ವೃತ್ತಿಯಲ್ಲಿ ಕ್ಷೌರಿಕ, ರಾತ್ರೋ ರಾತ್ರಿ ಕೋಟ್ಯಾಧಿಪತಿಆಗಿದ್ದು ಹೇಗೆ ಗೊತ್ತೆ..

0 1

ಕ್ರಿಕೆಟ್ ಎಂದರೆ ಹಾಗೆ ಭಾರತದ ಪ್ರತಿಯೊಬ್ಬರಿಗೂ ರೋಮಾಂಚನ, ಏನೋ ಪುಳಕ. ಅದರಲ್ಲೂ ಭಾರತೀಯರಿಗಿಂತ ಹೆಚ್ಚು ಕ್ರಿಕೆಟ್‌ ಆಟವನ್ನು ಇಷ್ಟಪಡುವ ರಾಷ್ಟ್ರ ಇನ್ನೊಂದಿಲ್ಲ ಎಂದು ಹೇಳಬಹುದು. ಹಾಗಾಗಿಯೇ ಕ್ರಿಕೆಟ್ ಪ್ರೇಮಿಗಳಿಗಾಗಿಯೇ ‘ಡ್ರೀಮ್ 11’ ಫ್ಯಾಂಟಸಿ ಕ್ರಿಕೆಟ್ ಲೀಗ್‌ ಎನ್ನುವ ಆಪ್‌ ಒಂದು ಹುಟ್ಟಿಕೊಂಡಿದೆ. ಕಳೆದೆರಡು ವರ್ಷಗಳಿಂದಲೂ ಸುದ್ದಿಯಲ್ಲಿರುವ ಈ ಆಪ್‌ನಲ್ಲಿ ಈಗ ಬರೋಬ್ಬರಿ 20 ಲಕ್ಷ ಜನರು ಫ್ಯಾಂಟಸಿ ಗೇಮ್ ಆಡುತ್ತಿದ್ದಾರೆ.

ಲೈವ್ ನಡೆಯುತ್ತಿರುವ ಪಂದ್ಯಗಳಲ್ಲಿ ಫ್ಯಾಂಟಸಿ ಕ್ರಿಕೆಟ್ ಲೀಗ್‌ ಆಡಬಹುದಾಗಿದ್ದು, ನಿಮಗೆ ಕ್ರಿಕೆಟ್ ಸ್ಕಿಲ್‌ಗಳ ಬಗ್ಗೆ ಹೆಚ್ಚು ತಿಳಿದಿದ್ದರೆ ನಿವು ಹೆಚ್ಚು ಹಣಗಳಿಸಬಹುದಾಗಿದೆ. ಫ್ಯಾಂಟಸಿ ಸ್ಪೋರ್ಟ್ಸ್ ಮತ್ತು ಸ್ಪೋರ್ಟ್ಸ್ ಬೆಟ್ಟಿಂಗ್ ಎರಡು ವಿಷಯಗಳು ಅಯಸ್ಕಾಂತದ ಎರಡು ವಿರುದ್ದ ದಿಕ್ಕುಗಳಿದ್ದಂತೆ ಎಂದು ಹೇಳಿಕೊಂಡಿರುವ ಡ್ರೀಮ್ 11 ಸಂಸ್ಥೆ, ಕ್ರಿಕೆಟ್ ಅಥವಾ ಇತರೆ ಗೇಮ್‌ಗಳ ಬಗ್ಗೆ ನೀವು ಹೆಚ್ಚು ತಿಳಿದುಕೊಂಡಿದ್ದರೆ ನೀವು ಕಾನೂನಾತ್ಮಕವಾಗಿಯೇ ಹಣ ಗಳಿಸಬಹುದು ಎಂದು ತಿಳಿಸಿತ್ತು. ಅದೇ ರೀತಿ ಈಗ ಆ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಕ್ಷೌರಿಕನೊಬ್ಬ ರಾತ್ರೋರಾತ್ರಿ ಕೋಟ್ಯಧಿಪತಿಯಾದ ಘಟನೆಯೊಂದು ನಡೆದಿದೆ. ಇದರ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ನಾವು ಲೇಖನದ ಮೂಲಕ ತಿಳಿದುಕೊಳ್ಳೋಣ.

ಡ್ರೀಮ್ 11′ ಫ್ಯಾಂಟಸಿ ಕ್ರಿಕೆಟ್ ಲೀಗ್‌ ಆಪ್‌ ಹೆಚ್ಚು ಸೆಕ್ಯೂರ್ ಆಪ್ ಆಗಿದ್ದು, ಈ ಭಾರತದ 100 ಸ್ಟಾರ್ಟ್‌ಅಪ್‌ಗಳಲ್ಲಿ ಇದು ಸಹ ಒಂದಾಗಿದೆ. ನೀವು ಕ್ರಿಕೆಟ್ ಬಗ್ಗೆ ಹೆಚ್ಚು ತಿಳಿದುಕೊಂಡಿದ್ದರೆ ನೀವು ಈ ಆಪ್‌ ಮೂಲಕ ಹಣ ಗಳಿಸಬಹುದಾಗಿದೆ. ಪ್ರಪಂಚದಾದ್ಯಂತ ಈ ಆಪ್‌ ಮೂಲಕ ಹಲವರು ಹಣಗಳಿಸುತ್ತಿದ್ದಾರೆ. ಹಾಗೆಯೇ ಇದು ಯಾವುದೇ ಕ್ರೀಡಾ ಬೆಟ್ಟಿಂಗ್ ಅಲ್ಲ. ಕ್ರಿಕೆಟ್ ಅಥವಾ ಇತರೆ ಗೇಮ್‌ಗಳ ಬಗ್ಗೆ ನೀವು ಹೆಚ್ಚು ತಿಳಿದುಕೊಂಡಿದ್ದರೆ ನೀವು ಕಾನೂನಾತ್ಮಕವಾಗಿಯೇ ‘ಡ್ರೀಮ್ 11’ನಲ್ಲಿ ಹಣ ಗಳಿಸಬಹುದು ಎಂದು ಸಂಸ್ಥೆ ತಿಳಿಸಿದೆ.

ಹಣ ಗೆದ್ದವರು ಟ್ಯಾಕ್ಸ್ ಕಟ್ಟುವುದರಿಂದ ಇತರೆ ತೊಂದರೆಗಳು ಸಹ ಇರುವುದಿಲ್ಲ. ಇಂಡಿಯನ್ ಪ್ರೀಮಿಯರ್ ಲೀಗ್ ಸೇರಿ ಇತರೆ ಯಾವುದೇ ಕ್ರಿಕೆಟ್ ಪಂದ್ಯಗಳು ನಡೆಯುವಾಗ ದೇಶದ ಕೋಟ್ಯಂತರ ಜನರು ಡ್ರೀಮ್ ಇಲೆವನ್ ಆಡ್ತಾರೆ. ತಮ್ಮ ಕನಸಿನ ತಂಡ ಕಣಕ್ಕಿಳಿಸಿ, ಹಣ ಗೆಲ್ಲುತ್ತಾರೆ. ಇದರಲ್ಲಿ ಜಯ ಕಂಡವರಿಗಿಂತಲೂ ವಿಫಲರಾಗಿರುವ ಜನರೇ ಹೆಚ್ಚು. ಇಂತಹ ಅನೇಕ ನಿದರ್ಶನಗಳು ನಮ್ಮ ಮುಂದೆ ಕೂಡ ಇವೆ. ಆದರೆ, ಇಲ್ಲೋರ್ವ ಕ್ಷೌರಿಕ ದಾಖಲೆಯ ಒಂದು ಕೋಟಿ ರೂಪಾಯಿ ಹಣವನ್ನು ಗೆದ್ದಿದ್ದಾನೆ.

ಬಿಹಾರದ ಮಧುಬನಿ ಜಿಲ್ಲೆಯ ಕ್ಷೌರಿಕ ಅಶೋಕ್​, ಚೆನ್ನೈ ಸೂಪರ್ ಕಿಂಗ್ಸ್​​ ಮತ್ತು ಕೋಲ್ಕತ್ತಾ ನೈಟ್​ ರೈಡರ್ಸ್​​ ತಂಡಗಳ ನಡುವಿನ ಪಂದ್ಯದಲ್ಲಿ ಒಂದು ಕೋಟಿ ರೂಪಾಯಿ ಹಣವನ್ನು ಗೆದ್ದಿದ್ದಾರೆ. ಈ ಪಂದ್ಯದ ವೇಳೆ ತಮ್ಮ ಕನಸಿನ ತಂಡ ಆಯ್ಕೆ ಮಾಡಿದ್ದ ಅಶೋಕ್​​ ಇಷ್ಟೊಂದು ಹಣ ಗೆದ್ದಿದ್ದಾನೆ. ಹೇರ್ ಕಟಿಂಗ್ ಸಲೂನ್​ ನಡೆಸುವ ಅಶೋಕ್ ಠಾಕೂರ್​, ಬಿಹಾರದ ಮಧುಬನಿಯ ಅಂಧರಥಾರಿ ಬ್ಲಾಕ್​​ನಲ್ಲಿ ಶಾಪ್​ ಇಟ್ಟುಕೊಂಡಿದ್ದಾನೆ.

ಜೀವನೋಪಾಯಕ್ಕಾಗಿ ಸಲೂನ್​​ ನಂಬಿಕೊಂಡಿರುವ ಅಶೋಕ್​, ಈ ಹಿಂದೆ ಕೂಡ ಅನೇಕ ಸಲ ಡ್ರೀಮ್​ ಇಲೆವೆನ್​​ನಲ್ಲಿ ತಂಡ ಇಳಿಸಿ, ಕೈ ಸುಟ್ಟುಕೊಂಡಿದ್ದಾರೆ. ಕೆಕೆಆರ್ ಕ್ಯಾಪ್ಟನ್​ ಮಾರ್ಗನ್​ ಆದರೆ, ಭಾನುವಾರ ರಾತ್ರಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್​ ರೈಡರ್ಸ್​ ನಡುವಿನ ಪಂದ್ಯದಲ್ಲಿ ಅವರ ಅದೃಷ್ಟ ಖುಲಾಯಿಸಿದೆ. 49 ರೂಪಾಯಿ ಹೂಡಿಕೆ ಮಾಡಿದ್ದ ಆತ, ಡ್ರೀಮ್​ ಇಲೆವೆನ್​ ಮೂಲಕ ಒಂದು ಕೋಟಿ ರೂಪಾಯಿ ಹಣ ಗೆದ್ದಿದ್ದಾರೆ. ಇದರಲ್ಲಿ ಶೇ.30ರಷ್ಟು ಕಡಿತಗೊಂಡು ಒಟ್ಟು 70 ಲಕ್ಷ ರೂ. ಅವರ ಅಕೌಂಟ್​ಗೆ ಜಮಾವಣೆಯಾಗಲಿದೆ. ಈ ಹಣದಿಂದ ತಾನು ಮಾಡಿರುವ ಸಾಲ ತೀರಿಸಿ, ಹೊಸ ಮನೆ ಕಟ್ಟಲು ಅಶೋಕ್ ನಿರ್ಧರಿಸಿದ್ದಾನೆ.

ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave A Reply

Your email address will not be published.