2020ನೇ ಸಾಲಿನ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ನಾಗರಿಕ ಸೇವೆಗಳ ನೇಮಕಾತಿ ಪರೀಕ್ಷೆ ಬರೆದ ಕರ್ನಾಟಕದ 18 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಇನ್ನೂ ಮೊದಲ ರ್ಯಾಂಕ್ ನಲ್ಲಿ ಶುಭಂ ಕುಮಾರ್‌, 2ನೇ ರ್ಯಾಂಕ್ ನಲ್ಲಿ ಜಾಗೃತಿ ಅವಸ್ಥಿ, 3ನೇ ಸ್ಥಾನದಲ್ಲಿ ಅಂಕಿತಾ ಜೈನ್ ಇದ್ದು, ಮೂವರೂ ಕೂಡ ಎಂಜಿನಿಯರಿಂಗ್‌ ಪದವೀಧರರಾಗಿದ್ದಾರೆ.

ಪುರುಷರು ಮತ್ತು 216 ಮಹಿಳೆಯರು ಸೇರಿದಂತೆ ಒಟ್ಟು 761 ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ವಿವಿಧ ನಾಗರಿಕ ಸೇವೆಗಳಿಗೆ ಸೇರ್ಪಡೆ ಆಗಲಿದ್ದಾರೆ. ಐಎಎಸ್‌, ಐಎಫ್‌ಎಸ್‌, ಐಪಿಎಸ್‌ ಅಧಿಕಾರಿ ಹುದ್ದೆ ಸೇರಿದಂತೆ ಇತರ ಹುದ್ದೆಗಳ ನೇಮಕಾತಿಗಾಗಿ 2020ರ ಅಕ್ಟೋಬರ್‌ 4ರಂದು ನಡೆದಿದ್ದ ಪ್ರಿಲಿಮ್ಸ್‌ ಪರೀಕ್ಷೆಯಲ್ಲಿ 4,82,770 ಅಭ್ಯರ್ಥಿಗಳು ಹಾಜರಾಗಿದ್ದರು.

ಈ ಪೈಕಿ 10, 564 ಅಭ್ಯರ್ಥಿಗಳು 2021ರ ಜನವರಿಯಲ್ಲಿ ನಡೆದಿದ್ದ ಮುಖ್ಯ ಲಿಖಿತ ಪರೀಕ್ಷೆಗೆ ಅರ್ಹತೆ ಪಡೆದಿದ್ದರು. ಈ ಪೈಕಿ 2, 053 ಅಭ್ಯರ್ಥಿಗಳು ಮೌಖಿಕ ಸಂದರ್ಶನಕ್ಕೆ ಆಯ್ಕೆಯಾಗಿದ್ದರು. ಅಭ್ಯರ್ಥಿಗಳು ಪಡೆದ ಅಂಕಗಳ ಪಟ್ಟಿಯನ್ನು 15 ದಿನಗಳೊಳಗೆ ಆಯೋಗದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು ಎಂದು ಯುಪಿಎಸ್‌ಸಿ ಪ್ರಕಟಣೆ ತಿಳಿಸಿದೆ. ಇಂತಹ ಕ್ಲಿಷ್ಟಕರವಾದ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಕುಗ್ರಾಮದ ಮಮತಾ ಎಂಬ ಯುವತಿ ಸಾಧನೆ ಸಾಧನೆ ಮಾಡಿದ್ದಾಳೆ. ಕುಗ್ರಾಮದ ಈ ಯುವತಿಯ ಸಾಧನೆಗೆ ಮೆಚ್ಚುಗೆ ವ್ಯಕ್ತವಾಗಿದೆ. ಇದರ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಬಡತನ ಮೆಟ್ಟಿ ನಿಂತು ಶಿಕ್ಷಣ ಪಡೆಯುವುದಕ್ಕೆ ಗ್ರಾಮೀಣ ಪ್ರದೇಶದ ಯುವಕ, ಯುವತಿಯರು ಪ್ರತಿ ನಿತ್ಯ ಒಂದಿಲ್ಲೊಂದು ಹರಸಾಹಸ ಮಾಡುತ್ತಾರೆ. ಇವರ ಪ್ರಯತ್ನಕ್ಕೆ ಕೊಂಚ ಸಹಕಾರ, ಆಸರೆ ಸಿಕ್ಕರೆ ಹಳ್ಳಿ ಮಕ್ಕಳು ದಿಲ್ಲಿಯಲ್ಲೂ ಹೆಸರು ಮಾಡುತ್ತಾರೆ ಅನ್ನೋದರಲ್ಲಿ ಯಾವ ಅನುಮಾನ ಬೇಡವೇ ಬೇಡ. ಇದಕ್ಕೆ ಸಾಕ್ಷಿಯಾಗಿ ಚಿತ್ರದುರ್ಗ ಜಿಲ್ಲೆಯ ದಲಿತ ಸಮುದಾಯದ ಯುವತಿ ಜಿ. ಮಮತಾ  ಯುಪಿಎಸ್ಸಿ ಮೈನ್ ಪರೀಕ್ಷೆಯಲ್ಲಿ ಪಾಸ್  ಆಗಿ ಇಡೀ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಈಕೆಯ ಯಶಸ್ಸಿನ ಹಾದಿ ಕಂಡು ಸಾರ್ವಜನಿಕರು, ಜನಪ್ರತಿನಿಧಿಗಳು, ಮಠಾಧೀಶರು ಅಭಿನಂದನೆ ಸಲ್ಲಿಸಿ ಶುಭಾಶಯಗಳನ್ನು ತಿಳಿಸಿದ್ದಾರೆ. ಎರಡು ಬಾರಿ ಬರೆದ ಪರೀಕ್ಷೆಯಲ್ಲಿ ವಿಫಲರಾದ ಅವರು ಛಲ ಬಿಡದೆ ಓದಲು ಪ್ರಾರಂಭ ಮಾಡಿ, ಇದೀಗ ಮೂರನೇ ಬಾರಿ ಪರೀಕ್ಷೆಯಲ್ಲಿ 707 ನೇ ರ್ಯಾಂಕ್ ಪಡೆದು ಪಾಸ್ ಆಗಿ ತಮ್ಮ ಕನಸನ್ನು ನನಸಾಗಿಸಿಕೊಂಡಿದ್ದಾರೆ.

ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ದೇವಪುರ ಭೋವಿಹಟ್ಟಿಯ ಗೋವಿಂದಪ್ಪ ಚಂದ್ರಮ್ಮ ದಂಪತಿ ಪುತ್ರಿ ಜಿ. ಮಮತಾ ಹುಟ್ಟೂರಲ್ಲಿಯೇ ಕನ್ನಡ ಮಾಧ್ಯಮದಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆದಿದ್ದಾರೆ. ಇವರ ಶಿಕ್ಷಣದ ಮೇಲಿನ ಆಸಕ್ತಿ ಹೆಚ್ಚಿದಂತೆಲ್ಲೆ ಖಾಸಗಿ ಶಾಲೆಯ ಶಿಕ್ಷಕರಾಗಿದ್ದ ಮಮತಾ ಅವರ ತಂದೆ ಗೋವಿಂದಪ್ಪ ಮಗಳಿಗೆ ಪ್ರೋತ್ಸಾಹ ನೀಡುತ್ತಾ ಹೊಸದುರ್ಗ ಹಾಗೂ ಶಿವಮೊಗ್ಗದಲ್ಲಿ ಪ್ರೌಢ ಹಾಗೂ ಪದವಿ ಪೂರ್ವ ಶಿಕ್ಷಣವನ್ನು ಕೊಡಿಸಿದ್ದರು.

ಅಲ್ಲಿಂದ ಓದಿನ ಆಸಕ್ತಿಯನ್ನ ಮತ್ತಷ್ಟು ಹೆಚ್ಚಿಸಿಕೊಂಡ ಮಮತಾ ತನ್ನೂರಿಗೆ ಕೀರ್ತಿ ತರಬೇಕು ಸರ್ಕಾರಿ ನೌಕರಿ ಪಡೆಯಲೇ ಬೇಕೆಂಬ ಹುಮ್ಮಸ್ಸಿನಲ್ಲಿ ಬೆಂಗಳೂರಿನ ಆರ್​ವಿ ಇಂಜಿನಿಯರಿಂಗ್ ಕಾಲೇಜಲ್ಲಿ ಪದವಿ ಶಿಕ್ಷಣ ಪಡೆದು ಉತ್ತಮ ಅಂಕ ಗಳಿಸಿದ್ದರು.

ಬಳಿಕ ಐಎಎಸ್ ಆಗುವ ಕನಸು ಕಂಡು ಯುಪಿಎಸ್ಸಿ ಪರೀಕ್ಷೆ ತರಬೇತಿ ಪಡೆದಿದ್ದರು. ಇನ್ನೂ ಈ ಯುವತಿಯ ಸಾಧನೆಗೆ ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ತಾಲೂಕಿನಲ್ಲೇ ಅತ್ಯಂತ ಹಿಂದುಳಿದಿರುವ ದೇವಪುರ ಭೋವಿ ಹಟ್ಟಿಯಲ್ಲಿ ಹುಟ್ಟಿ ಬೆಳೆದ, ಪರಿಶಿಷ್ಟ ಜಾತಿ ಭೋವಿ ಜನಾಂಗದಲ್ಲಿ ಹುಟ್ಟಿ ಸಂಕಷ್ಟದಲ್ಲಿಯೂ ಅತ್ಯುನ್ನತ ಸಾಧನೆಯನ್ನು ಸಾಕಾರಗೊಳಿಸಿರುವ ಸಹೋದರಿ ಮಮತಾ ಸಾಧನೆಗೆ ಮೆಚ್ಚುಗೆ ವ್ಯಕ್ತಪಿಸಿದ್ದಾರೆ.  ದೇಶದ ಅತ್ಯುನ್ನತ ಅಧಿಕಾರಿ ಸ್ಥಾನವನ್ನು ಅಲಂಕರಿಸುತ್ತಿರುವ ಈ ಹೆಣ್ಣು ಮಗಳಿಗೆ ನಾನೂ ಹೃದಯ ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಸಾಧನೆ ಎಂಬುದು ಯಾರೋಬ್ಬರ ಸ್ವತ್ತಲ್ಲ. ನಿಖರ ಗುರಿ ಹಾಗೂ ಸದೃಢ ಮನಸ್ಸನ್ನು ಹೊಂದಿರುವ ಯಾರೋಬ್ಬರು ಕೂಡ ಸಾಧನೆ ಮಾಡಬಹುದು ಎಂಬುದಕ್ಕೆ ಮಮತ.ಜಿ ಅವರೇ ಸಾಕ್ಷಿ ಎಂದು ಹೊಗಳಿದ್ದಾರೆ. ಇನ್ನೂ ಇವರ ಸಾಧನೆಗೆ ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮಿಜಿ ಶ್ರೀ ಮಠಕ್ಕೆ ಬರ ಮಾಡಿಕೊಂಡು ಸನ್ಮಾನಿಸಿ ಆಶೀರ್ವಾದಿಸಿದ್ದಾರೆ. ಅಲ್ಲದೇ ಶಿಕ್ಷಣಕ್ಕಿರು ಶಕ್ತಿ ಯಿಂದ ಮಮತಾ ಉನ್ನತ ಹುದ್ದೆ ಅಲಂಕರಿಸಲಿದ್ದಾರೆ.

ಅವರಂತೆ ಯುವ ಸಮೂಹ ಸಾಧನೆಯ ಹಾದಿಯಲ್ಲಿ ಶಿಕ್ಷಣ ಪಡೆದು IAS, IPS, ನಂತ ಉನ್ನತ ಹುದ್ದೆ ಪಡೆಯಲಿ ಎಂದಿದ್ದಾರೆ. ಎರಡು ಬಾರಿ ಬರೆದ ಪರೀಕ್ಷೆಯಲ್ಲಿ ವಿಫಲರಾದ ಅವರು ಛಲ ಬಿಡದೆ ಓದಲಿ ಪ್ರಾರಂಭ ಮಾಡಿ, ಇದೀಗ ಮೂರನೇ ಬಾರೀ ಪರೀಕ್ಷೆಯಲ್ಲಿ 707 ನೇ ರ್ಯಾಂಕ್ ಪಡೆದು ಪಾಸ್ ಆಗಿದ ಕನಸು ನನಸಾಗಿಸಿಕೊಂಡಿದ್ದಾರೆ. ಇದೀಗ ರ್ಯಾಂಕ್ ಆಧಾರದ ಮೇಲೆ IRS, IFS , ಹುದ್ದೆಯ ನಿರೀಕ್ಷೆಯಲ್ಲಿದ್ದಾರೆ. ಆದರೆ ಅವರ ಪ್ರಯತ್ನ ಇಲ್ಲಿಗೆ ಮುಗಿಯದೆ ತಾನಂದುಕೊಂಡಂತೆ ಮತ್ತೆ ಪರೀಕ್ಷೆ ಬರೆದು IAS ಆಗುತ್ತೇನೆ ಎಂಬ ಭರವಸೆ ಹೊರ ಹಾಕಿದ್ದಾರೆ.

ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave a Reply

Your email address will not be published. Required fields are marked *