ನೈಸರ್ಗಿಕ ಪದ್ಧತಿಯನ್ನು ಅನುಸರಿಸಿ ಬೆಳೆಗಳನ್ನು ಬೆಳೆಯುವುದರಿಂದ ನಾವು ಹೆಚ್ಚಿನ ಇಳುವರಿಯನ್ನು ಪಡೆಯಬಹುದು ನೈಸರ್ಗಿಕ ಕೃಷಿ ಪದ್ಧತಿಯನ್ನು ಅನುಸರಿಸುವುದರ ಜೊತೆಗೆ ಅದಕ್ಕೆ ಬಹುಬೆಳೆ ಪದ್ಧತಿಗಳನ್ನು ಕೂಡ ಅನುಸರಿಸುವುದರಿಂದ ಹೆಚ್ಚಿನ ರೀತಿಯ ಆದಾಯವನ್ನು ಕೂಡ ಗಳಿಸಬಹುದು. ಈ ಕುರಿತಾಗಿ ನಾವಿಂದು ನಿಮಗೆ ಕಳೆದ ಮೂವತ್ತೈದು ವರ್ಷಗಳಿಂದ ಜಿಲ್ಲಾ ರೈತ ಸಂಘದ ಸಂಘಟನೆಯಲ್ಲಿ ಕೆಲಸ ಮಾಡುತ್ತಿರುವಂತಹ ಶಂಕರಪ್ಪ ಅವರು ತಮ್ಮ ತೋಟದಲ್ಲಿ ಅಡಿಕೆ ಬೆಳೆಯಲು ಯಾವ ರೀತಿಯ ಕ್ರಮಗಳನ್ನು ಅನುಸರಿಸುತ್ತಾರೆ ಎಂಬುದರ ಬಗ್ಗೆ ನಿಮಗೆ ತಿಳಿಸುತ್ತೇವೆ.

ಶಂಕರಪ್ಪನವರು ಹೇಳುವ ಪ್ರಕಾರ ಪ್ರತಿ ತಿಂಗಳು ಅಡಿಕೆ ಮರಗಳಿಗೆ ಬುಡಕ್ಕೆ ಜೀವಾಮೃತವನ್ನು ಹಾಕಬೇಕು ಜೊತೆಗೆ ಅರ್ಧ ಮಂಕ್ರಿ ಗೊಬ್ಬರವನ್ನು ಕೊಡಬೇಕು ಈ ರೀತಿಯಾಗಿ ಮಾಡುವುದರಿಂದ ಭೂಮಿ ಮೆದು ಆಗುತ್ತದೆ. ಇನ್ನು ಅಡಿಕೆ ಗಿಡವನ್ನು ನೆಡುವುದಕ್ಕಾಗಿ ಮಾಡಿರುವ ಕಂದಕಕ್ಕೆ ಸೊಪ್ಪನ್ನು ಮುಚ್ಚಿರುವಾಗ ಅದಕ್ಕೆ ಮೊದಲನೇ ವರ್ಷದಲ್ಲಿ ಸ್ವಲ್ಪ ಮಣ್ಣನ್ನು ಹಾಕಬೇಕು ಎರಡನೇ ವರ್ಷದಲ್ಲಿ ಇನ್ನೊಂದು ಸ್ವಲ್ಪ ಮಣ್ಣನ್ನು ಹಾಕಬೇಕು.

ಮೂರನೇ ವರ್ಷಕ್ಕೆ ಅದು ಸಂಪೂರ್ಣವಾಗಿ ಮುಚ್ಚಿಹೋಗುತ್ತದೆ ಐದನೇ ವರ್ಷಕ್ಕೆ ಅಡಿಕೆ ಫಲ ಬಿಡುವುದಕ್ಕೆ ಪ್ರಾರಂಭಿಸುತ್ತದೆ. ಐದನೇ ವರ್ಷಕ್ಕೆ ಕನಿಷ್ಠ ಅಂದರು ಒಂದು ಗಿಡದಿಂದ ಒಂದು ಕೆಜಿ ಅಡಿಕೆಯನ್ನು ನಿರೀಕ್ಷೆ ಮಾಡಬಹುದು. ನೈಸರ್ಗಿಕ ಕ್ರಮವನ್ನು ಅನುಸರಿಸುವುದರಿಂದ ಐದನೇ ವರ್ಷದಲ್ಲಿ ಫಲವನ್ನು ನಿರೀಕ್ಷೆ ಮಾಡಬಹುದು. ಅಂದರೆ ನಾಲ್ಕುನೂರಐವತ್ತು ಗಿಡದಿಂದ ನಾಲ್ಕೂವರೆ ಕ್ವಿಂಟಲ್ ಇಳುವರಿಯನ್ನು ನಿರೀಕ್ಷೆ ಮಾಡಬಹುದು.

ಇವತ್ತಿನ ದಿನ ಒಂದು ಕ್ವಿಂಟಲ್ ಅಡಿಕೆಗೆ ನಲವತ್ತು ಸಾವಿರ ಬೆಲೆ ಇದೆ ಅಲ್ಲಿಗೆ ನಾವು ನಾಲ್ಕುನೂರಐವತ್ತು ಗಿಡದಿಂದ ಐದನೇ ವರ್ಷದಲ್ಲಿ ನಾವು ಒಂದು ಲಕ್ಷದ ಎಂಬತ್ತು ಸಾವಿರ ರೂಪಾಯಿ ಆದಾಯವನ್ನು ನಿರೀಕ್ಷೆ ಮಾಡಬಹುದು. ಅಲ್ಲಿಯವರೆಗಿನ ಖರ್ಚುಗಳನ್ನು ಅಡಿಕೆ ಸಸಿಗಳ ನಡುವೆ ನೆಟ್ಟಿರುವಂತಹ ಬಾಳೆ ಬೆಳೆಗಳಿಂದ ನಿಭಾಯಿಸಬಹುದು. ನಂತರ ಆರನೇ ವರ್ಷದಲ್ಲಿ ಒಂದು ಅಡಿಕೆ ಗಿಡದಿಂದ ಒಂದುವರೆ ಕೆಜಿಯಷ್ಟು ಅಡಿಕೆಯನ್ನು ನಿರೀಕ್ಷೆ ಮಾಡಬಹುದು. ಅಂದರೆ ಒಟ್ಟಾರೆಯಾಗಿ ಏಳರಿಂದ ಎಂಟು ಕ್ವಿಂಟಲ್ ಇಳುವರಿಯನ್ನು ನಿರೀಕ್ಷೆ ಮಾಡಬಹುದು.

ಅಡಿಕೆ ಬೆಳೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತದೆ. ಸುಮಾರು ಹತ್ತನೇ ವರ್ಷದಲ್ಲಿ ಕನಿಷ್ಠ ಹತ್ತರಿಂದ ಹನ್ನೆರಡು ಕ್ವಿಂಟಾಲ್ ಅಡಿಕೆಯನ್ನು ನಿರೀಕ್ಷೆ ಮಾಡಬಹುದು. ನೈಸರ್ಗಿಕವಾಗಿ ಬೆಳೆ ಬೆಳೆಯುವುದರಿಂದ ಯಾವುದೇ ರೋಗಗಳಿಲ್ಲದೆ, ಜೀವಾಮೃತವನ್ನು ಕೊಡುತ್ತಾ ಹೋದ ಹಾಗೆ ಅದರ ಜೊತೆ ಅರ್ಧ ಮಂಕ್ರಿ ಗೊಬ್ಬರವನ್ನು ಕೊಡುವುದರಿಂದ ವರ್ಷ ವರ್ಷ ಭೂಮಿಯ ಫಲವತ್ತತೆ ಹೆಚ್ಚುತ್ತದೆ.

ಭೂಮಿಗೆ ಯಾವುದೇ ರೀತಿಯ ರಾಸಾಯನಿಕಗಳನ್ನು ಹಾಕದಿದ್ದಾಗ ಇಳುವರಿ ಹೆಚ್ಚಾಗುತ್ತದೆ. ಎಲ್ಲದಕ್ಕಿಂತ ಬಹಳ ಮುಖ್ಯವಾದದ್ದು ಮಲ್ಸಿಂಗ್ ಮಾಡುವಂತದ್ದು ಎರಡು ವರ್ಷಕ್ಕೆ ಬಾಳೆಯನ್ನು ತೆಗೆಯುತ್ತಾರೆ ಏಕೆಂದರೆ ಅಡಿಕೆ ಸಸಿ ಮೂರನೇ ವರ್ಷಕ್ಕೆ ತನ್ನ ಗಾತ್ರವನ್ನು ಹೆಚ್ಚಿಸಿಕೊಂಡು ಬೆಳೆಯಬೇಕು. ಆರನೇ ವರ್ಷದ ನಂತರ ಮತ್ತೆ ನಾಲ್ಕು ಅಡಿಕೆ ಸಸಿಗಳ ನಡುವೆ ಸಾಮಾನ್ಯವಾಗಿ ಬಿಳಿ ಪುಟ್ಬಾಳೆಯನ್ನು ಬೆಳೆಯುತ್ತಾರೆ. ಒಂದು ಬಿಳಿ ಪುಟ್ಬಾಳೆಯನ್ನು ಒಂದು ಕೋಕ್ ಹೀಗೆ ನೇಡುತ್ತಾರೆ ಅದಕ್ಕೆ ಕಾರಣ ಕೋಕ್ ದ್ವಿದಳಧಾನ್ಯ ಬಾಳೆ ಮತ್ತು ಅಡಿಕೆ ಏಕದಳ. ದ್ವಿದಳ ಧಾನ್ಯದ ಎಲೆಗಳು ಹಾಗೂ ಬೇರುಗಳು ಭೂಮಿಗೆ ಮತ್ತು ಸಸ್ಯಕ್ಕೆ ಗೊಬ್ಬರವಾಗಿ ಪರಿವರ್ತನೆಯಾಗಿ ಹೆಚ್ಚಿನ ಇಳುವರಿ ತಂದು ಕೊಡುವುದಕ್ಕೆ ಸಹಾಯಕವಾಗುತ್ತವೆ.

ಈ ಬಾಳೆಯ ತರಗೆಲೆಗಳು ಕೋಕ್ ಗಿಡದ ಎಲೆಗಳು ಇಡೀ ಭೂಮಿಯನ್ನು ಆವರಿಸುತ್ತವೆ ಹಾಗಾಗಿ ಆದ್ರತೆಯನ್ನು ಕಾಪಾಡುತ್ತವೆ ಮತ್ತು ಭೂಮಿಯ ತೇವಾಂಶ ಆವಿಯಾಗುವುದಕ್ಕೆ ಬಿಡುವುದಿಲ್ಲ. ಅಗತ್ಯಕ್ಕೆ ಬೇಕಾದ ತೇವಾಂಶ ಸಿಗುವುದರಿಂದ ಅಲ್ಲಿ ಇಳುವರಿ ಒಂದು ಕೊನೆ ಹೆಚ್ಚಾದರೂ, ಒಂದು ಕೆಜಿ ಅಡಿಕೆ ಹೆಚ್ಚಾಗುತ್ತದೆ ಹಾಗಾಗಿ ಇಳುವರಿ ಪ್ರಮಾಣ ಹೆಚ್ಚಾಗುತ್ತದೆ.

ನಾವು ಆರನೇ ವರ್ಷದಿಂದ ಬಾಳೆಯಲ್ಲಿ ಇಪ್ಪತ್ತೈದು ಸಾವಿರದಿಂದ ಒಂದು ಲಕ್ಷದವರೆಗೆ ಆದಾಯವನ್ನು ನಿರೀಕ್ಷೆ ಮಾಡುತ್ತೇವೆ. ಅದೇ ರೀತಿಯಾಗಿ ಸುಮಾರು ಎರಡು ನೂರು ಕೋಕ್ ಗಿಡಗಳು ಇರುತ್ತವೆ ಅದರಲ್ಲಿ ಒಂದು ಕೋಕೋ ಗಿಡ ಒಂದು ಅರ್ಧ ಕೆಜಿ ಆಗುವಷ್ಟು ಬೀಜವನ್ನು ಕೊಡುತ್ತದೆ ಎರಡು ನೂರು ಗಿಡದಿಂದ ನಾವು ಕನಿಷ್ಠ ಅಂದರು ಒಂದು ಕ್ವಿಂಟಲ್ ಕೋಕ್ ನಿರೀಕ್ಷೆ ಮಾಡಬಹುದು. ಇವತ್ತು ಒಂದು ಕ್ವಿಂಟಲ್ ಕೋಕ್ ಗೆ ಇಪ್ಪತ್ತು ಸಾವಿರ ರೂಪಾಯಿ ಬೆಲೆ ಇದೆ.

ಅದಕ್ಕೆ ಮಂಗಳೂರಿನ ಕಡೆ ಮಾರುಕಟ್ಟೆ ಚೆನ್ನಾಗಿದೆ. ಕೋಕ್ ಬೀಜದಿಂದ ಬರುವ ಆದಾಯಕ್ಕಿಂತ ಹೆಚ್ಚಿನದಾಗಿ ಅದರ ಎಲೆಗಳು ಭೂಮಿಯನ್ನು ಮುಚ್ಚಿ ಇರುತ್ತವೆ. ಆ ಕಾರಣಕ್ಕಾಗಿ ಕೋಕ್ ಗಿಡಗಳನ್ನು ನಾಟಿ ಮಾಡುತ್ತಾರೆ. ಇದರ ನಡುವೆ ಅಗಸಿ ಬೀಜಗಳನ್ನು ಬೆಳೆದರೆ ಅದನ್ನ ಮೇಕೆ ಕುರಿ ಇರುವವರಿಗೆ ಕೊಟ್ಟರೆ ಅದರಿಂದಲೂ ಕೂಡ ಆದಾಯವನ್ನು ನಿರೀಕ್ಷಿಸಬಹುದು.

ನೋಡಿದಿರಲ್ಲ ಸ್ನೇಹಿತರೆ ಯಾವ ರೀತಿಯಾಗಿ ನೈಸರ್ಗಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಇಳುವರಿಯನ್ನು ವರ್ಷದಿಂದ ವರ್ಷಕ್ಕೆ ಹೆಚ್ಚಿಸಬಹುದು ಎಂಬುದನ್ನು ಶಂಕರಪ್ಪ ಅವರು ತಿಳಿಸಿಕೊಟ್ಟಿದ್ದಾರೆ ರಾಸಾಯನಿಕ ಗೊಬ್ಬರಗಳನ್ನು ಭೂಮಿಗೆ ಸೇರಿಸುವುದರಿಂದ ಭೂಮಿಯ ಫಲವತ್ತತೆ ನಾಶವಾಗುವುದರ ಜೊತೆಗೆ ಬೆಳೆಗಳಿಗೆ ಕೆಲವು ರೋಗಗಳು ಬರುತ್ತವೆ. ಹಾಗಾಗಿ ನೀವು ಕೂಡ ನೈಸರ್ಗಿಕ ಕೃಷಿ ಪದ್ಧತಿಯನ್ನು ಅನುಸರಿಸುವುದರ ಜೊತೆಗೆ ಬಹುಬೆಳೆ ಪದ್ಧತಿಯನ್ನು ಅನುಸರಿಸುವುದರಿಂದ ಉತ್ತಮವಾದ ರೀತಿಯಲ್ಲಿ ಆದಾಯವನ್ನು ಗಳಿಸಬಹುದು.

ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave a Reply

Your email address will not be published. Required fields are marked *