ಭಾರತೀಯ ಪುರಾತನ ಇತಿಹಾಸದಲ್ಲಿ ಚಾಣಕ್ಯರಿಗೆ ಸಾಕಷ್ಟು ಪೂಜ್ಯ ಸ್ಥಾನವನ್ನು ನಮ್ಮ ಪೂರ್ವಿಕರು ನೀಡಿದ್ದಾರೆ. ಚಂದ್ರಗುಪ್ತ ಮೌರ್ಯ ಎನ್ನುವ ಚಿಕ್ಕ ಬಾಲಕನನ್ನು ಭಾರತ ದೇಶದ ಅತ್ಯಂತ ದೊಡ್ಡ ಸಾಮ್ರಾಜ್ಯ ಆಗಿರುವ ಮಗನ ದೇಶದ ರಾಜನನ್ನಾಗಿ ಮಾಡಿದ ಕೀರ್ತಿ ಚಾಣಕ್ಯರಿಗೆ ಸಲ್ಲುತ್ತದೆ. ಅವರ ಮಾರ್ಗದರ್ಶನ ಹಾಗೂ ಯೋಜನೆಗಳು ಹಾಗೂ ಉಪಾಯಗಳು ನಿಜಕ್ಕೂ ಕೂಡ ಅಂದಿನ ಕಾಲಕ್ಕೆ ಸಾಕಷ್ಟು ಅಗಾದ ಹಾಗೂ ಅತ್ಯಂತ ಶ್ರೇಷ್ಠವಾಗಿತ್ತು ಎಂದರು ತಪ್ಪಾಗಲಾರದು.

ಇನ್ನು ಆಚಾರ್ಯ ಚಾಣಕ್ಯರು ತಮ್ಮ ಚಾಣಕ್ಯ ಶಾಸ್ತ್ರ ಗ್ರಂಥದಲ್ಲಿ ಕೇವಲ ಅರ್ಥಶಾಸ್ತ್ರ ಹಾಗೂ ರಾಜ್ಯ ಆಡಳಿತ ಕುರಿತಂತೆ ಮಾತ್ರವಲ್ಲದೆ ಜೀವನದಲ್ಲಿ ಯಶಸ್ವಿಯಾಗಲು ಹಾಗೂ ನೆಮ್ಮದಿಯಿಂದ ಇರಲು ಏನೆಲ್ಲ ಮಾಡಬೇಕು ಹೇಗೆ ಇರಬೇಕು ಎನ್ನುವ ಜೀವನ ಮಾರ್ಗದ ಉಪಾಯಗಳನ್ನು ಕೂಡ ಬರೆದಿದ್ದಾರೆ. ಇನ್ನು ಅದೇ ಪುಸ್ತಕದಲ್ಲಿ ಪುರುಷರಿಗಿಂತ ಮಹಿಳೆಯರಿಗೆ ಈ ಬಯಕೆಯಲ್ಲಿ ಎಂಟು ಪಟ್ಟು ಹೆಚ್ಚು ಆಸಕ್ತಿ ಇರುತ್ತದೆ ಎಂಬುದಾಗಿ ಕೂಡ ತಿಳಿಸಿದ್ದು ಅದೇನೆಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.

ಚಾಣಕ್ಯ ಗ್ರಂಥದಲ್ಲಿ ಬರೆದಿರುವ ಶ್ಲೋಕದ ಪ್ರಕಾರ ಪುರುಷರಿಗಿಂತ ಮಹಿಳೆಯರಲ್ಲಿ ಹಸಿವು ಎನ್ನುವುದು ಎರಡು ಪಟ್ಟು ಹೆಚ್ಚಾಗಿರುತ್ತದೆ. ಪುರುಷರಿಗಿಂತ ನಾಚಿಕೆ 4 ಪಟ್ಟು ಹೆಚ್ಚಾಗಿರುತ್ತದೆ. ಪುರುಷರಿಗಿಂತ ಮಹಿಳೆಯರಲ್ಲಿ ಧೈರ್ಯ ಎನ್ನುವುದು ಆರು ಪಟ್ಟು ಹೆಚ್ಚಾಗಿರುತ್ತದೆ. ಇನ್ನು ಪುರುಷರಿಗಿಂತ ಮಹಿಳೆಯರಲ್ಲಿ ದೈಹಿಕವಾಗಿ ಸೇರುವ ಆಸೆ ಎನ್ನುವುದು ಎಂಟು ಪಟ್ಟು ಹೆಚ್ಚಾಗಿರುತ್ತದೆ ಎಂಬುದಾಗಿ ತಿಳಿಸಿದ್ದಾರೆ. ಇನ್ನು ಪುರುಷರಿಗಿಂತ ತಾಳ್ಮೆ ಹಾಗೂ ಸಹನೆಯಲ್ಲಿ ಕೂಡ ಮಹಿಳೆಯರು ಹೆಚ್ಚಿನ ಪ್ರಾಬಲ್ಯವನ್ನು ಹೊಂದಿದ್ದರೂ ಕೂಡ ಯಾವತ್ತು ಕೂಡ ಅದನ್ನು ಬಹಿರಂಗವಾಗಿ ವ್ಯಕ್ತಪಡಿಸಿಲ್ಲ.

ಇದೇ ಪುಸ್ತಕದಲ್ಲಿ ಇನ್ನೂ ಹಲವಾರು ನಾವು ಗಮನಿಸಬೇಕಾಗಿರುವ ವಿಚಾರಗಳನ್ನು ಕೂಡ ಚಾಣಕ್ಯರು ಗ್ರಂಥದಲ್ಲಿ ಬರೆದಿಟ್ಟಿದ್ದಾರೆ. ಒಂದು ವೇಳೆ ಗುರು ಆತನ ಶಿಷ್ಯ ಮೂರ್ಖನಾಗಿದ್ದರೆ ಆತನಿಗೆ ಜ್ಞಾನದ ಅರಿವು ಮೂಡಿಸುವುದು ವ್ಯರ್ಥ ಎಂಬುದಾಗಿ ಹೇಳಿ. ಒಂದು ವೇಳೆ ಮಹಿಳೆ ಕೆಟ್ಟವಳಾಗಿದ್ದರೆ ಅವಳನ್ನು ಸಾಕುವುದು ವ್ಯರ್ಥ ಎಂಬುದಾಗಿ ಕೂಡ ಉಲ್ಲೇಖಿಸಿದ್ದಾರೆ.

ಹೀಗೆ ಜೀವನದಲ್ಲಿ ಯಶಸ್ಸನ್ನು ಸಾಧಿಸುವಂತಹ ಹಲವಾರು ವಿಚಾರಗಳನ್ನು ತಮ್ಮ ಗ್ರಂಥದಲ್ಲಿ ಬರೆದಿರುವ ಚಾಣಕ್ಯರು ಇಂದಿನ ಯುವಜನಂತೆ ತಮ್ಮ ಜೀವನದಲ್ಲಿ ಯಶಸ್ವಿ ಆಗಲು ಏನೆಲ್ಲ ಬೇಕೋ ಎಲ್ಲವನ್ನು ಕೂಡ ಆ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಅದನ್ನು ಓದಿ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿರುವುದು ಮಾತ್ರ ನಾವು ಮಾಡಬೇಕಾಗಿರುವ ಪ್ರಮುಖ ಕೆಲಸವಾಗಿದೆ.

Leave a Reply

Your email address will not be published. Required fields are marked *