kannada actor vishnuvardhan: ಸಾಹಸ ಸಿಂಹ ಡಾಕ್ಟರ್ ವಿಷ್ಣುವರ್ಧನ ಬಗ್ಗೆ ಎಲ್ಲರಿಗೂ ಗೊತ್ತೆ ಇದೆ ಅವರ ಮೊಮ್ಮಗನ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ ಸಾಹಸ ಸಿಂಹ ಎಂಬ ಬಿರುದು ಪಡೆದ ಡಾಕ್ಟರ್ ವಿಷ್ಣುವರ್ಧನ್ ಅವರು ಕನ್ನಡದಲ್ಲಿ ಅಷ್ಟೇ ಅಲ್ಲದೆ ತಮಿಳು, ತೆಲುಗು, ಹಿಂದಿ ಭಾಷೆಯ ಹಲವಾರು ಸಿನೆಮಾಗಳಲ್ಲಿ ಅಭಿನಯಿಸಿದ್ದಾರೆ. ವಿಷ್ಣು ದಾದನ ಅಭಿನಯಕ್ಕೆ ಮನಸೋಲದವರೆ ಇಲ್ಲ. ಅವರ ಅಳಿಯ ಅನಿರುದ್ಧ ಸಹ ನಟರಾಗಿದ್ದು ಅವರಿಗೆ ಒಬ್ಬ ಮುದ್ದಾದ ಮಗನಿದ್ದು ಅವನು 10ನೇ ತರಗತಿಯ ವಿಧ್ಯಾಭ್ಯಾಸ ವನ್ನು ಮುಗಿಸಿದ್ದಾರೆ. ಇವರು ಕೂಡ ಮುಂದೆ ನಟರಾಗುವ ಎಲ್ಲ ಲಕ್ಷಣಗಳೂ ಕಾಣುತ್ತಿವೆ. ಅವರು ಈಗಾಗಲೇ ಡಬ್ ಸ್ನಾಷ್ ಅಲ್ಲದೆ ಅನೇಕ ಡಾನ್ಸ್ ಮಾಡಿದ್ದು ಅವು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸಾಹಸ ಸಿಂಹ ದಾದನ ಮೊಮ್ಮಗ ತನ್ನ ತಾತನ ಅಂತೆಯೇ ಆಗುವುದರಲ್ಲಿ ಸಂಶಯವಿಲ್ಲ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.

ಅನಿರುದ್ದವರು ತಮ್ಮ ಮಗ ಜೇಷ್ಠವರ್ಧನ ಅವರನ್ನು ಪರಿಚಯಿಸುತ್ತಿದ್ದಿನಿ ಈಗ ಅವರು 10ನೇ ತರಗತಿ ಮುಗಿಸಿದ್ದಾರೆ. ಇವರಿಗೆ ನಮ್ಮ ಕನ್ನಡ ಭಾಷೆ, ಸಂಸ್ಕೃತಿ ಬಗ್ಗೆ ಅತೀವ ಪ್ರೀತಿ, ಗೌರವ ಹಾಗೂ ಅಭಿಮಾನವಿದೆ. ಇವರು ಮನೆಯಲ್ಲಿ ಕೇವಲ ಕನ್ನಡವನ್ನು ಮಾತನಾಡುತ್ತಾರೆ. ಅಷ್ಟೇ ಅಲ್ಲದೆ ಇವರಿಗೆ ಇತರ ಭಾಷೆ, ಸಂಸ್ಕೃತಿ, ಪರಂಪರೆ ಬಗ್ಗೆ ಪ್ರೀತಿ ಗೌರವ ಇದೆ. ಅಮ್ಮ ಭಾರತಿ ವಿಷ್ಣುವರ್ಧನ್, ಅಪ್ಪ ಸಾಹಸ ಸಿಂಹ ಡಾಕ್ಟರ್ ವಿಶುವರ್ಧನ್ ಅಲ್ಲದೆ ನಾನು ಕೂಡ ಕನ್ನಡ ಸೇರಿದಂತೆ ಬೇರೆ ಬೇರೆ ಭಾಷೆಗಳ ಸಿನೆಮಾಗಳಲ್ಲಿ ಅಭಿನಯಿಸಿದ್ದೀನಿ. ಜೇಷ್ಠ ಅವರು ಸಿನೆಮಾ ರಂಗಕ್ಕೆ ಬರಲು ಸೂಕ್ತ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಅನೇಕ ಡಬ್ ಸ್ನಾಷ್ ಮತ್ತು ಡಾನ್ಸ್ ಮಾಡಿದ್ದಾರೆ. ನಮ್ಮೆಲ್ಲರ ಪ್ರೀತಿ, ವಿಶ್ವಾಸ ಈ ಮರಿ ಸಿಂಹನಿಗೆ ಬೇಕಾಗಿದೆ. ಡಾಕ್ಟರ್ ವಿಷ್ಣುವರ್ಧನ ಅವರ ಆಸೆಯೂ ಇದೆ ಆಗಿತ್ತು. ಇವನನ್ನು ಹಾರೈಸಬೇಕು, ಆಶಿರ್ವದಿಸಬೇಕು, ಬೆಳೆಸಬೇಕು ಎಂದು ನಾನು ಕಳಕಳಿಯಿಂದ ಕೇಳಿಕೊಳ್ಳುತ್ತೇನೆ ಎಂದು ಅನಿರುದ್ಧ ಅವರು ಬರೆದಿದ್ದಾರೆ. ಈ ಮಾಹಿತಿಯನ್ನು ಎಲ್ಲರಿಗೂ ತಿಳಿಸಿ ಜೇಷ್ಠ ವರ್ಧನ ಅವರನ್ನು ಹಾರೈಸಿರಿ ಅದರೊಂದಿಗೆ ಕನ್ನಡ ಚಿತ್ರರಂಗವನ್ನು ಹೆಚ್ಚಿನ ರೀತಿಯಲ್ಲಿ ಬೆಳೆಸಿ

Leave a Reply

Your email address will not be published. Required fields are marked *