ಮನೆಯಲ್ಲೇ ಬಿಡುವಿನ ಸಮಯದಲ್ಲಿ ಖಾರದ ಪುಡಿ ಮೇಕಿಂಗ್ ಬಿಸಿನೆಸ್ ಮಾಡಬಹುದು. ಹಾಗಾದರೆ ಈ ಬಿಸಿನೆಸ್ ಪ್ರಾರಂಭಿಸುವುದು ಹೇಗೆ, ಖಾರದ ಪುಡಿ ಅಥವಾ ಮೆಣಸಿನ ಪುಡಿ ತಯಾರಿಸುವ ವಿಧಾನ, ಬೇಕಾದ ಸ್ಥಳ, ಬಂಡವಾಳ, ರಾ ಮಟೀರಿಯಲ್ಸ್, ಮಾರ್ಕೆಟಿಂಗ್ ಬಗ್ಗೆ ಹಾಗೂ ಲಾಭದ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ.

ಗುಡಿ ಕೈಗಾರಿಕೆಯಿಂದ ಹೆಚ್ಚು ಲಾಭವನ್ನು ಗಳಿಸಬಹುದು. ಮಹಿಳೆಯರು ಕೂಡ ಗುಡಿ ಕೈಗಾರಿಕೆಯಲ್ಲಿ ತೊಡಗಿಸಿಕೊಳ್ಳಬಹುದು ಅಲ್ಲದೆ ಮನೆಯಲ್ಲೆ ಬಿಸಿನೆಸ್ ಮಾಡಬಹುದು. ಮನೆಯಲ್ಲಿ ಖಾರದ ಪುಡಿ ಮೇಕಿಂಗ್ ಬಿಸಿನೆಸ್ ಮಾಡಬಹುದು. ಖಾರದ ಪುಡಿ ಮಾಡಿಸಲು ದೊಡ್ಡ ನಗರಗಳಿಗೆ ಹೋಗಬೇಕು ಇದರಿಂದ ಹಣ ಖರ್ಚಾಗುತ್ತದೆ. ಮನೆಗೆ ಬೇಕಾಗುವ 1-2 ಕೆಜಿ ಖಾರದ ಪುಡಿಗೆ ಹೆಚ್ಚಿನ ಹಣ ಕೊಡಬೇಕಾಗುತ್ತದೆ. ಒಂದು ಮಷೀನ್ ಮೂಲಕ ಮನೆಯಲ್ಲಿ ಖಾರದ ಪುಡಿ ಮಾಡಿಕೊಳ್ಳಬಹುದು ಅಲ್ಲದೆ ಬಿಸಿನೆಸ್ ಕೂಡ ಮಾಡಬಹುದು. ದಿನಕ್ಕೆ ಮಷೀನ್ ಮೂಲಕ 100 ಕೆಜಿ ಮೆಣಸಿನ ಪೌಡರ್ ತಯಾರಿಸಬಹುದು.
ಈ ಬಿಸಿನೆಸ್ ಪ್ರಾರಂಭಿಸಲು ಹೆಚ್ಚಿನ ಸ್ಥಳಾವಕಾಶ ಬೇಡ ಮನೆಯಲ್ಲಿರುವ ಸ್ಥಳದಲ್ಲಿಯೆ ಈ ಬಿಸಿನೆಸ್ ಪ್ರಾರಂಭಿಸಬಹುದು. ಒಂದು ಆಟೋಮೆಟಿಕ್ ಮಷೀನ್ ಅನ್ನು ಖರೀದಿ ಮಾಡಬೇಕು. ಖಾರದ ಪುಡಿಯನ್ನು ತಯಾರಿಸಲು ಅಕ್ಕಿಹಿಟ್ಟು ತಯಾರಿಸುವಂತೆ ಮೆಣಸನ್ನು ಮಷೀನ್ ನಲ್ಲಿ ಹಾಕಬೇಕು ಪವರ್ ಬಟನ್ ಆನ್ ಮಾಡಬೇಕು ಹೀಗೆ ಆನ್ ಆದ ನಂತರ ಮಷೀನ್ ಆಟೋಮೇಟಿಕ್ ಆಗಿ ಗ್ರಿಲ್ಡಿಂಗ್ ಆಗಿ ಕೆಳಗೆ ಕಾಣಿಸುವ ಹೋಲ್ ನಲ್ಲಿ ಹಿಟ್ಟು ಹೊರಗೆ ಬರುತ್ತದೆ. ಹೋಲ್ ಸೇಲ್ ನಲ್ಲಿ ಹಿಟ್ಟು ಮಾಡಿಸಲು ಬರುವವರಿಗೆ ಮಾಡಿಕೊಡಬಹುದು ಅಥವಾ ನಿಮ್ಮದೆ ಒಂದು ಬ್ರ್ಯಾಂಡ್ ಮಾಡಿ ಮಾರಬಹುದು. ಮಹಿಳೆಯರು ಈ ಬಿಸಿನೆಸ್ ಮಾಡಬಹುದು ಮನೆಯ ಕೆಲಸ ಮಾಡಿ ಉಳಿದ ಬಿಡುವಿನ ಸಮಯದಲ್ಲಿ ಈ ಬಿಸಿನೆಸ್ ಮಾಡಬಹುದು. ಈ ಬಿಸಿನೆಸ್ ಪ್ರಾರಂಭಿಸಲು ಹೆಚ್ಚಿನ ಬಂಡವಾಳ ಬೇಕಾಗಿಲ್ಲ. ಈ ಮಷೀನ್ ಗೆ 52,000 ರೂಪಾಯಿ ಇದೆ ರಿಯಾಯತಿ ದರದಲ್ಲಿ ಮಷೀನ್ 48,000 ರೂಪಾಯಿಗೆ ಸಿಗುತ್ತದೆ, ಇತರೆ ಖರ್ಚು 2,000 ಒಟ್ಟು 50,000 ರೂಪಾಯಿ ಬಂಡವಾಳ ಬೇಕಾಗುತ್ತದೆ.
ಖಾರದ ಪುಡಿ ಅಥವಾ ಮೆಣಸಿನ ಪುಡಿಯನ್ನು ಎಲ್ಲರೂ ಅಡುಗೆಗೆ ಬಳಸುವುದರಿಂದ ಅದಕ್ಕೆ ಬೇಡಿಕೆ ಇರುತ್ತದೆ. ಈ ಮಷೀನ್ ಬಗ್ಗೆ ಕಂಪನಿಯವರು ಟ್ರೇನಿಂಗ್ ಕೊಡುತ್ತಾರೆ ಅಲ್ಲದೆ ಹೋಮ್ ಡಿಲೇವರಿ ಮತ್ತು ಹೋಮ್ ಸರ್ವಿಸ್ ಕೊಡುತ್ತಾರೆ. ಈ ಮಷೀನ್ ನಲ್ಲಿ 2 ಎಚ್ ಪಿ ಮತ್ತು 3 ಎಚ್ ಪಿ ಎಂದು ಬರುತ್ತದೆ ಯಾವ ಮಷೀನ್ ಅನ್ನು ಬೇಕಾದರೂ ಖರೀದಿಸಬಹುದು. ಈ ಮಷೀನ್ ನಲ್ಲಿ ಪ್ರತಿದಿನ ಗಂಟೆಗೆ 100 ಕೆಜಿ ಖಾರದ ಪುಡಿ ತಯಾರಿಸಿ ಮಾರಾಟ ಮಾಡಬಹುದು. ನೀವು ಖಾರದ ಪುಡಿ ತಯಾರಿಸುವ ಬಗ್ಗೆ ನಿಮ್ಮ ಏರಿಯಾದ ಜನರಿಗೆ ತಿಳಿಸಬೇಕು. ನಿಮ್ಮ ಮನೆಯ ಅಥವಾ ಅಂಗಡಿಯ ಮುಂದೆ ಬೋರ್ಡ್ ಅನ್ನು ಹಾಕಬಹುದು ಅಥವಾ ಪಾಂಪ್ಲೇಟ್ ರೆಡಿ ಮಾಡಿ ಜನರಿಗೆ ವಿತರಿಸಬಹದು. ಹೋಲ್ ಸೇಲ್ ದರದಲ್ಲಿ ಮೆಣಸಿನ ಕಾಯಿಗಳನ್ನು ಖರೀದಿಸಿ ಖಾರದ ಪುಡಿ ತಯಾರಿಸಿ ನಿಮ್ಮದೇ ಸ್ವಂತ ಬ್ರ್ಯಾಂಡ್ ಮಾಡಿ ಪ್ಯಾಕ್ ಮಾಡಿ 10, 20,100ರೂಪಾಯಿಗೆ ಮಾರಾಟ ಮಾಡಬಹುದು. ಪ್ಯಾಕ್ ಮಾಡಲು ಸೀಲಿಂಗ್ ಮಷೀನ್ ಇನ್ನಿತರ ಕೆಲವು ಮಷೀನ್ ಅನ್ನು ಖರೀದಿಸಬೇಕು.
ಈ ಬಿಸಿನೆಸ್ ಪ್ರಾರಂಭಿಸಲು ಮುನ್ಸಿಪಾಲಿಟಿ ಯಿಂದ ಲೈಸೆನ್ಸ್ ಪಡೆಯಬೇಕಾಗುತ್ತದೆ. ನಿಮ್ಮದೇ ಸ್ವಂತ ಬ್ರ್ಯಾಂಡ್ ಮಾಡಿ ಮಾರಾಟ ಮಾಡುವುದಾದರೆ ಫೆಸಯ್ ಲೈಸೆನ್ಸ್, ಜಿಎಸ್ ಟಿ, ಟ್ರೇಡಿಂಗ್ ಲೈಸೆನ್ಸ್ ಪಡೆಯಬೇಕು. ಪ್ರತಿದಿನ 1,500 ರಿಂದ 2,000 ರೂಪಾಯಿವರೆಗೆ ಲಾಭ ಗಳಿಸಬಹುದು. ಈ ಬಿಸಿನೆಸ್ ಪ್ರಾರಂಭಿಸಲು ನೀವು ಮಾಡುವ ಪ್ಲಾನ್ ಮತ್ತು ಮಾರ್ಕೆಟಿಂಗ್ ಮೇಲೆ ಲಾಭ ಅವಲಂಬಿತವಾಗಿದೆ. ಈ ಮಾಹಿತಿಯನ್ನು ಕೆಲಸ ಮಾಡುವ ಆಸಕ್ತಿ ಇರುವ ಮಹಿಳೆಯರಿಗೆ ತಿಳಿಸಿ. ಮಹಿಳೆಯರು ತಮ್ಮ ಬಿಡುವಿನ ಸಮಯದಲ್ಲಿ ಈ ಬಿಸಿನೆಸ್ ಮಾಡಬಹುದು.
ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್
ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466