ಜೀವನದಲ್ಲಿ ಒಬ್ಬಂಟಿ ಅನಿಸಿದಾಗ ಚಾಣಿಕ್ಯನ ಸೂತ್ರ ಪಾಲಿಸಿ

0 4

ಎಂತಹದ್ದೆ ಸ್ಥಿತಿಯಲ್ಲಿದ್ದರು ಒಮ್ಮೆ ಆಚಾರ್ಯ ಚಾಣಕ್ಯರ ರಾಜನೀತಿ ಹಾಗೂ ಚಾಣಕ್ಯನ ವಾಣಿಗಳನ್ನು ಕೇಳಿದರೆ ಮನಸ್ಸು ಸ್ಥಿಮಿತಕ್ಕೆ ಬರುವುದು ಖಚಿತ. ಹಾಗೆಯೆ ಯಾವುದೇ ತೆರೆನಾದ ಸಮಸ್ಯೆಗಳಿಗೂ ಆಚಾರ್ಯ ಚಾಣಕ್ಯರ ಬಳಿ ಪರಿಹಾರೋಪಾಯಗಳು ಇದ್ದೆ ಇದೆ. ಯಾಕೆಂದರೆ ಭೂಮಿಯ ಮೇಲೆ ಪರಿಹರಿಸಲಾಗದ ಯಾವುದೇ ಸಮಸ್ಯೆಗಳು ಇಲ್ಲಾ ಎನ್ನುವುದು ಚಾಣಕ್ಯ ನಂಬಿರುವ ತತ್ವವಾಗಿದೆ. ಆಚಾರ್ಯ ಚಾಣಕ್ಯರ ಕೆಲವು ನುಡಿಮುತ್ತುಗಳ ಪರಿಚಯ ಇಲ್ಲಿರುವ ಮಾಹಿತಿಯ ಮೂಲಕ ತಿಳಿಯೋಣ.

ಆಚಾರ್ಯ ಚಾಣಕ್ಯರ ಪ್ರಕಾರ ಅಲ್ಪಾವಧಿಯ ಸುಖದಲ್ಲಿ ಮೈಮರೆಯುವವನು ಹಾಗೂ ಕ್ಷಣಿಕದ ಸುಖಕ್ಕಾಗಿ ಮುಂದಿರುವ ದೀರ್ಘಕಾಲದ ಸಂತೋಷ ಬಿಟ್ಟು ಕೊಡುವವನು ಶತಮೂರ್ಖನಾಗುತ್ತಾನೆ. ದೇಹದ ತುಂಬ ವಿಷ ಹೊಂದಿರುವ ಉರಗವೂ ತನ್ನಲ್ಲಿರುವ ವಿಷವಿರುವುದನ್ನು ಬಹಿರಂಗಪಡಿಸುವುದಿಲ್ಲ. ಆದರೆ ತನಗೆ ಅಪಾಯವಾಗುವ ಸೂಚನೆ ಸಿಕ್ಕಾಗ ತಾನೆ ಮೇಲೆರಗಿ ತನ್ನ ರಕ್ಷಣೆ ಮಾಡಿಕೊಳ್ಳುತ್ತದೆ. ಹಾಗೆಯೆ ಮನುಷ್ಯನು ಸಮಯ ಬಂದಾಗ ತನ್ನಲ್ಲಿರುವ ಶಕ್ತಿಯ ಪರಿಚಯ ಮಾಡಿಕೊಡಬೇಕು. ದೇಶ ಅಥವಾ ರಾಜ್ಯದಲ್ಲಿರುವ ಬುದ್ದಿಜೀವಿ ಎನಿಸಿಕೊಂದವರು ಹಾಗೂ ಅಪರಾಧ ಮಾಡಿದವರು ತಳಮಳ ಅನುಭವಿಸುತ್ತಿದ್ದಾರೆ ಎಂದರೆ ರಾಜ ಅಥವಾ ನಾಯಕ ಸರಿಯಾದ ದಾರಿಯಲ್ಲಿ ಹೆಜ್ಜೆ ಇಡುತ್ತಿದ್ದಾನೆ ಎಂದಾಗಿದೆ. ಯಾವುದೇ ಕೆಲಸ ಮಾಡಿದರೂ ಅದರಲ್ಲಿ ನಮಗೆ ತೃಪ್ತಿ, ಸಮಾಧಾನ ದೊರೆಯದಿದ್ದಲ್ಲಿ ಜೀವನ ಸಾಕೆನಿಸಿಬಿಡುತ್ತದೆ ಇಲ್ಲವೆ ನರಕ ಸದೃಶವಾಗಿ ಬಿಡುತ್ತದೆ. ಆದ್ದರಿಂದ ನಮ್ಮ ಪಾಲಿಗೆ ಬಂದಿದ್ದನ್ನು ಸ್ವೀಕರಿಸಿ ಸಂತೋಷ ಪಡುವುದನ್ನು ಕಲಿಯಬೇಕು.
ಸಿಂಹ ಒಂದು ಪ್ರಾಣಿಯಾದರೂ ಅದರಿಂದ ಕಲಿಯಬೇಕಾದ ಮೊದಲ ಅಂಶ ಎಂದರೆ ಅದರ ಕೆಲಸದ ರೀತಿ. ಎಷ್ಟೆ ಸಣ್ಣದಾದ ಕೆಲಸವಾದರೂ ಸಿಂಹ ಆ ಕೆಲಸ ಪೂರ್ಣಗೊಳ್ಳುವ ಮೊದಲು ವಿಶ್ರಾಂತಿ ಪಡೆಯುವುದಿಲ್ಲ.

ಸ್ನೇಹಿತರು ಹತ್ತಿರವೇ ಇರಲಿ ಅದರ ಜೊತೆಗೆ ಶತ್ರುಗಳನ್ನು ಬಹಳ ಹತ್ತಿರದಿಂದ ಗಮನಿಸಬೇಕು. ಬುದ್ದಿವಂತನಿಗೆ ಯಾವತ್ತು ಜೀವನದ ಮೇಲೆ ಭಯವಿರುವುದಿಲ್ಲ. ಎಲ್ಲರನ್ನೂ ಕಣ್ಮುಚ್ಚಿ ನಂಬುವುದು ಅಪಾಯ ತಂದುಕೊಂಡಂತೆಯೆ ಆದರೆ ಯಾರನ್ನೂ ನಂಬದಿರುವುದು ಮತ್ತು ದೊಡ್ಡ ಅಪಾಯಕ್ಕೆ ಕರೆ ಕೊಟ್ಟಂತೆ. ಶಿಕ್ಷಣವೆಂದರೆ ಯಾವ ವ್ಯಕ್ತಿಯಾದರೂ ಮುಂದೆ ಬರುವ ಕಷ್ಟಗಳನ್ನು ಎದುರಿಸಿ ಮೆಟ್ಟಿ ನಿಲ್ಲುವಂತೆ ಮಾಡುತ್ಮಾಡುತ್ತದೆಯೋ ಅದು. ಮೋಸ ಹೋಗುವುದು ತಾನು ಅತಿಯಾಗಿ ಪ್ರೀತಿಸಿದ ವ್ಯಕ್ತಿಗಳಿಂದ. ವಿಷಯ ದೊಡ್ಡದು ಮಾಡುವವನು ದುರ್ಬಲ ಮನಸ್ಸಿನ ಮನುಷ್ಯ ಮಾತ್ರ. ಆದರೆ ಅವನಿಂದ ದೊಡ್ಡದನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಹಾಲಿನೊಂದಿಗೆ ಬೆರೆತ ನೀರು ಹೇಗೆ ಹಾಲಿನಂತೆ ಮಾರ್ಪಾಡು ಹೊಂದುತ್ತದೆಯೋ ಹಾಗೆಯೆ ಗುಣವಂತನ ಸ್ನೇಹ ಪಡೆದ ಗುಣಹೀನನು ಗುಣವಂತನಾಗಿ ಮಾರ್ಪಾಡು ಹೊಂದುತ್ತಾನೆ. ಮರ್ಯಾದೆಯ ಮಟ್ಟ ಮೀರಿದವರನ್ನು ನಂಬಬಾರದು. ಯಶಸ್ಸು ಪಡೆದ ಮನುಷ್ಯ ಕಳೆದು ಹೋದ ಸಮಯ ಹಾಗೂ ತೆಗೆದುಕೊಂಡ ತಪ್ಪು ನಿರ್ಧಾರಗಳ ಕುರಿತು ಯೋಚಿಸಿ ಚಿಂತಿಸುತ್ತಾ ಕಾಲ ಹರಣ ಮಾಡುವುದಿಲ್ಲ. ಇನ್ನೊಬ್ಬರಿಗೆ ಮೋಸಮಾಡಿ, ಮೌಲ್ಯ ಮರೆತು, ತತ್ವಗಳನ್ನು ಮಾರಿ ಸಂಪಾದಿಸಿದ ಹಣವು ವಿಷವಿದ್ದಂತೆ.

ಹಿಂದೆ ಮಾಡಿದ ತಪ್ಪುಗಳು ಮುಂದಿನ ಜೀವನದ ಅಧ್ಯಯನವೆಂದು ಭಾವಿಸಬೇಕು. ಯಾವ ಮನುಷ್ಯ ತನ್ನ ತಪ್ಪನ್ನು ಅರಿತು ಅದನ್ನು ತಿದ್ದಿಕೊಳ್ಳಲು ಹೋರಾಟ ಮಾಡುತ್ತಾನೋ ಅವನನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ. ವೈಯಕ್ತಿಕ ಜೀವನದ ಬಳಲಿಕೆಯನ್ನು ಎಂದಿಗೂ ಮುಖದ ಮೇಲೆ ತೋರಬಾರದು. ಮಾಡುವ ಕೆಲಸ, ಆಡುವ ಮಾತು, ನೋಡುವ ನೋಟಗಳಿಗೆ ಪ್ರತಿಯೊಂದಕ್ಕೂ ತನ್ನದೆ ಆದ ದೃಷ್ಟಿಕೋನವಿದೆ. ಕೆಲವು ವಿಚಾರಗಳನ್ನು ಎದುರಾಳಿಯ ದೃಷ್ಟಿ ಕೋನ ಹಾಗೂ ಜಗತ್ತಿನ ದೃಷ್ಟಿ ಕೋನದ ಮೂಲಕ ನೋಡಬೇಕು. ತುಂಬಾ ನಿಯತ್ತು ಎಂದಿಗೂ ಒಳ್ಳೆಯದಲ್ಲ. ಅತಿ ನಿಯತ್ತಿನಿಂದ ಇದ್ದರೆ ಪ್ರಪಂಚ ಆಟ ಆಡಿಸುತ್ತದೆ.

ಆಚಾರ್ಯ ಚಾಣಕ್ಯರ ಮಾತುಗಳು ಹಾಗೂ ನೀತಿಗಳು ಬದುಕಿನ ದಾರಿದೀಪವಾಗಿದೆ. ಇವುಗಳನ್ನು ನಮ್ಮಲ್ಲಿ ಅಳವಡಿಸಿಕೊಂಡಾಗ ಯಾರಿಂದಲೂ ನಮ್ಮನ್ನು ಸೋಲಿಸುವುದು ಕಷ್ಟಸಾಧ್ಯವಾಗುತ್ತದೆ. ನಾವೂ ಆಚಾರ್ಯ ಚಾಣಕ್ಯರ ಮಾರ್ಗದರ್ಶನದ ಅಡಿಯಲ್ಲಿ ಹೆಜ್ಜೆ ಇಡೋಣ.

Leave A Reply

Your email address will not be published.