ದಾವಣಗೆರೆ ಸ್ಪೆಷಲ್ ಮಸಾಲೆ ಮಂಡಕ್ಕಿಯನ್ನು ಮನೆಯಲ್ಲಿ ಸುಲಭವಾಗಿ ತಯಾರಿಸಲು ಬೇಕಾಗುವ ಸಾಮಗ್ರಿಗಳು ಹಾಗೂ ಮಾಡುವ ವಿಧಾನವನ್ನು ಈ ಲೇಖನದ ಮೂಲಕ ತಿಳಿಯೋಣ.

ಮಸಾಲೆ ಮಂಡಕ್ಕಿ ತಯಾರಿಸಲು ಬೇಕಾಗುವ ಸಾಮಗ್ರಿಗಳೆಂದರೆ ಸ್ವಲ್ಪ ಕರಿಬೇವು, ಅರ್ಧ ಲೆಮನ್, ಬೆಳ್ಳುಳ್ಳಿ, ಉದ್ದಕ್ಕೆ ಹೆಚ್ಚಿರುವ 2 ಈರುಳ್ಳಿ, ಸ್ವಲ್ಪ ಕ್ಯಾರೆಟ್ ತುರಿ, 3-4 ಹಸಿಮೆಣಸಿನ ಕಾಯಿ, ಸಾಸಿವೆ, ಜೀರಿಗೆ, ಕಡ್ಲೆ ಹಿಟ್ಟು, ಖಾರ ಉಪ್ಪು ಎಣ್ಣೆ ಅರಿಶಿಣ, ಸಣ್ಣದಾಗಿ ಕಟ್ ಮಾಡಿದ ಟೊಮೆಟೊ ಮಂಡಕ್ಕಿ.

ಮಾಡುವ ವಿಧಾನ ಪ್ಯಾನ ಗೆ 2-3 ಸ್ಪೂನ್ ಎಣ್ಣೆ ಹಾಕಿ ಎಣ್ಣೆ ಕಾದ ನಂತರ ಸಾಸಿವೆ ಜೀರಿಗೆ ಹಾಕಬೇಕು ನಂತರ ಈರುಳ್ಳಿ ಹಾಕಿ ಫ್ರೈ ಮಾಡಬೇಕು ಇದಕ್ಕೆ ಜಜ್ಜಿದ 2-3 ಬೆಳ್ಳುಳ್ಳಿಯನ್ನು, ಕರಿಬೇವು, ಹಸಿಮೆಣಸಿನ ಕಾಯಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ರುಚಿಗೆ ತಕ್ಕಷ್ಟು ಉಪ್ಪು, ಅರಿಶಿಣ ಹಾಕಿ ಮಿಕ್ಸ್ ಮಾಡಿದರೆ ಗೊಜ್ಜು ಸಿದ್ಧವಾಯಿತು ತಣ್ಣಗಾದ ನಂತರ ಅದಕ್ಕೆ ಮಂಡಕ್ಕಿ ಹಾಕಿ ಮಿಕ್ಸ್ ಮಾಡಬೇಕು ನಂತರ ತುರಿದ ಕ್ಯಾರೆಟ್, ಸ್ವಲ್ಪ ಕೊತ್ತಂಬರಿ ಸೊಪ್ಪು, ಖಾರ ಹಾಕಿ ಮಿಕ್ಸ್ ಮಾಡಿ ಅದಕ್ಕೆ ಸಣ್ಣದಾಗಿ ಹೆಚ್ಚಿಕೊಂಡ ಟೊಮೆಟೊ ಹಾಕಿ ಲೈಟ್ ಆಗಿ ಮಿಕ್ಸ್ ಮಾಡಬೇಕು ನಂತರ ನಿಂಬೆ ರಸ, ಸ್ವಲ್ಪ ಉಪ್ಪು, ಕಡಲೆ ಪುಡಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು ಕೊನೆಯದಾಗಿ ಮೇಲ್ಗಡೆ ಸ್ವಲ್ಪ ಕೊತ್ತೊಂಬರಿ ಸೊಪ್ಪು, ತುರಿದ ಕ್ಯಾರೆಟ್ ಹಾಕಿ ಅಲಂಕರಿಸಿದರೆ ಮಸಾಲೆ ಮಂಡಕ್ಕಿ ಸವಿಯಲು ಸಿದ್ಧ. ಒಳ್ಳೆಯ ಸ್ನಾಕ್ ರೆಸಿಪಿ ಆಗಿದ್ದು ಮನೆಯಲ್ಲಿ ಸುಲಭವಾಗಿ ಮಾಡಬಹುದಾಗಿದೆ.

Leave a Reply

Your email address will not be published. Required fields are marked *