Curd Health: ಬೇಸಿಗೆ ಬಂದರೆ ಸಾಕು ಎಲ್ಲರೂ ಸಹ ತಣ್ಣನೆಯ ಮೊಸರನ್ನು ಸೇವನೆ ಮಾಡಲು ತುಂಬಾ ಇಷ್ಟ ಪಡುತ್ತಾರೆ ಹಾಗೆಯೇ ಮೊಸರಿನಲ್ಲಿ ಹೆಚ್ಚಿನ ಪೋಷಕಾಂಶಗಳು ಇರುತ್ತದೆ ಮೊಸರು ತಿನ್ನುವುದರಿಂದ ಜೀರ್ಣಕ್ರಿಯೆಯ ಶಕ್ತಿ ಬಲಗೊಳ್ಳುತ್ತದೆ ಮೊಸರಿನಲ್ಲಿ ಅತಿ ಹೆಚ್ಚು ಕ್ಯಾಲ್ಸಿಯಂ ಅಂಶವಿರುತ್ತದೆ ಹಾಗೂ ಮೂಳೆಗಳಿಗೆ ತುಂಬಾ ಒಳ್ಳೆಯದು
ಮೊಸರು ನಮ್ಮ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಹಾಗೆಯೇ ಅಷ್ಟೇ ಕೆಟ್ಟದ್ದು ಕೂಡ ನಿಯಮಿತ ಮತ್ತು ಸರಿಯಾದ ಸಮಯದಲ್ಲಿ ಸೇವನೆ ಮಾಡುವ ಮೂಲಕ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು, ಸಾಮಾನ್ಯವಾಗಿ ಮೊಸರನ್ನು ಸೇವಿಸುವುವಾಗ ಜನರು ಉಪ್ಪು ಮತ್ತು ಸಕ್ಕರೆಯನ್ನು ಸೇರಿಸಿಕೊಂಡು ಸವಿಯುತ್ತಾರೆ ಪತ್ಯ ಮಾಡಲು ಮೊಸರನ್ನು ಸೇವಿಸುವುದು ಉತ್ತಮ, ಹಾಗೆಯೇ ಮೊಸರು ರುಚಿಯಲ್ಲಿ ಹುಳಿ ಸ್ವಭಾವದಲ್ಲಿ ಬಿಸಿ ಆಗಿ ಇರುತ್ತದೆ
ಭಾರತೀಯ ಭೋಜನ ಅಥವಾ ಊಟದ ವಿಧಾನದಲ್ಲಿ ಊಟದ ಕೊನೆಗೆ ಸ್ವಲ್ಪ ಮೊಸರನ್ನು ಸೇವಿಸುವ ಪದ್ಧತಿ ಇದೆ ಸಾಕಷ್ಟು ಜನರಿಗೆ ಊಟದ ನಂತರ ಮೊಸರನ್ನು ಸೇವನೆ ಮಾಡುವುದು ತುಂಬಾ ಇಷ್ಟ ನಾವು ಈ ಲೇಖನದ ಮೂಲಕ ಮೊಸರನ್ನು ಸೇವಿಸುವ ಅವಧಿ ಹಾಗೂ ಯಾರು ಮೊಸರನ್ನು ಸೇವನೆ ಮಾಡಬಾರದು ಎಂಬುದನ್ನು ತಿಳಿದುಕೊಳ್ಳೋಣ.
ಬೇಸಿಗೆಯಲ್ಲಿ ಮೊಸರು ಸೇವಿಸುವುದು ಹಾಗೂ ತಣ್ಣನೆಯ ಲಸ್ಸಿ ಕುಡಿಯುವುದು ಹಾಗೂ ತಣ್ಣನೆಯ ಮಜ್ಜಿಗೆ ಕುಡಿಯುವುದು ಪ್ರತಿಯೊಬ್ಬರೂ ಸಹ ಇಷ್ಟ ಎಲ್ಲರಿಗೂ ಸಹ ಮೊಸರನ್ನು ಸೇವಿಸುವ ಸರಿಯಾದ ವಿಧಾನದ ಬಗ್ಗೆ ತಿಳಿದಿರೋದಿಲ್ಲ, ಮೊಸರನ್ನು ಸೇವಿಸುವಾಗ ಸಮಯ ಗುಣಮಟ್ಟ ಪ್ರಮಾಣ ಸಂಯೋಜನೆಯನ್ನು ನೋಡಿಕೊಳ್ಳಬೇಕು ಮೊಸರು ತಿನ್ನುವಾಗ ಕೆಲವು ವಿಷಯವನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು ಇಲ್ಲವಾದರೆ ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ.
ಆಯುರ್ವೇದ ದಲ್ಲಿ ಮೊಸರಿನ ಹಲವಾರು ಪ್ರಯೋಜನಗಳಿವೆ ಮೊಸರು ರುಚಿಯಲ್ಲಿ ಹುಳಿ ಸ್ವಭಾವದಲ್ಲಿ ಬಿಸಿ ಆಗಿ ಇರುತ್ತದೆ ಹಾಗೆಯೇ ಜೀರ್ಣಿಸಿಕೊಳ್ಳಲು ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತದೆ ಮೊಸರು ಕೊಬ್ಬನ್ನು ಹೆಚ್ಚಿಸುತ್ತದೆ ಹಾಗೆಯೇ ಪಿತ್ತವನ್ನು ಹೆಚ್ಚಿಸುತ್ತದೆ ಹಾಗೆಯೇ ಮೊಸರು ತಿನ್ನುವಾಗ ಕೆಲವು ವಿಷಯಗಳ ಬಗ್ಗೆ ಕಾಳಜಿ ವಹಿಸಬೇಕು.
ಇದನ್ನೂ ಓದಿ..ಬಾಳೆ ಎಲೆಯಲ್ಲಿ ಊಟ ಮಾಡುವುದರಿಂದ ಎಷ್ಟೊಂದು ಲಾಭವಿದೆ, ನಿಮಗಿದು ಗೊತ್ತಿರಲಿ
ಸ್ಥಲಕಾಯ ಕಫ ಸಮಸ್ಯೆ ಹಾಗೂ ರಕ್ತಸ್ರಾವದ ಅಸ್ವಸ್ಥತೆ ಅಥವಾ ಉರಿಯೂತದ ಕಾಯಿಲೆಗೆ ಸಂಭಂದಿಸಿದ ಖಾಯಿಲೆಯಿಂದ ಬಳಲುತ್ತಿರುವ ಜನರು ಮೊಸರು ಸೇವನೆಯನ್ನು ಮಾಡಬಾರದು ಇಂತಹ ಸಮಸ್ಯೆ ಇರುವರು ಸೇವನೆ ಮಾಡುವುದರಿಂದ ತೊಂದರೆ ಹೆಚ್ಚಾಗುವ ಸಾಧ್ಯತೆ ಇರುತ್ತದೆ, ಕೆಲವು ಅಡುಗೆಯಲ್ಲಿ ಮೊಸರನ್ನು ಸೇರಿಸಿ ಮಾಡುತ್ತಾರೆ ಮೊಸರು ಮಿಶ್ರಣ ಮಾಡಿದ ಆಹಾರ ಪದಾರ್ಥವನ್ನು ಮತ್ತೆ ಬಿಸಿ ಮಾಡಿ ಸೇವನೆ ಮಾಡಿದರೆ ಆರೋಗ್ಯಕ್ಕೆ ಹಾನಿಕಾರಕವಾಗಿದೆ
ವೈದ್ಯರ ಪ್ರಕಾರ ಮೊಸರನ್ನು ಸೇರಿಸಿ ಮಾಡಿದ ಪದಾರ್ಥವನ್ನು ಬಿಸಿ ಮಾಡಿದಾಗ ಅದರ ಅಂಶವನ್ನು ಕಳೆದುಕೊಳ್ಳುತ್ತದೆ ಹಾಗೆಯೇ ರಾತ್ರಿಯಲ್ಲಿ ಮೊಸರು ಸೇವನೆ ಮಾಡಬಾರದು ರಾತ್ರಿಯಲ್ಲಿ ಮೊಸರು ಸೇವನೆ ಮಾಡುವುದರಿಂದ ಕಫದ ಸಮಸ್ಯೆಯನ್ನು ಹೆಚ್ಚು ಮಾಡುತ್ತದೆ ಹಾಗೆಯೇ ಪ್ರತಿದಿನ ಮೊಸರನ್ನು ಸೇವನೆ ಮಾಡಬಾರದು ಪ್ರತಿದಿನ ಮಜ್ಜಿಗೆಯನ್ನು ಮಾತ್ರ ಸೇವನೆ ಮಾಡಬಹುದಾಗಿದೆ
ಇದನ್ನೂ ಓದಿ..ಸಕ್ಕರೆ ಕಾಯಿಲೆ ಇರೋರು ಬೆಳಗ್ಗಿನ ತಿಂಡಿಗೆ ರವ ಇಡ್ಲಿ ತಿಂದ್ರೆ ಏನಾಗುತ್ತೆ ಗೊತ್ತಾ..
ಮಜ್ಜಿಗೆಯಲ್ಲಿ ಕಲ್ಲು ಉಪ್ಪು ಮೆಣಸು ಮತ್ತು ಜೀರಿಗೆಯಂತಹ ಮಸಾಲೆಯನ್ನು ಬೇರೆಸುವುದರಿಂದ ತುಂಬಾ ಒಳ್ಳೆಯದು ಮೊಸರನ್ನು ಮಾಂಸ ಹಾಗೂ ಮೀನಿನೊಂದಿಗೆ ಸೇವನೆ ಮಾಡಬಾರದು, ಸೇವನೆ ಮಾಡಿದರೆ ದೇಹದಲ್ಲಿ ವಿಷವನ್ನು ಉಂಟು ಮಾಡುತ್ತದೆ ಹಾಗೆಯೇ ಮೊಸರನ್ನು ಹಣ್ಣುಗಳೊಂದಿಗೆ ಸೇವನೆ ಮಾಡಬಾರದು ಸೇವನೆ ಮಾಡಿದರೆ ಆರೋಗ್ಯವನ್ನು ಹಾಳು ಮಾಡುತ್ತದೆ ಮೊಸರನ್ನು ಮಧ್ಯಾಹ್ನ ಕಡಿಮೆ ಪ್ರಮಾಣದಲ್ಲಿ ಸೇವನೆ ಮಾಡಬೇಕು ಹೀಗೆ ಮೊಸರನ್ನು ನಿಯಮಿತವಾಗಿ ಸೇವನೆ ಮಾಡಬೇಕು ಮತ್ತು ಹುಳಿ ಅಂಶವನ್ನು ಹೊಂದಿದ್ದರು ಸಹ ರುಚಿಯಾಗಿ ಇರುತ್ತದೆ.