ಕನ್ನಡ ಚಿತ್ರರಂಗದ ನಿರ್ದೇಶಕರಾದ ಎಸ್. ಮಹೇಂದರ್ ಅವರು ಈಗ ಹೇಗಿದ್ದಾರೆ ಅವರ ಜೀವನದ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ. ಎಸ್. ಮಹೇಂದರ್ ಅವರು ಅದೆಷ್ಟೋ ಜನರನ್ನು ಸ್ಟಾರ್ ಗಳನ್ನಾಗಿ ಮಾಡಿದ ಅದ್ಭುತ ನಿರ್ದೇಶಕರು. ಅದೆಷ್ಟೋ ಜನರಿಗೆ ಚಿತ್ರರಂಗದಲ್ಲಿ ಜೀವದಾನ ಮಾಡಿದ ಕ್ರಿಯೇಟರ್. ಕನ್ನಡಿಗರಿಗೆ ಸೆಂಟಿಮೆಂಟ್ ಎಂದರೆ ಏನು ಎಂದು ತೋರಿಸಿ ಕಣ್ಣಲ್ಲಿ ನೀರು ತರಿಸಿದ ಅದ್ಭುತ ಕಲಾಕಾರ. ಒಂದು ಕಾಲದಲ್ಲಿ ಎಸ್. ಮಹೇಂದರ್ ಎಂದರೆ ನಿರ್ಮಾಪಕರಿಗೆ ಜೇನು ತುಪ್ಪವಿದ್ದಂತೆ. ಕಡಿಮೆ ಹಣದಲ್ಲಿ ಸಿನೆಮಾ ತೆಗೆದು ಸಂಬಂಧವನ್ನು ಕಥಾವಸ್ತುವನ್ನಾಗಿ ಮಾಡಿಕೊಂಡು ಜೀವನದ ಮೌಲ್ಯಗಳನ್ನು ತೋರಿಸಿ ಹಿಟ್ ಮೇಲೆ ಹಿಟ್ ಕೊಟ್ಟು ನಿರ್ಮಾಪಕರ ಜೇಬು ತುಂಬಿಸುತ್ತಿದ್ದ ಎಸ್. ಮಹೇಂದರ್ ಅವರ ಡೇಟ್ಸ್ ಗಾಗಿ ಕಾಯುತ್ತಿದ್ದರು ನಿರ್ಮಾಪಕರು.

ನಟಿ ಶೃತಿ ಮತ್ತು ಎಸ್. ಮಹೇಂದರ್ ಅವರ ಮಧ್ಯೆ ಪ್ರೇಮಾಂಕುರವಾಗಿ 1998 ರಲ್ಲಿ ಮದುವೆಯಾದರು ನಂತರ ಈ ದಂಪತಿಗೆ ಒಂದು ಮುದ್ದಾದ ಹೆಣ್ಣು ಮಗು ಹುಟ್ಟಿತು. ಅವರ ಜೀವನ ಅನ್ಯೋನ್ಯವಾಗಿತ್ತು ಆಗ ಬಂದಿದ್ದೆ ರಾಜಕೀಯ. ತಾನು ಹುಟ್ಟಿದ ಊರು ಕೊಳ್ಳೇಗಾಲಕ್ಕೆ ಏನಾದರೂ ಒಳ್ಳೆ ಕೆಲಸ ಮಾಡಬೇಕೆಂದು ರಾಜಕೀಯಕ್ಕೆ ಧುಮುಕಿದರು ಎಸ್. ಮಹೇಂದರ್. ಕೊಳ್ಳೇಗಾಲದಿಂದ MLA ಎಲೆಕ್ಷನ್ ಗೆ ನಿಂತರು. ರಾಜಕೀಯದ ಆಳ ಗೊತ್ತಿರದ ಎಸ್. ಮಹೇಂದರ್ ಇಳಿದ ಮೇಲೆ ವಾಪಸ್ ಬರಲು ಆಗದ ಕಾರಣ ತಮ್ಮಲ್ಲಿರುವ ಹಣವನ್ನು ಖರ್ಚು ಮಾಡಿಕೊಂಡರು ಆದರೂ ಕೇವಲ 12,000 ಮತಗಳ ಅಂತರದಿಂದ ಸೋಲನ್ನು ಅನುಭವಿಸಿದರು. ಎಲೆಕ್ಷನ್ ನಂತರ ಎಸ್. ಮಹೇಂದರ್ ಅವರ ಜೀವನದಲ್ಲಿ ಊಹಿಸಲಾಗದ ಘಟನೆಗಳು ನಡೆಯುತ್ತಾ ಹೋದವು. ನಟಿ ಶ್ರತಿ ಮತ್ತು ಎಸ್. ಮಹೇಂದರ್ ಅವರ ಮಧ್ಯೆ ವೈಮನಸ್ಸು ಪ್ರಾರಂಭವಾಗಿ ಅದು ವಿಚ್ಛೇದನದಲ್ಲಿ ಕೊನೆಗೊಂಡಿತು. 3 ವರ್ಷ ಒಂಟಿಯಾಗಿದ್ದ ಎಸ್. ಮಹೇಂದರ್ ಅವರು 2012ರಲ್ಲಿ ಯಶೋಧಾ ಎಂಬುವವರನ್ನು ಮದುವೆಯಾದರು.

ಇದರ ಮಧ್ಯೆ ಎಸ್. ಮಹೇಂದರ್ ಅವರ ಮಗಳು ಗೌರಿ ಬರೆದ ಒಂದು ಪೋಸ್ಟ್ ಹೃದಯ ಹಿಂಡುತ್ತದೆ. ಅಪ್ಪ ಐ ಲವ ಯು ಯಾವಾಗಲೂ ನೀವು ನನ್ನ ಮೊದಲ ಪ್ರೀತಿ. ನನ್ನ ನೆಚ್ಚಿನ ಹೀರೊ ನಿಮ್ಮ ಮೇಲಿನ ನನ್ನ ಪ್ರೀತಿ ನಮ್ಮಿಬ್ಬರ ಭಾಂದವ್ಯದ ಬೆಸುಗೆಯನ್ನು ಯಾರಿಂದಲೂ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಐ ಮಿಸ್ ಯು ನಿಮ್ಮೊಂದಿಗೆ ಸಮಯ ಕಳೆಯಬೇಕೆಂದಿದ್ದೇನೆ ಅದು ಶೀಘ್ರದಲ್ಲೇ ನೆರವೇರಲಿದೆ ಎಂದು ಪೋಸ್ಟ್ ಮಾಡಿದ ಗೌರಿ ಅಪ್ಪನ ಬಗ್ಗೆ ಪ್ರೀತಿಯನ್ನು ತೋರ್ಪಡಿಸಿದ್ದಾರೆ. 2011 ರಿಂದ 2017 ರವರೆಗೆ 3 ಸಿನೆಮಾವನ್ನು ನಿರ್ದೇಶನ ಮಾಡಿದರಾದರೂ ಅವು ಹೇಳಿಕೊಳ್ಳುವಷ್ಟು ಹಿಟ್ ಆಗಲಿಲ್ಲ. ಆದರೆ ಒಂದಂತೂ ನಿಜ ಮುಂದಿನ ಪೀಳಿಗೆಯವರಿಗೆ ಎಸ್. ಮಹೇಂದರ್ ಅವರ ಸಿನೆಮಾಗಳನ್ನು ತೋರಿಸಿದರೆ ಸಾಕು ಸಂಬಂಧಗಳ ಮೌಲ್ಯ ಏನೆಂದು ಗೊತ್ತಾಗುತ್ತದೆ.

By

Leave a Reply

Your email address will not be published. Required fields are marked *