ಮದುವೆ ವಿಚಾರದಲ್ಲಿ ಗಂಡು ಹೆಣ್ಣಿನ ಒಪ್ಪಿಗೆ, ಎರಡು ಕುಟುಂಬಗಳ ನಡುವಿನ ಒಡನಾಟಕ್ಕಿಂತ ಮೊದಲು ನೋಡುವುದು ವಯಸ್ಸಿನ ಅಂತರ. ಕೆಲವರು ವಯಸ್ಸಿನ ಅಂತರಕ್ಕೆ ಒಪ್ಪಿಗೆ ಇದ್ದರೆ, ಇನ್ನು ಕೆಲವರು ವಯಸ್ಸಿನ ಅಂತರ ಬೇಡವೆಂದು ಹೇಳುತ್ತಾರೆ. ಏಕೆಂದರೆ ಇದು ದೈಹಿಕವಾಗಿ, ಮಾನಸಿಕವಾಗಿ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ.ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಮುದುಕನನ್ನು ಯುವತಿ ಮದುವೆಯಾಗುವುದು, ಮುದುಕಿಯನ್ನು ಯುವಕ ಮದುವೆಯಾಗುವುದು ಎಂಬ ಸುದ್ದಿ ಹರಿದಾಡುವುದನ್ನು ಗಮನಿಸಿರಬಹುದು.

ಕೆಲವರು 5 ವರ್ಷ ಅಂತರ ಇದ್ದರೆ ಉತ್ತಮ ಎಂದರೆ, ಇನ್ನು ಕೆಲವರು ಮೂರರಿಂದ ಆರು ವರ್ಷ ಎನ್ನುತ್ತಾರೆ.ಆದರೆ ಇತ್ತೀಚಿನ ದಿನಗಳಲ್ಲಿ ಪುರುಷರು ಕಿರಿಯ ಮಹಿಳೆಯರನ್ನು ಮದುವೆಯಾಗುತ್ತಾರೆ ಮತ್ತು ಮಹಿಳೆಯರು ಸಾಮಾನ್ಯವಾಗಿ ವಯಸ್ಸಾದ ಪುರುಷರನ್ನು ಮದುವೆಯಾಗಲು ಬಯಸುವುದು ಸರ್ವೇ ಸಾಮಾನ್ಯವಾಗಿದೆ. ಇಲ್ಲವೆ ಒಂದೇ ವಯಸ್ಸಿನ ಅಥವಾ ಕೆಲವೇ ವರ್ಷಗಳ ಅಂತರವಿರುವವರನ್ನು ಮದುವೆಯಾಗುತ್ತಾರೆ. ಆದರೆ ಮದುವೆಗೆ ವಯಸ್ಸಿನ ವ್ಯತ್ಯಾಸ ಎಷ್ಟಿರಬೇಕು? ಅಂತರ ಹೆಚ್ಚಿದರೆ ಏನು ತೊಂದರೆಯಾಗುತ್ತದೆ? ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ನಮ್ಮ ಹಳ್ಳಿಯ ಕಡೆ ಹುಡುಗ ಹುಡುಗಿ ಮದುವೆ ಆಗಬೇಕು ಎಂದರೆ ಅವರ ವಯಸ್ಸಿನ ನಡುವೆ ಕೆಲವೊಂದು ಅಂತರಗಳು ಇರಬೇಕು ಎನ್ನುವಂತಹ ಮಾತನ್ನು ಸರ್ವೆಸಾಮಾನ್ಯವಾಗಿ ಹೇಳುತ್ತಾರೆ. ಹಾಗಾದರೆ ಗಂಡ-ಹೆಂಡತಿಯ ನಡುವೆ ಎಷ್ಟು ವಯಸ್ಸಿನ ಅಂತರ ಇರಬೇಕು ಹಾಗೂ ಹೆಚ್ಚು ಕಡಿಮೆ ಇದ್ದರೆ ಏನೆಲ್ಲಾ ಆಗುತ್ತದೆ ಎನ್ನುವುದರ ಬಗ್ಗೆ ನಾವಿಲ್ಲಿ ತಿಳಿಯಬಹುದು. ನಮ್ಮ ಹಿರಿಯರು ಏನೇ ಮಾಡಿದರೂ ಕೂಡ ಅದರ ಹಿಂದೆ ಒಂದು ಒಳ್ಳೆಯ ಉದ್ದೇಶ ಇರುತ್ತದೆ ಗಂಡು-ಹೆಣ್ಣಿನ ನಡುವೆ ಕೆಲವೊಂದು ವರ್ಷಗಳ ಅಂತರ ಇರಬೇಕು ಎಂದು ನಮ್ಮ ಹಿರಿಯರು ಆಗಲೇ ಹೇಳಿದ್ದಾರೆ.

ಹಿರಿಯರು ಹೇಳುವ ಪ್ರಕಾರ ಗಂಡು ಹಾಗೂ ಹೆಣ್ಣಿನ ನಡುವೆ ಮೂರರಿಂದ ನಾಲ್ಕು ವರ್ಷ ಅಂತರ ಇರಬೇಕು. ಇದಕ್ಕೆ ಕಾರಣ ಎಂದರೆ ಹೆಂಡತಿಯು ಗಂಡನಿಗಿಂತ ಪ್ರತಿಯೊಂದು ವಿಚಾರದಲ್ಲೂ ಕೂಡ ಉತ್ತಮವಾಗಿ ಆಲೋಚನೆ ಮಾಡುವಂತಹ ಗುಣವನ್ನು ತನ್ನ ಸಣ್ಣ ವಯಸ್ಸಿನಿಂದಲೇ ತಿಳಿದುಕೊಂಡಿರುತ್ತಾಳೆ. ಹಾಗೂ ಹೆಚ್ಚಾಗಿ ಗಂಡನಿಗಿಂತ ಹೆಣ್ಣಿಗೆ ಸಹನಶಕ್ತಿ ಹೆಚ್ಚಾಗಿರುತ್ತದೆ. ಹುಡುಗ ಸ್ವಲ್ಪ ಬಾಲಿಶವಾಗಿ ಆಡುತ್ತಿದ್ದರು ಸಹ ಅವನನ್ನ ಕಟ್ಟಿಕೊಂಡ ಹೆಂಡತಿ ತನ್ನ ಸಣ್ಣ ವಯಸ್ಸಿನಲ್ಲಿಯೇ ಹೆಚ್ಚಾಗಿ ಸಂಸಾರದ ಭಾರವನ್ನು ಹೊಂದುವಂತಹ ಪ್ರಬುದ್ಧತೆಯನ್ನು ಹೊಂದಿರುತ್ತಾಳೆ.

ನಾವು ಸಮಾಜದಲ್ಲಿ ಕೆಲವೊಂದು ಜೋಡಿಗಳನ್ನು ನೋಡಿರಬಹುದು ಅದರಲ್ಲಿ ಗಂಡಿನ ವಯಸ್ಸು ತುಂಬಾ ಸಣ್ಣದಾಗಿರುತ್ತದೆ ಹಾಗೂ ಅವನ ವರ್ತನೆ ಅಥವಾ ಅವನು ಮಾಡುವಂತಹ ಕೆಲವೊಂದು ಅವತಾರಗಳು / ಕೆಲಸಗಳನ್ನು ನೋಡಿದರೆ ಇವನು ಇನ್ನು ಚಿಕ್ಕ ಹುಡುಗ ಎಂದು ಅಂದುಕೊಳ್ಳುತ್ತೇವೆ ಆದರೆ ಅವನನ್ನು ಕಟ್ಟಿಕೊಂಡ ಹಾಗೂ ಅವನಿಗಿಂತ ಚಿಕ್ಕ ವಯಸ್ಸಿನ ಹುಡುಗಿ ತುಂಬಾ ಪ್ರೌಢಿಮೆ ಹೊಂದಿರುತ್ತಾಳೆ. ಅದಕ್ಕೆ ಹೇಳೋದು ಹುಡುಗಿಯರು ತಮ್ಮ ಮುಂದಿನ ಭವಿಷ್ಯದ ಬಗ್ಗೆ ಹೆಚ್ಚಾಗಿ ಆಲೋಚನೆಯನ್ನು ಮಾಡುತ್ತಾರೆ.

ಅದೆಲ್ಲ ಬಿಟ್ಟು ಹೆಣ್ಣು ಗಂಡಿಗಿಂತ ವಯಸ್ಸಿನಲ್ಲಿ ತುಂಬಾ ದೊಡ್ಡವಳಾಗಿದ್ದು ಅಥವಾ ಹೆಣ್ಣಿನ ವಯಸ್ಸು ಗಂಡನಿಗಿಂತ ತುಂಬಾ ಚಿಕ್ಕ ವಯಸ್ಸು ಆಗಿದ್ದರೆ ಅವರಿಬ್ಬರ ನಡುವೆ ಸಾಮರಸ್ಯ ಜೀವನ ಅಷ್ಟೊಂದು ಸುಖಕರವಾಗಿ ಇರುವುದಿಲ್ಲ ಆದುದರಿಂದ ವಯಸ್ಸಿನ ಅಂತರ ಕನಿಷ್ಠ ಮೂರರಿಂದ ಐದು ವರ್ಷವಾದರೂ ಅಂತರವಿದ್ದು ಮದುವೆ ಮಾಡಿಕೊಳ್ಳುವುದಕ್ಕೆ ಉತ್ತಮವಾದಂತಹ ವಿಚಾರ ಎನ್ನುವುದು ದೊಡ್ಡವರ ಅಭಿಪ್ರಾಯ. ಗಂಡು ಹಾಗೂ ಹೆಣ್ಣಿನ ನಡುವೆ ಕನಿಷ್ಠ ಮೂರರಿಂದ ಐದು ವರ್ಷಗಳ ಅನಂತರ ಇದ್ದಾಗ ಸಂಸಾರದಲ್ಲಿ ಒಳ್ಳೆಯ ಬಾಂಧವ್ಯ, ತಿಳುವಳಿಕೆ ಬರುತ್ತದೆ ಹಾಗೂ ಯಾವುದೇ ರೀತಿಯಾದಂತಹ ತೊಡಕುಗಳು ಬರುವುದಿಲ್ಲ.

ಇನ್ನೂ ನಾವು ಖಾಸಗಿಯ ವಿಚಾರಕ್ಕೆ ಬರುವುದಾದರೆ ಗಂಡಸರಿಗೆ 30 ವರ್ಷದ ನಂತರ ಹೆಚ್ಚಾಗಿ ಮಿಲನ ಮಾಡುವುದರ ಬಗ್ಗೆ ಹೆಚ್ಚಾಗಿ ಆಲೋಚನೆಯನ್ನು ಮಾಡುತ್ತಾರೆ ಹಾಗೂ ಅದಕ್ಕೆ ಹೆಚ್ಚಾಗಿ ಪ್ರಾಮುಖ್ಯತೆಯನ್ನು ಕೊಡುತ್ತಾರೆ. ಹೀಗೆ ವಯಸ್ಸಿನ ಅಂತರ ಏನಾದರೂ ಹೆಚ್ಚು ಕಡಿಮೆ ಇದ್ದಲ್ಲಿ ಅವರಿಬ್ಬರ ನಡುವೆ ಒಳ್ಳೆಯ ಸಂಬಂಧ ಏರ್ಪಡುವುದಿಲ್ಲ ಇದರಿಂದಾಗಿ ಖಾಸಗಿ ಸಂಬಂಧದಲ್ಲಿ ಬಿರುಕು ಬಿಡುವ ಸಾಧ್ಯತೆ ಇರುತ್ತದೆ. ಮದುವೆ ವಯಸ್ಸಿನ ಅಂತರ ಕಡಿಮೆ ಇದ್ದರೆ ಸಾಮಾನ್ಯವಾಗಿ ಯುವತಿಯರು ಹೆಚ್ಚು ಆರೋಗ್ಯವಂತ ಮಕ್ಕಳನ್ನು ಹೆರುತ್ತಾರೆ.

ವಯಸ್ಸಾದ ಮಹಿಳೆ ಅಥವಾ ಹೆಚ್ಚು ವಯಸ್ಸಾದ ಪುರುಷನನ್ನು ಮದುವೆಯಾಗುವುದು ಸಂತಾನೋತ್ಪತ್ತಿ ಯಶಸ್ಸಿಗೆ ಅತ್ಯಂತ ಹಾನಿಕಾರಕವಾಗಿದೆ. ಇನ್ನೂ ಕೆಲವರು ಗಂಡು ಹೆಣ್ಣಿನ ವಯಸ್ಸಿನಲ್ಲಿ ಅಂತರ ಇರುವಂತಹ ವ್ಯಕ್ತಿಗಳಲ್ಲಿ ಬಹಳಷ್ಟು ಸಮರಸದ ಸಮಸ್ಯೆಗಳು ಉಂಟಾಗುತ್ತದೆ ಇದಕ್ಕಾಗಿ 20 ರಿಂದ 30 ವರ್ಷಗಳು ಖಾಸಗಿ ವಿಚಾರದಲ್ಲಿ ತೊಡಕುಂಟಾಗಿದೆ ಎಂದು ಹೇಳಿ ತಮ್ಮನ್ನು ತಾವು ಬೇರ್ಪಡಿಸಿಕೊಳ್ಳುತ್ತಾರೆ ಹಾಗೂ ಅವರ ಜೀವನವನ್ನು ನೋಡಿಕೊಳ್ಳುತ್ತಾರೆ.

By

Leave a Reply

Your email address will not be published. Required fields are marked *