತದೆ.

ಒಂದು ಚಮಚ ನಿಂಬೆ ರಸ ಹಾಗು ಒಂದು ಚಮಚ ಚಿರಾಯತದ ಕಷಾಯವನ್ನ ಸೇರಿಸಿ ಕುಡಿಯುವುದರಿಂದ ಋತುಮಾನದ ಜ್ವರ ವಾಸಿಯಾಗುತ್ತದೆ. ನಿಂಬೆರಸದ ಪಾನಕವನ್ನ ಆಗಾಗ ಸೇವಿಸುವುದರಿಂದ ನೀರಿನ ದಾಹ ಕಡಿಮೆಯಾಗುತ್ತದೆ. ಜ್ವರದ ತೀವ್ರತೆಯು ಕಡಿಮೆಯಾಗುತ್ತದೆ.ಅಷ್ಟೇ ಅಲ್ದೆ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಬಿಸಿನೀರಿಗೆ ಅರ್ಧ ನಿಂಬೆಹಣ್ಣಿನ ರಸವನ್ನ ಸೇರಿಸಿ ಸೇವಿಸುವುದರಿಂದ ವಿಷಮಶೀತ ಜ್ವರ ಕಡಿಮೆಯಾಗುತ್ತವೆ. ಹೀಗೆ ನಾನಾ ಉಪಯೋಗಗಳನ್ನು ನಿಂಬೆಹಣ್ನಿಯಿಂದ ಪಡೆದುಕೊಳ್ಳಬಹುದಾಗಿದೆ.

By

Leave a Reply

Your email address will not be published. Required fields are marked *