ಕನ್ನಡ ಕಿರುತೆರೆಯಿಂದ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿ, ಕನ್ನಡ ಕಿರುತೆರೆ ಧಾರಾವಾಹಿ ಲಕ್ಷ್ಮೀ ಎಂದೇ ಖ್ಯಾತಿಯಾಗಿರುವ ಕವಿತಾ ಗೌಡ ಒಂದು ಕಡೆ ಮಿಂಚುತ್ತಿದ್ದರೆ ಇನ್ನೊಂದು ಕಡೆ ಹಲವಾರು ರಿಯಾಲಿಟಿ ಶೋ ಗಳಲ್ಲಿ ಭಾಗವಹಿಸಿ ಬಿಗ್ಬಾಸ್ ರನ್ನರ್ ಅಪ್ ಹಾಗೂ ಹಲವಾರು ಧಾರಾವಾಹಿಗಳಲ್ಲಿ ನಟಿಸಿ ಎಲ್ಲರ ಮನೆಮಾತಾಗಿದ್ದ ಇಂದಿಗೂ ಕೂಡ ಹುಡುಗಿಯರ ಹಾರ್ಟ್ ಫೆವರಿಟ್ ಆಗಿರುವ ನಟ ಚಂದನ್ ಕುಮಾರ್ ಅವರು ಇವರಿಬ್ಬರು ಸಾಕಷ್ಟು ಸುದ್ದಿಯಲ್ಲಿದ್ದಾರೆ. ನಟಿ ಕವಿತಾ ಗೌಡ ಹಾಗೂ ನಟ ಚಂದನ್ ಕುಮಾರ್ ಇಬ್ಬರು ಇದ್ದಕ್ಕಿದ್ದಹಾಗೆ ಸಾಕಷ್ಟು ಸುದ್ದಿ ಆಗಲು ಕಾರಣವೇನು ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ನಟಿ ಕವಿತಾ ಗೌಡ ಹಾಗೂ ನಟ ಚಂದನ್ ಕುಮಾರ್ ಇಬ್ಬರು ಕಿರುತೆರೆ ಹಾಗೂ ಬೆಳ್ಳಿತೆರೆ ಎರಡರಲ್ಲೂ ಸಾಕಷ್ಟು ಏಳುಬೀಳುಗಳನ್ನು ಕಂಡವರು. ಇಬ್ಬರಲ್ಲಿಯೂ ಸಾಕಷ್ಟು ಜಾಣ್ಮೆ ಹಾಗೂ ಸಾಮರ್ಥ್ಯ ಇದೆ. ಸಾಕಷ್ಟು ವರ್ಷಗಳಿಂದ ಇಬ್ಬರೂ ಒಳ್ಳೆಯ ಸ್ನೇಹಿತರು ಎಂದು ಹೇಳಿಕೊಂಡಿದ್ದಾರೆ. ಚಂದನ್ ಬಿಗ್ ಬಾಸ್ ಗೆ ಹೋಗಿ ಬಂದ ಹಾಗೆ ಕವಿತಾ ಗೌಡ ಕೂಡಾ ಬಿಗ್ ಬಾಸ್ ರಿಯಾಲಿಟಿ ಶೋಗೆ ಹೋಗಿ ಬಂದಿದ್ದರು. ಇಬ್ಬರೂ ಕೂಡ ನಂತರ ಸಾಕಷ್ಟು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು ಹಾಗೂ ಹಲವಾರು ಸಿನಿಮಾಗಳಲ್ಲಿ ಕೂಡ ನಟನೆ ಮಾಡಿ ಸಾಕಷ್ಟು ಹೆಸರು ಗಳಿಸಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಕವಿತಾ ಗೌಡ ಅವರ ಬರ್ತಡೆ ದಿನವೇ ಮಧ್ಯರಾತ್ರಿ ಚಂದನ್ ಅವರು ಅವರ ಮನೆಗೆ ಹೋಗಿ ಸ್ಪೆಷಲ್ ಗಿಫ್ಟ್ ಒಂದರಲ್ಲಿ ಸರ್ಪ್ರೈಸ್ ಕೂಡ ನೀಡಿದ್ದರು.

ಅಷ್ಟೇ ಅಲ್ಲದೆ ಇತ್ತೀಚಿನ ದಿನಗಳಲ್ಲಿ ಕವಿತಾ ಗೌಡ ಅವರು ಚಂದನ್ ಹಾಗೂ ತಮ್ಮ ಜೊತೆಗಿನ ಫೋಟೋವನ್ನು ಪರಸ್ಪರ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ಹಂಚಿಕೊಳ್ಳುತ್ತಿದ್ದರು. ಹಾಗೇ ತಮ್ಮ ಸ್ನೇಹದ ಬಗ್ಗೆ ಕೂಡ ಮಾತನಾಡಿಕೊಳ್ಳುತ್ತಿದ್ದಾರೆ. ಇಷ್ಟೇ ಅಲ್ಲದೆ ಮೊನ್ನೆಮೊನ್ನೆಯಷ್ಟೇ ಚಂದನ್ ಹಾಗೂ ಕವಿತಾ ಇಬ್ಬರು ತಮ್ಮ ಸ್ನೇಹಿತರ ಜೊತೆಗೆ ಒಳ್ಳೆಯ ಒಳ್ಳೆಯ ಪರಿಸರಸ್ನೇಹಿ ತಾಣಗಳಿಗೆ ಭೇಟಿ ಕೊಟ್ಟು ಪ್ರವಾಸ ಮಾಡಿ ಅಲ್ಲಿನ ಫೋಟೋ ಹಾಗು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಬರೆದುಕೊಳ್ಳುತ್ತಿದ್ದಾರೆ.

ಈಗ ಈ ಫೋಟೋ ಹಾಗು ವಿಡಿಯೋಗಳಿಗೆ ಭಾರಿ ಮೆಚ್ಚುಗೆ ವ್ಯಕ್ತಪಡಿಸುತ್ತಿರುವ ಚಂದನ್ ಹಾಗೂ ಕವಿತಾ ಇಬ್ಬರ ಅಭಿಮಾನಿಗಳು ಕೂಡ ನಿಮ್ಮ ಜೋಡಿ ತುಂಬಾನೇ ಚೆನ್ನಾಗಿದೆ ನೀವಿಬ್ಬರು ಆದಷ್ಟು ಬೇಗನೆ ಮದುವೆಯಾಗಿ ಎಂದು ತಮ್ಮ ಪ್ರೀತಿಯನ್ನು ವ್ಯಕ್ತ ಪಡಿಸುವುದು ಮಾತ್ರವಲ್ಲದೆ ಚಂದನ್ ಕವಿತ ಇಬ್ಬರ ಮದುವೆ ಯಾವಾಗ? ಎಂದು ಕೂಡ ಪ್ರಶ್ನಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಗಾಂಧಿನಗರದಲ್ಲಿ ಕೂಡ ಇವರಿಬ್ಬರ ನಡುವೆ ಪ್ರೀತಿ ಇದೆ ಎನ್ನುವ ಮಾತುಗಳು ಹರಿದಾಡುತ್ತಿವೆ. ಇನ್ನು ಇಬ್ಬರಿಗೂ ಮದುವೆ ವಯಸ್ಸು ಆಗಿರುವುದರಿಂದ ಇನ್ನು ತಡ ಮಾಡದೆ ಆದಷ್ಟು ಬೇಗ ಚಂದನ್ ಹಾಗೂ ಕವಿತಾ ಇಬ್ಬರು ಮದುವೆಯಾಗಿ ಎಂದು ಅವರ ಅಭಿಮಾನಿಗಳು ಕೇಳಿಕೊಳ್ಳುತ್ತಿದ್ದಾರೆ.

By

Leave a Reply

Your email address will not be published. Required fields are marked *