ಈ ರಾಶಿಯವರ ಕೆಲಸ ಕಾರ್ಯಗಳಲ್ಲಿ ಅದ್ಬುತ ಯಶಸ್ಸು ನೀಡಲಿದ್ದಾನೆ ಸೂರ್ಯದೇವ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಒಂದು ಗ್ರಹದ ಬದಲಾವಣೆ ಎನ್ನುವುದು ಜ್ಯೋತಿಷ್ಯ ಶಾಸ್ತ್ರದಲ್ಲಿ ಕಂಡುಬರುವಂತಹ ದ್ವಾದಶ ರಾಶಿಗಳ ಮೇಲು ಕೂಡ ಪರಿಣಾಮ ಬೀರುತ್ತದೆ. ಆದರೆ ಪರಿಸ್ಥಿತಿಗೆ ಅನುಗುಣವಾಗಿ ಆ ಪರಿಣಾಮ ಶುಭವೊ ಅಥವಾ ಅಶುಭವೋ ಎಂಬುದನ್ನು ಲೆಕ್ಕಾಚಾರ ಹಾಕಲಾಗುತ್ತದೆ. ಸದ್ಯಕ್ಕೆ ಗ್ರಹಗಳ ರಾಜನಾಗಿರುವ ಸೂರ್ಯದೇವನು ತನ್ನ ರಾಶಿಯನ್ನು ಬದಲಾವಣೆ ಮಾಡಿದ್ದಾನೆ.

ಸೂರ್ಯನು ತುಲಾ ರಾಶಿಗೆ ತನ್ನ ನಡೆಯನ್ನು ಬದಲಾಯಿಸಿದ್ದಾನೆ. ತುಲಾ ರಾಶಿಯ ಅಧಿಪತಿ ಶುಕ್ರ ಆಗಿದ್ದಾನೆ. ಶುಕ್ರ ಶುಭಕಾರಕ ಎಂಬುದೇನೋ ನಿಜ ಆದರೆ ಶುಕ್ರ ಮತ್ತು ಸೂರ್ಯನ ನಡುವೆ ದ್ವೇಷ ಎನ್ನುವುದು ಮೊದಲಿನಿಂದಲೂ ಕೂಡ ನಡೆದುಕೊಂಡು ಬಂದಿದೆ. ಹೀಗಾಗಿ ತುಲಾ ರಾಶಿಗೆ ಸೂರ್ಯನು ಕಾಲಿಡುತ್ತಿರುವುದು ಹೆಚ್ಚಿನ ರಾಶಿಯವರಿಗೆ ಶುಭ ಫಲಿತಾಂಶ ನೀಡುವುದಿಲ್ಲ ಕೇವಲ ಎರಡು ರಾಶಿಯವರಿಗೆ ಮಾತ್ರ ಶುಭ ಫಲಿತಾಂಶ ನೀಡಲಿದೆ. ಹಾಗಿದ್ದರೆ ಆ ಎರಡು ರಾಶಿಯವರು ಯಾರೆಲ್ಲ ಎಂಬುದನ್ನು ತಿಳಿದುಕೊಳ್ಳೋಣ.

ಮಿಥುನ ರಾಶಿ; ಮಿಥುನ ರಾಶಿಯವರ ಐದನೇ ಮನೆಗೆ ಸೂರ್ಯನ ಪ್ರವೇಶ ಆಗುವುದರಿಂದ ಇವರಿಗೆ ಸಾಕಷ್ಟು ಲಾಭ ಉಂಟಾಗುತ್ತದೆ. ಈ ಸಂದರ್ಭದಲ್ಲಿ ಮಿಥುನ ರಾಶಿಯವರು ಒಂದು ವೇಳೆ ಸಂತಾನ ಭಾಗ್ಯಕ್ಕಾಗಿ ಎದುರು ನೋಡುತ್ತಿದ್ದರೆ ಅವರಿಗೆ ಮಕ್ಕಳಾಗುವ ಸಾಧ್ಯತೆ ಇದೆ. ಈಗಾಗಲೇ ಮಕ್ಕಳಿಗೆ ಪೋಷಕರಾಗಿದ್ದರೆ ಮಕ್ಕಳಿಂದ ಒಂದೊಳ್ಳೆ ಸುದ್ದಿಯನ್ನು ಖಚಿತವಾಗಿ ಪಡೆಯಲಿದ್ದೀರಿ ಎಂದು ಹೇಳಬಹುದಾಗಿದೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರಮುಖವಾಗಿ ಮಿಥುನ ರಾಶಿಯ ಅಧಿಪತಿ ಬುಧ ಹಾಗೂ ಸೂರ್ಯನ ನಡುವೆ ಉತ್ತಮ ಸ್ನೇಹ ಭಾವ ಇರುವ ಕಾರಣದಿಂದಾಗಿ ಸೂರ್ಯನ ಸಂಕ್ರಮಣ ಕಾಲ ಎನ್ನುವುದು ನಿಜಕ್ಕೂ ಕೂಡ ಈ ರಾಶಿಯವರಿಗೆ ಹಲವಾರು ವಿವಿಧ ರೀತಿಯಲ್ಲಿ ಲಾಭ ಹಾಗೂ ಅದೃಷ್ಟವನ್ನು ತಂದು ನೀಡಲಿದೆ.

ವೃಷಭ ರಾಶಿ; ವೃಷಭ ರಾಶಿಯವರ ಆರನೇ ಮನೆಯಲ್ಲಿ ಸೂರ್ಯದೇವನು ಕಾಲಿಡುವ ಕಾರಣದಿಂದಾಗಿ ಈ ರಾಶಿಯವರ ಈಗಾಗಲೇ ಹಲವಾರು ವರ್ಷಗಳಿಂದ ನಡೆಯುತ್ತಿರುವ ನ್ಯಾಯಾಲಯದ ಪ್ರಕರಣಗಳು ಕೂಡ ಇವರ ಪಾಲಿಗೆ ಆಗಲಿದೆ. ಶೌರ್ಯ ಹಾಗೂ ಧೈರ್ಯಗಳು ನಿಮ್ಮ ಮನೋಭಾವದಲ್ಲಿ ಹೆಚ್ಚಾಗಲಿದ್ದು ನಿಮ್ಮ ಶತ್ರುಗಳನ್ನು ನೀವು ಸಂಪೂರ್ಣವಾಗಿ ಹಾಗೂ ಸುಲಭವಾಗಿ ಗೆಲ್ಲಲಿದ್ದೀರಿ. ಆರೋಗ್ಯವು ಕೂಡ ಸುಧಾರಿಸಲಿದ್ದು ಸಾಕಷ್ಟು ಆರ್ಥಿಕ ಲಾಭವನ್ನು ಕೂಡ ಪಡೆಯಲಿದ್ದೀರಿ. ಒಂದು ವೇಳೆ ನಿಮ್ಮ ರಾಶಿ ಕೂಡ ಇವೆರಡರಲ್ಲಿ ಇದ್ದರೆ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.

Leave a Comment