ಬಾಳೆ ಎಲೆಯಲ್ಲಿ ಊಟ ಮಾಡುವುದರಿಂದ ಎಷ್ಟೊಂದು ಲಾಭವಿದೆ, ನಿಮಗಿದು ಗೊತ್ತಿರಲಿ

0 25

Banana leaf: ದಕ್ಷಿಣ ಭಾರತದಲ್ಲಿ ಹಿಂದಿನಿಂದಲೂ ದೇವಸ್ಥಾನ, ಪೂಜೆ ಕಾರ್ಯಕ್ರಮ, ಮದುವೆ ಕಾರ್ಯಕ್ರಮ ಇತ್ಯಾದಿಗಳಿಗೆ ಊಟ ಮಾಡಲು ಬಾಳೆ ಎಲೆಯನ್ನೇ ಬಳಕೆ ಮಾಡಿಕೊಂಡು ಬರಲಾಗುತ್ತಿದೆ. ಇಂದಿನ ದಿನಗಳಲ್ಲಿ ಕೆಲವೊಂದು ಮದುವೆ ಹಾಗೂ ಕಾರ್ಯಕ್ರಮಗಳಲ್ಲಿ ಬಾಳೆ ಎಲೆಯಲ್ಲಿ ಊಟ ಮಾಡುವುದನ್ನು ನೋಡಬಹುದು. ಬಾಳೆ ಹಣ್ಣನ್ನು ನಾವು ಸೇವನೆ ಮಾಡುವಂತೆ ಬಾಳೆ ಎಲೆಯಲ್ಲಿ ಊಟ ಮಾಡಿದರೆ ಅದರಿಂದ ಹಲವಾರು ರೀತಿಯ ಆರೋಗ್ಯ ಲಾಭಗಳು ದೇಹಕ್ಕೆ ಲಭ್ಯವಾಗುವುದು ಎಂದು ಆಯುರ್ವೇದದಲ್ಲಿ ಹೇಳಲಾಗಿದೆ

ಬಾಳೆ ಎಲೆಯಲ್ಲಿ ಊಟ ಮಾಡಿದರೆ ಅದರಿಂದ ಯಾವ ರೀತಿಯ ಲಾಭಗಳು ಸಿಗುವುದು ಎಂದು ನಾವು ನಿಮಗೆ ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ. ಇನ್ನು ಮುಂದೆ ಸುತ್ತಾಡಲು ಹೋದರೆ ಆಗ ಬಾಳೆ ಎಲೆ ಊಟ ಎಂದು ಬೋರ್ಡ್ ಕಂಡರೆ ಅಲ್ಲಿಯೇ ಹೋಗಿ ಊಟ ಮಾಡಿ. ಬಾಳೆ ಎಲೆಯಲ್ಲಿ ತಿನ್ನಬಹುದಾದ ಮೇಣವು ಇದ್ದು, ಇದರಿಂದಾಗಿ ಅದರಲ್ಲಿ ಊಟ ಮಾಡಿದರೆ ಆಗ ಆಹಾರದ ಸುವಾಸನೆ ಮತ್ತು ರುಚಿಯು ಹೆಚ್ಚಾಗುವುದು. ಬಿಸಿ ಬಿಸಿಯಾಗಿರುವ ಆಹಾರವನ್ನು ಬಾಳೆ ಎಲೆ ಮೇಲೆ ಹಾಕಿದ ವೇಳೆ ಅದು ಆಹಾರಕ್ಕೆ ರುಚಿ ಹಾಗೂ ಸುವಾಸನೆ ನೀಡುವುದು. ಸಾಮಾನ್ಯವಾಗಿ ಯಾವುದೇ ಹೋಟೆಲ್, ದೇವಸ್ಥಾನಗಳಲ್ಲಿ ಬಳಸಿದ ಬಟ್ಟಲುಗಳನ್ನೇ ಮತ್ತೆ ನೀಡಲಾಗುತ್ತದೆ. ಹೀಗಾಗಿ ಬಾಳೆ ಎಲೆಯಲ್ಲಿ ಊಟ ಮಾಡಿದರೆ ಆಗ ಅದು ತುಂಬಾ ಸ್ವಚ್ಛ ವಿಧಾನವಾಗಿರುವುದು.

ಇದನ್ನೂ ಓದಿ..ಈ ಬೇಲದಹಣ್ಣು ಎಲ್ಲಿ ಸಿಕ್ಕರೂ ಬಿಡಬೇಡಿ ಅದರಲ್ಲಿ ಅಡಗಿದೆ ಅಪಾರ ಅರೋಗ್ಯ

ಪ್ಲೇಟ್ ಗಳನ್ನು ತೊಳೆಯಲು ಬಳಸುವಂತಹ ಸೋಪ್ ಕೂಡ ಪ್ಲೇಟ್ ನಲ್ಲಿ ಉಳಿಯಬಹುದು. ಇದು ಹೊಟ್ಟೆಗೆ ಹಾನಿ ಉಂಟು ಮಾಡುವುದು. ಬಾಳೆ ಎಲೆಯಲ್ಲಿನ ಮೇಣವು ಧೂಳು ಮತ್ತು ಕಲ್ಮಷವನ್ನು ದೂರವಿಡುವುದು. ಇದನ್ನು ನೀರಿನಲ್ಲಿ ತೊಳೆದು ನೇರವಾಗಿ ಬಳಕೆ ಮಾಡಬಹುದು ಬಾಳೆ ಎಲೆಯಲ್ಲಿ ಸಸ್ಯಜನ್ಯವಾಗಿರುವಂತಹ ಪಾಲಿಫೆನಾಲ್ ಗಳಿದ್ದು, ಇದು ನೈಸರ್ಗಿಕ ಆಂಟಿಆಕ್ಸಿಡೆಂಟ್ ಆಗಿದೆ ಮತ್ತು ಫ್ರೀ ರ್ಯಾಡಿಕಲ್ ವಿರುದ್ಧ ಹೋರಾಡಿ ಕ್ಯಾನ್ಸರ್ ತಡೆಯುವುದು. ಬಾಳೆ ಎಲೆಯಲ್ಲಿ ಸೇವಿಸುವಂತಹ ಆಹಾರವು ಪೋಷಕಾಂಶಗಳು ಹಾಗೂ ಆಂಟಿಆಕ್ಸಿಡೆಂಟ್ ನ್ನು ಹೀರಿಕೊಂಡು ದೇಹಕ್ಕೆ ನೀಡುವುದು. ಇದರಲ್ಲಿ ಬ್ಯಾಕ್ಟೀರಿಯಾ ವಿರೋಧಿ ಅಂಶಗಳು ಇವೆ.

ಇದು ಕೀಟಾಣುಗಳನ್ನು ದೂರ ಮಾಡುವುದು ಎಲೆಯಲ್ಲಿ ಊಟ ಮಾಡುವುದರಿಂದ ನಮ್ಮಲ್ಲಿ ಜೀರ್ಣಕ್ರಿಯೆ ಗಳು ಸುಗಮವಾಗಿ ಆಗುತ್ತದೆ. ಬಾಳೆ ಎಲೆಯ ಮೇಲ್ಪದರದಲ್ಲಿ ಎಪಿಗಾಲ್ಲೋಕ್ಯಾಟೆಚಿನ್ ಗ್ಯಾಲೆಟ್ ಎಂಬ ಪಾಲಿಫಿನಾಲ್ ಅಂಶವಿರುವುದರಿಂದ ಬಿಸಿ ಆಹಾರ ಎಲೆಗೆ ಬಿದ್ದಾಗ ಅದು ಆಹಾರದೊಂದಿಗೆ ಬೆರೆತು ನಮ್ಮ ಹೊಟ್ಟೆ ಸೇರುವುದರಿಂದ ಬ್ಯಾಕ್ಟೀರಿಯಾಗಳು ಬಾಳುವುದಿಲ್ಲ. ಇನ್ನೂ ಇದರಲ್ಲಿ ಕ್ಯಾನ್ಸರ್ ರೋಗಕ್ಕೆ ಕಾರಣವಾಗುವ ಫ್ರೀ ರಾಡಿಕಲ್ ಎಂಬ ಜೈವಿಕ ರಾಸಾಯನಿಕಗಳನ್ನು ತಡೆಯುವುದರಿಂದ ಕ್ಯಾನ್ಸರ್ ನಿಂದಲೂ ದೂರವಿರಬಹುದು.

ಬಾಳೆ ಎಲೆ ಊಟ ಆರೋಗ್ಯಕ್ಕೆ ತಂಪಾಗಿರುದರಿಂದ ನಾವು ಯಾವುದೆ ಚಿಕ್ಕ ಪುಟ್ಟ ಚರ್ಮ ರೋಗಗಳಿಂದಲೂ ದೂರವಿರಬಹುದು. ಹೀಗೆ ಈ ಬಾಳೆ ಎಲೆಯ ಬಳಕೆಯಿಂದ ತುಂಬಾ ಉಪಯೋಗಗಳಿವೆ. ಬಾಳೆ ಎಲೆಯನ್ನು ಇಂದು ನಾವು ಹೆಚ್ಚಾಗಿ ಕಾಣುವುದು ಮದುವೆ ಮನೆಗಳಲಷ್ಟೇ. ಅದು ಇಂದು ಪ್ಲಾಸ್ಟಿಕ್ ಬಾಳೆ ಎಲೆಗಳನ್ನೂ, ಕಾಗದದ ಬಾಳೆ ಎಲೆಗಳನ್ನು ಬಳಸಲಾಗುತ್ತಿದೆ. ಈ ಬಾಳೆ ಎಲೆ ಸ್ವಲ್ಪ ರೂಢಿಯಲ್ಲಿ ಇರುವುದೆಂದರೆ ಹಳ್ಳಿಯ ಕಡೆಯಲ್ಲಿಯೇ ಇರಬೇಕು. ಬಾಳೆ ಎಲೆಯನ್ನು ಬಳಸುವುದರಿಂದ ಬರಿ ಸಾಂಪ್ರದಾಯಿಕ ಮಾತ್ರವಲ್ಲ ಪಾರಂಪರಿಕ ಆಚರಣೆಯ ಉದ್ದೇಶಗಳು ಇವೆ.

ಇದನ್ನೂ ಓದಿ..ಪ್ರತಿದಿನ ಬೇವಿನ ಎಲೆ ತಿನ್ನುವುದರಿಂದ ನಮ್ಮ ದೇಹದ ಒಳಗೆ ಏನಾಗುತ್ತೆ ಗೊತ್ತಾ, ನೀವೇ ನೋಡಿ

ಅದನ್ನು ಬರಿ ಊಟ ಮಾತ್ರವಲ್ಲ ಮುತ್ತೈದೆಯರಿಗೆ ಬಾಗಿನ ಕೊಡುವಾಗ ದೇವರ ಪೂಜೆಗಳನ್ನು ಮಾಡುವಾಗ ಕಲಶಗಳನ್ನು ಇಡಲು ಯಾರಿಗಾದರೂ ಧನವನ್ನು ಕೊಡುವ ಸಂದರ್ಭದಲ್ಲಿ ಹೀಗೆ ಬೇರೆ ಬೇರೆ ಕಾರಣಗಳಿಗೂ ಈ ಬಾಳೆ ಎಲೆಯನ್ನು ಉಪಯೋಗಿಸುತ್ತಾರೆ. ಇನ್ನಾದರೂ ನಾವು ಇದರ ಮಹತ್ವ ತಿಳಿದು ಬಾಳೆ ಎಲೆಯ ಬಳಕೆಯನ್ನು ಮಾಡೋಣ. ಇದು ಕಣ್ಣಿಗೂ ತಂಪು ಮನಸ್ಸಿಗೂ ತಂಪು ಆರೋಗ್ಯಕ್ಕೂ ಒಳ್ಳೆಯದು.

Leave A Reply

Your email address will not be published.